Homeಕರ್ನಾಟಕಕೊರೊನಾ ಸಂಕಷ್ಟದ ನಡುವೆ ’ವಿದ್ಯುತ್ ಬರೆ’ ಎಳೆಯುತ್ತಿರುವ ರಾಜ್ಯ ಸರ್ಕಾರ!

ಕೊರೊನಾ ಸಂಕಷ್ಟದ ನಡುವೆ ’ವಿದ್ಯುತ್ ಬರೆ’ ಎಳೆಯುತ್ತಿರುವ ರಾಜ್ಯ ಸರ್ಕಾರ!

ಕೊರೋನಾ ಸೋಂಕು ಹಾಗೂ ನೆರೆ ಹಾವಳಿಯಿಂದ ತತ್ತರಿಸಿರುವ ಜನತೆಯ ಮೇಲೆ ಕನಿಷ್ಠ ಒಂದು ವರ್ಷ ವಿದ್ಯುತ್ ದರ ಏರಿಕೆಯ ಬರೆ ಹಾಕಬಾರದು ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.

- Advertisement -
- Advertisement -

ಕೊರೊನಾದಿಂದಾಗಿ ಜನರು ತೀವ್ರ ಆರ್ಥಿಕ ಸಂಕಷ್ಟದಲ್ಲಿರುವ ಈ ಸಮಯದಲ್ಲಿ ರಾಜ್ಯ ಸರ್ಕಾರ ಮತ್ತೆ ಜನರ ಕಿಸಿಗೆ ಕತ್ತರಿ ಹಾಕುತ್ತಿದ್ದು, ರಾಜ್ಯದ ಎಲ್ಲಾ ವಿದ್ಯುತ್‌ ಕಂಪನಿಗಳ ವಿದ್ಯುತ್‌ ದರವನ್ನು ಸರಾಸರಿ 5.4% ದಂತೆ, ಪ್ರತಿ ಯೂನಿಟ್‌ಗೆ 40 ಪೈಸೆ ಹೆಚ್ಚಳ ಮಾಡಿದೆ. ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ (ಕೆಇಆರ್‌ಸಿ) ಹೊರಡಿಸಿರುವ 2020-21 ನೇ ಸಾಲಿನ ವಿದ್ಯುತ್‌ ಪರಿಷ್ಕೃತ ದರವು ನವೆಂಬರ್‌ 1 ರಿಂದಲೇ ಅನ್ವಯವಾಗಲಿದೆ.

2020-21 ರ ಸಾಲಿನ ಪರಿಷ್ಕೃತ ದರ ನವೆಂಬರ್‌ 1 ರಿಂದ ಅನ್ವಯವಾಗುವುದಿದ್ದರೂ, ಲಾಕ್‌ಡೌನ್‌ ಅವಧಿಯ 7 ತಿಂಗಳ ದರಗಳನ್ನು ಮುಂದಿನ ಸಾಲಿನಲ್ಲಿ ವಸೂಲು ಮಾಡಲಾಗುತ್ತದೆ ಎಂದು ಕೆಇಆರ್‌ಸಿ ಹೇಳಿದ್ದು, 2021-22 ನೇ ಸಾಲಿನ ದರಗಳು ಮತ್ತೆ ಪರಿಷ್ಕರಣೆಯಾಗಲಿವೆ ಎಂದು ಅದು ಸ್ಪಷ್ಟಪಡಿಸಿದೆ. ಹಾಗಾಗಿ ಈ ಹೊಸ ದರಗಳು ನವೆಂಬರ್‌ 1 ರಿಂದ ಮಾರ್ಚ್ 31ರ ವರೆಗಿನ ಐದು ತಿಂಗಳಿಗೆ ಮಾತ್ರ ಅನ್ವಯವಾಗಲಿದೆ.

