ಬಿಹಾರ ವಿಧಾನಸಭಾ ಚುನಾವಣೆ ಮತ ನಡೆಯುತ್ತಿದ್ದು ಕೆಲವೆ ಗಂಟೆಗಳಲ್ಲಿ ಚುನಾವಣೆಯ ಸ್ಫಷ್ಟ ಚಿತ್ರಣ ದೊರೆಯುತ್ತದೆ. ಇದೀಗ ಮತ ಎಣಿಕೆಯಲ್ಲಿ ಅಕ್ರಮ ನಡೆಯುತ್ತಿದೆಯೆಂದು ಮಹಾಘಟಬಂಧನ್ ಮಿತ್ರ ಪಕ್ಷವಾದ RJD ಆರೋಪಿಸಿದ್ದು, 119 ಕ್ಷೇತ್ರಗಳಲ್ಲಿ ಗೆದ್ದೆವೆಂದು ಘೋಷಿಸಿದ್ದ ಚುನಾವಣಾ ಆಯೋಗ ಇದೀಗ ಗೆಲುವಿನ ಸರ್ಟಿಫಿಕೇಟ್ ನೀಡುತ್ತಿಲ್ಲ ಎಂದು ಆರೋಪಿಸಿದೆ.
ತನ್ನ ಟ್ವಿಟ್ಟರ್ ಖಾತೆಯಲ್ಲಿ ಮಹಾಘಟಬಂಧನ್ ಕೂಟದಿಂದ ಗೆದ್ದ ಅಭ್ಯರ್ಥಿಗಳ ಪಟ್ಟಿಹಾಕಿರುವ ಆರ್‌ಜೆಡಿಯು, “ನಾವು 119 ಸ್ಥಾನಗಳನ್ನು ಗೆದ್ದಿದ್ದರೂ, ಟಿವಿಯಲ್ಲಿ 109 ತೋರಿಸಲಾಗುತ್ತಿದೆ. ನಿತೀಶ್ ಕುಮಾರ್ ಎಲ್ಲಾ ಅಧಿಕಾರಿಗಳಿಗೆ ಫೋನ್ ಮಾಡಿ ಅವರನ್ನು ಬೆದರಿಕೆ ಹಾಕುದ್ದಾರೆ. ಕೊನೆಯ ಫಲಿತಾಂಶ ಬಂದು ಅಭಿನಂದಿಸುತ್ತಲೆ ಇರುವಾಗ, ಅಧಿಕಾರಿಗಳು ಇದ್ದಕ್ಕಿದ್ದಂತೆ ಬಂದು ನೀವು ಸೋತಿದ್ದೀರಿ ಎನ್ನುತ್ತಿದ್ದಾರೆ” ಎಂದು ಟ್ವೀಟ್ ಮಾಡಿದೆ.
ಇದನ್ನೂ ಓದಿ: Bihar Election Results: ಸ್ಪರ್ಧಿಸಿದ್ದ 19 ಕ್ಷೇತ್ರದಲ್ಲಿ 14 ರಲ್ಲಿ ಮುನ್ನಡೆ ಸಾಧಿಸಿದ ಸಿಪಿಐ(ಎಂ-ಎಲ್)
119 सीट जीतने के बाद टीवी पर 109 दिखाया जा रहा है। नीतीश कुमार सभी अधिकारियों को फ़ोन कर धाँधली करवा रहे है। फ़ाइनल रिज़ल्ट आने और बधाई देने के अब अधिकारी अचानक कह रहे है कि आप हार गए है।
— Rashtriya Janata Dal (@RJDforIndia) November 10, 2020
“ಎಣಿಕೆ ಪೂರ್ಣಗೊಂಡ ನಂತರ ಮಹಾಘಟಬಂಧನ್ ಅಭ್ಯರ್ಥಿಗಳು ಗೆದ್ದ 119 ಕ್ಷೇತ್ರಗಳ ಪಟ್ಟಿ ಇದಾಗಿದ್ದು, ಅಧಿಕಾರಿಗಳು ಗೆದ್ದಿರುವುದಕ್ಕಾಗಿ ಅಭಿನಂದಿಸಿದ್ದರಾದರೂ, ಈಗ ಅವರು ನೀವು ಸೋತಿದ್ದೀರಿ ಎಂದು ಪ್ರಮಾಣಪತ್ರವನ್ನು ನೀಡುತ್ತಿಲ್ಲ. ಚುನಾವಣಾ ವೆಬ್‌ಸೈಟ್‌ನಲ್ಲಿ ಅವರು ಗೆದ್ದಿದ್ದಾರೆ ಎಂದು ತೋರಿಸಲಾಗಿದೆ. ಇಂತಹ ಲೂಟಿ ಪ್ರಜಾಪ್ರಭುತ್ವದಲ್ಲಿ ನಡೆಯುದಿಲ್ಲ” ಎಂದು ಅದು ಹೇಳಿದೆ.
ಇದನ್ನೂ ಓದಿ: ಬಿಹಾರ ಚುನಾವಣೆ: ಸಾಮಾಜಿಕ ಜಾಲತಾಣಗಳಲ್ಲಿ’ಎಣಿಕೆ ನಿಲ್ಲಿಸಿ’ ಟ್ರೋಲ್!