ದೆಹಲಿ ಹಿಂಸಾಚಾರ ಪ್ರಕರಣದಲ್ಲಿ ಬಂಧನಕ್ಕೊಳಗಾದ ಜೆಎನ್‌ಯು ವಿದ್ಯಾರ್ಥಿ ಸಂಘದ ಮಾಜಿ ನಾಯಕ ಉಮರ್ ಖಾಲಿದ್ ಮತ್ತು ಶರ್ಜೀಲ್ ಇಮಾಂ ಅವರ ನ್ಯಾಯಾಂಗ ಬಂಧನದ ಅವಧಿಯನ್ನು ದೆಹಲಿಯ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯವು ನವೆಂಬರ್ 23 ರವರೆಗೆ ವಿಸ್ತರಿಸಿದೆ.
ಇದನ್ನೂ ಓದಿ:ದೆಹಲಿ ಗಲಭೆ: ಪೊಲೀಸರು ಅಮಾಯಕರಿಗೆ ಅಪರಾಧಿ ಪಟ್ಟ ಕಟ್ಟುತ್ತಿದ್ದಾರೆ- ಪ್ರಶಾಂತ್ ಭೂಷಣ್
ಕಳೆದ ಫೆಬ್ರವರಿ ಈಶಾನ್ಯ ದೆಹಲಿಯಲ್ಲಿ ಭುಗಿಲೆದ್ದ ಗಲಭೆಗಳನ್ನು ಪ್ರಚೋದಿಸಲು ಉಮರ್ ಖಾಲಿದ್ ಮತ್ತು ಶರ್ಜೀಲ್ ಇಮಾಂ ಒಳಸಂಚು ರೂಪಿಸಿದ್ದರು ಎಂಬ ಆರೋಪವನ್ನು ದೆಹಲಿ ಪೊಲೀಸರು ಮಾಡಿದ್ದಾರೆ. ಗಲಭೆಯು ಉಮರ್ ಖಾಲಿದ್ ಮತ್ತು ಇತರರು ರೂಪಿಸಿದ್ದ ಪೂರ್ವಯೋಜಿತ ಕೃತ್ಯವಾಗಿತ್ತು ಎಂದು ಪೊಲೀಸರು ಪ್ರಕರಣದಲ್ಲಿ ಆರೋಪಿಸಿದ್ದಾರೆ. ಈಶಾನ್ಯ ದೆಹಲಿಯಲ್ಲಿ ನಡೆದಿದ್ದ ಈ ಕೋಮು ಗಲಭೆಯಲ್ಲಿ 50 ಕ್ಕೂ ಹೆಚ್ಚು ಜನರು ಸಾವಿಗೀಡಾಗಿದ್ದರು.
ಕರಾಳ ಯುಎಪಿಎ ಕಾನೂನಿನಡಿ ಬಂಧಿತರಾಗಿರುವ ಇವರ ನ್ಯಾಯಾಂಗ ಬಂಧನದ ಅವಧಿ ಕೊನೆಗೊಂಡಿದ್ದರಿಂದ ನಿನ್ನೆ ಅವರನ್ನು ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ನ್ಯಾಯಾಲಯದ ಮುಂದೆ ಹಾಜರು ಪಡಿಸಲಾಗಿತ್ತು. ಪ್ರಕರಣ ಆಲಿಸಿದ ನ್ಯಾ.ಅಮಿತಾಭ್ ರಾವತ್ ಅವರ ನ್ಯಾಯಂಗ ಬಂಧನವನ್ನು ನವೆಂಬರ್ 23 ರವರೆಗೆ ವಿಸ್ತರಿಸಿದ್ದಾರೆ.
ಇದನ್ನೂ ಓದಿ: ದೆಹಲಿ ಗಲಭೆ: ನ್ಯಾಯಯುತ ತನಿಖೆಗೆ ಒತ್ತಾಯ; ಮಾಜಿ IPS ಅಧಿಕಾರಿಗಳ ಪತ್ರ!


