Homeಮುಖಪುಟಅಮೆರಿಕಾ ಚುನಾವಣೆ: ಹೊಸ ಭರವಸೆಯಿತ್ತ ನಾಲ್ವರು ಪ್ರಗತಿಪರ ಮಹಿಳೆಯರ ಗೆಲುವು

ಅಮೆರಿಕಾ ಚುನಾವಣೆ: ಹೊಸ ಭರವಸೆಯಿತ್ತ ನಾಲ್ವರು ಪ್ರಗತಿಪರ ಮಹಿಳೆಯರ ಗೆಲುವು

ಈ ನಾಲ್ವರು ಮಹಿಳೆಯರು “ಬ್ಲೂ ವೇವ್” 2018 ರ ಮಧ್ಯಂತರ ಚುನಾವಣೆಗಳಲ್ಲಿ ಆಯ್ಕೆಯಾದವರು. ಇವರು ತಮ್ಮ ಬೆಂಬಲಿಗರು ಮತ್ತು ತಮ್ಮದೇ ಗುಂಪುಗಳಲ್ಲಿ “ದಿ ಸ್ಕ್ವಾಡ್” ಎಂದು ಪ್ರಸಿದ್ಧರಾದವರು.

- Advertisement -
- Advertisement -

ಅಮೆರಿಕಾ ಚುನಾವಣೆ ಫಲಿತಾಂಶದಲ್ಲಿ ಎಲ್ಲರ ಗಮನ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಮತ್ತು ಜೋ ಬಿಡೆನ್ ಮೇಲೆ ಕೇಂದ್ರಿಕರಿಸಿದೆ. ಆದರೆ ಇತ್ತ ಅಧ್ಯಕ್ಷರ ಆಯ್ಕೆಗೂ ಮುನ್ನ ಖುಷಿ ನೀಡುವ ಮತ್ತಷ್ಟು ಸುದ್ದಿಗಳಿವೆ. ಸಮಾಜದ ಲೈಂಗಿಕತೆ, ವರ್ಣಭೇದ ನೀತಿ, ಇಸ್ಲಾಮೋಫೋಬಿಯಾಗಳ ವಿರುದ್ಧ ಹೋರಾಡುತ್ತಾ, ಟೀಕೆ, ದಾಳಿಗಳನ್ನು ಎದುರಿಸಿದ ನಾಲ್ವರು ಪ್ರಗತಿಪರ ಮಹಿಳೆಯರು ಜಯಗಳಿಸಿದ್ದಾರೆ.

ಹೌದು, ಮಿನ್ನಿಯಾಪೊಲೀಸ್‌ನ ಇಲ್ಹಾನ್ ಒಮರ್, ನ್ಯೂಯಾರ್ಕ್‌ನ ಅಲೆಕ್ಸಾಂಡ್ರಿಯಾ ಒಕಾಸಿಯೊ-ಕಾರ್ಟೆಜ್, ಮ್ಯಾಸಚೂಸೆಟ್ಸ್‌ನ ಅಯನ್ನಾ ಪ್ರೆಸ್ಲೆ, ಮತ್ತು ಮಿಚಿಗನ್‌ನ ರಶೀದಾ ಟ್ಲೈಬ್ ಎಲ್ಲರೂ  ಮರುಚುನಾವಣೆಯಲ್ಲಿ ವಿಜಯ ಸಾಧಿಸಿದ್ದಾರೆ.

ಈ ನಾಲ್ವರು ಕಾಂಗ್ರೆಸ್ ಮಹಿಳೆಯರು “ಬ್ಲೂ ವೇವ್” 2018 ರ ಮಧ್ಯಂತರ ಚುನಾವಣೆಗಳಲ್ಲಿ ಆಯ್ಕೆಯಾದವರು. ಇವರು ತಮ್ಮ ಬೆಂಬಲಿಗರು ಮತ್ತು ತಮ್ಮದೇ ಗುಂಪುಗಳಲ್ಲಿ “ದಿ ಸ್ಕ್ವಾಡ್” ಎಂದು ಪ್ರಸಿದ್ಧರಾದವರು.

