HomeಮುಖಪುಟBihar Election Results: ಸ್ಪರ್ಧಿಸಿದ್ದ 19 ಕ್ಷೇತ್ರದಲ್ಲಿ 14 ರಲ್ಲಿ ಮುನ್ನಡೆ ಸಾಧಿಸಿದ ಸಿಪಿಐ(ಎಂ-ಎಲ್)

Bihar Election Results: ಸ್ಪರ್ಧಿಸಿದ್ದ 19 ಕ್ಷೇತ್ರದಲ್ಲಿ 14 ರಲ್ಲಿ ಮುನ್ನಡೆ ಸಾಧಿಸಿದ ಸಿಪಿಐ(ಎಂ-ಎಲ್)

- Advertisement -
- Advertisement -

ಬಿಹಾರ ವಿಧಾನ ಸಭಾ ಚುನಾವಣೆಯಲ್ಲಿ ಎಡ ಪಕ್ಷಗಳು ಗಮನಾರ್ಹ ಮುನ್ನಡೆ ಸಾಧಿಸುತ್ತಿದ್ದು, ಸ್ಪರ್ಧಿಸಿದ್ದ 29 ಸ್ಥಾನಗಲ್ಲಿ 19 ಕ್ಷೇತ್ರದಲ್ಲಿ ಮುನ್ನಡೆಯಲ್ಲಿದ್ದಾರೆ. ಅದರಲ್ಲೂ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ ಮಾರ್ಕ್ಸಿಸ್ಟ್‌ ಲೆನಿನಿಸ್ಟ್-ಲಿಬರೇಷನ್ (ಸಿಪಿಐ-ಎಂ-ಎಲ್) ತಾನು ಸ್ಫರ್ಧೆ ಮಾಡಿದ್ದ 19 ಕ್ಷೇತ್ರದಲ್ಲಿ 14 ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿದ್ದಾರೆ. ಸಿಪಿಐ (ಎಂ-ಎಲ್) ಇದೇ ಮೊದಲ ಬಾರಿಗೆ ಮಹಾಘಟಬಂಧನ್‌‌ನೊಂದಿಗೆ ಕೈಜೋಡಿಸಿದೆ.

ಸಿಪಿಐ ಮತ್ತು ಸಿಪಿಐಎಂ ಕ್ರಮವಾಗಿ 6 ಮತ್ತು 4 ಕ್ಷೇತ್ರದಲ್ಲಿ ಸ್ಪರ್ಧಿಸಿದ್ದು, ಇದುವರೆಗೆ ಕ್ರಮವಾಗಿ 3 ಮತ್ತು 2 ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿದ್ದಾರೆ. ಸಿಪಿಐ ಮತ್ತು ಸಿಪಿಐಎಂ ಈ ಹಿಂದೆ ಕೂಡಾ ಲಾಲು ಪ್ರಸಾದ್ ನೇತೃತ್ವದ ಆರ್‌‌ಜೆಡಿಗೆ ಬೆಂಬಲ ನೀಡಿದ್ದವು.

ಇದನ್ನೂ ಓದಿ: ಬಿಹಾರ ಚುನಾವಣೆ: ಕಣದಲ್ಲಿರುವ 1157 ಅಭ್ಯರ್ಥಿಗಳು ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿ!

ಸಿಪಿಐ(ಎಂ-ಎಲ್) 2000 ರಲ್ಲಿ ಆರು ಸ್ಥಾನಗಳನ್ನು, 2005 ರ ವಿಧಾನಸಭಾ ಚುನಾವಣೆಯಲ್ಲಿ ಏಳು ಸ್ಥಾನಗಳನ್ನು ಮತ್ತು ಅದೇ ವರ್ಷ ಅಕ್ಟೋಬರ್‌ನಲ್ಲಿ ನಡೆದ ಚುನಾವಣೆಯಲ್ಲಿ ಐದು ಸ್ಥಾನಗಳನ್ನು ಗೆದ್ದಿತ್ತು. 2010 ರ ಚುನಾವಣೆಯಲ್ಲಿ ಎನ್‌ಡಿಎ 243 ಸ್ಥಾನಗಳಲ್ಲಿ 206 ಸ್ಥಾನಗಳನ್ನು ಗೆದ್ದಾಗ ಮಾತ್ರ ಅದು ಶೂನ್ಯ ಸಾಧನೆ ಮಾಡಿತ್ತು.

ಇನ್ನುಳಿದಂತೆ ಬಿಜೆಪಿ ಭಾರಿ ಮುನ್ನಡೆಯಲ್ಲಿದ್ದು 74 ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿದ್ದು, ಬಿಜೆಪಿಯ ಮಿತ್ರ ಪಕ್ಷ ಜೆಡಿಯು 47 ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿದ್ದಾರೆ. ಮಹಾಘಟಬಂಧನ್‌ ಮೈತ್ರಿಕೂಟದ ಪ್ರಮುಖ ಪಕ್ಷವಾದ ಕಾಂಗ್ರೆಸ್ ಒಟ್ಟು 70 ಕ್ಷೇತ್ರಗಳಲ್ಲಿ ಸ್ಫರ್ಧಿಸಿತ್ತಾದರೂ ಕೇವಲ 20 ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿದೆ. ಮಹಾಘಟಬಂಧನ್‌‌ನ ಇನ್ನೊಂದು ಮಿತ್ರಪಕ್ಷ ಜೆಡಿಯು 114 ಕ್ಷೇತ್ರದಲ್ಲಿ ಸ್ಫರ್ಧಿಸುತ್ತಿದ್ದು, ಇದುವರೆಗೂ  67 ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿದ್ದಾರೆ.

ಇದನ್ನೂ ಓದಿ:  ಬಿಹಾರ: ಅಂತಿಮ ಹಂತದ ಚುನಾವಣೆ – 78 ಕ್ಷೇತ್ರಗಳಲ್ಲಿ ಶೇ.56ರಷ್ಟು ಮತದಾನ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್‌ರನ್ನು ಗುಂಡಿಕ್ಕಿ ಕೊಲ್ಲಿ: ಪಬ್ಲಿಕ್‌ ಟಿವಿಯಲ್ಲಿ ಮಾಡಲಾದ ಪ್ರಚೋದನೆಗೆ ಖಂಡನೆ

“ಮಾಜಿ ಮುಖ್ಯಮಂತ್ರಿ, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರನ್ನು ಗುಂಡಿಕ್ಕಿ ಕೊಲ್ಲಿ”- ಹೀಗೆ ಪ್ರಚೋದನಾತ್ಮಕವಾಗಿ ವ್ಯಕ್ತಿಯೊಬ್ಬರು ಪಬ್ಲಿಕ್‌ ಟಿ.ವಿ. ಜೊತೆ ಮಾತನಾಡಿರುವುದು ಆಕ್ರೋಶಕ್ಕೆ ಕಾರಣವಾಗಿದೆ. ಇಬ್ಬರು ಧಾರ್ಮಿಕ...