Homeಮುಖಪುಟಸಿಎಎ ಅಡಿ ಪೌರತ್ವ ನೀಡಿದ ಕೇಂದ್ರ ಸರ್ಕಾರ: ಸುಪ್ರೀಂ ಮೆಟ್ಟಿಲೇರಲು ನಿರ್ಧರಿಸಿದ ಮುಸ್ಲಿಂ ಲೀಗ್

ಸಿಎಎ ಅಡಿ ಪೌರತ್ವ ನೀಡಿದ ಕೇಂದ್ರ ಸರ್ಕಾರ: ಸುಪ್ರೀಂ ಮೆಟ್ಟಿಲೇರಲು ನಿರ್ಧರಿಸಿದ ಮುಸ್ಲಿಂ ಲೀಗ್

- Advertisement -
- Advertisement -

ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಅಡಿ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದ ಮುಸ್ಲಿಮೇತರರಿಗೆ ಭಾರತೀಯ ಪೌರತ್ವ ನೀಡುವ ಪ್ರಕ್ರಿಯೆಯನ್ನು ಕೇಂದ್ರ ಗೃಹ ಇಲಾಖೆ ಪ್ರಾರಂಭಿಸಿದೆ.

ಈಗಾಗಲೇ ಮೊದಲ ಹಂತದಲ್ಲಿ ಅರ್ಜಿ ಸಲ್ಲಿಸಿದ 300ಕ್ಕೂ ಅಧಿಕ ಜನರಿಗೆ ಕೇಂದ್ರ ಸರ್ಕಾರ ಪೌರತ್ವ ಪ್ರಮಾಣ ಪತ್ರ ವಿತರಿಸಿದೆ. 14 ಜನರು ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಭಲ್ಲಾ ಅವರಿಂದ ಬುಧವಾರ ಪ್ರಮಾಣ ಪತ್ರ ಪಡೆದಿದ್ದಾರೆ. ಇದರ ವಿರುದ್ದ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (ಐಯುಎಂಎಲ್‌) ಪಕ್ಷ ಸುಪ್ರೀಂ ಕೋರ್ಟ್ ಮತ್ತು ಭಾರತೀಯ ಚುನಾವಣಾ ಆಯೋಗದ ಮೊರೆ ಹೋಗಲು ನಿರ್ಧರಿಸಿದೆ.

ದೇಶದಲ್ಲಿ ಲೋಕಸಭೆ ಚುನಾವಣೆಯ ನಡೆಯುತ್ತಿರುವ ಮಧ್ಯೆ ಕೇಂದ್ರ ಸರ್ಕಾರ ಪೌರತ್ವ ಪ್ರಮಾಣ ಪತ್ರಗಳನ್ನು ವಿತರಿಸುವುದು ಚುನಾವಣಾ ಮಾರ್ಗಸೂಚಿಗಳ ಉಲ್ಲಂಘನೆಯಾಗಲಿದೆ ಎಂದು ಐಯುಎಂಎಲ್‌ ಆರೋಪಿಸಿದೆ.

ನಾಲ್ಕು ವರ್ಷಗಳ ಮುಂಚೆ, 2019ರಲ್ಲಿ ಸಿಎಎ ಮಸೂದೆ ಅಂಗೀಕಾರಗೊಂಡರೂ ಕೇಂದ್ರ ಸರ್ಕಾರ ಚುನಾವಣೆಯ ಹೊಸ್ತಿಲಲ್ಲಿ ಈ ವರ್ಷದ ಮಾರ್ಚ್ ತಿಂಗಳಲ್ಲಿ ಕಾಯ್ದೆ ಕುರಿತು ಅಧಿಸೂಚನೆ ಹೊರಡಿಸಿತ್ತು. ಸಿಎಎ ಅಡಿ ಮುಸ್ಲಿಮರನ್ನು ಹೊರಗಿಟ್ಟು ಪೌರತ್ವ ನೀಡುವುದು ಸಂವಿಧಾನದ 14 ನೇ ಪರಿಚ್ಛೇದದ ಅಡಿಯಲ್ಲಿ ಸಮಾನತೆಯ ಹಕ್ಕಿಗೆ ವಿರುದ್ಧವಾಗಿದೆ ಎಂದು ವಾದಿಸಿರುವ ಐಯುಎಂಎಲ್, ಈಗಾಗಲೇ ಕಾಯ್ದೆಗೆ ತಡೆ ಕೋರಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದೆ.

