ವಿವಾಹದ ಹೆಸರಿನಲ್ಲಿ ಮಹಿಳೆಯರ ಧಾರ್ಮಿಕ ಮತಾಂತರದ ಕ್ರಮವನ್ನು ನಿಯಂತ್ರಿಸಲು ಕಾನೂನು ರಚನೆಗೆ ಆಲೋಚಿಸುತ್ತಿರುವ ಹಲವಾರು ಬಿಜೆಪಿ ಆಡಳಿತದ ರಾಜ್ಯಗಳ ನಿರ್ಧಾರದ ನಡುವೆ, ಅಂತರ್‌ಜಾತಿ ವಿವಾಹ ಮತ್ತು ಅಂತರ್‌ಧರ್ಮೀಯ ವಿವಾಹಗಳನ್ನು ಉತ್ತೇಜಿಸಲು ಉತ್ತರಾಖಂಡ್ ಸರ್ಕಾರ ದಂಪತಿಗಳಿಗೆ 50,000 ರೂ. ಪ್ರೋತ್ಸಾಹ ಧನ ಘೋಷಿಸಿದೆ.
ಕಾನೂನುಬದ್ಧವಾಗಿ ನೋಂದಣಿಯಾದ ಭಾರತದ ಅಂತರ್‌ಧರ್ಮೀಯ ದಂಪತಿಗಳಿಗೆ ನಗದು ಪ್ರೋತ್ಸಾಹ ನೀಡಲಾಗುತ್ತದೆ ಎಂದು ರಾಜ್ಯ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಲವ್ ಜಿಹಾದ್ ಕುರಿತ ಸುದ್ದಿಗಳಿಗೆ ನಿರ್ಬಂಧ ಹೇರಿ: ಹೋರಾಟಗಾರರ ಪತ್ರ
ಅಂತರ್ಜಾತಿ ವಿವಾಹದ ಸಂದರ್ಭಗಳಲ್ಲಿ ಈ ಪ್ರೋತ್ಸಾಹ ಧನವನ್ನು ಪಡೆಯುವುದಕ್ಕೆ ಸಂವಿಧಾನದ 341 ನೇ ಪರಿಚ್ಚೇದದ ಪ್ರಕಾರ ಸಂಗಾತಿಯೊಬ್ಬರು ಪರಿಶಿಷ್ಟ ಜಾತಿಯವರಾಗಿರಬೇಕು ಎನ್ನುವ ಷರತ್ತು ಇದೆ ಎಂದು ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ಇದನ್ನೂ ಓದಿ: ’ಲವ್ ಜಿಹಾದ್’ ಎಂಬುದು ದೇಶ ಒಡೆಯಲು ಬಿಜೆಪಿ ಸೃಷ್ಟಿಸಿದ ಪದ: ಅಶೋಕ್ ಗೆಹ್ಲೋಟ್
ಈ ರೀತಿಯ ವಿವಾಹಗಳಿಗೆ ನೀಡುವ ಪ್ರೋತ್ಸಾಹ ಧನವು ರಾಷ್ಟ್ರೀಯ ಏಕತೆಯ ಮನೋಭಾವವನ್ನು ಉತ್ತೇಜಿಸಲು ಅತ್ಯಂತ ಸಹಾಯಕವಾಗುತ್ತದೆ ಎಂದು ತೆಹ್ರಿಯ ಸಮಾಜ ಕಲ್ಯಾಣ ಅಧಿಕಾರಿ ದೀಪಂಕರ್ ಘಿಲ್ಡಿಯಾಲ್ ಹೇಳಿದ್ದಾರೆ.
ಅರ್ಹ ದಂಪತಿಗಳು ಮದುವೆಯ ನಂತರ ಒಂದು ವರ್ಷದವರೆಗೆ ನಗದು ಪ್ರೋತ್ಸಾಹಕ್ಕಾಗಿ ಅರ್ಜಿ ಸಲ್ಲಿಸಬಹುದು ಎಂದು ಅವರು ಹೇಳಿದರು.
ಇದನ್ನೂ ಓದಿ: ಲವ್ ಜಿಹಾದ್‌ಗೆ ಕಠಿಣ ಶಿಕ್ಷೆ ಎಂದ ಮಧ್ಯಪ್ರದೇಶ: ರಾಜ್ಯ ಬಿಜೆಪಿ V/S ಕೇಂದ್ರ ಬಿಜೆಪಿ- ದ್ವಂದ್ವ!


