ಐಪಿಎಲ್ :ರಿಯಾನ್ ಪರಾಗ್ ಎಂಬ ತಾರೆಯ ಅದ್ಭುತ ಆಟ

 

 

| ಅಂತಃಕರಣ |

ಅಸ್ಸಾಮ್‍ನ ಆಲ್‍ರೌಂಡರ್ ಆಗಿರುವ ರಿಯಾನ್ ಪರಾಗ್‍ರ ಹೆಸರು ಐಪಿಎಲ್‍ಗೂ ಮೊದಲು ಕ್ರಿಕೆಟ್ ಜಗತ್ತಿಗೆ ಒಂದು ರೀತಿ ಅಪರಿಚಿತವೇ ಆಗಿತ್ತು. 2018ರ ವಿಶ್ವಕಪ್ ಗೆದ್ದಿದ್ದ ತಂಡದ ಭಾಗವಾಗಿ ರಿಯಾನ್‍ರವರಿದ್ದರೂ ಸಹ ಗಾಯದ ಕಾರಣ ಬೆಂಚ್ ಬಿಸಿ ಮಾಡುತ್ತಲೇ ಕಾಲ ಕಳೆದರು. ಅಸ್ಸಾಂಪರ ಪ್ರಥಮ ದರ್ಜೆ ಕ್ರಿಕೆಟ್‍ನಲ್ಲಿ ನೀಡಿದ ಉತ್ತಮ ಪ್ರದರ್ಶನದ ಕಾರಣ ರಾಜಸ್ಥಾನರಾಯಲ್ಸ್ ತಂಡ ಇವರನ್ನು ಈ ಬಾರಿಯ ಹರಾಜಿನಲ್ಲಿ ಅವರ ಮೂಲಬೆಲೆ 20ಲಕ್ಷ ನೀಡಿ ಖರೀದಿಸಿತು. ರಾಜಸ್ಥಾನ ತಂಡದ ಪರವೂ ಸಹ ಮೊದಲ ಕೆಲವು ಪಂದ್ಯಗಳಲ್ಲಿ ಅವರಿಗೆ ಆಡಲು ಅವಕಾಶ ಸಿಗಲಿಲ್ಲ.

ತಂಡದ ಆರನೇ ಪಂದ್ಯದಲ್ಲಿ ರಿಯಾನ್ ಪರಾಗ್ ಫಾರ್ಮ್ ಕಳೆದುಕೊಂಡಿದ್ದ ಕೃಷ್ಣಪ್ಪಗೌತಮ್‍ರವರ ಬದಲಿಗೆ ಆಡಲು ತಂಡದ ಪ್ಲೇಯಿಂಗ್ 11ನಲ್ಲಿ ಸ್ಥಾನ ಗಿಟ್ಟಿಸಿಕೊಂಡರು. ಚೆನ್ನೈಸೂಪರ್‍ಕಿಂಗ್ಸ್ ಎದುರಿನ ಆ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ ತಂಡದ ಪರ ಏಳನೇ ಕ್ರಮಾಂಕದಲ್ಲಿ ಬ್ಯಾಟಿಂಗ್‍ಗೆ ಬಂದ ರಿಯಾನ್ ಪರಾಗ್ ಎರಡು ಬೌಂಡರಿಗಳ ಮೂಲಕ 16 ರನ್‍ಗಳಿಸಿ ಶಾರ್ದೂಲ್ ಠಾಕೂರ್‍ರ ಎಸೆತದಲ್ಲಿ ಧೋನಿಯವರಿಗೆ ಕ್ಯಾಚಿತ್ತು ಔಟಾದರು. ವಿಶೇಷವೇನೆಂದರೆ 19 ವರ್ಷಗಳ ಮುಂಚೆ ರಿಯಾನ್ ಪರಾಗ್‍ರ ತಂದೆ ಪರಾಗ್‍ದಾಸ್‍ಕೂಡ ರಣಜಿ ಪಂದ್ಯವೊಂದರಲ್ಲಿ ಧೋನಿಯವರಿಂದ ಸ್ಟಂಪ್ಡ್ ಆಗಿ ಔಟಾಗಿದ್ದರು! ಹೌದು ! 1999-2000ರ ರಣಜಿ ಸೀಸನ್‍ನ ಬಿಹಾರ್ ಹಾಗೂ ಅಸ್ಸಾಮ್ ನಡುವಿನ ಪಂದ್ಯದಲ್ಲಿ ಪರಾಗ್‍ದಾಸ್‍ರನ್ನು ಧೋನಿ ಸ್ಟಂಪ್ಡ್ ಮಾಡಿದ್ದರು. 19 ವರ್ಷಗಳ ನಂತರ ಅವರ ಮಗ ರಿಯಾನ್ ಪರಾಗ್ ಸಹ ಧೋನಿಗೆ ಕ್ಯಾಚಿತ್ತು ಔಟಾಗಿದ್ದು ಒಂದು ಅಚ್ಚರಿಯೇ ಸರಿ.