ಸಿಎಎ ನಿಯಮಗಳು, 2019ರ ಅಡಿಯಲ್ಲಿ ಪೌರತ್ವ ಪ್ರಮಾಣ ಪತ್ರಗಳನ್ನು ನೀಡುವುದು ಸುಪ್ರೀಂ ಕೋರ್ಟ್‌ನಲ್ಲಿ ಕೇಂದ್ರ ಸರ್ಕಾರ ನೀಡಿರುವ ಭರವಸೆಯ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಐಯುಎಂಎಲ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪಿಕೆ ಕುಂಜಾಲಿಕುಟ್ಟಿ ಗುರುವಾರ ಹೇಳಿದ್ದಾರೆ.

“ಮತದಾರರ ಮೇಲೆ ಪ್ರಭಾವ ಬೀರಲು ಕೇಂದ್ರ ಸರ್ಕಾರ ಸಿಎಎ ಅಡಿಯಲ್ಲಿ ಪೌರತ್ವ ಪ್ರಮಾಣ ಪತ್ರಗಳನ್ನು ವಿತರಿಸಲು ಪ್ರಾರಂಭಿಸಿದೆ. ಇದು ಚುನಾವಣಾ ಮಾರ್ಗಸೂಚಿಗಳ ಉಲ್ಲಂಘನೆಯಾಗಿದೆ. ಇದರ ವಿರುದ್ಧ ಚುನಾವಣಾ ಆಯೋಗ ಕ್ರಮ ಕೈಗೊಳ್ಳಬೇಕು ಎಂದು ಕುಂಜಾಲಿಕುಟ್ಟಿ ಒತ್ತಾಯಿಸಿದ್ದಾರೆ.

ಈ ವಿಷಯದ ಬಗ್ಗೆ ಕಾನೂನು ಅಭಿಪ್ರಾಯವನ್ನು ಪಡೆದುಕೊಳ್ಳಲು ಐಯುಎಂಎಲ್ ದೆಹಲಿಯ ಹಿರಿಯ ವಕೀಲರೊಂದಿಗೆ ಚರ್ಚೆಯನ್ನು ಪ್ರಾರಂಭಿಸಿದೆ.

“ಸಿಎಎ ವಿರುದ್ಧದ ನಮ್ಮ ಹೋರಾಟವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ನಾವು ವಕೀಲರನ್ನು ಸಂಪರ್ಕಿಸಿದ್ದೇವೆ. ಈ ವಿಚಾರದಲ್ಲಿ ಪಕ್ಷವು ಸುಪ್ರೀಂ ಕೋರ್ಟ್ ಮತ್ತು ಚುನಾವಣಾ ಆಯೋಗವನ್ನು ಸಂಪರ್ಕಿಸಲಿದೆ” ಎಂದು ಐಯುಎಂಎಲ್ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿಎಂಎ ಸಲಾಂ ಹೇಳಿದ್ದಾರೆ.

ಇದನ್ನೂ ಓದಿ : ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಷನ್ ಅಧ್ಯಕ್ಷರಾಗಿ ಕಪಿಲ್ ಸಿಬಲ್ ಆಯ್ಕೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

RSS ಕುರಿತು ಪೋಸ್ಟ್ ಹಾಕಿದ್ದಕ್ಕೆ ಎಕ್ಸ್‌ ಖಾತೆ ಬ್ಲಾಕ್ ಮಾಡಲು ಸೂಚಿಸಿದ ದೆಹಲಿ ಪೊಲೀಸರು : ಕೋರ್ಟ್ ಮೆಟ್ಟಿಲೇರುವುದಾಗಿ ಎಚ್ಚರಿಸಿದ ಐಎಫ್‌ಎಫ್‌

