ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಇಂದು ಭಾರತ-ಆಸ್ಟ್ರೇಲಿಯಾ ಮೊದಲ ಏಕದಿನ ಕ್ರಿಕೆಟ್ ಪಂದ್ಯ ಆರಂಭವಾಗಿದೆ. ಪಂದ್ಯ ವೀಕ್ಷೀಸಲು ಕ್ರೀಡಾಂಗಣಕ್ಕೆ ಪ್ರೇಕ್ಷಕರಿಗೂ ಅವಕಾಶ ಕಲ್ಪಿಸಲಾಗಿದೆ. ಈ ಸಂದರ್ಭದಲ್ಲಿ ಇಬ್ಬರು ಪ್ರತಿಭಟನಾಕಾರರು ಪಂದ್ಯ ನಡೆಯುತ್ತಿರುವ ಸಮಯದಲ್ಲಿಯೇ ಮೈದಾನದೊಳಕ್ಕೆ ನುಗ್ಗಿ ಅದಾನಿಗೆ ವಿವಾದಿತ ಕಲ್ಲಿದ್ದಲು ಯೋಜನೆ ನೀಡುವುದರ ವಿರುದ್ಧ ಪ್ರತಿಭಟಿಸಿ ಗಮನಸೆಳೆದಿದ್ದಾರೆ.
ಪಂದ್ಯದ ಏಳನೇ ಓವರ್‌ನಲ್ಲಿ ಭಾರತದ ನವದೀಪ್ ಸೈನಿ ಬೌಲ್ ಮಾಡುವ ಮೊದಲೆ ಈ ಇಬ್ಬರೂ ಮೈದಾನದೊಳಕ್ಕೆ ನುಗ್ಗಿದ್ದಾರೆ. ಒಬ್ಬನಂತೂ ಬ್ಯಾಟ್ಸ್‌ಮನ್‌ಗಳಿಗೆ ತೀರಾ ಹತ್ತಿರ ತೆರಳಿ “ನೋ ಒನ್ ಬಿಲಿಯನ್ ಡಾಲರ್ ಟು ಅದಾನಿ (ಅದಾನಿಗೆ ಒಂದು ಬಿಲಿಯನ್ ಡಾಲರ್ ನೀಡಬೇಡಿ)” ಎಂಬ ಪ್ಲೆಕಾರ್ಡ್ ಪ್ರದರ್ಶಿಸಿದ್ದಾನೆ. ಆತನ ಟೀಶರ್ಟ್ ಮೇಲೆ ಕಲ್ಲಿದ್ದಲು ಯೋಜನೆ ನಿಲ್ಲಿಸಿ, ಅದಾನಿ ನಿಲ್ಲಿಸಿ, ಆತನ ಮೇಲೆ ಕ್ರಮ ತೆಗೆದುಕೊಳ್ಳಿ ಎಂದು ಬರೆಯಲಾಗಿತ್ತು.
Pitch Invaders ?? Really ? Wowo ! Hahaha#AUSvsIND #INDvAUS #Sydney #ODI pic.twitter.com/yrFzPhSAvx
— “Raj”ini Siva (@rajsviewfinder1) November 27, 2020
ಕೂಡಲೇ ಮೈದಾನದ ಸೆಕ್ಯುರಿಟಿಗಳು ಧಾವಿಸಿ ಇಬ್ಬರನ್ನು ಕ್ರೀಡಾಂಗಣದಿಂದ ಹೊರಗೆ ಕಳಿಸಿದ್ದಾರೆ. ಆದರ ಹೊರಗಡೆಯು ಸಹ 50ಕ್ಕೂ ಹೆಚ್ಚು ಪ್ರತಿಭಟನಾಕಾರರು ಅದಾನಿ ಕಂಪನಿಗೆ ಕಲ್ಲಿದ್ದಲು ಯೋಜನೆ ನೀಡುವುದರ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ.
ಕಾರ್ಮೈಕಲ್ ಕಲ್ಲಿದ್ದಲು ಗಣಿ ಹಲವಾರು ವರ್ಷಗಳಿಂದ ಸಾಕಷ್ಟು ವಿವಾದಗಳಿಗೆ ಕಾರಣವಾಗಿದೆ, ಸ್ಟಾಪ್ ಅದಾನಿ ಸಮೂಹವು ಪರಿಸರದ ಮೇಲೆ ಬೀರಬಹುದಾದ ಋಣಾತ್ಮಕ ಪ್ರಭಾವದಿಂದಾಗಿ ಯೋಜನೆಯನ್ನು ನಿಲ್ಲಿಸುವಂತೆ ಒತ್ತಾಯಿಸಿ ಹೋರಾಟ ನಡೆಸುತ್ತಿದೆ.
Stop Adani protesters run onto the field and stop play.
Security took about five minutes to realise they were trespassing and weren’t players. #AUSvIND pic.twitter.com/wLBgdeLlqu
— Lachlan McKirdy (@LMcKirdy7) November 27, 2020
ಇದಕ್ಕೂ ಮುನ್ನ ಸೆಪ್ಟೆಂಬರ್‌ನಲ್ಲಿ ಅದಾನಿ ಕಲ್ಲಿದ್ದಲು ಗಣಿಯು ಪರಿಸರ ಕಾರ್ಯಕರ್ತರ ವಿರುದ್ಧ ಜಯಗಳಿಸಿತ್ತು. ಈ ಯೋಜನೆಯು ಕ್ವೀನ್ಸ್‌ಲ್ಯಾಂಡ್ ರಾಜ್ಯದ ಜನರಿಗೆ 1,500 ಕ್ಕೂ ಹೆಚ್ಚು ಉದ್ಯೋಗಗಳನ್ನು ನೀಡುತ್ತದೆ ಎಂದು ಅದಾನಿ ಕಂಪನಿ ಘೋಷಿಸಿತ್ತು.
ಶುಕ್ರವಾರ, ಸ್ಟಾಪ್ ಅದಾನಿ ಗುಂಪು ಪತ್ರಿಕಾ ಪ್ರಕಟಣೆ ಹೊರಡಿಸಿ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅದಾನಿಗೆ 1 ಬಿಲಿಯನ್ ಆಸ್ಟ್ರೇಲಿಯಾದ ಡಾಲರ್ ಸಾಲ ನೀಡಬಾರದು ಎಂದು ಒತ್ತಾಯಿಸಿದೆ.
ಇದನ್ನೂ ಓದಿ; ಕಲ್ಲಿದ್ದಲು ಪೂರೈಕೆ ಗುತ್ತಿಗೆಗಾಗಿ ಟೆಂಡರ್ ತಿದ್ದಿದ ಆರೋಪ: ಗೌತಮ್ ಅದಾನಿ ಕಂಪನಿ ವಿರುದ್ಧ FIR


