Homeಅಂತರಾಷ್ಟ್ರೀಯಭಾರತೀಯ ವಿದ್ಯಾರ್ಥಿಗಳ ಆತಂಕದ ನಡುವೆ ಸ್ಥಳಾಂತರಕ್ಕಾಗಿ ‘ಮಾನವೀಯ ಕಾರಿಡಾರ್‌’ಗಳನ್ನು ತೆರೆಯಲಿರುವ ರಷ್ಯಾ

ಭಾರತೀಯ ವಿದ್ಯಾರ್ಥಿಗಳ ಆತಂಕದ ನಡುವೆ ಸ್ಥಳಾಂತರಕ್ಕಾಗಿ ‘ಮಾನವೀಯ ಕಾರಿಡಾರ್‌’ಗಳನ್ನು ತೆರೆಯಲಿರುವ ರಷ್ಯಾ

- Advertisement -
- Advertisement -

‘ಮಾನವೀಯ ಕಾರ್ಯಾಚರಣೆ’ ನಡೆಸಲು ಭಾರತೀಯ ಕಾಲಮಾನ ಮಧ್ಯಾಹ್ನ 12:30ರ ಮಂಗಳವಾರದಂದು ರಷ್ಯಾ ಕದನ ವಿರಾಮ ಘೋಷಿಸಿದೆ. ಭಾರತದಲ್ಲಿನ ರಷ್ಯಾದ ರಾಯಭಾರ ಕಚೇರಿಯು ‘ಮಾನವೀಯ ಕಾರಿಡಾರ್’ಪಟ್ಟಿಯನ್ನು ಬಿಡುಗಡೆ ಮಾಡಿದ್ದು ಅದನ್ನು ಒದಗಿಸಲು ಸಿದ್ಧವಾಗಿದೆ. ಇದು ಈಶಾನ್ಯ ಉಕ್ರೇನ್‌ನ ಸುಮಿ ನಗರದ ಕಾರಿಡಾರ್‌ಗಳನ್ನು ಒಳಗೊಂಡಿದೆ. ಅಲ್ಲಿ ಸುಮಾರು 600 ಭಾರತೀಯ ವಿದ್ಯಾರ್ಥಿಗಳು ಸಿಕ್ಕಿಹಾಕಿಕೊಂಡಿದ್ದು, ಹಲವು ಪ್ರಯತ್ನಗಳ ಹೊರತಾಗಿಯೂ ಅವರಿಗೆ ಅಲ್ಲಿಂದ ಹೊರಹೋಗಲು ಸಾಧ್ಯವಾಗಿರಲಿಲ್ಲ.

ಸೋಮವಾರ ನಡೆದ ಉಕ್ರೇನ್ ಕುರಿತ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸಭೆಯಲ್ಲಿ ಭಾರತ ಈ ವಿಷಯವನ್ನು ಪ್ರಸ್ತಾಪಿಸಿತ್ತು. ವಿಶ್ವಸಂಸ್ಥೆಯಲ್ಲಿ ಭಾರತದ ಖಾಯಂ ಪ್ರತಿನಿಧಿಯಾಗಿರುವ ರಾಯಭಾರಿ ಟಿ.ಎಸ್. ತಿರುಮೂರ್ತಿ, “ರಷ್ಯಾ ಮತ್ತು ಉಕ್ರೇನ್ ಎರಡಕ್ಕೂ ನಮ್ಮ ಹಲವು ಒತ್ತಾಯದ ಹೊರತಾಗಿಯೂ, ಸುಮಿಯಲ್ಲಿ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳಿಗೆ ಸುರಕ್ಷಿತ ಕಾರಿಡಾರ್ ಕಾರ್ಯರೂಪಕ್ಕೆ ಬರಲಿಲ್ಲ ಎಂಬುವುದು ತೀವ್ರ ಕಳವಳಕಾರಿಯಾಗಿದೆ” ಎಂದು ಹೇಳಿದ್ದರು.