ಇದನ್ನೂ ಓದಿ: ಟ್ರಂಪ್ ನಡೆಸಿದ 18 ರ್ಯಾಲಿಗಳಿಂದ 30 ಸಾವಿರ ಜನರಿಗೆ ಸೋಂಕು, 700 ಸಾವು ಸಾಧ್ಯತೆ: ವರದಿ

ಡೆಮಾಕ್ರಟಿಕ್ ಪಕ್ಷದ ಎಒಸಿ ಎಂದೂ ಕರೆಯಲ್ಪಡುವ ಒಕಾಸಿಯೊ-ಕಾರ್ಟೆಜ್, ರಿಪಬ್ಲಿಕನ್ ಎದುರಾಳಿ ಜಾನ್ ಕಮ್ಮಿಂಗ್ಸ್ ಅವರನ್ನು ಸೋಲಿಸಿ, ನ್ಯೂಯಾರ್ಕ್‌ನ 14 ನೇ ಜಿಲ್ಲೆಯಲ್ಲಿ 68.8% ಮತಗಳೊಂದಿಗೆ ಮರು ಆಯ್ಕೆಯಾಗಿದ್ದಾರೆ. 2018 ರಲ್ಲಿ ಎಒಸಿ ಸದನಕ್ಕೆ ಚುನಾಯಿತರಾದ ಅತ್ಯಂತ ಕಿರಿಯ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.

ಎಒಸಿ ತಮ್ಮ ಪ್ರಗತಿಪರ ಸಿದ್ದಾಂತಗಳು ಮತ್ತು ಅಜೆಂಡಾವನ್ನು ಬಹಿರಂಗವಾಗಿ ಮಾತನಾಡಿದ್ದು, ಅವರ ಸಹೋದ್ಯೋಗಿಗಳು ಮತ್ತು ಸಂಪ್ರದಾಯವಾದಿ ಪತ್ರಿಕಾ ಮಾಧ್ಯಮಗಳನ್ನು ಕೆರಳಿಸಿತ್ತು. ಸದ್ಯ 31 ವರ್ಷದ ಒಕಾಸಿಯೊ-ಕಾರ್ಟೆಜ್, 60 ವರ್ಷದ ಕ್ಯಾಥೊಲಿಕ್ ಪ್ರೌಢಶಾಲಾ ಶಿಕ್ಷಕ, 10 ಮಿಲಿಯನ್ ಡಾಲರ್‌ಗಳಿಗೂ ಹೆಚ್ಚು ಹಣ ಸಂಪಾಡಿಸಿರುವ ರಿಪಬ್ಲಿಕನ್ ಅಭ್ಯರ್ಥಿ ಜಾನ್ ಕಮ್ಮಿಂಗ್ಸ್ ಅವರನ್ನು ಸೋಲಿಸಿದ್ದಾರೆ.

ರಿಪಬ್ಲಿಕನ್ ಅಭ್ಯರ್ಥಿ ಲ್ಯಾಸಿ ಜಾನ್ಸನ್ ವಿರುದ್ಧ 64.6% ಮತಗಳೊಂದಿಗೆ ಮಿನ್ನೇಸೋಟದ 5 ನೇ ಕಾಂಗ್ರೆಸ್ ಜಿಲ್ಲೆಯಲ್ಲಿ ಇಲ್ಹಾನ್ ಒಮರ್ ಗೆಲುವು ಸಾಧಿಸಿದ್ದಾರೆ. ಬಾಲ್ಯದಲ್ಲಿ ಅಂತರ್ಯುದ್ಧದಿಂದ ಪಲಾಯನ ಮಾಡಿದ ಸೊಮಾಲಿ ನಿರಾಶ್ರಿತರಾಗಿದ್ದ ಒಮರ್, ಸದನಕ್ಕೆ ಚುನಾಯಿತರಾದ ಮೊದಲ ಸೊಮಾಲಿ ಅಮೆರಿಕನ್ ಎನಿಸಿಕೊಂಡಿದ್ದಾರೆ.

