ಬಿಹಾರ ವಿಧಾನಸಭಾ ಚುನಾವಣೆ ಮುಗಿದಿದ್ದು, ನಾಳೆ ಇದರ ಫಲಿತಾಂಶ ಹೊರಬೀಳಲಿದೆ. ಕಾಂಗ್ರೆಸ್, ಬಿಜೆಪಿ ಸೇರಿದಂತೆ ಹಲವು ಸ್ಥಳೀಯ ಪಕ್ಷಗಳ ಭವಿಷ್ಯ ನಾಳೆ ನಿರ್ಧಾರವಾಗಲಿದೆ. ಈ ಚುನಾವಣೆಯಲ್ಲಿ ಸ್ಪರ್ಧಿಸಿರುವ ಸುಮಾರು 1157 ಅಭ್ಯರ್ಥಿಗಳು ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ ಎಂದು ಚುನಾವಣಾ ಆಯೋಗವು ಮಾಹಿತಿ ನೀಡಿದೆ.
ಬಿಹಾರ ಚುನಾವಣೆ: ಚಿರಾಗ್ ಪಾಸ್ವಾನ್ ಪರ ನಿಂತ ತೇಜಸ್ವಿ ಯಾದವ್ – ನಿತೀಶ್ ಕುಮಾರ್‌ಗೆ ತಲೆನೋವು!
ಕೊನೆಯ ಹಂತದ ಮತದಾನ ಮುಗಿದ ನಂತರ ಚುನಾವಣಾ ಆಯೋಗ ಶನಿವಾರ ನೀಡಿರುವ ಅಂಕಿ ಅಂಶಗಳ ಪ್ರಕಾರ, ಮೂರು ಹಂತದ ಚುನಾವಣೆಯಲ್ಲಿ 371 ಮಹಿಳೆಯರು ಸೇರಿದಂತೆ ಒಟ್ಟು 3733 ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ಬಿಹಾರ ಚುನಾವಣೆ: #BiharRejectsModi ಟ್ವಿಟ್ಟರ್‌ನಲ್ಲಿ ಟ್ರೆಂಡಿಂಗ್!
ಸುಪ್ರೀಂ ಕೋರ್ಟ್ ಆದೇಶದ ನಂತರ, ಚುನಾವಣಾ ಆಯೋಗವು, “ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿರುವ ವ್ಯಕ್ತಿಗಳನ್ನು ಚುನಾವಣೆಯಲ್ಲಿ ಸ್ಪರ್ಧಿಸಲು ಏಕೆ ಆಯ್ಕೆ ಮಾಡಲಾಗುತ್ತಿದೆ” ಎಂದು ಕೇಳಿತ್ತು.
ಬಿಹಾರ ಚುನಾವಣೆ: ಮುಖ್ಯಮಂತ್ರಿ ನಿತೀಶ್ ಕುಮಾರ್ ಮೇಲೆ ಈರುಳ್ಳಿ ಎಸೆದು ಆಕ್ರೋಶ!
ನಾಳೆ ಚುನಾವಣಾ ಫಲಿತಾಂಶ ಹೊರಬೀಳಲಿದ್ದು, ಈ ಅಭ್ಯರ್ಥಿಗಳೂ ಸೇರಿದಂತೆ ಹಲವು ಪ್ರಮುಖರ ಭವಿಷ್ಯ ನಿರ್ಣಯವಾಗಲಿದೆ.
ಇದನ್ನೂ ಓದಿ: ದೇಶದ ರಾಜಕೀಯಕ್ಕೆ ತಿರುವು ನೀಡುವುದೇ ಬಿಹಾರ ಚುನಾವಣೆ?