Homeಅಂತರಾಷ್ಟ್ರೀಯಭಾರತ ಚೀನಾ ಗಡಿ ವಿವಾದ: ಟ್ರಂಪ್ ಜೊತೆ ಮೋದಿ ಮಾತುಕತೆ ನಡೆಸಿಲ್ಲ - ಭಾರತ ಸ್ಪಷ್ಟನೆ

ಭಾರತ ಚೀನಾ ಗಡಿ ವಿವಾದ: ಟ್ರಂಪ್ ಜೊತೆ ಮೋದಿ ಮಾತುಕತೆ ನಡೆಸಿಲ್ಲ – ಭಾರತ ಸ್ಪಷ್ಟನೆ

ಭಾರತ ಚೀನಾ ಗಡಿ ವಿವಾದದ ಕುರಿತಾಗಿ ನಾನು ಮೋದಿ ಜತೆಗೆ ಮಾತನಾಡಿದ್ದೇನೆ; ಚೀನಾ ಜತೆಗಿನ ಸಂಘರ್ಷ ವಿಚಾರದಲ್ಲಿ ಅವರು ಒಳ್ಳೆಯ ಮೂಡ್‌ನಲ್ಲಿ ಇದ್ದಂತಿಲ್ಲ ಎಂದು ಅವರು ಹೇಳಿದ್ದರು.

- Advertisement -
- Advertisement -

ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಭಾರತ ಚೀನಾ ಗಡಿ ವಿವಾದದ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಮಾತನಾಡಿದ್ದೇನೆ ಎಂದು ಹೇಳಿದ ಕೆಲವೇ ಗಂಟೆಗಳ ನಂತರ, ಭಾರತ ಸರ್ಕಾರದ ಉನ್ನತ ಮೂಲಗಳು ಇದನ್ನು ನಿರಾಕರಿಸಿದೆ. ಈ ನಡುವೆ ಇಬ್ಬರು ನಾಯಕರು ಯಾವುದೇ ಸಂವಹನ ನಡೆದಿಲ್ಲ ಎಂದು ಸ್ಪಷ್ಟಪಡಿಸಿವೆ.

“ಪ್ರಧಾನಿ ಮೋದಿ ಮತ್ತು ಅಮೆರಿಕಾ ಅಧ್ಯಕ್ಷ ಟ್ರಂಪ್ ನಡುವೆ ಇತ್ತೀಚಿಗೆ ಯಾವುದೇ ಸಂಪರ್ಕಗಳು ನಡೆದಿಲ್ಲ. 2020 ರ ಏಪ್ರಿಲ್ 4 ರಂದು ಹೈಡ್ರಾಕ್ಸಿಕ್ಲೋರೋಕ್ವಿನ್ ವಿಷಯದ ಬಗ್ಗೆ ನಡುವೆ ನಡೆದ ಸಂಭಾಷಣೆಯೆ ಕೊನೆಯದು” ಎಂದು ಮೂಲಗಳು ತಿಳಿಸಿವೆ

“ವಿದೇಶಾಂಗ ಸಚಿವಾಲಯವು ರಾಜತಾಂತ್ರಿಕ ಕಾರ್ಯವಿಧಾನಗಳ ಮೂಲಕ ನೇರವಾಗಿ ಚೀನಾದೊಂದಿಗೆ ಸಂಪರ್ಕದಲ್ಲಿದೆ” ಎಂದು ಮೂಲಗಳು ಹೇಳಿದೆ.

ಉಭಯ ರಾಷ್ಟ್ರಗಳ ನಡುವೆ ನಡೆಯುತ್ತಿರುವುದು “ದೊಡ್ಡ ಸಂಘರ್ಷ” ಎಂದು ಬಣ್ಣಿಸಿರುವ ಟ್ರಂಪ್ ಭಾರತ ಮತ್ತು ಚೀನಾ ನಡುವೆ ಮಧ್ಯಸ್ಥಿಕೆ ವಹಿಸುವ ಪ್ರಸ್ತಾಪವನ್ನು ಇಂದು ಸಹ ಪುನರುಚ್ಚರಿಸಿದ್ದರು.

ಭಾರತ ಮತ್ತು ಚೀನಾ ನಡುವಿನದ್ದು ದೊಡ್ಡ ಸಂಘರ್ಷ. ಎರಡೂ ದೇಶಗಳೂ ತಲಾ 1.4 ಶತಕೋಟಿ ಜನಸಂಖ್ಯೆ ಹೊಂಧಿವೆ. ಎರಡೂ ದೇಶಗಳ ಸೈನ್ಯವೂ ಬಲಿಷ್ಠವಾಗಿದೆ. ಭಾರತದಂತೆ ಬಹುಶಃ ಚೀನಾಕ್ಕೂ ಖುಷಿ ಇದ್ದಂತಿಲ್ಲ ಎಂದು ಟ್ರಂಪ್ ಹೇಳಿದ್ದರು.

