Homeಕರ್ನಾಟಕ'ಮನೆ ಕೊಡಿ ಇಲ್ಲಾ ಜೈಲಿಗಾದರೂ ಬಿಡಿ' : ಬೀದಿಗೆ ಬಿದ್ದ ಕೋಗಿಲು ನಿರಾಶ್ರಿತರ ಅಳಲು

‘ಮನೆ ಕೊಡಿ ಇಲ್ಲಾ ಜೈಲಿಗಾದರೂ ಬಿಡಿ’ : ಬೀದಿಗೆ ಬಿದ್ದ ಕೋಗಿಲು ನಿರಾಶ್ರಿತರ ಅಳಲು

- Advertisement -
- Advertisement -

“ನಮಗೊಂದು ಸೂರು ಕೊಟ್ಟರೆ ಅದಕ್ಕೆ ಕಾರಣರಾದ ಎಲ್ಲರನ್ನೂ ಹರಸಿ ನೆಮ್ಮದಿಯಾಗಿ ಬದುಕುತ್ತೇವೆ. ಇಲ್ಲವಾದರೆ ನಮ್ಮನ್ನು ಜೈಲಿಗಾದರೂ ಹಾಕಿಬಿಡಿ. ಒಂದು ನೆಲೆ ಮತ್ತು ಮೂರು ಹೊತ್ತಿನ ಊಟವಾದರೂ ಸಿಗುತ್ತದೆ”. ಇದು ಸರ್ಕಾರ ಮನೆ ಧ್ವಂಸ ಮಾಡಿದ್ದರಿಂದ ನಿರಾಶ್ರಿತರಾದ ಕೋಗಿಲು ಲೇಔಟ್ ಸ್ಲಂ ನಿವಾಸಿಗಳ ಅಳಲು.

2025ರ ಡಿಸೆಂಬರ್ 20ರಂದು ಬೆಂಗಳೂರು ಉತ್ತರ ತಾಲೂಕಿನ ಯಲಹಂಕ ಪ್ರದೇಶದ ಕೋಗಿಲು ಲೇಔಟ್‌ನಲ್ಲಿ ಇನ್ನೂರಕ್ಕೂ ಹೆಚ್ಚು ಬಡ ಕುಟುಂಬಗಳ ಮನೆಗಳನ್ನು ಅಕ್ರಮ ಎಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಧ್ವಂಸಗೊಳಿಸಿತ್ತು.

ಜನರು ನಿದ್ದೆಯಿಂದ ಎದ್ದೇಳುವ ಮೊದಲೇ ಮುಂಜಾನೆ ವೇಳೆಗೆ ಅಧಿಕಾರಿಗಳು ಕೈಗೊಂಡ ಕಾರ್ಯಾಚರಣೆಯಿಂದ ಪರಿಶಿಷ್ಟ ಜಾತಿ, ಅಲ್ಪಸಂಖ್ಯಾತರು, ಹಿಂದುಳಿದ ವರ್ಗಗಳು, ಅಸಂಘಟಿತ ಕಾರ್ಮಿಕರು ಮತ್ತು ಗೃಹ ಕಾರ್ಮಿಕರು ಸೇರಿದಂತೆ ವಿವಿಧ ತಳ ಸಮುದಾಯಗಳ ಬಡ ಜನರು ಬೀದಿಗೆ ಬಿದ್ದಿದ್ದಾರೆ.

