ಬಿಹಾರ ವಿಧಾನಸಭಾ ಚುನಾವಣೆ ನಡೆಯುತ್ತಿದ್ದಾಗ ರಾಹುಲ್ ಗಾಂಧಿ ತಮ್ಮ ಸಹೋದರಿ ಪ್ರಿಯಾಂಕಾ ಗಾಂಧಿಯವರೊಂದಿಗೆ ಶಿಮ್ಲಾದಲ್ಲಿ ಪಿಕ್ನಿಕ್ ಮಾಡುತ್ತಿದ್ದರು ಎಂಬ ಹೇಳಿಕೆ ತಮ್ಮ ಪಕ್ಷದ ಹಿರಿಯ ನಾಯಕನ ಹೇಳಿಕೆಗೆ ಆರ್‌ಜೆಡಿ ಪ್ರತಿಕ್ರಿಯಿಸಿದ್ದು, “ಶಿವಾನಂದ್ ತಿವಾರಿ ಹೇಳಿಕೆ ಅವರ ವೈಯಕ್ತಿಕ ಅಭಿಪ್ರಾಯವಾಗಿದ್ದು, ಅದು ಪಕ್ಷದ ನಿಲುವನ್ನು ಪ್ರತಿಬಿಂಬಿಸುವುದಿಲ್ಲ” ಎಂದು ಆರ್‌ಜೆಡಿ ವಕ್ತಾರ ಚಿತ್ತರಂಜನ್ ಗಗನ್ ಹೇಳಿದ್ದಾರೆ.
“ಶಿವಾನಂದ್ ತಿವಾರಿ ಹಿರಿಯ ನಾಯಕ ಮತ್ತು ನಮಗೆ ರಕ್ಷಕರಾಗಿದ್ದಾರೆ. ಆದರೆ ಅವರು ವ್ಯಕ್ತಪಡಿಸಿದ ಅಭಿಪ್ರಾಯಗಳು ವೈಯಕ್ತಿಕವಾಗಿವೆ. ತೇಜಶ್ವಿ ಯಾದವ್ ಮತ್ತು ಆರ್‌ಜೆಡಿಯ ಇತರ ಹಿರಿಯ ನಾಯಕರು ಚುನಾವಣಾ ಫಲಿತಾಂಶವನ್ನು ವಿಶ್ಲೇಷಿಸುತ್ತಾರೆ” ಎಂದು ಗಗನ್ ಹೇಳಿದ್ದಾರೆ.
ಇದನ್ನೂ ಓದಿ: ಬಿಹಾರ ಮಹಾಘಟಬಂಧನ್‌ನಲ್ಲಿ ಬಿರುಕು: ಚುನಾವಣೆಯ ಸಮಯದಲ್ಲಿ ರಾಹುಲ್ ಪಿಕ್‌ನಿಕ್‌ನಲ್ಲಿದ್ದರು ಎಂದ RJD ನಾಯಕ!
ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರಿಗೆ ಆಪ್ತವಾಗಿರುವ ಶಿವಾನಂದ್ ತಿವಾರಿ, “ರಾಹುಲ್ ಗಾಂಧಿ ಬಿಹಾರಕ್ಕೆ ಭೇಟಿ ನೀಡಿ ಮೂರು ದಿನಗಳಲ್ಲಿ, ದಿನಕ್ಕೆ ಎರಡು ರ್‍ಯಾಲಿಗಳನ್ನು ಉದ್ದೇಶಿಸಿ ಮಾತನಾಡಿದ್ದರು. ಪ್ರಿಯಾಂಕಾ ಗಾಂಧಿ ಎಲ್ಲೂ ಕಾಣಿಸಲಿಲ್ಲ. ಚುನಾವಣಾ ಉತ್ತುಂಗದಲ್ಲಿದ್ದಾಗ, ಅವರು ಶಿಮ್ಲಾದಲ್ಲಿ ಪ್ರಿಯಾಂಕಾ ಗಾಂಧಿಯವರೊಂದಿಗೆ ಪಿಕ್ನಿಕ್ ಮಾಡುತ್ತಿದ್ದರು” ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.
ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಕಳಪೆ ಸಾಧನೆಯ ಕಾರಣಕ್ಕೆ ಮಿತ್ರರಾಷ್ಟ್ರ ಆರ್‌ಜೆಡಿಯಿಂದ ತೀವ್ರ ಟೀಕೆಗೆ ಗುರಿಯಾಗಿದ್ದು, 70 ಸ್ಥಾನಗಳನ್ನು ನಡೆಸಿದರೂ 70 ರ್‍ಯಾಲಿಯನ್ನು ನಡೆಸಲಿಲ್ಲ. ಕಾಂಗ್ರೆಸ್ ಅರೆ ಮನಸ್ಸಿನಿಂದ ಹೋರಾಟ ನಡೆಸಿದೆ ಎಂದು ತಿವಾರಿ ಆರೋಪಿಸಿದ್ದರು.
