Homeರಂಜನೆಕ್ರೀಡೆಆರ್‌ಸಿಬಿ ನಾಯಕನಾಗಿ ಮುಂದುವರಿಯಲು ಕೊಹ್ಲಿಗೆ ಅರ್ಹತೆಯಿಲ್ಲ: ಗೌತಮ್ ಗಂಭೀರ್!

ಆರ್‌ಸಿಬಿ ನಾಯಕನಾಗಿ ಮುಂದುವರಿಯಲು ಕೊಹ್ಲಿಗೆ ಅರ್ಹತೆಯಿಲ್ಲ: ಗೌತಮ್ ಗಂಭೀರ್!

ವಿಶ್ವ ದಾಖಲೆ ಮಾಡಿರುವ ಮತ್ತು ನೇರ ಮಾತುಗಾರರಾದ ಎಂ.ಎಸ್.ಧೋನಿ ಮತ್ತು ರೋಹಿತ್‌ ಶರ್ಮಾ ಅವರೊಂದಿಗೆ ಒಬ್ಬ ನಾಯಕನಾಗಿ ವಿರಾಟ್‌ ಕೊಹ್ಲಿಯನ್ನು ಹೋಲಿಸಲು ಸಾಧ್ಯವಿಲ್ಲ

- Advertisement -
- Advertisement -

ಈ ಐಪಿಎಲ್ ಪಂದ್ಯದಲ್ಲಿ ಉತ್ತಮ ಸಾಧನೆ ತೋರದ ಕಾರಣಕ್ಕೆ ಆರ್‌ಸಿಬಿ ತಂಡದ ನಾಯಕ ವಿರಾಟ್ ಕೊಹ್ಲಿ ತಮ್ಮ ಸ್ಥಾನದಲ್ಲಿ ಮುಂದುವರಿಯಲು ಅರ್ಹರಲ್ಲ ಎಂದು ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಅಭಿಪ್ರಾಯಪಟ್ಟಿದ್ದಾರೆ. ರಾಯಲ್ ಚಾಲೆಂಜರ್ಸ್‌ ಬೆಂಗಳೂರು ಈ ಬಾರಿಯ ಐಪಿಎಲ್ ಪ್ಲೇ ಆಫ್‌ನಿಂದ ಹೊರಗುಳಿದಿದೆ.

“ವಿಶ್ವ ದಾಖಲೆ ಮಾಡಿರುವ ಮತ್ತು ನೇರ ಮಾತುಗಾರರಾದ ಎಂ.ಎಸ್.ಧೋನಿ ಮತ್ತು ರೋಹಿತ್‌ ಶರ್ಮಾ ಅವರೊಂದಿಗೆ ಒಬ್ಬ ನಾಯಕನಾಗಿ ವಿರಾಟ್‌ ಕೊಹ್ಲಿಯನ್ನು ಹೋಲಿಸಲು ಸಾಧ್ಯವಿಲ್ಲ. ನೂರಕ್ಕೆ ನೂರರಷ್ಟು ಅವರನ್ನು ಆರ್‌ಸಿಬಿ ನಾಯಕತ್ವದಿಂದ ತೆಗೆದುಹಾಕಬೇಕು. ಏಕೆಂದರೆ ಇದು ಹೊಣೆಗಾರಿಕೆಯ ಸಮಸ್ಯೆಯಾಗಿದೆ” ಎಂದು ಅವರು ಹೇಳಿದರು.

ಇದನ್ನೂ ಓದಿ: ವಿಶ್ವಕಪ್ ಬೇಡ, ಐಪಿಎಲ್ ಬೇಕು.. ಬದಲಾಗ್ತಿದೆ ಕ್ರಿಕೆಟಿಗರ ಮೈಂಡ್‍ಸೆಟ್!

“ಟ್ರೋಫಿ ಗೆಲ್ಲದೇ ಪಂದ್ಯಾವಳಿಯಲ್ಲಿ 8 ವರ್ಷಗಳಿಂದ ಇದ್ದಾರೆ. 8 ವರ್ಷಗಳು ನಿಜಕ್ಕೂ ಹೆಚ್ಚಿನ ಸಮಯ. ಕ್ಯಾಪ್ಟನ್‌ಶಿಪ್‌ ಬಗ್ಗೆ ಮರೆತುಬಿಡಿ, 8 ವರ್ಷಗಳಿಂದ ಟ್ರೋಫಿ ಗೆಲ್ಲದೇ ಇನ್ನೂ ನಾಯಕನಾಗಿ ಮುಂದುವರಿಯುತ್ತಿರುವ ಯಾವುದೇ ಬೇರೆ ಆಟಗಾರನನ್ನು ತೋರಿಸಿ. ಹಾಗಾಗಿ ಇದು ಹೊಣೆಗಾರಿಕೆಯಾಗಿರಬೇಕು” ಎಂದು 2012 ಮತ್ತು 2014 ರಲ್ಲಿ ಕೊಲ್ಕತ್ತಾ ನೈಟ್‌ ರೈಡರ್ಸ್‌ ತಂಡವನ್ನು ಮುನ್ನಡೆಸಿ 2 ಬಾರಿ ಐಪಿಎಲ್‌ ಪ್ರಶಸ್ತಿ ಗೆದ್ದಿದ್ದ ಗೌತಮ್ ಗಂಭಿರ್ ‘ಟೈಮ್‌ ಔಟ್‘ ಕಾರ್ಯಕ್ರಮದಲ್ಲಿ ಹೇಳಿದರು.