“ಮನೆಗಳ ಧ್ವಂಸ ನಡೆದು 8 ದಿಗಳ ನಂತರ ಸರ್ಕಾರ ಪುನರ್ವಸತಿ ಒದಗಿಸುವುದಾಗಿ ಭರವಸೆ ನೀಡಿತು. ರಾಜೀವ್ ಗಾಂಧಿ ವಸತಿ ನಿಗಮವು ತುರ್ತಾಗಿ ಸಮೀಕ್ಷೆ ಪೂರ್ಣಗೊಳಿಸಿತು. ದಾಖಲೆ ಪರಿಶೀಲನೆ ಪ್ರಕ್ರಿಯೆಯೂ ಹಲವು ಸುತ್ತುಗಳಲ್ಲಿ ನಡೆಯಿತು. ಸಚಿವರು, ಶಾಸಕರು ಮತ್ತು ಮುಖ್ಯಮಂತ್ರಿಗಳು ಕೂಡ ಪುನರ್ವಸತಿ ಕುರಿತು ಸಾರ್ವಜನಿಕ ಭರವಸೆಗಳನ್ನು ನೀಡಿದರು. ಅದಾಗ್ಯೂ 148 ದಿನಗಳಿಂದ ಇನ್ನೂ ನಾವು ಬೀದಿಯಲ್ಲೇ ಬದುಕುತ್ತಿದ್ದೇವೆ. ತೀವ್ರ ಬಿಸಿಲು, ಮಳೆ ಮತ್ತು ಅನಾರೋಗ್ಯದ ನಡುವೆಯೂ ಮಕ್ಕಳು, ಮಹಿಳೆಯರು ಮತ್ತು ವೃದ್ದರನ್ನೊಳಗೊಂಡಂತೆ ಅತ್ಯಂತ ಅಮಾನವೀಯ ಪರಿಸ್ಥಿತಿಯಲ್ಲಿ ಬದುಕುತ್ತಿದ್ದೇವೆ” ಎಂದು ನಿರಾಶ್ರಿತರಾದ ಜನರು ನೋವು ತೋಡಿಕೊಂಡಿದ್ದಾರೆ.

“ಬಡವರ ಪರವೆಂದು ಕರೆಸಿಕೊಳ್ಳುವ ಕಾಂಗ್ರೆಸ್ ಸರ್ಕಾರ ನಮ್ಮ ಬದುಕನ್ನು ಮರು ಕಟ್ಟಿಕೊಳ್ಳಲು ನೆರವಾಗುವುದೆಂಬುವುದು ನಮ್ಮ ನಿರೀಕ್ಷೆಯಾಗಿತ್ತು. ಆದರೆ, ಅದು ಇಂದು ಹುಸಿಯಾಗಿದೆ. ಜನರಿಗೆ ಪುನರ್ವಸತಿ ಭರವಸೆ ನೀಡಿ 138 ದಿನಗಳು ಕಳೆದಿವೆ. ಹಲವಾರು ಸುತ್ತಿನ ದಾಖಲೆ ಪರಿಶೀಲನೆ ನಡೆದಿದ್ದರೂ, ಮನೆ ಕಳೆದುಕೊಂಡು ನಿರಾಶ್ರಿತರಾದ ನಮಗೆ ಮನೆ ಸಿಕ್ಕಿಲ್ಲ. ಪರಿಶಿಷ್ಟ ಜಾತಿ, ಅಲ್ಪಸಂಖ್ಯಾತ, ಹಿಂದುಳಿದ ಪಂಗಡ ಹಾಗೂ ಅಸಂಘಟಿತ ಕಾರ್ಮಿಕರಾದ ನಮಗೆ ಸರ್ಕಾರ ವಿಧಿಸಿರುವ ನಿಯಮಗಳ ಅನುಸಾರ ಅಗತ್ಯವಾದ ದಾಖಲೆಗಳನ್ನು ಪಡೆದುಕೊಳ್ಳುವಲ್ಲಿ ಇರುವ ತೊಡಕುಗಳು ಎಷ್ಟೆಂದು ಸರ್ಕಾರಕ್ಕೆ ತಿಳಿದಿದೆ” ಎಂದು ಹೇಳಿದ್ದಾರೆ.

ನಿರಾಶ್ರಿತ ಜನರ ಪ್ರಕಾರ, ಅವರು ಮನೆ ಪಡೆಯಬೇಕಾದರೆ ಜಾತಿ ಮತ್ತು ಆದಾಯ ಪ್ರಮಾಣಪತ್ರ, ವಾಸ ದೃಢೀಕರಣ ಪತ್ರ, ಪಡಿತರ ಚೀಟಿ, ಮತದಾರರ ಗುರುತಿನ ಚೀಟಿ, ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ಪಾಸ್ ಬುಕ್ ಅನ್ನು ಕಡ್ಡಾಯ ದಾಖಲೆಯಾಗಿ ಸರ್ಕಾರ ಕೇಳುತ್ತಿದೆಯಂತೆ.