ಆ ಪಂದ್ಯದಲ್ಲಿ ಓವರ್ ಬೌಲ್ ಮಾಡಿ ಪರಾಗ್ ಕೇವಲ 24 ರನ್ ಬಿಟ್ಟುಕೊಟ್ಟರು. ನಂತರದ ಎರಡು ಪಂದ್ಯಗಳಲ್ಲಿ ಪರಾಗ್‍ರನ್ನು ರಾಜಸ್ಥಾನ ತಂಡ ಆಡಿಸಲಿಲ್ಲ. ಅವರ ಬದಲಿಗೆ ಕ್ರಮವಾಗಿ ಕರ್ನಾಟಕದ ಗೌತಮ್ ಹಾಗೂ ಬಿನ್ನಿ ಒಂದೊಂದು ಪಂದ್ಯದಲ್ಲಿ ಆಡಿದರು. ಎರಡು ಪಂದ್ಯಗಳ ನಂತರ ಮುಂಬೈ ಇಂಡಿಯನ್ಸ್ ಎದುರಿನ ಪಂದ್ಯದಲ್ಲಿ ಪರಾಗ್ ವಾಪಸಾತಿ ಮಾಡಿದರು. ಆ ಪಂದ್ಯದಲ್ಲಿ ಅವರು ಒಂದು ಅತ್ಯುತ್ತಮ ಇನ್ನಿಂಗ್ಸ್ ಆಡಿದರು. 162ರ ಮೊತ್ತವನ್ನು ಬೆನ್ನತ್ತಿದ್ದ ರಾಜಸ್ಥಾನ 77ಕ್ಕೆ ಮೂರು ಜನ ಟಾಪ್‍ಆರ್ಡರ್ ಬ್ಯಾಟ್ಸ್‍ಮನ್‍ಗಳನ್ನು ಕಳೆದುಕೊಂಡು ಚಿಂತಾಜನಕ ಸ್ಥಿತಿಯಲ್ಲಿತ್ತು. ಆಗ ಕ್ರೀಸ್‍ಗೆ ಬಂದ ಪರಾಗ್ ನಾಯಕ ಸ್ಮಿತ್‍ರೊಂದಿಗೆ ಒಂದು ಅತ್ಯುತ್ತಮ ಜೊತೆಯಾಟವಾಡಿದರು. ಸ್ಮಿತ್ ಹಾಗೂ ಪರಾಗ್ ಆಡಿದ 70 ರನ್‍ಗಳ ಜೊತೆಯಾಟದಲ್ಲಿ ಪರಾಗ್‍ರದ್ದೇ ಸಿಂಹಪಾಲು! ತಮ್ಮ ಎರಡನೇ ಐಪಿಎಲ್ ಇನ್ನಿಂಗ್ಸ್‍ನಲ್ಲಿಯೇ ಮುಂಬೈ ಬೌಲರ್‍ಗಳನ್ನು ಬೆಚ್ಚಿಬೀಳಿಸಿದರು. 29 ಎಸೆತಗಳಲ್ಲಿ 43ರನ್ ಗಳಿಸಿ ಪರಾಗ್ ತಂಡವನ್ನು ಗೆಲುವಿನ ಗಡಿಯವರೆಗೆ ತಂದು ಔಟಾದರು! ಅದರ ಮೂಲಕ ಐಪಿಎಲ್‍ನ ಅತ್ಯಂತ ಕಿರಿಯ ಅರ್ಧಶತಕಧಾರಿಯಾಗುವ ಅವಕಾಶ ತಪ್ಪಿಸಿಕೊಂಡರು. ಪರಾಗ್‍ರ ಸಾಮಥ್ರ್ಯಕ್ಕೆ ಈ ಇನ್ನಿಂಗ್ಸ್ ಒಂದು ಕನ್ನಡಿಯಾಗಿತ್ತು ಅಷ್ಟೇ !ಮುಂದಿನ ಪಂದ್ಯದಲ್ಲಿ ಕೊನೆಗೆ ಬ್ಯಾಟಿಂಗ್‍ಗೆ ಬಂದ ಪರಾಗ್ ಒಂದು ಬೌಂಡರಿ ಹೊಡೆದು ಒಂದು ಉತ್ತಮ ಅಂತ್ಯಕೊಟ್ಟರು.