ಗೌತಮ್ ಗಂಭೀರ್ ಹಲವಾರು ವರ್ಷಗಳಿಂದ ಕೊಹ್ಲಿಯ ಐಪಿಎಲ್ ನಾಯಕತ್ವವನ್ನು ತೀವ್ರವಾಗಿ ಟೀಕಿಸುತ್ತಿದ್ದರು. ಆದರೆ ವೈಯಕ್ತಿಕವಾಗಿ ಅವರಿಗೂ-ತಮಗೂ ಏನೂ ಇಲ್ಲ ಎಂದು ಸ್ಪಷ್ಟಪಡಿಸಿದರು.

ಇದನ್ನೂ ಓದಿ: ರಮ್ಯ ಕುರಿತು ಸುಳ್ಳು ಸುದ್ದಿ ಪ್ರಸಾರ ಮಾಡಿದ ತಪ್ಪಿಗೆ ಸುವರ್ಣ ನ್ಯೂಸ್ 50 ಲಕ್ಷ ದಂಡ ಕಟ್ಟಬೇಕು: ಕೋರ್ಟ್…

“ನಾವು ಎಂಎಸ್ ಧೋನಿ ಬಗ್ಗೆ ಮಾತನಾಡುತ್ತೇವೆ, ರೋಹಿತ್ ಶರ್ಮಾ ಬಗ್ಗೆ ಮಾತನಾಡುತ್ತೇವೆ, ವಿರಾಟ್ ಕೊಹ್ಲಿ ಬಗ್ಗೆಯೂ ಮಾತನಾಡುತ್ತೇವೆ. ಇಲ್ಲಿನ ವಿಷಯ ಅದಲ್ಲ. ಧೋನಿ ಮೂರು ಬಾರಿ ಟ್ರೋಫಿ ಗೆದ್ದಿದ್ದಾರೆ. ರೋಹಿತ್ ಶರ್ಮಾ ನಾಲ್ಕು ಬಾರಿ ಗೆದ್ದಿದ್ದಾರೆ. ಈ ಕಾರಣಕ್ಕಾಗಿ ಅವರು ದೀರ್ಘಾವಧಿಯ ನಾಯಕತ್ವ ವಹಿಸಿದ್ದಾರೆ. ಎಂಟು ವರ್ಷಗಳವರೆಗೆ ಈ ಸಾದನೆ ಮಾಡದಿದ್ದರೆ ಅವರನ್ನೂ ನಾಯಕತ್ವದ ಸ್ಥಾನದಿಂದ ತೆಗೆದುಹಾಕಲಾಗುತ್ತಿತ್ತು” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಈ ಬಾರಿಯ ಐಪಿಎಲ್‌ ಪಂದ್ಯದಲ್ಲಿ ಕೊಹ್ಲಿ ಉತ್ತಮ ಸಾಧನೆಯನ್ನು ತೋರಿಲ್ಲವಾದ್ದರಿಂದ ಹಲವು ಟೀಕೆಗಳನ್ನು ಎದುರಿಸುತ್ತಿದ್ದಾರೆ.


ಇದನ್ನೂ ಓದಿ: ಐಪಿಎಲ್ :ರಿಯಾನ್ ಪರಾಗ್ ಎಂಬ ತಾರೆಯ ಅದ್ಭುತ ಆಟ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕಾಂಗ್ರೆಸ್ ಪ್ರಣಾಳಿಕೆ ಬಗ್ಗೆ ವಿವರಿಸಲು ಸಮಯಾವಕಾಶ ಕೋರಿ ಪ್ರಧಾನಿಗೆ ಖರ್ಗೆ ಪತ್ರ

0
ಲೋಕಸಭೆ ಚುನಾವಣೆಯ ಕಾಂಗ್ರೆಸ್ ಪ್ರಣಾಳಿಕೆ 'ನ್ಯಾಯಪತ್ರ'ದ ಕುರಿತು ಪ್ರಧಾನಿ ಮೋದಿ ಸರಣಿ ಹೇಳಿಕೆಗಳನ್ನು ಕೊಡುತ್ತಿದ್ದು, ಈ ಹಿನ್ನೆಲೆ ಪ್ರಣಾಳಿಕೆಯ ಕುರಿತು ವಿವರಿಸಲು ಸಮಯ ಕೋರಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪತ್ರ ಬರೆದಿದ್ದಾರೆ. ಖರ್ಗೆ...