“ಮತದಾರರ ಗುರುತಿನ ಚೀಟಿ, ಪಾನ್ ಕಾರ್ಡ್, ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ಖಾತೆಗಳು ಬಹುತೇಕರ ಬಳಿ ಇದೆ. ಆದರೆ, ಮನೆ ಕಳೆದುಕೊಂಡವರು ಅಂಚಿಗೆ ತಳ್ಳಲ್ಪಟ್ಟ ಜನರಾದ್ದರಿಂದ ಇತರೆ ಮೂರು ದಾಖಲೆಗಳು ಬಹುತೇಕ ಜನರ ಬಳಿ ಇಲ್ಲ. ಶೇಕಡ 10ಕ್ಕಿಂತ ಕಡಿಮೆ ಜನರ ಬಳಿ ಜಾತಿ ಮತು ಆದಾಯ ಪ್ರಮಾಣ ಪತ್ರವಿದೆ. ಈ ಪತ್ರವನ್ನು ಪಡೆದುಕೊಳ್ಳಲು ಟಿಸಿಯನ್ನು ಕಡ್ಡಾಯ ಮಾಡಿದ್ದಾರೆ. ನಮ್ಮ ಮಕ್ಕಳೇ ಶಿಕ್ಷಣ ಪಡೆಯುತ್ತಿರುವ ಮೊದಲ ತಲೆಮಾರಿನವರಾಗಿದ್ದಾರೆ. ನಮ್ಮ ಬಳಿ ಟಿಸಿ ಇಲ್ಲ. ಹಾಗಾಗಿ, ಜಾತಿ ಮತ್ತು ಆದಾಯ ಪ್ರಮಾಣ ಪತ್ರವನ್ನು ಪಡೆದುಕೊಳ್ಳಲು ಸಾಧ್ಯವಾಗಿಲ್ಲ. ವಾಸ ದೃಢೀಕರಣ ಪತ್ರವನ್ನು ಮಾಡಿಸಿಕೊಳ್ಳಬೇಕೆಂಬ ಅರಿವು ಇಲ್ಲದ ಕಾರಣ ಬಹುತೇಕ ಜನರ ಬಳಿ ಈ ದಾಖಲೆಯೂ ಇಲ್ಲ. ಶೇಕಡ 36ರಕ್ಕೂ ಹೆಚ್ಚು ಜನರ ಬಳಿ ರೇಷನ್ ಕಾರ್ಡ್ ಇದೆ. ಪಡಿತರ ಚೀಟಿ ಪಡೆದುಕೊಳ್ಳುವಲ್ಲಿ ಹಲವಾರು ತಾಂತ್ರಿಕ ಅಡೆತಡೆಗಳು, ದಾಖಲಾತಿಯ ಕೊರತೆ ಮತ್ತು 2017ರಿಂದ ಈಚೆಗೆ ಹೊಸ ಕಾರ್ಡ್‌ಗಳನ್ನು ಪಡೆಯುವಲ್ಲಿ ಅರ್ಜಿ ಹಾಕಲು, ದಿನದಲ್ಲಿ ಕೆಲವು ಗಂಟೆಗಳ ಅವಕಾಶ ನೀಡಿದ್ದರಿಂದ ಪಡಿತರ ಚೀಟಿ ಪಡೆಯಲು ಸಾಧ್ಯವಾಗಿಲ್ಲ” ಎಂದು ನಿರಾಶ್ರಿತರು ಹೇಳಿದ್ದಾರೆ.

ನಾವು ಮನೆ ಪಡೆದುಕೊಳ್ಳಲು ಅಡ್ಡ ಗೋಡೆಯಾಗಿರುವ ದಾಖಲಾತಿಗಳ ತೊಡಕನ್ನು ತಾವು ಬಗೆಹರಿಸದೇ ಇದ್ದರೆ, ನಾವು ಶಾಶ್ವತವಾಗಿ ಬೀದಿಯಲ್ಲೇ ಬುದುಕುವಂತಹ ಸ್ಥಿತಿಗೆ ‘ಸರ್ಕಾರವೇ ನಮ್ಮನ್ನು ತಳ್ಳಿದಂತಾಗುತ್ತದೆ” ಎಂದಿದ್ದಾರೆ.