ಅವರು ತನ್ನ ಜನರ ಬಗ್ಗೆ, ತನ್ನ ಮಣ್ಣಿನ ಬಗ್ಗೆ ಬಹಿರಂಗವಾಗಿ ಮಾತನಾಡುವ ದೊಡ್ಡ ಧ್ವನಿಯಾಗಿದ್ದಾರೆ. ಜನಾಂಗೀಯ ಹಲ್ಲೆ ಮತ್ತು ವಲಸಿಗರ ಮೇಲೆ ನಡೆಯುವ ದಾಳಿಗಳ ಬಗ್ಗೆ ಮಾತನಾಡಿದ್ದಾರೆ. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ಇದನ್ನೆ ದಾಳವಾಗಿಸಿ ರಿಪಬ್ಲಿಕನ್ ಅಭ್ಯರ್ಥಿ ಲ್ಯಾಸಿ ಜಾನ್ಸನ್ ವಿರುದ್ಧ ಜಯಗಳಿಸಿದ್ದಾರೆ.

ಇದನ್ನೂ ಓದಿ: ಅಮೇರಿಕಾ ಚುನಾವಣೆ: ಗೆಲುವಿನ ತುದಿಯಲ್ಲಿರುವ ಬೈಡೆನ್; ಟ್ರಂಪ್‌ಗೆ ಹಿನ್ನಡೆ!

 

ಇನ್ನು ಮ್ಯಾಸಚೂಸೆಟ್ಸ್‌ನ 7 ನೇ ಜಿಲ್ಲೆಯ ಪಾದ್ರಿಯಾಗಿದ್ದ ಸ್ವತಂತ್ರ ಅಭ್ಯರ್ಥಿ ರಾಯ್ ಓವೆನ್ಸ್‌ರನ್ನು 87.5% ಮತಗಳನ್ನು ಪಡೆಯುವ ಮೂಲಕ ಪ್ರೆಸ್ಲೆ ಸೋಲಿಸಿದರು. ಕಪ್ಪು ಹುಡುಗಿಯರ ಮೇಲಾಗುವ ಅನ್ಯಾಯದ ಅಪರಾಧೀಕರಣವನ್ನು ಸರಿಪಡಿಸುವ ಯೋಜನೆಗಳ ಬಗ್ಗೆ ಅವರು ಗಮನಾರ್ಹವಾಗಿ ಮಾತನಾಡಿದ್ದಾರೆ ಮತ್ತು ಈ ಕುರಿತು ಪ್ರಸ್ತಾಪಿಸಿದ್ದಾರೆ. ಈ ವರ್ಷದ ಆರಂಭದಲ್ಲಿ, ಅವರು ಸ್ಪೂರ್ತಿದಾಯಕ ವೀಡಿಯೊವನ್ನು ಸಹ ಬಿಡುಗಡೆ ಮಾಡಿದರು, ಇದರಲ್ಲಿ ತಾವು ಬೋಳುತಲೆ(ಅಲೋಪೆಸಿಯಾ) ಹೊಂದಿರುವ ಕುರಿತು ವಿವರಿಸಿದ್ದರು.

ಮಿಚಿಗನ್‌ನ 13 ನೇ ಜಿಲ್ಲೆಯ ರಿಪಬ್ಲಿಕನ್ ಎದುರಾಳಿ ಡೇವಿಡ್ ಡುಡೆನ್‌ಹೋಫರ್ ವಿರುದ್ಧ ಟ್ಲೈಬ್ ಜಯಗಳಿಸಿದ್ದಾರೆ. ಟ್ಲೈಬ್, 2018 ರಲ್ಲಿ ಸದನದಲ್ಲಿ ಪ್ಯಾಲೇಸ್ಟಿನಿಯನ್ ಮೂಲದ ಮೊದಲ ಮಹಿಳೆ ಮತ್ತು ಒಮರ್ ಜೊತೆಗೆ  ಸದನಕ್ಕೆ ಆಯ್ಕೆಯಾದ ಮೊದಲ ಇಬ್ಬರು ಮುಸ್ಲಿಂ ಮಹಿಳೆಯರಲ್ಲಿ ಒಬ್ಬರಾಗಿದ್ದರು.