ಇದನ್ನೂ ಓದಿ: ರಾಜ್ಯ ಸರ್ಕಾರಕ್ಕೆ ಮನುಷ್ಯತ್ವ ಇದೆಯಾ?; ಕುಮಾರಸ್ವಾಮಿ ಆಕ್ರೋಶ

ಸ್ಲಾಬ್‌‌ನಲ್ಲಿ ಬದಲಾವಣೆ ಇಲ್ಲ

ದರ ನಿಗದಿಗೆ ಈಗ ಮೊದಲ ಸ್ಪ್ಯಾಬ್‌ನ್ನು 30 ಯುನಿಟ್‌ಗೆ ನಿಗದಿಪಡಿಸಲಾಗಿದ್ದು ಅದನ್ನು 50 ಕ್ಕೆ ಏರಸಬೇಕು ಎಂದು ನಾಗರಿಕ ಸಂಘಟನೆಗಳು ಬೇಡಿಕೆ ಸಲ್ಲಿಸಿದ್ದವು ಆದರೆ ಕೆಇಆರ್‌ಸಿ‌ ಈ ಬೇಡಿಕೆಯನ್ನು ತಿರಸ್ಕರಿಸಿದೆ.

ಸ್ಲಾಬ್‌ಗಳ ಪರಿಷ್ಕರಣೆಯಲ್ಲಿ ಎಲ್ಲ ವರ್ಗದ ಗ್ರಾಹಕರು ಅಂದರೆ, ಗೃಹ, ವಾಣಿಜ್ಯ ಮತ್ತು ಕೈಗಾರಿಕೆಗಳಿಗೆ ಪ್ರತಿ ಯೂನಿಟ್‌ಗೆ 20 ಪೈಸೆಯಿಂದ 25 ಪೈಸೆಯವರೆಗೆ ಹೆಚ್ಚಿಸಲು ಆಯೋಗ ಒಪ್ಪಿಗೆ ನೀಡಿದೆ. ಆದರೆ, ಇದು ಬೆಂಗಳೂರು ಮೆಟ್ರೊ ಮತ್ತು ವಿದ್ಯುತ್ ಚಾಲಿತ ವಾಹನಗಳ ಬ್ಯಾಟರಿ ಚಾರ್ಜಿಂಗ್‌ ಕೇಂದ್ರಗಳಿಗೆ ಅನ್ವಯಿಸುವುದಿಲ್ಲ. ತಾತ್ಕಾಲಿಕ ವಿದ್ಯುತ್ ಅಳವಡಿಕೆಯ ಬಳಕೆದಾರರಿಗೆ ಹೆಚ್ಚಿನ ಏರಿಕೆ ಮಾಡಲಾಗಿದ್ದು, ಪ್ರತಿ ಯೂನಿಟ್‌ಗೆ 50 ಪೈಸೆ ನಿಗದಿ ಮಾಡಲಾಗಿದೆ.

ಇದನ್ನೂ ಓದಿ: ಕೋವಿಡ್ ನಿಭಾಯಿಸಲು ರಾಜ್ಯ ಸರ್ಕಾರವು ವಿಫಲವಾಗಿದ್ದೆಲ್ಲಿ?

ಒಂದು ವರ್ಷ ವಿದ್ಯುತ್‌ ದರ ಹೆಚ್ಚಿಸದಂತೆ ಕುಮಾರಸ್ವಾಮಿ ಒತ್ತಾಯ

ಕೊರೋನಾ ಸೋಂಕು ಹಾಗೂ ನೆರೆ ಹಾವಳಿಯಿಂದ ತತ್ತರಿಸಿರುವ ಜನತೆಯ ಮೇಲೆ ಕನಿಷ್ಠ ಒಂದು ವರ್ಷ ವಿದ್ಯುತ್ ದರ ಏರಿಕೆಯ ಬರೆ ಹಾಕಬಾರದು ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಕೊರೋನಾ ಸೋಂಕು ತಗುಲಿದ ನಂತರ ಜನರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಎಲ್ಲಾ ವಲಯಗಳು ನಷ್ಟದ ಸುಳಿಗೆ ಸಿಲುಕಿವೆ. ಜನತೆ ಉದ್ಯೋಗ, ವೇತನ ಇಲ್ಲದೆ ಕಂಗಾಲಾಗಿದ್ದಾರೆ. ವಿದ್ಯುತ್ ದರ ಏರಿಕೆಯನ್ನು ಮುಂದೂಡುವುದು ಒಳಿತು ಎಂದು ಹೇಳಿದ್ದಾರೆ.