ಸರ್ಕಾರ ನೀಡಿದ್ದ ಭರವಸೆಗಳು ಈಡೇರಿಸಿದ ಕಾರಣ ಮನೆ ಕಳೆದುಕೊಂಡವರು ಈ ಕೆಳಗಿನ ಹಕ್ಕೊತ್ತಾಯಗಳನ್ನು ಮುಂದಿಟ್ಟುಕೊಂಡು ಮೇ 18ರಿಂದ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಅನಿರ್ದಿಷ್ಟ ಹಗಲು-ರಾತ್ರಿ ಹೋರಾಟ ಆರಂಭಿಸಿದ್ದಾರೆ.

1. ಜಿಬಿಎ ನಡೆಸಿದ ಕಾರ್ಯಾಚರಣೆಯಿಂದ ಮನೆ ಕಳೆದುಕೊಂಡ ಎಲ್ಲಾ ಕುಟುಂಬಗಳಿಗೂ ತಕ್ಷಣ ಸಂಪೂರ್ಣ ಪುನರ್ವಸತಿ ಒದಗಿಸಲೇಬೇಕು.

2. ನಮಗೆ ಮನೆಯನ್ನು ನೀಡಲು ಇರುವ ದಾಖಲೆಗಳ ಕೊರತೆಯನ್ನು ನೀಗಿಸಲು ಸರ್ಕಾರ ವಿಶೇಷ ಕ್ಯಾಂಪ್‌ಗಳನ್ನು ಮಾಡಿ ಅಗತ್ಯವಾದ ದಾಖಲೆಗಳನ್ನು ಪಡೆದುಕೊಳ್ಳಲು ವಿಶೇಷ ಪ್ರಕ್ರಿಯೆ ನಡೆಸಲೇಬೇಕು. ಯಾವುದೇ ಕಾರಣಕ್ಕೂ ದಾಖಲೆಗಳ ಕೊರತೆ ನಮಗೆ ಮನೆ ನೀಡಲು ಅಡ್ಡಿಯಾಗದಂತೆ ಸರ್ಕಾರ ನಿಗಾವಹಿಸಬೇಕು.

3. ಶಾಶ್ವತ ಹಾಗೂ ಗೌರವಯುತ ಮನೆಗಳೊಂದಿಗೆ ಭೂ ಹಕ್ಕನ್ನು ಮತ್ತು ಎಲ್ಲಾ ಮೂಲಭೂತ ನಾಗರಿಕ ಸೌಲಭ್ಯಗಳನ್ನು ಸರ್ಕಾರ ಕಲ್ಪಿಸಬೇಕು.

“ಕಾದು ಕಾದು ಕಾದು ಕೊನೆಗೆ ನಾವು ಫ್ರೀಡಂ ಪಾರ್ಕಿಗೆ ಬಂದು ಬಿಡಾರ ಹೂಡುವ ತೀರ್ಮಾನ ಮಾಡಿದ್ದೇವೆ. ಜಿಬಿಎ ಅಧಿಕಾರಿಗಳು ನಮ್ಮ ಮನೆಗಳನ್ನು ಕೆಡವಿ (20 ಡಿಸೆಂಬರ್ 2025 ) ಐದು ತಿಂಗಳಾಗುತ್ತಿವೆ. ಪರಿಶಿಷ್ಟ ಜಾತಿ, ಅಲ್ಪಸಂಖ್ಯಾತರು, ಹಿಂದುಳಿದ ವರ್ಗಗಳಿಗೆ ಸೇರಿದ, ಅಸಂಘಟಿತ ದಿನಗೂಲಿಗಳಾಗಿ ದುಡಿದು ಹೊಟ್ಟೆ ಹೊರೆಯುತ್ತಿರುವ ನಾವು ಕಳೆದ 148 ದಿನಗಳಿಂದ ಬೀದಿಯಲ್ಲೇ ಇದ್ದೇವೆ. ತೀವ್ರ ಚಳಿಯಲ್ಲಿ ಮಕ್ಕಳು, ಮರಿಗಳನ್ನು ಕಟ್ಟಿಕೊಂಡು ಬದುಕಿದೆವು, ಈಗ ಉರಿ ಬಿಸಿಲಿನಲ್ಲಿ ಬೆವರಿಳಿಸುತ್ತಾ ಬದುಕಿದ್ದೇವೆ. ಅಲ್ಲಿಲ್ಲಿ ಸಿಗುವ ಅಷ್ಟಿಷ್ಟು ಕೂಲಿ, ಅವರಿವರು ದಾನಿಗಳು ತಂದು ಹಂಚುವ ಅನ್ನ ನಂಬಿ ಬದುಕು ದೂಡಿದ್ದೇವೆ. ನಿತ್ಯದ ಶೌಚಾಲಯ, ಸ್ನಾನ ಒಂದು ಸವಾಲು. ಅವರಿವರ ಮನೆಗೆ ಹೋಗಿ ಅಂಗಲಾಚಬೇಕು.”

