ಉಮರ್

ದೆಹಲಿ ಹಿಂಸಾಚಾರ ಪ್ರಕರಣದಲ್ಲಿ ಬಂಧನಕ್ಕೊಳಗಾದ ಜೆಎನ್‌ಯು ವಿದ್ಯಾರ್ಥಿ ಸಂಘದ ಮಾಜಿ ನಾಯಕ ಉಮರ್ ಖಾಲಿದ್ ಮತ್ತು ಶರ್ಜೀಲ್ ಇಮಾಂ ಅವರ ನ್ಯಾಯಾಂಗ ಬಂಧನದ ಅವಧಿಯನ್ನು ದೆಹಲಿಯ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯವು ನವೆಂಬರ್ 23 ರವರೆಗೆ ವಿಸ್ತರಿಸಿದೆ.

ಇದನ್ನೂ ಓದಿ:ದೆಹಲಿ ಗಲಭೆ: ಪೊಲೀಸರು ಅಮಾಯಕರಿಗೆ ಅಪರಾಧಿ ಪಟ್ಟ ಕಟ್ಟುತ್ತಿದ್ದಾರೆ- ಪ್ರಶಾಂತ್‌ ಭೂಷಣ್

ಕಳೆದ ಫೆಬ್ರವರಿ ಈಶಾನ್ಯ ದೆಹಲಿಯಲ್ಲಿ ಭುಗಿಲೆದ್ದ ಗಲಭೆಗಳನ್ನು ಪ್ರಚೋದಿಸಲು ಉಮರ್‌ ಖಾಲಿದ್ ಮತ್ತು ಶರ್ಜೀಲ್ ಇಮಾಂ ಒಳಸಂಚು ರೂಪಿಸಿದ್ದರು ಎಂಬ ಆರೋಪವನ್ನು ದೆಹಲಿ ಪೊಲೀಸರು ಮಾಡಿದ್ದಾರೆ. ಗಲಭೆಯು ಉಮರ್‌ ಖಾಲಿದ್ ಮತ್ತು ಇತರರು ರೂಪಿಸಿದ್ದ ಪೂರ್ವಯೋಜಿತ ಕೃತ್ಯವಾಗಿತ್ತು ಎಂದು ಪೊಲೀಸರು ಪ್ರಕರಣದಲ್ಲಿ ಆರೋಪಿಸಿದ್ದಾರೆ. ಈಶಾನ್ಯ ದೆಹಲಿಯಲ್ಲಿ ನಡೆದಿದ್ದ ಈ ಕೋಮು ಗಲಭೆಯಲ್ಲಿ 50 ಕ್ಕೂ ಹೆಚ್ಚು ಜನರು ಸಾವಿಗೀಡಾಗಿದ್ದರು.

ಕರಾಳ ಯುಎಪಿಎ ಕಾನೂನಿನಡಿ ಬಂಧಿತರಾಗಿರುವ ಇವರ ನ್ಯಾಯಾಂಗ ಬಂಧನದ ಅವಧಿ ಕೊನೆಗೊಂಡಿದ್ದರಿಂದ ನಿನ್ನೆ ಅವರನ್ನು ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ನ್ಯಾಯಾಲಯದ ಮುಂದೆ ಹಾಜರು ಪಡಿಸಲಾಗಿತ್ತು. ಪ್ರಕರಣ ಆಲಿಸಿದ ನ್ಯಾ.ಅಮಿತಾಭ್ ರಾವತ್ ಅವರ ನ್ಯಾಯಂಗ ಬಂಧನವನ್ನು ನವೆಂಬರ್ 23 ರವರೆಗೆ ವಿಸ್ತರಿಸಿದ್ದಾರೆ.

ಇದನ್ನೂ ಓದಿ: ದೆಹಲಿ ಗಲಭೆ: ನ್ಯಾಯಯುತ ತನಿಖೆಗೆ ಒತ್ತಾಯ; ಮಾಜಿ IPS ಅಧಿಕಾರಿಗಳ ಪತ್ರ! 

Donate

ಈ ಲೇಖನ, ಈ ವೆಬ್‌ಸೈಟ್ ನಿಮಗೆ ಇಷ್ಟವಾಯಿತೇ? ನಿಮ್ಮ ಬೆಂಬಲ ಇದಕ್ಕೆ ಅಗತ್ಯ.

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

+ posts

LEAVE A REPLY

Please enter your comment!
Please enter your name here