ಅಮೆರಿಕಾ
PC: Reuters Photo

ನಾನು ಚುನಾವಣೆಯಲ್ಲಿ ಸೋಲುವುದನ್ನು ನೀವು ಊಹಿಸಬಲ್ಲಿರಾ..? ನಾನು ಚುನಾವಣೆಯಲ್ಲಿ ಸೋತರೆ ದೇಶವನ್ನು ಬಿಟ್ಟು ಹೋಗಬಹುದೇನೋ ಎಂದು ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ತಿಳಿಸಿದ್ದಾರೆ.

ಕೊರೊನಾ ಸೋಂಕಿನಿಂದ ಗುಣಮುಖರಾಗಿ ಫ್ಲೋರಿಡಾ ಮತ್ತು ಜಾರ್ಜಿಯಾದಲ್ಲಿ ನಡೆದ ರ್‍ಯಾಲಿಗಳಲ್ಲಿ ಮಾತನಾಡಿದ, ಎದುರಾಳಿ ಡೆಮಾಕ್ರಟಿಕ್ ಪಕ್ಷದ ಜೋ ಬಿಡನ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಜೋ ಬಿಡನ್ ಅಮೆರಿಕಾದಲ್ಲಿ ಕಮ್ಯುನಿಸಮ್ ಮತ್ತು ಪ್ರವಾಹೋಪಾದಿಯಲ್ಲಿ ಕ್ರಿಮಿನಲ್ ವಲಸಿಗರನ್ನು ತುಂಬಲಿದ್ದಾರೆ ಎಂದು ಆರೋಪಿಸಿದ್ದಾರೆ.

ನಾನು ಅಂದುಕೊಂಡಂತೆ ಯಾವುದು ನಡೆಯುತ್ತಿಲ್ಲ ಎಂಬುದನ್ನು ಒಪ್ಪಿಕೊಂಡ ಅವರು, “ಅಧ್ಯಕ್ಷೀಯ ಚುನಾವಣೆಯ ರಾಜಕೀಯ ಇತಿಹಾಸದಲ್ಲಿ ಒಬ್ಬ ಕೆಟ್ಟ ಅಭ್ಯರ್ಥಿಯ ವಿರುದ್ಧ ಸ್ಫರ್ಧಿಸಿರುವುದು ನನ್ನ ಮೇಲೆ ಒತ್ತಡ ಉಂಟುಮಾಡಿದೆ. ನಾನು ಸೋಲಬಹುದೆಂದು ನೀವು ಊಹಿಸಬಲ್ಲಿರಾ? ಹಾಗೇನಾದರೂ ಸೋತರೆ ನಾನು ಏನು ಮಾಡಲಿ? ಬಹುಶಃ ನಾನು ದೇಶ ಬಿಡಬಹುದು ಎಂದಿದ್ದಾರೆ.

ಇದನ್ನೂ ಓದಿ: ಅಮೆರಿಕಾ ಚುನಾವಣೆ: ಚರ್ಚೆಯಲ್ಲಿ ಭಾಗವಹಿಸಲು ನಿರಾಕರಿಸಿದ ಟ್ರಂಪ್

ಅಮೆರಿಕದಲ್ಲಿ ಚುನಾವಣೆ ಜೊತೆಗೆ ಕೊರೊನಾ ಸೋಂಕಿನ ಪ್ರಕರಣಗಳು ಹೆಚ್ಚಾಗಿರುವುದರಿಂದ  ಟ್ರಂಪ್ ತಮ್ಮ ಗಮನವನ್ನು ಸಂಪೂರ್ಣವಾಗಿ ಪ್ರಮುಖ ರಿಪಬ್ಲಿಕನ್ ನೆಲೆಯ ಮೇಲೆ ಕೇಂದ್ರೀಕರಿಸಿದ್ದಾರೆ. ಅಲ್ಲಿಂದ ಬೆಂಬಲಿಗರು ಹೆಚ್ಚಿನ ಸಂಖ್ಯೆಯಲ್ಲಿ ಹೊರಹೊಮ್ಮುತ್ತಾರೆ ಎಂಬ ಭರವಸೆಯಲ್ಲಿದ್ದಾರೆ.

ಇತ್ತ, ಬಿಡೆನ್ ತಮ್ಮ ಚುನಾವಣಾ ಪ್ರಚಾರದಲ್ಲಿ, ಡೊನಾಲ್ಡ್ ಟ್ರಂಪ್ ಸರ್ಕಾರ ಕೊರೊನಾ ವೈರಸ್ ನಿಯಂತ್ರಣ ಮಾಡದ ವಿಚಾರವನ್ನು ಅಭಿಯಾನದ ಪ್ರಬಲ ವಿಷಯವಾಗಿಟ್ಟುಕೊಂಡಿದ್ದಾರೆ. ’ಈ ವೈರಸ್ ಪವಾಡದಂತೆ ಕಣ್ಮರೆಯಾಗಲಿದೆ ಎಂದು ಅವರು ನಮಗೆ ಹೇಳುತ್ತಲೇ ಇರುತ್ತಾರೆ ಆದರೆ ವಾಸ್ತವವಾಗಿ ಅದು ಮತ್ತಷ್ಟು ಹೆಚ್ಚುತ್ತಿದೆ’ ಎಂದಿದ್ದಾರೆ.

ರ್‍ಯಾಲಿಗಳಲ್ಲಿ ಬಿಡೆನ್ “ನಾವು ಭಯದ ಬದಲು ಭರವಸೆಯನ್ನು, ವಿಭಜನೆಯ ಬದಲು ಏಕತೆಯನ್ನು, ಕಲ್ಪನೆಗೆ ಬದಲು ವಿಜ್ಞಾನವನ್ನು, ಜೊತೆಗೆ ಸುಳ್ಳಿನ ಬದಲು ಸತ್ಯವನ್ನು ಆರಿಸಿಕೊಳ್ಳುತ್ತೇವೆ” ಎಂದು ಆತ್ಮವಿಶ್ವಾಸದ ಮಾತುಗಳನ್ನಾಡಿದ್ದಾರೆ.


ಇದನ್ನೂ ಓದಿ: ಕೊರೊನಾ ಬಗ್ಗೆ ತಪ್ಪು ಮಾಹಿತಿ: ಟ್ರಂಪ್ ಟ್ವೀಟ್‌ ಅನ್ನು ನಿರ್ಬಂಧಿಸಿದ ಟ್ವಿಟ್ಟರ್

Donate

ಈ ಲೇಖನ, ಈ ವೆಬ್‌ಸೈಟ್ ನಿಮಗೆ ಇಷ್ಟವಾಯಿತೇ? ನಿಮ್ಮ ಬೆಂಬಲ ಇದಕ್ಕೆ ಅಗತ್ಯ.

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

+ posts

1 COMMENT

LEAVE A REPLY

Please enter your comment!
Please enter your name here