“ಕಾಯಿಲೆ ಬಿದ್ದರಂತೂ ನರಕ. ಎಷ್ಟು ದಿನ ನಾವು ಹೀಗೆ ಬದುಕಬೇಕು ನೀವೇ ಹೇಳಿ, ಸರ್ಕಾರ ಎಲ್ಲರಿಗೂ ಮನೆ ಗಿಫ್ಟ್ ಕೊಡುತ್ತೆ ಎಂಬ ಮಾತು ಕೇಳಿ ಅನಾಥರಾದವರಿಗೆ ಅಮೃತ ಸಿಕ್ಕಂತೆ ಆಗಿತ್ತು. ಆದರೆ ರಾಜಕೀಯ ದುರುದ್ದೇಶ ಹೊಂದಿದ ಕೆಲವರು ಇವರು ಹೊರಗಿನವರು, ಬಾಂಗ್ಲಾದೇಶಿಗಳಿದ್ದಾರೆ. ಇವರಿಗೇಕೆ ಕೊಡಬೇಕು ಎಂದು ಹಸಿ ಹಸಿ ಸುಳ್ಳು ತುಂಬಿದ ಅಪಪ್ರಚಾರ ಮಾಡತೊಡಗಿದರು. ಎಲ್ಲಾ ಗೊಂದಲದ ಗೂಡು. ಸರ್ಕಾರ ಹೆದರಿತೋ ಏನೋ ಗೊತ್ತಿಲ್ಲ ಹಿಂಜರಿದಿದ್ದಂತೂ ವಾಸ್ತವ, ಅಂದಿನಿಂದ ಬರಿ ಆಶ್ವಾಸನೆ ಮಾತ್ರ ನೆಲೆಯಂತೂ ನಮಗೆ ಸಿಗಲಿ ಸಿಗಲಿಲ್ಲ. ಕನಿಷ್ಠ ತಾತ್ಕಾಲಿಕ ನೆರವೂ ಸಹ ಕೊಡಲಿಲ್ಲ.”

“ಅಳದಿದ್ದರೆ ತಾಯಿ ಹಾಲೂ ಕೊಡಲ್ಲ” ಎಂಬ ಗಾದೆ ಇದೆ. ನಾವು ಇಲ್ಲೇ ಕೂತರೆ ನಮ್ಮನ್ನು ಸರ್ಕಾರ, ಸಮಾಜ, ಮಾಧ್ಯಮ ಎಲ್ಲರೂ ಮರೆತು ಬಿಡುತ್ತಾರೆ ಅನಿಸುತ್ತಿದೆ. ಎಲ್ಲದಕ್ಕಿಂತ ಹೆಚ್ಚಾಗಿ ಈ ಅತಂತ್ರದ ಅನಾಥ ಬೀದಿ ಬದುಕು ಸಾಕಾಗಿದೆ. ಹಾಗಾಗಿ ಮಕ್ಕಳು, ಮರಿ ಸಮೇತ ಕಟ್ಟಿಕೊಂಡು ಟೆಂಟು, ಪಾತ್ರೆ ಪಗಡೆಗಳ ಸಮೇತ ಫ್ರೀಡಂ ಪಾರ್ಕಿಗೆ ಹೊರಟದ್ದೇವೆ. ನಮಗೊಂದು ಸೂರು ಕೊಟ್ಟರೆ ಕಾರಣರಾದ ಎಲ್ಲರನ್ನೂ ಹರಸಿ ನೆಮ್ಮದಿಯಾಗಿ ಬದುಕುತ್ತೇವೆ. ಇಲ್ಲವಾದರೆ ನಮ್ಮನ್ನು ಜೈಲಿಗಾದರೂ ಹಾಕಿಬಿಡಿ ಒಂದು ನೆಲೆ ಮತ್ತು ಮೂರು ಹೊತ್ತಿನ ಊಟವಾದರೂ ಸಿಗುತ್ತದೆ” ಎಂದು ನಿರಾಶ್ರಿತರು ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರಾದ ಕೃಷ್ಣಬೈರೇಗೌಡ ಮತ್ತು ಝಮೀರ್ ಅಹ್ಮದ್ ಅವರಲ್ಲಿ ಪತ್ರಿಕಾ ಹೇಳಿಕೆಯ ಮೂಲಕ ಮನವಿ ಮಾಡಿಕೊಂಡಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

