ಅಮೆರಿಕಾ ಚುನಾವಣೆ: ಇನ್ನೂ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ ಟ್ರಂಪ್- ಸರಣಿ ಟ್ವೀಟ್!

ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೊಮ್ಮೆ “ಚುನಾವಣೆಯಲ್ಲಿ ಗೆಲುವು ಸಾಧಿಸುತ್ತೇವೆ” ಎಂದು ಹೊಸ ಟ್ವೀಟ್‌ ಮಾಡಿದ್ದಾರೆ. ಅಮೆರಿಕಾದ ಅಧ್ಯಕ್ಷೀಯ ಚುನಾವಣೆಯಲ್ಲಿನ ಸೋಲನ್ನು ಟ್ರಂಪ್ ಇನ್ನೂ ಒಪ್ಪಿಕೊಂಡಿಲ್ಲ. ಹಾಗಾಗಿ ತಮ್ಮ ಟ್ವೀಟ್‌ಗಳಲ್ಲಿ ತಮಗೆ “ದೊಡ್ಡ ಗೆಲುವು” ಎಂದು ಹೇಳಿಕೊಳ್ಳುತ್ತಾ, ಡೆಮೋಕ್ರಾಟ್‌ಗಳ ವಿರುದ್ಧ ವಂಚನೆಯ ಆಧಾರರಹಿತ ಆರೋಪಗಳನ್ನು ಮಾಡುತ್ತಿದ್ದಾರೆ.

ಅಮೆರಿಕಾದ ಅಧ್ಯಕ್ಷೀಯ ಚುನಾವಣೆಯಲ್ಲಿ ಜೋ ಬೈಡೆನ್ ವಿಜೇತರಾಗಿದ್ದಾರೆ ಎಂದು ಮಾಧ್ಯಮಗಳು ಘೋಷಿಸಿದ ನಂತರವೂ ಟ್ರಂಪ್ ಈ ರೀತಿಯ ಹಕ್ಕುಮಂಡನೆ ಮಾಡುತ್ತಿದ್ದಾರೆ.

ಇದನ್ನೂ ಓದಿ: ಅಮೆರಿಕಾ ಚುನಾವಣೆ: ಹೊಸ ಭರವಸೆಯಿತ್ತ ನಾಲ್ವರು ಪ್ರಗತಿಪರ ಮಹಿಳೆಯರ ಗೆಲುವು

ಟ್ರಂಪ್ ಮಂಗಳವಾರ ಮತ್ತೆ “ದೊಡ್ಡ ಗೆಲುವು” ಕುರಿತು ಟ್ವೀಟ್ ಮಾಡಿದ್ದು, ಪ್ರತಿಸ್ಪರ್ಧಿ ಬೈಡೆನ್ ಅವರ ಡೆಮಾಕ್ರಟಿಕ್ ಪಕ್ಷವು ಚುನಾವಣೆಯನ್ನು ಹೈಜಾಕ್ ಮಾಡಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ: ಅಮೆರಿಕಾ ಚುನಾವಣೆ: ಟ್ರಂಪ್ ಪಾರುಪತ್ಯದ ರಾಜ್ಯಗಳಲ್ಲಿ ಜೋ ಬೈಡೆನ್ ಗೆಲುವು!

ಯಾವುದೇ ಪುರಾವೆಗಳನ್ನು ಉಲ್ಲೇಖಿಸದೆ, “ನಾವು ದೊಡ್ಡವರಾಗಿದ್ದೇವೆ, ಆದರೆ ಅವರು ಚುನಾವಣೆಯನ್ನು ಹೈಜಾಕ್ ಮಾಡಲು ಪ್ರಯತ್ನಿಸುತ್ತಿದ್ದಾರೆ. ನಾವು ಅದನ್ನು ಮಾಡಲು ಎಂದಿಗೂ ಬಿಡುವುದಿಲ್ಲ. ಮತದಾನ ಮುಗಿದ ನಂತರ ಮತ ಚಲಾಯಿಸಲಾಗುವುದಿಲ್ಲ!” ಎಂದು ಟ್ವೀಟ್ ಮಾಡಿದ್ದಾರೆ.

ಇದೇ ರೀತಿಯ ಆರೋಪಗಳನ್ನು ಮಾಡುತ್ತಾ ಟ್ರಂಪ್ ಸುಮಾರು 30 ಟ್ವೀಟ್‌ಗಳನ್ನು ಮಾಡಿದ್ದಾರೆ. ಅವುಗಳಲ್ಲಿ ಸುಮಾರು 13 ಟ್ವೀಟ್‌ಗಳನ್ನು ಟ್ವಿಟ್ಟರ್‌ ಕಂಪನಿ ಈಗಾಗಲೆ ನಿರ್ಬಂಧಿಸಿದೆ.

ಇದನ್ನೂ ಓದಿ: ಬಿಹಾರ ಚುನಾವಣೆ: ಸಾಮಾಜಿಕ ಜಾಲತಾಣಗಳಲ್ಲಿ’ಎಣಿಕೆ ನಿಲ್ಲಿಸಿ’ ಟ್ರೋಲ್!

ಇಂದು ಬೆಳಿಗ್ಗೆ ಟ್ವೀಟ್ ಮಾಡಿರುವ ಟ್ರಂಪ್, “ಈ ಜಟಿಲ ಚುನಾವಣೆಯನ್ನು ಜನರು ಸ್ವೀಕರಿಸುವುದಿಲ್ಲ” ಎಂದು ಬರೆದುಕೊಂಡಿದ್ದಾರೆ.

ಟ್ರಂಪ್ ಮೊದಲಿನಿಂದಲೂ ಇದೇ ರೀತಿಯ ಆರೋಪಗಳನ್ನು ಮಾಡಿಕೊಂಡು ಬರುತ್ತಿದ್ದಾರೆ.


ಇದನ್ನೂ ಓದಿ: 119 ಕ್ಷೇತ್ರಗಳಲ್ಲಿ ಗೆದ್ದರೂ ಸರ್ಟಿಫಿಕೆಟ್ ನೀಡದ ಚುನಾವಣಾ ಆಯೋಗ: ಅಕ್ರಮ ನಡೆಯುತ್ತಿದೆಯೆಂದು RJD ಆರೋಪ

LEAVE A REPLY

Please enter your comment!
Please enter your name here