ನಾನು ಮೋದಿ ಜತೆಗೆ ಮಾತನಾಡಿದ್ದೇನೆ; ಚೀನಾ ಜತೆಗಿನ ಗಡಿ ವಿವಾದ ಸಂಘರ್ಷ ವಿಚಾರದಲ್ಲಿ ಅವರು ಒಳ್ಳೆಯ ಮೂಡ್‌ನಲ್ಲಿ ಇದ್ದಂತಿಲ್ಲ, ಮಧ್ಯಸ್ಥಿಕೆಯಿಂದ ಸಹಾಯವಾಗುತ್ತದೆ ಎಂದು ಉಭಯ ದೇಶಗಳು ಅಭಿಪ್ರಾಯಪಟ್ಟರೆ, ಮಧ್ಯಸ್ಥಿಕೆಗೆ ಸಿದ್ಧ ಎಂದಿದ್ದರು.

“ಭಾರತದಲ್ಲಿ ಅವರು ನನ್ನನ್ನು ಇಷ್ಟಪಡುತ್ತಾರೆ. ಈ ದೇಶದಲ್ಲಿ ಮಾಧ್ಯಮಗಳು ನನ್ನನ್ನು ಇಷ್ಟಪಡುವದಕ್ಕಿಂತ ಭಾರತದಲ್ಲಿ ಅವರು ನನ್ನನ್ನು ಇಷ್ಟಪಡುತ್ತಾರೆ ಎಂದು ನಾನು ಭಾವಿಸುತ್ತೇನೆ. ನಿಮ್ಮ ಪ್ರಧಾನಿ ಮೋದಿಯನ್ನು ನಾನು ತುಂಬಾ ಇಷ್ಟಪಡುತ್ತೇನೆ. ಅವರು ಒಬ್ಬ ಮಹಾನ್ ಸಂಭಾವಿತ ವ್ಯಕ್ತಿ” ಎಂದು ಹೇಳಿದ್ದರು.

ನಿನ್ನೆ ಅಮೆರಿಕಾ ಅಧ್ಯಕ್ಷ ಟ್ರಂಪ್ ಮಧ್ಯಸ್ಥಿಕೆ ವಹಿಸಲು ಸಿದ್ದ ಎಂದು ಪ್ರಸ್ತಾಪ ಮಾಡಿದ ನಂತರ ಭಾರತೀಯ ವಿದೇಶಾಂಗ ಸಚಿವಾಲಯದ ವಕ್ತಾರ ಅನುರಾಗ್ ಶ್ರೀವಾಸ್ತವ “ಇದನ್ನು ಶಾಂತಿಯುತವಾಗಿ ಪರಿಹರಿಸಲು ಭಾರತವು ಚೀನಾದೊಂದಿಗೆ ತೊಡಗಿಸಿಕೊಂಡಿದೆ” ಎಂದು ಪ್ರತಿಕ್ರಿಯೆ ನೀಡಿದ್ದರು.

ಭಾರತ ಚೀನಾ ಗಡಿಯಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು, ಪೂರ್ವ ಲಡಾಖ್‌ನ ಲೈನ್‌ ಆಫ್‌ ಕಂಟ್ರೋಲ್‌ ಉದ್ದಕ್ಕೂ ಹಲವಾರು ಪ್ರದೇಶಗಳಲ್ಲಿ ಭಾರತೀಯ ಮತ್ತು ಚೀನಾದ ಸೈನಿಕರು ಮುಖಾಮುಖಿಯಾಗಿದ್ದಾರೆ. ಇದು 2017 ರಲ್ಲಿ ಡೋಕ್ಲಾಮ್ ಬಿಕ್ಕಟ್ಟಿನ ನಂತರ ಅತಿದೊಡ್ಡ ಮಿಲಿಟರಿ ಮುಖಾಮುಖಿಯಾಗಿದೆ ಎನ್ನಲಾಗಿದೆ.


ಓದಿ: ಭಾರತ-ಚೀನಾ ಗಡಿವಿವಾದ ಮಧ್ಯಸ್ಥಿಕೆ ವಹಿಸಲು ಸಿದ್ದ: ಡೊನಾಲ್ಡ್‌ ಟ್ರಂಪ್‌


 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿ ಪ್ರಣಾಳಿಕೆಯಲ್ಲಿ ‘ಅಲ್ಪಸಂಖ್ಯಾತರು’ ಎಂಬ ಪದ ಕೂಡ ಬಳಸಿಲ್ಲ: ಓವೈಸಿ ವಾಗ್ಧಾಳಿ

0
ಬಿಜೆಪಿ ಅಲ್ಪಸಂಖ್ಯಾತರನ್ನು ದ್ವೇಷಿಸುತ್ತಿದೆ. ತನ್ನ ಪ್ರಣಾಳಿಕೆಯಲ್ಲಿ ಬಿಜೆಪಿ 'ಅಲ್ಪಸಂಖ್ಯಾತರು' ಎಂಬ ಪದವನ್ನು ಕೂಡ ಬಳಸಿಲ್ಲ ಎಂದು ಸಂಸದ ಅಸಾದುದ್ದೀನ್ ಓವೈಸಿ ಬಿಜೆಪಿ ವಿರುದ್ಧ ವಾಗ್ಧಾಳಿಯನ್ನು ನಡೆಸಿದ್ದು, ಮುಸ್ಲಿಮರನ್ನು ಅಂಚಿಗೆ ತಳ್ಳಲಾಗಿದೆ ಎಂದು ಹೇಳಿದ್ದಾರೆ. ಉತ್ತರಪ್ರದೇಶದಲ್ಲಿ...