KPSC ಯನ್ನು ರದ್ದು ಮಾಡುತ್ತಾ ಸರ್ಕಾರ? ಹೊಸ ಚರ್ಚೆ ಹುಟ್ಟುಹಾಕಿದ ಸಚಿವ ಈಶ್ವರ್ ಖಂಡ್ರೆ ಹೇಳಿಕೆ

ಕರ್ನಾಟಕ ಲೋಕಸೇವಾ ಆಯೋಗವನ್ನು (KPSC) ಮುಚ್ಚುವ ಅಥವಾ ಸಂಪೂರ್ಣವಾಗಿ ರದ್ದುಗೊಳಿಸುವ ಕುರಿತು ಅರಣ್ಯ ಹಾಗೂ ಜೀವಿಶಾಸ್ತ್ರ ಸಚಿವ ಈಶ್ವರ್ ಖಂಡ್ರೆ ನೀಡಿರುವ ಹೇಳಿಕೆಯು ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನ ಮೂಡಿಸಿದ್ದು, ಲಕ್ಷಾಂತರ ಸ್ಪರ್ಧಾತ್ಮಕ...

ಹುಬ್ಬಳ್ಳಿಯಲ್ಲಿ ಗಣೇಶ ಮೆರವಣಿಗೆ ವೇಳೆ ಮಹಿಳೆಯರೊಂದಿಗೆ ಅಸಭ್ಯ ವರ್ತನೆ

ಹುಬ್ಬಳ್ಳಿಯಲ್ಲಿ ಗಣೇಶೋತ್ಸವದ ಮೂರ್ತಿ ತರುವ ಸಂಭ್ರಮದ ಮೆರವಣಿಗೆಯನ್ನೇ ನೆಪವಾಗಿಸಿಕೊಂಡು ಅಪರಿಚಿತ ಕಿಡಿಗೇಡಿಗಳು ಮಹಿಳೆಯರ ಜೊತೆ ಅಸಭ್ಯವಾಗಿ ವರ್ತಿಸಿದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಹಬ್ಬದ ನೆಪದಲ್ಲಿ ಸಾರ್ವಜನಿಕ ಸೌಹಾರ್ದತೆ ಮತ್ತು ಮಹಿಳೆಯರ ಸುರಕ್ಷತೆಗೆ...

ಗಣಪತಿ ಹಬ್ಬದ ನೆಪದಲ್ಲಿ ಮೈಸೂರಿನಲ್ಲಿ ಸೌಹಾರ್ದತೆ ಕೆಡಿಸಲು ಯತ್ನ? ಭದ್ರತಾ ನಿಯಮಗಳನ್ನೇ ಧಿಕ್ಕರಿಸಿದ BJP ನಾಯಕರು

ಗಣೇಶೋತ್ಸವದ ಮೆರವಣಿಗೆಗಳನ್ನು ನೆಪವಾಗಿಸಿಕೊಂಡು ಕೋಮು ಸೌಹಾರ್ದತೆಗೆ ಧಕ್ಕೆ ತರುವ, ಸೂಕ್ಷ್ಮ ಪ್ರದೇಶಗಳಲ್ಲಿ ಪ್ರಚೋದನಾಕಾರಿ ಘೋಷಣೆಗಳನ್ನು ಕೂಗಿ ಗಲಭೆಗೆ ಪ್ರೇರೇಪಿಸುವ ರಕ್ತದಾಹಿ ಕೃತ್ಯಗಳಿಗೆ ಬ್ರೇಕ್ ಹಾಕಲು ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ....