ಇಲ್ಲಿಯವರೆಗಿನ ಅವರ ಅತ್ಯುತ್ತಮ ಇನ್ನಿಂಗ್ಸ್ ಬಂದಿದ್ದು ನಂತರದ ಪಂದ್ಯದಲ್ಲಿ. ಕೊಲ್ಕತ್ತಾ ನೈಟ್‍ರೈಡರ್ಸ್ ತಂಡ ಮೊದಲು ಬ್ಯಾಟ್ ನಾಯಕ ಕಾರ್ತಿಕ್‍ರ ಅತ್ಯುತ್ತಮ ಆಟದ ಬಲದಿಂದ 175 ರನ್ ಗಳಿಸಿತ್ತು. ಅದಕ್ಕೆ ಉತ್ತರವಾಗಿ ರಾಜಸ್ಥಾನ ಸಹ ಉತ್ತಮ ಆರಂಭ ಹೊಂದಿತು. ರಹಾನೆ ಹಾಗೂ ಸ್ಯಾಮ್ಸನ್ 53 ರನ್‍ಗಳ ಬುನಾದಿಯನ್ನು ರಾಜಸ್ಥಾನಕ್ಕೆ ಹಾಕಿಕೊಟ್ಟರು. ಆದರೆ ನಂತರದ 7ಓವರ್‍ಗಳಲ್ಲಿ ರನ್‍ರೇಟ್ ಕೂಡ ಕಡಿಮೆಯಾಗಿ ರಾಜಸ್ಥಾನ 5ವಿಕೆಟ್ ಕಳೆದುಕೊಂಡಿತು. ಒಂದು ಹಂತದಲ್ಲಿ ಕಷ್ಟವೆನಿಸುತ್ತಿದ್ದ ಚೇಸ್‍ಅನ್ನು ರಿಯಾನ್ ಪರಾಗ್ ಸುಲಭ ಮಾಡಿದರು. ಗೋಪಾಲ್ ಹಾಗೂ ಆರ್ಚರ್‍ರೊಂದಿಗೆ ಜೊತೆಯಾಟಗಳನ್ನು ಮಾಡಿ ಪರಾಗ್ 19ನೇ ಓವರ್‍ನ 5ನೇ ಎಸೆತದಲ್ಲಿ ಹಿಟ್ ವಿಕೆಟ್ ಆಗಿ ಔಟಾದರು. ಈ ಬಾರಿಯೂ ಸಹ ಕೇವಲ 3 ರನ್‍ಗಳಿಂದ ಅರ್ಧಶತಕ ತಪ್ಪಿಸಿಕೊಂಡರು. 31ಎಸೆತಗಳಲ್ಲಿ 47 ರನ್‍ಗಳಿಸಿದ ಪರಾಗ್ ರಾಜಸ್ಥಾನದ ಪಾಲಿಗೆ ಹೀರೋ ಆದರು. ಕೊನೆಯ ಓವರ್‍ನಲ್ಲಿ ಆರ್ಚರ್ ತಂಡವನ್ನು ಗೆಲ್ಲಿಸಿದರು.

ಸಾರಾಂಶದ ಮಾತೆಂದರೆ ರಿಯಾನ್ ಪರಾಗ್ ಭಾರತೀಯ ಕ್ರಿಕೆಟ್‍ನ ಸದ್ಯದ ಅತ್ಯುತ್ತಮ ಉದಯೋನ್ಮುಖ ಆಟಗಾರರಲ್ಲಿ ಒಬ್ಬರು ಎನ್ನುವುದು.

Donate

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

LEAVE A REPLY

Please enter your comment!
Please enter your name here