ತಮಿಳುನಾಡಿನಲ್ಲಿ ನಟಿ ಖುಷ್ಬೂ ಸುಂದರ್ ಇತ್ತೀಚೆಗೆ ತಾನೇ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾದ ಬೆನ್ನಲ್ಲೆ ಆಂಧ್ರಪ್ರದೇಶದ ಬಹುಭಾಷಾ ನಟಿ ವಿಜಯಶಾಂತಿ ಸಹ ಕಾಂಗ್ರೆಸ್ ತೊರೆದು ಬಿಜೆಪಿ ಸೇರಲು ಸಜ್ಜಾಗಿದ್ದಾರೆ.
ವಿಜಯಶಾಂತಿ ಕನ್ನಡ, ತೆಲುಗು, ತಮಿಳು ಸೇರಿದಂತೆ ಅನೇಕ ಭಾಷೆಗಳಲ್ಲಿ ನಟಿಸಿ ಖ್ಯಾತಿ ಗಳಿಸಿದ್ದವರು. ಅತ್ಯುತ್ತಮ ನಟಿ ರಾಷ್ಟ್ರ ಪ್ರಶಸ್ತಿ ಸೇರಿದಂತೆ ಹಲವಾರು ಫಿಲ್ಮ್ಫೇರ್ ಪ್ರಶಸ್ತಿ ಪಡೆದಿರುವ ಅವರು ಕಳೆದೆರಡು ದಶಕಗಳಿಂದ ರಾಜಕೀಯದಲ್ಲೂ ಸಕ್ರೀಯರಾಗಿದ್ದಾರೆ. ಆರಂಭದಲ್ಲಿ ಬಿಜೆಪಿ ಪಕ್ಷ ಸೇರಿದ್ದ ಅವರು ನಂತರ ಟಿಆರ್‌ಎಸ್ ಪಕ್ಷಕ್ಕೆ ಜಿಗಿದಿದ್ದರು. 2009ರಲ್ಲಿ ಮೇದಕ್ ಸಂಸತ್ ಸ್ಥಾನಕ್ಕೆ ಟಿಎಂಸಿಯಿಂದ ಸ್ಪರ್ಧಿಸಿ ವಿಜಯಯಾಗಿದ್ದರು.
ತೆಲಂಗಾಣ ಪ್ರತ್ಯೇಕ ರಾಜ್ಯ ವಿರೋಧಿಸಿ 2011 ರಲ್ಲಿ ತಮ್ಮ ಸಂಸದ ಸ್ಥಾನ ಮತ್ತು ಟಿಆರ್‌ಎಸ್ ಪಕ್ಷಕ್ಕೆ ರಾಜೀನಾಮೆ ನೀಡಲು ಮುಂದಾಗಿ ವಿಜಯಶಾಂತಿ ನಂತರ ಮನ ಬದಲಿಸಿ ತೆಲಂಗಾಣ ಪ್ರತ್ಯೇಕ ರಾಜ್ಯ ಹೋರಾಟದಲ್ಲಿ ಪಾಲ್ಗೊಂಡಿದ್ದರು. 2014ರಲ್ಲಿ ಟಿಆರ್‌ಎಸ್‌ಗೆ ಗುಡ್‌ಬೈ ಹೇಳಿದ ಅವರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದರು. ಈಗ ರಾಷ್ಟ್ರೀಯ ಮಟ್ಟದಲ್ಲಿ ಉನ್ನತ ಹುದ್ದೆಯ ನಿರೀಕ್ಷೆಯಿಂದ ಅವರು ಮತ್ತೆ ಬಿಜೆಪಿಗೆ ಸೇರ್ಪಡೆಯಾಗಲು ಮುಂದಾಗಿದ್ದಾರೆ ಎನ್ನಲಾಗುತ್ತಿದೆ.
ಇದನ್ನೂ ಓದಿ: ಮೊದಲು ನಿತೀಶ್ ಕುಮಾರ್ ‘ಲವ್ ಜಿಹಾದ್’ ಕಾಯ್ದೆ ತರಲಿ, ನಾವು ನಂತರ ಯೋಚಿಸುತ್ತೇವೆ: ಸಂಜಯ್ ರಾವತ್