SIR: ವಿಶೇಷ ತೀವ್ರ ಪರಿಷ್ಕರಣೆ’ ಎಂಬ ಪ್ರಹಸನ, ಆಯೋಗದ ತಪ್ಪುಗಳಿಗೆ ಮತದಾರರು ಪ್ರಾಯಶ್ಚಿತ್ತ ಪಡಬೇಕೇ?

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಹೆಸರಿನಲ್ಲಿ ರಾಜ್ಯಾದ್ಯಂತ ಮತದಾರರನ್ನು 2002ರ ಮತದಾರರ ಪಟ್ಟಿಯೊಂದಿಗೆ ‘ಮ್ಯಾಪಿಂಗ್’ ಮಾಡುವ ಬೃಹತ್ ಪ್ರಕ್ರಿಯೆಯನ್ನು ಚುನಾವಣಾ ಆಯೋಗವು ಕೈಗೆತ್ತಿಕೊಂಡಿದೆ. 2002ರಲ್ಲಿದ್ದ ದತ್ತಾಂಶವನ್ನು ಇಂದಿನ ಪಟ್ಟಿಯೊಂದಿಗೆ ಹೋಲಿಸಿ,...

ಯೋಗಿ ಆದಿತ್ಯನಾಥ್ ಅವರನ್ನು ಪ್ರಶ್ನಿಸಿದ್ದ ಪತ್ರಕರ್ತೆ ದಿವ್ಯಾ ಶ್ರೀವಾಸ್ತವ್‌ಗೆ ಬೆದರಿಕೆ

ಶನಿವಾರ (ಸೆ. 12) ನಡೆದಿದ್ದ ಸುದ್ದಿಗೋಷ್ಠಿಯೊಂದರಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಪ್ರಶ್ನಿಸಿದ ಪತ್ರಕರ್ತೆ ದಿವ್ಯಾ ಶ್ರೀವಾಸ್ತವ ಅವರ ವೀಡಿಯೊ ವೈರಲ್ ಆದ ಬಳಿಕ, ಅವರು ಆನ್‌ಲೈನ್ ಬೆದರಿಕೆಗಳು ಮತ್ತು...

ಅಲಿಗಢ ಮುಸ್ಲಿಂ ವಿವಿ ಪ್ರತಿಭಟನೆಯ ‘ಪಕ್ಷಪಾತಿ’ ನಿರೂಪಣೆ : ಝೀ ನ್ಯೂಸ್‌ಗೆ ₹2 ಲಕ್ಷ ದಂಡ ವಿಧಿಸಿದ ಎನ್‌ಬಿಡಿಎಸ್‌ಎ

ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ (AMU) ನಡೆದ ವಿದ್ಯಾರ್ಥಿ ಪ್ರತಿಭಟನೆಯ ವೇಳೆ ಪ್ಯಾಲೆಸ್ತೀನ್ ಪರ ಘೋಷಣೆಗಳನ್ನು ಕೂಗಿದ ಘಟನೆಯನ್ನು ವರದಿ ಮಾಡುವಾಗ ಪ್ರಸಾರ ನೀತಿ ಸಂಹಿತೆಯನ್ನು ಉಲ್ಲಂಘಿಸಿದೆ ಎಂದು ಪರಿಗಣಿಸಿ, 'ಝೀ ನ್ಯೂಸ್' (Zee...

‘ಕೆಲವರು ಮುಸ್ಲಿಮರನ್ನು ಬೈದ್ರೆ ಮಾತ್ರ ಲೀಡರ್‌ ಆಗೋದು ಅನ್ಕೊಂಡಿದಾರೆ!’: ಆರ್‌. ಅಶೋಕ್‌ ಹಳೆಯ ಹೇಳಿಕೆ ಮುಂದಿಟ್ಟು ಪ್ರಿಯಾಂಕ್ ಖರ್ಗೆ ಟೀಕೆ!