ತನ್ನ ಖಾತೆ ಮತ್ತು ಆರ್‌ಎಸ್‌ಎಸ್‌ಗೆ ಸಂಬಂಧಿಸಿದ ಪೋಸ್ಟ್‌ಗಳನ್ನು ತೆಗೆದು ಹಾಕುವಂತೆ ದೆಹಲಿ ಪೊಲೀಸರು ಸಾಮಾಜಿಕ ಜಾಲತಾಣ ಎಕ್ಸ್‌ಗೆ ಕೋರಿದ್ದಾರೆ ಎಂದು ಇಂಟರ್‌ನೆಟ್ ಫ್ರೀಡಂ ಫೌಂಡೇಶನ್ (ಐಎಫ್‌ಎಫ್‌) ಮಂಗಳವಾರ (ನ.3) ತಿಳಿಸಿದೆ. ಐಎಫ್‌ಎಫ್‌ ಭಾರತದಲ್ಲಿ...

ರಾಜ್ಯದ 226 ತಾಲೂಕುಗಳಲ್ಲಿ 57.93 ಲಕ್ಷ ಹೆಕ್ಟೇರ್ ಬೆಳೆ ಹಾನಿ; ಕೇಂದ್ರದ ಸಣ್ಣ ನೆರವು ಸಾಕಾಗಲ್ಲ; ಪ್ರಧಾನಿ ಮೋದಿಗೆ ಉಪಮುಖ್ಯಮಂತ್ರಿ ಜಿ. ಪರಮೇಶ್ವರ ಪತ್ರ!

ಕರ್ನಾಟಕದ 226 ತಾಲೂಕುಗಳಲ್ಲಿ ಬರದ ಭೀಕರತೆಯಿಂದ ತತ್ತರಿಸಿರುವ ಲಕ್ಷಾಂತರ ರೈತರನ್ನು ರಕ್ಷಿಸಲು ತಕ್ಷಣವೇ ಬೃಹತ್ ಮಟ್ಟದ ಆರ್ಥಿಕ ನೆರವು ಬಿಡುಗಡೆ ಮಾಡುವಂತೆ ಆಗ್ರಹಿಸಿ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಅವರು ಪ್ರಧಾನಮಂತ್ರಿ ನರೇಂದ್ರ...

‘ಭಾರತ ಒಂದು ಜಾತ್ಯತೀತ ದೇಶ’: ದಿಯಾ ಮಿರ್ಜಾ ವಿಡಿಯೋ ಕುರಿತ ಬಿಜೆಪಿ ನಾಯಕರ ಟೀಕೆಗೆ ಬಾಂಬೆ ಹೈಕೋರ್ಟ್ ಆಕ್ಷೇಪ : ವಿಡಿಯೋ ಮರುಸ್ಥಾಪಿಸಲು ಬಿಎಂಸಿಗೆ ಆದೇಶ

ಸಾರ್ವಜನಿಕ ರಸ್ತೆಗಳಲ್ಲಿ ಪಟಾಕಿ ಸಿಡಿಸದಂತೆ ದೀಪಾವಳಿ ಹಬ್ಬದ ಮುನ್ನ ನಾಗರಿಕರಲ್ಲಿ ನಟಿ ದಿಯಾ ಮಿರ್ಜಾ ಮನವಿ ಮಾಡಿಕೊಂಡಿದ್ದ ವಿಡಿಯೋ ವಿರುದ್ಧ ಕೆಲವು ರಾಜಕಾರಣಿಗಳು ಮಾಡಿದ ಟೀಕೆಗಳನ್ನು ಬಾಂಬೆ ಹೈಕೋರ್ಟ್ ತೀವ್ರವಾಗಿ ಖಂಡಿಸಿದೆ. ನ್ಯಾಯಮೂರ್ತಿ ಗಿರೀಶ್...

