HomeಮುಖಪುಟBihar Election Results: ಸರಳ ಬಹುಮತ ಪಡೆದ NDA; 5 ನೇ ಭಾರಿಗೆ ಮುಖ್ಯಮಂತ್ರಿಯಾಗಲಿದ್ದಾರ ನಿತೀಶ್?

Bihar Election Results: ಸರಳ ಬಹುಮತ ಪಡೆದ NDA; 5 ನೇ ಭಾರಿಗೆ ಮುಖ್ಯಮಂತ್ರಿಯಾಗಲಿದ್ದಾರ ನಿತೀಶ್?

ತಲೆ ಕೆಳಗಾದ ಚುನಾವಣೋತ್ತರ ಸಮೀಕ್ಷೆಗಳು, ಮುಖಭಂಗಕ್ಕೊಳಗಾದ ಮಹಾಘಟಬಂಧನ್!

- Advertisement -
- Advertisement -

ಭಾರಿ ಕುತೂಹಲ ಮೂಡಿಸಿದ್ದ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ-ಜೆಡಿಯು ನೇತೃತ್ವದ NDA ವಿಜಯ ಪತಾಕೆ ಹಾರಿಸಿದೆ. ಹೆಚ್ಚಿನ ಎಲ್ಲಾ ಚುನಾವಣೋತ್ತರ ಸಮೀಕ್ಷೆಗಳು ಮಹಾಘಟಬಂಧನ್ ಗೆಲ್ಲುತ್ತದೆ ಎಂದಿದ್ದವಾದರೂ ಎಲ್ಲಾ ಸಮೀಕ್ಷೆಗಳು ನೆಲಕಚ್ಚಿವೆ.

NDA ಕೂಟ ಒಟ್ಟು 125 ಸ್ಥಾನಗಳನ್ನು ಗೆದ್ದಿದ್ದು ಸರಳ ಬಹುಮತ ಪಡೆದಿದೆ. ಮಹಾಘಟಬಂಧನ್ ಕೂಟ 110 ಸ್ಥಾನಗಳನ್ನು ಗೆದ್ದು NDA ತೀವ್ರ ಪೈಪೋಟಿ ನೀಡಿತು. ಅಸಾದುದ್ದೀನ್ ಒವೈಸಿ ನೇತೃತ್ವದ AIMIM ತನ್ನ ಮೊದಲನೇ ಭಾರಿ 5 ಸೀಟುಗಳನ್ನು ಪಡೆದು ಅಚ್ಚರಿ ಮೂಡಿಸಿದೆ. ಒಟ್ಟು 14 ಸ್ಪರ್ಧಿಗಳನ್ನು ಕಣಕ್ಕಿಳಿಸಿದ್ದ AIMIM ಸ್ಫರ್ಧೆಯು ಮಹಾಘಟಬಂಧನ್‌ ಮೈತ್ರಿ ಕೂಟಕ್ಕೆ ದುಬಾರಿಯಾಗಿ ಪರಿಣಮಿಸಿತು.

ಇದನ್ನೂ ಓದಿ: 119 ಕ್ಷೇತ್ರಗಳಲ್ಲಿ ಗೆದ್ದರೂ ಸರ್ಟಿಫಿಕೆಟ್ ನೀಡದ ಚುನಾವಣಾ ಆಯೋಗ: ಅಕ್ರಮ ನಡೆಯುತ್ತಿದೆಯೆಂದು RJD ಆರೋಪ