ಪ್ರತಿ ಯೂನಿಟ್ಗೆ 20 ಪೈಸೆಯಿಂದ 50 ಪೈಸೆ ವರೆಗೆ, ಸರಾಸರಿ 40 ಪೈಸೆ ಹೆಚ್ಚಳ ಮಾಡಿರುವುದು ಜನರಿಗೆ ಮತ್ತಷ್ಟು ಹೊರೆಯಾಗಲಿದೆ. ಒಂದು ವರ್ಷ ಕಾಲ ದರ ಏರಿಕೆ ನಿರ್ಧಾರವನ್ನು ಸರ್ಕಾರ ಕೈಬಿಡಬೇಕು ಎಂದು ಅವರು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಹೊಸ ವಿದ್ಯುತ್ ದರ ಪಟ್ಟಿ ಹೀಗಿದೆ.

ಬೆಸ್ಕಾಂ ವ್ಯಾಪ್ತಿಯ ವಿದ್ಯುತ್ ಬಳಕೆದಾರರು ಇದುವರೆಗೂ 30 ಯೂನಿಟ್‌ಗಳಿಗೆ ₹ 3.75 ಪಾವತಿಸುತ್ತಿದ್ದು, ಇನ್ನು ಮುಂದೆ ಪ್ರತಿ ಯೂನಿಟ್‌ಗೆ ₹ 4 ಪಾವತಿಸಬೇಕಾಗುತ್ತದೆ. ಅದೇ ರೀತಿ ಈ ಹಿಂದೆ ತಿಂಗಳಿಗೆ 100 ಯೂನಿಟ್‌ಗಳಷ್ಟು ವಿದ್ಯುತ್‌ ಬಳಸುತ್ತಿದ್ದವರು ಪ್ರತಿ ಯೂನಿಟ್‌ಗೆ ₹5.20 ಪಾವತಿಸಬೇಕಾಗುತ್ತಿತ್ತು. ಇನ್ನು ಮುಂದೆ ಪ್ರತಿ ಯುನಿಟ್‌ಗೆ ₹ 5.45 ಪಾತಿಸಬೇಕು.

ಬೆಸ್ಕಾಂ ಹೊರತುಪಡಿಸಿ ಉಳಿದ ಎಸ್ಕಾಂಗಳ ನಗರಪಾಲಿಕೆ/ ಪೌರ ಸಂಸ್ಥೆಗಳ ಗೃಹ ಬಳಕೆಯ ಮೊದಲ 30 ಯೂನಿಟ್‌ವರೆಗೆ ₹ 3.70 ರಿಂದ ₹ 3.95 ಕ್ಕೆ ಏರಿಸಲಾಗಿದೆ. 31-100 ಯೂನಿಟ್‌ವರೆಗೆ ₹ 5.20 ರಿಂದ ₹ 5.45 ರೂ.ಗೆ ಪಾವತಿಸಬೇಕಾಗುತ್ತದೆ.

ಗ್ರಾಮೀಣ ಪ್ರದೇಶಗಳಿಗೆ ಈ ದರಗಳು 30 ಯೂನಿಟ್‌ವರೆಗೆ ₹ 3.60 ರಿಂದ ₹ 3.85 ಕ್ಕೆ ಏರಿಸಲಾಗಿದೆ, 31-100 ಯೂನಿಟ್‌ವರೆಗೆ ₹ 4.90 ರಿಂದ ₹ 5.15 ಗೆ ಹೆಚ್ಚಿಸಲಾಗಿದೆ.


ಇದನ್ನೂ ಓದಿ: ರಾಜ್ಯ ಸರ್ಕಾರ ಸರ್ವಾಧಿಕಾರಿಯಂತೆ ವರ್ತಿಸುತ್ತಿದೆ: ಸಿದ್ದರಾಮಯ್ಯ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಭಾರತವು ‘ಪೊಲೀಸ್ ರಾಜ್’ ಅಲ್ಲ: ಜಮ್ಮು ಕಾಶ್ಮೀರ ಹೈಕೋರ್ಟ್

0
ಸಾರ್ವಜನಿಕ ಸುರಕ್ಷತಾ ಕಾಯ್ದೆಯಡಿ 26 ವರ್ಷದ ಯುವಕನ ಬಂಧನವನ್ನು ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್ ರದ್ದುಗೊಳಿಸಿದ್ದು, 'ಭಾರತವು ಪೊಲೀಸ್ ರಾಜ್' ಅಲ್ಲ ಎಂದಿದೆ. ನ್ಯಾಯಮೂರ್ತಿ ರಾಹುಲ್ ಭಾರ್ತಿ ಅವರು ಮಾರ್ಚ್ 22 ರಂದು ನೀಡಿದ್ದ...