ಶಿವಾನಂದ್ ತಿವಾರಿ ಟೀಕೆಗೆ ಕಾಂಗ್ರೆಸ್ ಕೂಡಾ ತೀವ್ರವಾಗಿ ಪ್ರತಿಕ್ರಿಯಿಸಿದ್ದು, “ಅವರು ಆರ್‌ಜೆಡಿಯ ಅಧಿಕೃತ ವಕ್ತಾರರಲ್ಲ. ಅವರು ಬಿಜೆಪಿ ಮತ್ತು ಜೆಡಿಯು ಜೊತೆ ಸಂಬಂಧ ಹೊಂದಿದ್ದಾರೆ ಹಾಗೂ ಅವರ ಭಾಷೆಯನ್ನು ಮಾತನಾಡುತ್ತಿದ್ದಾರೆ” ಎಂದು ಎಐಸಿಸಿ ಮಾಧ್ಯಮ ಸಮಿತಿ ಸದಸ್ಯ ಪ್ರೇಮ್ ಚಂದ್ರ ಮಿಶ್ರಾ ಹೇಳಿದ್ದಾರೆ.
ಇದನ್ನೂ ಓದಿ: ಪಶ್ಚಿಮ ಬಂಗಾಳದ ಸ್ಥಿತಿ ಕಾಶ್ಮೀರಕ್ಕಿಂತ ಕೆಟ್ಟಿದೆ; ಭಯೋತ್ಪಾದಕರ ಕೇಂದ್ರವಾಗಿದೆ: ಬಿಜೆಪಿ ರಾಜ್ಯಾಧ್ಯಕ್ಷ
“ಗಿರಿರಾಜ್ ಸಿಂಗ್ ಮತ್ತು ಶಹನಾವಾಜ್ ಹುಸೇನ್ ಅವರ ಭಾಷೆ ಮಾತನಾಡುವ ಆರ್‌ಜೆಡಿ ನಾಯಕ ಕಾಂಗ್ರೆಸ್‌ಗೆ ಸ್ವೀಕಾರಾರ್ಹವಲ್ಲ. ಸಮ್ಮಿಶ್ರ ಧರ್ಮ ಎಂಬುವುದು ಇದೆ ಮತ್ತು ಎಲ್ಲಾ ಪಕ್ಷಗಳು ಇದನ್ನು ಅನುಸರಿಸಬೇಕು” ಎಂದು ಅವರು ಟ್ವೀಟ್ ಮಾಡಿದ್ದರು.
राजद नेता शिवानंद तिवारी पे लगाम लगावें @yadavtejashwi जी, कांग्रेस पार्टी और @RahulGandhi जी को लेकर गिरिराज सिंह और शहनवाज हुसैन जैसी भाषा राजद नेता का
बोलना हमें स्वीकार नही।गठबंधन का धर्म होता है जिसे सभी पक्षों को पालन करना चाहिए pic.twitter.com/QO3rKcDjlp— Prem Chandra Mishra (@PremChandraMis2) November 15, 2020
ಕೊರೊನಾ ನಂತರ ದೇಶದಲ್ಲಿ ನಡೆದ ಮೊದಲ ಚುನಾವಣೆಯಾದ ಬಿಹಾರ ಚುನಾವಣೆಯಲ್ಲಿ ಬಿಜೆಪಿ ಹಾಗೂ ಜೆಡಿಯು ನೇತೃತ್ವದ ಎನ್‌ಡಿಎ ಕೂಟ ಭಾರಿ ಕಷ್ಟ ಪಟ್ಟು ಜಯಗಳಿಸಿದೆ. ಮಹಾಘಟಬಂಧನ್‌ನಲ್ಲಿ ಆರ್‌ಜೆಡಿ ಉತ್ತಮ ಸಾಧನೆ ಮಾಡಿದ್ದು ರಾಜ್ಯದ ಅತೀ ದೊಡ್ಡ ಪಕ್ಷವಾಗಿ ಹೊಮ್ಮಿದೆ. ಕಾಂಗ್ರೆಸ್ ತಮಗೆ ನೀಡಿದ್ದ 70 ಕ್ಷೇತ್ರದಲ್ಲಿ ಕೇವಲ 19 ಸ್ಥಾನಗಳನ್ನು ಗೆದ್ದು ಕಳಪೆ ಸಾಧನೆ ಮಾಡಿದೆ.
ಇದನ್ನೂ ಓದಿ: ಫ್ಯಾಕ್ಟ್‌ಚೆಕ್: ಬಿಹಾರದಲ್ಲಿ EVM ಮತಯಂತ್ರಗಳನ್ನು ಕದಿಯುತ್ತಿದ್ದಾರಾ?