“ದಿ ಸ್ಕ್ವಾಡ್” ಎಂದು ಕರೆಸಿಕೊಳ್ಳುವ ಇವರ ಮೇಲೆ ಅಧ್ಯಕ್ಷ ಟ್ರಂಪ್ ಪದೇ ಪದೇ ಆಕ್ರಮಣ ಮಾಡಿದ್ದಾರೆ. ಈನಾಲ್ವರನ್ನು “ಎಒಸಿ ಪ್ಲಸ್ ತ್ರೀ” ಎಂದು ವ್ಯಂಗ್ಯವಾಡುತ್ತಾರೆ. ಕಳೆದ ವರ್ಷ, ಟ್ರಂಪ್ ಈ ನಾಲ್ವರು ಅಮೆರಿಕಾ ಪ್ರಜೆಗಳಾಗಿದ್ದರೂ ತಾವು ಬಂದ ದೇಶಗಳಿಗೆ ಹಿಂತಿರುಗಿ ಎಂದು ಹೇಳಿದ್ದರು.

ಇದನ್ನೂ ಓದಿ: ಗುಡ್ ನ್ಯೂಸ್: ಬೊಲಿವಿಯಾದಲ್ಲಿ ಮಹಿಳಾ ಜನಪ್ರತಿನಿಧಿಗಳ ಸಂಖ್ಯೆ ಶೇ.50ಕ್ಕಿಂತಲೂ ಹೆಚ್ಚು!

ಈ ನಾಲ್ವರೂ ಎಂದು ಸುಮ್ಮನೆ ಕುಳಿತವರಲ್ಲ. ತಮ್ಮ ತಮ್ಮ ವ್ಯಾಪ್ತಿಯಲ್ಲಿ, ವ್ಯಾಪ್ತಿಯ ಹೊರಗಡೆಯೂ ಅನ್ಯಾಯಗಳ ವಿರುದ್ಧ ಧ್ವನಿ ಮಾಡಿದವರು. ಲೈಂಗಿಕತೆ, ಇಸ್ಲಾಮೋಫೋಬಿಯಾ ಮತ್ತು ವರ್ಣಭೇದ ನೀತಿಯಿಂದ ಜೀನೋಫೋಬಿಯಾ (ವಲಸಿಗರ ಮೇಲೆ ದಾಳಿ) ವರೆಗಿನ ಬಗ್ಗೆ ಬಹಿರಂಗವಾಗಿ ಮಾತನಾಡಿವರು. ಈ ಕಾರಣಕ್ಕೆ ಅನೇಕ ದಾಳಿಗಳು ಮತ್ತು ಟೀಕೆಗಳನ್ನು ಎದುರಿಸಿದ್ದಾರೆ.

ಒಕಾಸಿಯೊ-ಕಾರ್ಟೆಜ್, ಈ ನಾಲ್ವರಲ್ಲಿ ಗಮನಾರ್ಹವಾದವರು. ತನ್ನ ಎಡಪಂಥೀಯ ರಾಜಕಾರಣಕ್ಕಾಗಿ ಸಂಪ್ರದಾಯವಾದಿಗಳಿಂದ ಕಟುಟೀಕೆ ಎದುರಿಸಿದವರು.