ಸಿದ್ದರಾಮಯ್ಯ ಸ್ಟಿಂಗ್ ಪ್ರಕರಣ: ‘ಕುಮಾರಸ್ವಾಮಿ ಸಮ್ಮುಖದಲ್ಲೇ ವಿಡಿಯೋ ಅಪ್‌ಲೋಡ್’; ವರದಿಯ ಶೇ.10ರಷ್ಟನ್ನೇ ಬಹಿರಂಗಪಡಿಸಿದ್ದೇವೆ ಎಂದ ಕಾಂಗ್ರೆಸ್

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಗುರಿಯಾಗಿಸಿಕೊಂಡು ನಡೆಸಲಾಗಿದೆ ಎನ್ನಲಾದ ಸ್ಟಿಂಗ್ ಆಪರೇಷನ್ ಪ್ರಕರಣ ಇದೀಗ ರಾಜಕೀಯ ಸಂಘರ್ಷಕ್ಕೆ ಮತ್ತಷ್ಟು ತಿರುವು ನೀಡಿದೆ. ಸ್ಟಿಂಗ್ ಕಾರ್ಯಾಚರಣೆಗೆ ಬಳಸಲಾಗಿದೆ ಎನ್ನಲಾದ ಮೊಬೈಲ್ ಫೋನ್‌ಗಳನ್ನು ಕೇಂದ್ರ ಸಚಿವ...

ಕರ್ನಾಟಕ ಎಸ್‌ಐಆರ್‌ನ ಹಲವು ಅವಾಂತರಗಳು ಬಯಲು : ಸಂಪೂರ್ಣ ಮೌನ ಪಾಲಿಸಿದ ಚುನಾವಣಾ ಆಯೋಗ

ತೀವ್ರ ವಿರೋಧದ ನಡುವೆಯೂ ಕರ್ನಾಟಕದಲ್ಲಿ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ನಡೆಸಿದ ಚುನಾವಣಾ ಆಯೋಗ, 2026ರ ಅಕ್ಟೋಬರ್ 27ರಂದು ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಿ ಕೈತೊಳೆದುಕೊಂಡಿದೆ. ರಾಜ್ಯದ ಮುಖ್ಯ ಚುನಾವಣಾ ಆಯುಕ್ತ...

ವಕ್ಫ್ ತಿದ್ದುಪಡಿ ಕಾಯ್ದೆ 2025: ಸೀಮಿತ 5 ಅರ್ಜಿಗಳ ನಿಯಮ ತೆರವು; ಹೊಸ ರಿಟ್ ಅರ್ಜಿ ಸಲ್ಲಿಕೆಗೆ ಸುಪ್ರೀಂ ಕೋರ್ಟ್ ಹಸಿರು ನಿಶಾನೆ!

ಕೇವಲ ಮಧ್ಯಂತರ ಅರ್ಜಿದಾರರಾಗಿ ವಾದ ಮಂಡಿಸಲು ಸಾಧ್ಯವಿಲ್ಲ ಎಂದ ಪೀಠ: 2027ರ ಜನವರಿಯಲ್ಲಿ ಅಂತಿಮ ವಿಸ್ತೃತ ವಿಚಾರಣೆ! ಕೇಂದ್ರ ಸರ್ಕಾರದ ವಿವಾದಾತ್ಮಕ ‘ವಕ್ಫ್ (ತಿದ್ದುಪಡಿ) ಕಾಯ್ದೆ 2025’ ರ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ನಡೆಯುತ್ತಿರುವ...

ಸ್ಥಳೀಯ ಸಂಸ್ಥೆ ಚುನಾವಣೆಗೆ ಯಾವುದೇ ಕಾರಣಕ್ಕೂ ‘SIR’ ಪಟ್ಟಿಯನ್ನು ಬಳಸಬೇಡಿ! ರಾಜ್ಯ ಸರ್ಕಾರಕ್ಕೆ ಹೋರಾಟಗಾರರ ಎಚ್ಚರಿಕೆ!