ಮೈಸೂರಿನ ಟಿ. ನರಸೀಪುರದಲ್ಲಿ ಗಣಪತಿ ಮೆರವಣಿಗೆ ಸಾಗುವ ಮಾರ್ಗದ ವಿಚಾರವಾಗಿ ಬಿಜೆಪಿ ಪ್ರತಿಭಟನೆಗೆ ಮುಂದಾಗಿರುವ ಬೆನ್ನಲ್ಲೇ, ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌. ಅಶೋಕ್‌ ವಿರುದ್ಧ ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ...

ಠಾಣೆಗೆ ನುಸುಳುತ್ತೇನೆ ಎಂದ ಪ್ರತಾಪ್ ಸಿಂಹನಿಗೆ ಪರಪ್ಪನ ಜೈಲಿಗೂ ರೆಡಿಯಾಗಿ ಎಂದ ಸಚಿವ ಪ್ರಿಯಾಂಕ್ ಖರ್ಗೆ

ಮಾಜಿ ಸಂಸದ ಪ್ರತಾಪ್ ಸಿಂಹ ಅವರನ್ನು ನೇರವಾಗಿ ಗುರಿಯಾಗಿಸಿಕೊಂಡು ಸಚಿವ ಪ್ರಿಯಾಂಕ್ ಖರ್ಗೆ ತೀವ್ರ ವಾಗ್ದಾಳಿ ನಡೆಸಿದ್ದು, ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸುವ ಅಥವಾ ಅವರಿಗೆ ಬೆದರಿಕೆ ಹಾಕುವ ರೀತಿಯಲ್ಲಿ ಮಾತನಾಡುವವರ ವಿರುದ್ಧ ಸರ್ಕಾರ...

ಆಹಾರ ಪದ್ಧತಿ- ಧಾರ್ಮಿಕ ಆಚರಣೆಗಳನ್ನು ಆರಿಸಿಕೊಳ್ಳಲು ಜನರಿಗೆ ಸ್ವಾತಂತ್ರ್ಯವಿದೆ: ಬಂಗಾಳ ಮುಖ್ಯಮಂತ್ರಿ ಸುವೇಂದು ಅಧಿಕಾರಿ

ದುರ್ಗಾ ಪೂಜೆಯ ಸಂದರ್ಭದಲ್ಲಿ ಬಂಗಾಳಿಗಳು ಮಾಂಸಾಹಾರ ಸೇವಿಸುವುದರ ಕುರಿತು ಬಾಗೇಶ್ವರ ಬಾಬಾ ಎಂದೇ ಜನಪ್ರಿಯರಾಗಿರುವ ಧೀರೇಂದ್ರ ಶಾಸ್ತ್ರಿ ಅವರ ಹೇಳಿಕೆಗೆ ಪರೋಕ್ಷವಾಗಿ ಪ್ರತಿಕ್ರಿಯಿಸಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಸುವೇಂದು ಅಧಿಕಾರಿ, "ತಮ್ಮ ಆಹಾರ...

ಕರ್ನಾಟಕದಲ್ಲಿ 2 ಗಂಟೆಗಳ ಬೃಹತ್ ಕಾರ್ಯಾಚರಣೆ: 800 ಬಾಲಕಾರ್ಮಿಕರ ರಕ್ಷಣೆ; ಬೆಂಗಳೂರಿನಲ್ಲೇ 503 ಮಕ್ಕಳು

ಬಾಲಕಾರ್ಮಿಕ ಪದ್ಧತಿಯ ವಿರುದ್ಧ ಕರ್ನಾಟಕ ಪೊಲೀಸರು ಹಾಗೂ ಕಾರ್ಮಿಕ ಇಲಾಖೆ ಶನಿವಾರ ರಾಜ್ಯಾದ್ಯಂತ ನಡೆಸಿದ ವಿಶೇಷ ಕಾರ್ಯಾಚರಣೆಯಲ್ಲಿ 800 ಮಕ್ಕಳನ್ನು ರಕ್ಷಿಸಲಾಗಿದೆ. ರಾಜ್ಯದ 962 ಪೊಲೀಸ್ ಠಾಣೆಗಳು ಹಾಗೂ ಘಟಕಗಳ ವ್ಯಾಪ್ತಿಯಲ್ಲಿ 16,951...