ಮಹಾಘಟಬಂಧನ್‌ನ ಪ್ರಮುಖ ಪಕ್ಷವಾಗಿದ್ದ ಕಾಂಗ್ರೆಸ್ 70 ಕ್ಷೇತ್ರದಲ್ಲಿ ಸ್ಫರ್ಧಿಸಿತ್ತಾದರೂ ಕೇವಲ 19 ಕ್ಷೇತ್ರಗಳಲ್ಲಿ ಗೆದ್ದು ತೀರಾ ಕಳಪೆ ಪ್ರದರ್ಶನ ತೋರಿದೆ. ಮೈತ್ರಿಯ ಇನ್ನೊಂದು ಮಿತ್ರಪಕ್ಷವಾದ RJD 144 ಕ್ಷೇತ್ರದಲ್ಲಿ ಸ್ಫರ್ಧಿಸಿದ್ದು 75 ಕ್ಷೇತ್ರದಲ್ಲಿ ಜಯಗಳಿಸಿದೆ. ಇನ್ನುಳಿದಂತೆ ಮೈತ್ರಿಯ ಭಾಗವಾಗಿದ್ದ ಎಡಪಕ್ಷಗಳು ತಮಗೆ ನೀಡಿದ್ದ ಒಟ್ಟು 29 ಕ್ಷೇತ್ರದಲ್ಲಿ 16 ಕ್ಷೇತ್ರದಲ್ಲಿ ಜಯಗಳಿಸಿದೆ.

NDA ಕೂಟದಲ್ಲಿ ಬಿಜೆಪಿ 110 ಸ್ಥಾನಗಳಿಗೆ ಸ್ಫರ್ಧಿಸಿ 74 ಕ್ಷೇತ್ರಗಳಲ್ಲಿ ಜಯಗಳಿಸಿದೆ. 115 ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ JDU 43 ಕ್ಷೇತ್ರದಲ್ಲಿ ಗೆದ್ದಿದೆ. ಕಳೆದ ವಿಧಾನಸಭೆಯಲ್ಲಿ RJD 71 ಸ್ಥಾನಗಳನ್ನು ಗೆದ್ದಿತ್ತು. ಇನ್ನುಳಿದಂತೆ NDA ಕೂಟದ ಇತರ ಪಕ್ಷಗಳು 8 ಕ್ಷೇತ್ರಗಳನ್ನು ಗೆದ್ದುಕೊಂಡಿದೆ.

ಇನ್ನು ಮಾಜಿ ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವಾನ್ ಅವರ ಪಕ್ಷವಾದ ಚಿರಾಜ್ ಪಾಸ್ವಾನ್ ನೇತೃತ್ವದ ಎಲ್‌‌ಜೆಪಿ ಪಕ್ಷವು 135 ಕ್ಷೇತ್ರದಲ್ಲಿ ಸ್ಫರ್ಧಿಸಿದ್ದು ಕೇವಲ ಒಂದು ಕ್ಷೇತ್ರವನ್ನಷ್ಟೇ ಗೆದ್ದುಕೊಂಡಿದೆ. BSP ಒಂದು ಸ್ಥಾನವನ್ನು ಗೆದ್ದುಕೊಂಡರೆ, ಒಂದು ಕ್ಷೇತ್ರವನ್ನು ಪಕ್ಷೇತರ ಗೆದ್ದು ಕೊಂಡಿದೆ.

ಇದನ್ನೂ ಓದಿ: ಬಿಹಾರ ಚುನಾವಣೆ: ಸಾಮಾಜಿಕ ಜಾಲತಾಣಗಳಲ್ಲಿ’ಎಣಿಕೆ ನಿಲ್ಲಿಸಿ’ ಟ್ರೋಲ್!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕೇರಳ: ಚುನಾವಣಾ ಪ್ರಚಾರದ ವೇಳೆ ಬಿಜೆಪಿ ಅಭ್ಯರ್ಥಿಗೆ ಹಲ್ಲೆ ನಡೆಸಿದ ಸ್ವಪಕ್ಷದ ಮುಖಂಡ

0
ಕೇರಳದ ಕೊಲ್ಲಂ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಿ ಕೃಷ್ಣಕುಮಾರ್ ಅವರ ಕಣ್ಣಿಗೆ ತೀವ್ರ ಸ್ವರೂಪದ ಗಾಯವಾಗಿದ್ದು, ಚುನಾವಣಾ ಪ್ರಚಾರದ ವೇಳೆ ಬಿಜೆಪಿ ಪಕ್ಷದ ಸ್ಥಳೀಯ ನಾಯಕ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಕೃಷ್ಣಕುಮಾರ್ ಇತ್ತೀಚೆಗೆ...