ಅಮೆರಿಕದ ನೂತನ ಅಧ್ಯಕ್ಷ ಜೋ ಬೈಡನ್ ಅವರ ಆಡಳಿತದಲ್ಲಿ ಪ್ರಮುಖ ಸ್ಥಾನಗಳಿಗೆ 13 ಮಹಿಳೆಯರು ಸೇರಿದಂತೆ ಸುಮಾರು 20 ಭಾರತೀಯ-ಅಮೆರಿಕನ್ನರನ್ನು ನಾಮನಿರ್ದೇಶನ ಮಾಡಿದ್ದಾರೆ. ಆದರೆ ಬೈಡನ್ ಪರ ಅಭಿಯಾನದಲ್ಲಿ ಕೆಲಸ ಮಾಡಿದ್ದರೂ ಸಹ ಆರ್‌ಎಸ್‌ಎಸ್-ಬಿಜೆಪಿ ಸಂಪರ್ಕ ಹೊಂದಿರುವವರನ್ನು ಆ ಪಟ್ಟಿಯಿಂದ ಹೊರಗಿಡಲಾಗಿದೆ ಎಂದು ದಿ ಟ್ರಿಬ್ಯೂನ್ ವರದಿ ಮಾಡಿದೆ.
ಮುಖ್ಯವಾಗಿ ಒಬಾಮಾ ಆಡಳಿತದ ಭಾಗವಾಗಿದ್ದ ಸೋನಾಲ್ ಷಾ ಮತ್ತು ಅಮಿತ್ ಜಾನಿ ಅವರರನ್ನು ಬೈಡನ್ ನಾಮನಿರ್ದೇಶಿತ ಭಾರತೀಯ-ಅಮೆರಿಕನ್ನರ ಪಟ್ಟಿಗೆ ಸೇರಿಸಿಲ್ಲ. ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್) ಮತ್ತು ಭಾರತೀಯ ಜನತಾ ಪಕ್ಷ (ಬಿಜೆಪಿ) ಯೊಂದಿಗಿನ ಸಂಪರ್ಕ ಹೊಂದಿದ್ದರು ಎಂದು ಹಲವು ಸಂಘಟನೆಗಳು ದೂರಿರುವುದೇ ಅವರನ್ನು ಹೊರಗಿಡಲು ಪ್ರಮುಖ ಕಾರಣ ಎಂದು ವರದಿ ತಿಳಿಸಿದೆ.
ಬಿಡೆನ್ ಅವರ ಏಕತೆ ಕಾರ್ಯಪಡೆಯಲ್ಲಿ ಸೇವೆ ಸಲ್ಲಿಸಿರುವ ಸೋನಾಲ್ ಷಾ ಅವರ ತಂದೆ ಬಿಜೆಪಿ-ಯುಎಸ್ಎಯ ಸಾಗರೋತ್ತರ ಸಂಘದ ಅಧ್ಯಕ್ಷರಾಗಿದ್ದರು ಮತ್ತು ಆರ್‌ಎಸ್‌ಎಸ್ ನಡೆಸುತ್ತಿರುವ ಏಕಲ್ ವಿದ್ಯಾಲಯದ ಸ್ಥಾಪಕರಾಗಿದ್ದಾರೆ. ಅಲ್ಲದೆ ಏಕಲ್ ವಿದ್ಯಾಲಯಕ್ಕಾಗಿ ಸೋನಾಲ್ ಷಾ ಹಣವನ್ನು ಸಂಗ್ರಹಿಸಿದ್ದಾರೆ ಎಂಬ ಆರೋಪವಿದೆ.
ಜಾನಿ ಅವರು ‘ನೇಮ್ ಬಿಡೆನ್’ ಅಭಿಯಾನದ ‘ಮುಸ್ಲಿಂ ಔಟ್‌ರೀಚ್‌ನ’ ಸಂಯೋಜಕರಾಗಿದ್ದರು. ಆದರೆ ಅವರ ಕುಟುಂಬಕ್ಕೆ ಪಿಎಂ ಮೋದಿ ಮತ್ತು ಇತರ ಬಿಜೆಪಿ ನಾಯಕರೊಂದಿಗೆ ನಿಕಟ ಸಂಬಂಧ ಹೊಂದಿದೆ ಎಂದು ವರದಿಯಾಗಿದೆ.
ಆರ್‌ಎಸ್‌ಎಸ್-ಬಿಜೆಪಿ ಸಂಬಂಧ ಹೊಂದಿರುವವರು ಬಿಡೆನ್ ತಂಡದಲ್ಲಿ ಸ್ಥಾನ ಪಡೆದಿಲ್ಲ. ಏಕೆಂದರೆ ಜಾತ್ಯತೀತ ಭಾರತೀಯ-ಅಮೆರಿಕನ್ ಸಂಸ್ಥೆಗಳು ಅಂತಹ ವ್ಯಕ್ತಿಗಳನ್ನು ಬದಿಗೆ ಸರಿಸುವಂತೆ ಬೈಡನ್ ಅವರ ಪರಿವರ್ತನಾ ತಂಡವನ್ನು ಸತತವಾಗಿ ಒತ್ತಾಯಿಸಿವೆ ಎನ್ನಲಾಗಿದೆ.
ಇದಕ್ಕೆ ವ್ಯತಿರಿಕ್ತವಾಗಿ ದೇವಯಾನಿ ಖೋಬರ್‌ಗಡೆ ಪ್ರಕರಣದಲ್ಲಿ ಪಾತ್ರವಹಿಸಿದ್ದ ಹಿರಿಯ ರಾಜತಾಂತ್ರಿಕ ಉಜ್ರಾ ಜಯಾ ಅಥವಾ ಸಿಎಎ, ಎನ್‌ಆರ್‌ಸಿ ಮತ್ತು ಕಾಶ್ಮೀರ ಲಾಕ್‌ಡೌನ್ ವಿರುದ್ಧ ಯುಎಸ್‌ನಲ್ಲಿ ಪ್ರತಿಭಟನಾ ರ್ಯಾಲಿಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದ ಸಮೀರಾ ಫಾಜಿಲಿ ಅವರಂತಹ ವ್ಯಕ್ತಿಗಳನ್ನು ಬಿಡೆನ್ ತಂಡ ಹೊಂದಿದೆ ಎಂದು ದಿ ಟ್ರಿಬ್ಯೂನ್ ವರದಿ ಮಾಡಿದೆ.
ಇದನ್ನೂ ಓದಿ: ಮೊದಲ ದಿನವೇ ವಲಸೆ, ಹವಾಮಾನ ಬದಲಾವಣೆ, ಕೋವಿಡ್ ನಿರ್ವಹಣೆಯ ನೀತಿಗಳ ಬದಲಾವಣೆಗೆ ಸಹಿ ಹಾಕಿದ ಬೈಡನ್!
Good , better keep outside all of them
America is not like India, they wouldn’t take decisions based on the allegations, but based on the materialistic evidence. That is the reason America is world strong democracy.
India is just a country of sentimental fools.
ಆಶಾದಾಯಕ ಬೆಳವಣಿಗೆ.
Good initiative by Mr. Joe Biden