Homeಅಂತರಾಷ್ಟ್ರೀಯಟ್ರಂಪ್ ನಡೆಸಿದ 18 ರ್ಯಾಲಿಗಳಿಂದ 30 ಸಾವಿರ ಜನರಿಗೆ ಸೋಂಕು, 700 ಸಾವು ಸಾಧ್ಯತೆ: ವರದಿ

ಟ್ರಂಪ್ ನಡೆಸಿದ 18 ರ್ಯಾಲಿಗಳಿಂದ 30 ಸಾವಿರ ಜನರಿಗೆ ಸೋಂಕು, 700 ಸಾವು ಸಾಧ್ಯತೆ: ವರದಿ

ಅಧ್ಯಕ್ಷ ಟ್ರಂಪ್ ನಿಮ್ಮ ಅಧ್ಯಯನದ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಅಷ್ಟೆ ಅಲ್ಲದೆ ಅವರು ತಮ್ಮ ಬೆಂಬಲಿಗರ ಬಗ್ಗೆಯೂ ಕಾಳಜಿ ವಹಿಸುವುದಿಲ್ಲ - ಜೋ ಬಿಡನ್

- Advertisement -
- Advertisement -

ಅಮೆರಿಕ ಅಧ್ಯಕ್ಷೀಯ ಚುನಾವಣೆ ಹಿನ್ನೆಲೆಯಲ್ಲಿ ಡೋನಾಲ್ಡ್ ಟ್ರಂಪ್ ನಡೆಸಿದ 18 ರ್ಯಾಲಿಗಳಿಂದ ಅಂದಾಜು 30,000 ಜನರಿಗೆ ಕೊರೊನಾ ಸೋಂಕು ತಗುಲಿರಬಹುದು ಮತ್ತು 700ಕ್ಕೂ ಹೆಚ್ಚು ಜನರು ಮೃತಪಟ್ಟಿರಬಹುದು ಎಂದು ಸ್ಟಾನ್‌ಫೋರ್ಡ್ ಯುನಿವರ್ಸಿಟಿ ಸಂಶೋಧಕರ ಸಂಶೋಧನೆಗಳು ತಿಳಿಸಿವೆ. ಆ 18 ಸ್ಥಳಗಳಲ್ಲಿಯೂ ಸಹ ಸೋಂಕುಗಳ ಮತ್ತು ಮರಣ ಪ್ರಕರಣಗಳು ಹೆಚ್ಚಾಗಿ ವರದಿಯಾಗಿವೆ ಎನ್ನಲಾಗಿದೆ.

‘COVID-19 ರ ಹರಡುವಿಕೆಯ ಮೇಲೆ ದೊಡ್ಡ ಗುಂಪು ಸಭೆಗಳ ಪರಿಣಾಮಗಳು: ಟ್ರಂಪ್ ರ್ಯಾಲಿಗಳ ಪ್ರಕರಣ’ ಹೆಸರಿನಲ್ಲಿ ಜೂನ್ 20 ರಿಂದ ಸೆಪ್ಟಂಬರ್ 22 ರವರೆಗೆ ಡೋನಾಲ್ಡ್ ಟ್ರಂಪ್ ನಡೆಸಿದ ರ್ಯಾಲಿಗಳನ್ನು ಸಂಶೋಧಕರು ಅಭ್ಯಸಿಸಿದ್ದಾರೆ.