ಇನ್ನು ಈ ನಾಲ್ವರಲ್ಲಿ ಅಮೆರಿಕಾಕ್ಕೆ ಹೊರಗಡೆಯಿಂದ ಬಂದವರು ಇಲ್ಹಾನ್ ಒಮರ್ ಮಾತ್ರ. ಯುವತಿಯೊಬ್ಬಳು ವಲಸೆಗಾರರ ಬಗ್ಗೆ ಮತ್ತು ಇಸ್ಲಾಮೋಫೋಬಿಯಾ ಬಗ್ಗೆ ಸಾಕಷ್ಟು ಧ್ವನಿ ಎತ್ತಿದ್ದರಿಂದ ಈಕೆಯನ್ನು ಚಿಕ್ಕವಯಸ್ಸಿನಲ್ಲೇ ಅಮೆರಿಕಕ್ಕೆ ಕರೆತರಲಾಗಿತ್ತು.

ಅಮೆರಿಕಾ ಚುನಾವಣೆ ಅಧ್ಯಕ್ಷೀಯ ಚುನಾವಣಾ ಫಲಿತಾಂಶಕ್ಕಾಗಿ ಇಡೀ ವಿಶ್ವದ ಜನರೇ ಎದುರು ನೋಡುತ್ತಿದ್ದಾರೆ. ಡೆಮಾಕ್ರಟಿಕ್ ಅಭ್ಯರ್ಥಿ ಜೋ ಬೈಡೆನ್ ವೈಟ್ ಹೌಸ್‌ನತ್ತ ಮುನ್ನುಗ್ಗುತ್ತಿದ್ದಾರೆ. ಆದರೆ ಪೂರ್ತಿ ಮತ ಏಣಿಕೆ ಮುಗಿರುವವರೆಗೂ ಯಾವುದನ್ನೂ ನಿರ್ಧರಿಸಲು ಸಾಧ್ಯವಿಲ್ಲ.

ಅಮೆರಿಕಾ ಚುನಾವಣೆ ಫಲಿತಾಂಶ ಏನೇ ಇರಲಿ. ಕೆಲವು ಸ್ಥಳಗಳಲ್ಲಿನ ಮಹಿಳೆಯರ ಗೆಲುವು, ಹೋರಾಟಗಾರರು, ಅನ್ಯಾಯ ವಿರುದ್ಧ ದನಿ ಎತ್ತುವವರಿಗೆ ಹೊಸ ಭರವಸೆ ಮೂಡಿಸಿರುವುದು ಸುಳ್ಳಲ್ಲ.


ಇದನ್ನೂ ಓದಿ: ಮತದಾನದಲ್ಲಿ ವಂಚನೆ, ಸುಪ್ರೀಂಕೋರ್ಟ್‌ಗೆ ಹೋಗಲಿದ್ದೇವೆ: ಡೊನಾಲ್ಡ್ ಟ್ರಂಪ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

‘ಕೇಜ್ರಿವಾಲ್ ಚುನಾವಣಾ ಪ್ರಚಾರ ಮಾಡಬಾರದೆಂದು ಬಿಜೆಪಿ ಬಯಸುತ್ತದೆ, ಅವರ ಪರವಾಗಿ ನಾನು ಪ್ರಚಾರ ಮಾಡುತ್ತೇನೆ’;...

0
ಎಎಪಿ ಎನ್‌ಜಿಒ ಅಲ್ಲ, ಅದು ರಾಷ್ಟ್ರೀಯ ಪಕ್ಷ, ಕೇಜ್ರಿವಾಲ್ ಅವರು ಚುನಾವಣಾ ಪ್ರಚಾರದಿಂದ ದೂರವಿರಬೇಕೆಂದು ಬಿಜೆಪಿ ಬಯಸುತ್ತದೆ, ನಾನು ಅವರ ಪರವಾಗಿ ಪ್ರಚಾರ ಮಾಡುತ್ತೇನೆ ಎಂದು ಪಂಜಾಬ್‌ ಸಿಎಂ ಭಗವಂತ್ ಸಿಂಗ್ ಮಾನ್...