ಅಮೆರಿಕದ ನೂತನ ಅಧ್ಯಕ್ಷರಾಗಿ ಡೆಮಾಕ್ರೆಟಿಕ್ ಪಕ್ಷದ ಜೋ ಬೈಡೆನ್ ಆಯ್ಕೆಯಾಗಿದ್ದು 2021 ಜನವರಿ 20 ರಂದು ಅಧಿಕೃತವಾಗಿ ಅಮೆರಿಕದ 46 ನೇ ಅಧ್ಯಕ್ಷರಾಗಲಿದ್ದಾರೆ. ಚುನಾವಣಾ ಎಣಿಕೆ ಈ ತಿಂಗಳ 4 ರಂದು ಪ್ರಾರಂಭವಾಗಿತ್ತಾದರೂ ಇದುವರೆಗೂ ಅಲ್ಲಿ ಎಣಿಕೆ ಮುಗಿದಿಲ್ಲ. ಜೊತೆಗೆ ಡೊನಾಲ್ಡ್ ಟ್ರಂಪ್ ಫಲಿತಾಂಶವನ್ನು ಒಪ್ಪಿಕೊಳ್ಳಲು ತಯಾರಿಲ್ಲದೆ ಸಾಮಾಜಿಕ ಜಾಲತಾಣದಲ್ಲಿ ”ನಾನೇ ಗೆದ್ದಿದ್ದೇನೆ” ಎಂದು ಬರೆದು ವಿಶ್ವದಾದ್ಯಂತ ನಗೆಪಾಟಲಿಗೀಡಾಗುತ್ತಿದ್ದಾರೆ.
ಈ ನಡುವೆ ಜೋ ಬೈಡೆನ್ ಪ್ರಚಾರಾಭಿಯಾನದ ತಂಡವು ಹೊಸದಾಗಿ “ಅವರು ನಿರ್ಗಮಿಸುತ್ತಿದ್ದಾರೆ”( ಹಿ ಈಸ್ ಲಿವಿಂಗ್) ಎಂಬ ವೆಬ್‌ಸೈಟ್ ಪ್ರಾರಂಭಿಸಿದ್ದಾರೆ. ಈ ವೆಬ್ಸೈಟ್ ಟ್ರಂಪ್ ಅಧಿಕಾರ ಅವಧಿಯ ನಿರ್ಗಮನದ ಕೌಂಟ್ ಡೌನ್ ಲೆಕ್ಕ ಹಾಕಲೆಂದೆ ಪ್ರಾರಂಭಿಸಲಾಗಿದೆ.
ಇದನ್ನೂ ಓದಿ: ಅಮೆರಿಕಾ ಚುನಾವಣೆ: ಇನ್ನೂ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ ಟ್ರಂಪ್- ಸರಣಿ ಟ್ವೀಟ್!

ಒಂದೆಡೆ ಜೋ ಬೈಡೆನ್ ಆಯ್ಕೆಯನ್ನು ಇಡೀ ಅಮೆರಿಕ ಸಂಭ್ರಮಿಸುತ್ತಿದ್ದರೆ, ಇನ್ನೊಂದೆಡೆ ಟ್ರಂಪ್ ಆರೋಪವನ್ನು ಸಂಪೂರ್ಣವಾಗಿ ಅಲ್ಲಗೆಳೆಯುವಂತೆ ಮತ ಎಣಿಕೆಯಲ್ಲಿ ಯಾವುದೆ ಅವ್ಯವಹಾರ ನಡೆದಿಲ್ಲ ಎಂಬ ಅಂಶವು ಹೊರಬಿದ್ದಿದೆ. ಟ್ರಂಪ್ ಅಧಿಕಾರದಿಂದ ಇಳಿಯುವುದನ್ನು ತೀವ್ರವಾಗಿ ನಿರೀಕ್ಷಿಸುತ್ತಿದ್ದ ಮನಸ್ಥಿತಿಯನ್ನು ಪ್ರತಿಫಲಿಸುವಂತೆ ’ಹಿ ಈಸ್ ಲಿವಿಂಗ್’ ವೆಬ್‌ಸೈಟ್ ಅಸ್ತಿತ್ವಕ್ಕೆ ಬಂದಂತಿದೆ.
ಈ ವೆಬ್‌ಸೈಟ್‌ನಲ್ಲಿ ಜೋ ಬೈಡೆನ್ ಸ್ಫಷ್ಟ ಬಹುಮತ ಪಡೆದ ದಿನ ಅಮೆರಿಕನ್ನರನ್ನು ಉದ್ದೇಶಿಸಿ ನೀಡಿದ ಸಂದೇಶವನ್ನು ಪ್ರಕಟಿಸಲಾಗಿದೆ. ವೆಬ್‌ಸೈಟ್‌ನ ಮುಖಪುಟದಲ್ಲಿ ಇಬ್ಬರು ವ್ಯಕ್ತಿಗಳು ಗೇಲಿ ಮಾಡುವ ಭಂಗಿಯಲ್ಲಿ ನಿಂತಿದ್ದು, “ತಾಳ್ಮೆಯಿಂದಿರಿ, ಅವರು ನಿರ್ಗಮಿಸುತ್ತಿದ್ದಾರೆ” ಎಂಬ ಬರಹದ ಜೊತೆ, ಟ್ರಂಪ್ ಶ್ವೇತ ಭವನವನ್ನು ಇನ್ನು ಎಷ್ಟು ದಿನದಲ್ಲಿ ತೊರೆಯಲಿದ್ದಾರೆ ಎಂಬುವುದನ್ನು ದಿನ, ಗಂಟೆ, ನಿಮಿಷ ಮತ್ತು ಸೆಕೆಂಡುಗಳಲ್ಲಿ ನೀಡಲಾಗಿದೆ.
ಇಲ್ಲಿ ಕ್ಲಿಕ್ ಮಾಡಿದರೆ ವೆಬ್‌ಸೈಟ್‌ಗೆ ಭೇಟಿ ನೀಡಬಹುದು.
ಇದನ್ನು ಓದಿ: ಅಮೆರಿಕ ಅಧ್ಯಕ್ಷೀಯ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಮನಮೋಹನ್ ಸಿಂಗ್‌ಗೆ ಆಹ್ವಾನವಿರುವುದು ನಿಜವೆ?; ಫ್ಯಾಕ್ಟ್‌ಚೆಕ್