“ನಮ್ಮ ವಿಶ್ಲೇಷಣೆಯು ದೊಡ್ಡ ಗುಂಪು ಕಾರ್ಯಕ್ರಮಗಳಲ್ಲಿ COVID-19 ಪ್ರಸರಣದ ಅಪಾಯದ ಬಗ್ಗೆ ಸಾರ್ವಜನಿಕ ಆರೋಗ್ಯ ಅಧಿಕಾರಿಗಳ ಎಚ್ಚರಿಕೆಗಳು ಮತ್ತು ಶಿಫಾರಸುಗಳನ್ನು ಬಲವಾಗಿ ಬೆಂಬಲಿಸುತ್ತದೆ. ವಿಶೇಷವಾಗಿ ಮಾಸ್ಕ್‌ಗಳ ಬಳಕೆ ಮತ್ತು ಸಾಮಾಜಿಕ ಅಂತರಕ್ಕೆ ಸಂಬಂಧಿಸಿದ ಮಾರ್ಗಸೂಚಿಗಳನ್ನು ಉಲ್ಲಂಘಿಸಿ ಟ್ರಂಪ್ ರ್ಯಾಲಿಗಳು ನಡೆದವು. ಆದ್ದರಿಂದ ರೋಗ ಹರಡುವಿಕೆ ಮತ್ತು ಸಾವಿನ ವಿಷಯದಲ್ಲಿ ಹೆಚ್ಚಿನ ಬೆಲೆ ತೆರಬೇಕಾಯಿತು” ಎಂದು ಸಂಶೋಧಕರು ಅಧ್ಯಯನದಲ್ಲಿ ತಿಳಿಸಿದ್ದಾರೆ.

ಶುಕ್ರವಾರ ಈ ಅಧ್ಯಯನ ವರದಿ ಬಿಡುಗಡೆಯಾಗಿದ್ದು, ಆ ವೇಳೆಗಾಗಲೇ 87 ಲಕ್ಷಕ್ಕೂ ಹೆಚ್ಚು ಅಮೆರಿಕನ್ನರು COVID-19 ಸೋಂಕಿಗೆ ತುತ್ತಾಗಿದ್ದಾರೆ ಮತ್ತು ಇದರ ಪರಿಣಾಮವಾಗಿ 225,000 ಕ್ಕೂ ಹೆಚ್ಚು ಸಾವುಗಳು ಸಂಭವಿಸಿವೆ.

ಅಧ್ಯಯನದ ಕುರಿತು ಪ್ರತಿಕ್ರಿಯಿಸಿದ ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಜೋ ಬಿಡನ್ “ಅಧ್ಯಕ್ಷ ಟ್ರಂಪ್ ನಿಮ್ಮ ಅಧ್ಯಯನದ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಅಷ್ಟೆ ಅಲ್ಲದೆ ಅವರು ತಮ್ಮ ಬೆಂಬಲಿಗರ ಬಗ್ಗೆಯೂ ಕಾಳಜಿ ವಹಿಸುವುದಿಲ್ಲ” ಎಂದು ಹೇಳಿದ್ದಾರೆ.


ಇದನ್ನೂ ಓದಿ: ನಾನು ಚುನಾವಣೆಯಲ್ಲಿ ಸೋತರೆ ದೇಶ ಬಿಡಬಹುದು: ಡೊನಾಲ್ಡ್ ಟ್ರಂಪ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ಯಾಲೆಸ್ತೀನ್‌ಗೆ ವಿಶ್ವಸಂಸ್ಥೆಯ ಪೂರ್ಣ ಸದಸ್ಯತ್ವ ನೀಡುವ ಪ್ರಯತ್ನ ಬೆಂಬಲಿಸಿದ ಭಾರತ

0
ವಿಶ್ವಸಂಸ್ಥೆಯ ಸಂಪೂರ್ಣ ಸದಸ್ಯತ್ವ ಪಡೆಯುವ ಪ್ಯಾಲೆಸ್ತೀನ್‌ನ ಮನವಿಯನ್ನು ಮರು ಪರಿಶೀಲಿಸಿ ಅನುಮೋದಿಸುವ ವಿಶ್ವಾಸವಿದೆ ಎಂದು ಭಾರತ ಬುಧವಾರ ಹೇಳಿದೆ. ಈ ಮೂಲಕ ಪ್ಯಾಲೆಸ್ತೀನ್‌ ವಿಶ್ವಸಂಸ್ಥೆಯ ಪೂರ್ಣ ಸದಸ್ಯತ್ವ ಪಡೆಯುವುದಕ್ಕೆ ಬೆಂಬಲ ವ್ಯಕ್ತಪಡಿಸಿದೆ. ಇಸ್ರೇಲ್ ಮತ್ತು...