ಇದನ್ನೂ ಓದಿ: ಉಕ್ರೇನ್: ರಕ್ಷಣೆಯಲ್ಲೂ ದಕ್ಷಿಣ ಭಾರತದವರಿಗೆ ತಾರತಮ್ಯ, ವಿದ್ಯಾರ್ಥಿಗಳ ಆರೋಪ

“ಮಾರ್ಚ್ 8, 2022 ರಂದು ಭಾರತೀಯ ಕಾಲಮಾನ 12.30 ನಿಂದ ಮಾನವೀಯ ಕಾರ್ಯಾಚರಣೆಯನ್ನು ನಡೆಸಲು, ರಷ್ಯಾ ಕದನ ವಿರಾಮವನ್ನು ಘೋಷಿಸುತ್ತದೆ. ಜೊತೆಗೆ ಮಾನವೀಯ ಕಾರಿಡಾರ್‌ಗಳನ್ನು ಒದಗಿಸಲು ಸಿದ್ಧವಾಗಿದೆ” ಎಂದು ಭಾರತದಲ್ಲಿನ ರಷ್ಯಾದ ರಾಯಭಾರ ಕಚೇರಿ ಇಂದು ಬೆಳೆಗ್ಗೆ ಟ್ವೀಟ್ ಮಾಡಿದೆ.

ರಷ್ಯಾವು ಸುಮಿಯಿಂದ ಪೋಲ್ಟವಾಗೆ ಎರಡು ಮಾರ್ಗಗಳ ಮೂಲಕ ಮಾನವೀಯ ಕಾರಿಡಾರ್‌ಗಳನ್ನು ಘೋಷಿಸಿದೆ. ವಿಶ್ವಸಂಸ್ಥೆಯು ಮಾನವೀಯ ಕಾರಿಡಾರ್‌ಗಳನ್ನು ಸಶಸ್ತ್ರ ಸಂಘರ್ಷದ ತಾತ್ಕಾಲಿಕ ವಿರಾಮದ ಪ್ರಮುಖ ರೂಪಗಳಲ್ಲಿ ಒಂದಾಗಿದೆ ಎಂದು ಪರಿಗಣಿಸುತ್ತದೆ.

ಉಭಯ ದೇಶಗಳೂ ಕಾರಿಡಾರ್‌ಗಳನ್ನು ಸ್ಥಾಪಿಸುವಲ್ಲಿ ವಿಫಲರಾಗಿದ್ದಾರೆ ಎಂದು ಪರಸ್ಪರ ಆರೋಪಿಸಿದ್ದಾರೆ. ಶನಿವಾರ ಉಕ್ರೇನಿಯನ್ ಪಡೆಗಳು ಜನರು ಮಾರಿಯುಪೋಲ್ ನಗರವನ್ನು ತೊರೆಯದಂತೆ ತಡೆದಿದ್ದಾರೆ ಎಂದು ರಷ್ಯಾ ಹೇಳಿಕೊಂಡರೆ, ಉಕ್ರೇನಿಯನ್ ಅಧಿಕಾರಿಗಳು ರಷ್ಯಾದ ಪಡೆಗಳು ಒಪ್ಪಿಕೊಂಡ ಕದನ ವಿರಾಮವನ್ನು ಉಲ್ಲಂಘಿಸಿದೆ ಎಂದು ದೂಷಿಸಿದೆ.

ಇದನ್ನೂ ಓದಿ: ಉಕ್ರೇನ್‌ನಿಂದ ಬಂದಿರುವ ವೈದ್ಯ ವಿದ್ಯಾರ್ಥಿಗಳ ಭವಿಷ್ಯವೇನು?: ಎಚ್.ಡಿ. ಕುಮಾರಸ್ವಾಮಿ ಪ್ರಶ್ನೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಸಿಎಎ ಅಡಿ ಪೌರತ್ವ ನೀಡಿದ ಕೇಂದ್ರ ಸರ್ಕಾರ: ಸುಪ್ರೀಂ ಮೆಟ್ಟಿಲೇರಲು ನಿರ್ಧರಿಸಿದ ಮುಸ್ಲಿಂ ಲೀಗ್

0
ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಅಡಿ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದ ಮುಸ್ಲಿಮೇತರರಿಗೆ ಭಾರತೀಯ ಪೌರತ್ವ ನೀಡುವ ಪ್ರಕ್ರಿಯೆಯನ್ನು ಕೇಂದ್ರ ಗೃಹ ಇಲಾಖೆ ಪ್ರಾರಂಭಿಸಿದೆ. ಈಗಾಗಲೇ ಮೊದಲ ಹಂತದಲ್ಲಿ ಅರ್ಜಿ ಸಲ್ಲಿಸಿದ 300ಕ್ಕೂ ಅಧಿಕ...