ಯುಪಿ, ರಾಜಸ್ಥಾನದಲ್ಲಿ ಬಿಜೆಪಿ ಸರ್ಕಾರಗಳೇ ಬದಿಗೊತ್ತಿದ ‘SIR’ ಪಟ್ಟಿಯನ್ನು ಕರ್ನಾಟಕ ಸರ್ಕಾರವೂ ಕೈಬಿಡಬೇಕು! ಕೇಂದ್ರ ಚುನಾವಣಾ ಆಯೋಗವು ‘ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ’ (SIR) ಪ್ರಕ್ರಿಯೆಯ ಅಂತಿಮ ಪಟ್ಟಿ ಪ್ರಕಟಿಸಿದ ನಂತರವೂ ಲಕ್ಷಾಂತರ...

ಬಿಡದಿ ಟೌನ್‌ಶಿಪ್ : 2 ಗ್ರಾಮಗಳ 1,895 ಎಕರೆ ಭೂ ಸ್ವಾಧೀನಕ್ಕೆ ಅಂತಿಮ ಅಧಿಸೂಚನೆ

ರಾಮನಗರ ತಾಲೂಕಿನ ಬಿಡದಿ ಹೋಬಳಿಯಲ್ಲಿರುವ ಕಂಚುಗಾರನಹಳ್ಳಿ ಮತ್ತು ಬೈರಮಂಗಲ ಗ್ರಾಮಗಳಲ್ಲಿ, ಪ್ರಸ್ತಾವಿತ 'ಗ್ರೇಟರ್ ಬೆಂಗಳೂರು ಇಂಟಿಗ್ರೇಟೆಡ್ ಟೌನ್‌ಶಿಪ್' (GBIT) ಯೋಜನೆಗಾಗಿ 1,895 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವ ಅಂತಿಮ ಅಧಿಸೂಚನೆಯನ್ನು ಕರ್ನಾಟಕ ಸರ್ಕಾರ ಹೊರಡಿಸಿದೆ...

ಪಂಜಾಬ್ : ಮೂವರು ಎಎಪಿ ಶಾಸಕರು ಬಿಜೆಪಿ ಸೇರ್ಪಡೆ; ವಿಧಾನಸಭೆ ಚುನಾವಣೆಗೆ ಮುನ್ನ ಮಹತ್ವದ ಬೆಳವಣಿಗೆ

ಪಂಜಾಬ್ ವಿಧಾನಸಭಾ ಚುನಾವಣೆಗೆ (2027) ಮುನ್ನ ಆಮ್ ಆದ್ಮಿ ಪಾರ್ಟಿ (ಎಎಪಿ) ನೇತೃತ್ವದ ಸರ್ಕಾರಕ್ಕೆ ಭಾರಿ ಹಿನ್ನಡೆಯಾಗಿದ್ದು, ಸೋಮವಾರ (ನ.2) ಮೂವರು ಶಾಸಕರಾದ ಹರ್ಮೀತ್ ಸಿಂಗ್ ಪಠಾನ್‌ಮಜ್ರಾ, ಚೇತನ್ ಸಿಂಗ್ ಜೌರಾಮಜ್ರಾ ಮತ್ತು...

‘ಹೆಸರುಗಳನ್ನು ತೆಗೆದುಹಾಕುವುದು ಕಳ್ಳತನವಲ್ಲ’; ಎಸ್‌ಐಆರ್ ಬಗ್ಗೆ ಪ್ರತಿಪಕ್ಷಗಳು ಗೊಂದಲ ಹರಡುತ್ತಿವೆ: ಸಂಬಿತ್ ಪಾತ್ರ

ವಾರಾಣಸಿ: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆ ವಿರುದ್ಧ ಪ್ರತಿಪಕ್ಷಗಳು ಗೊಂದಲ ಸೃಷ್ಟಿಸುತ್ತಿವೆ ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಹಾಗೂ ಪುರಿ ಸಂಸದ ಸಂಬಿತ್ ಪಾತ್ರ ಆರೋಪಿಸಿದ್ದಾರೆ. ಮತದಾರರ ಪಟ್ಟಿಯಿಂದ...