ನಟಿ ಪ್ರಿಯಾಂಕಾ ಚೋಪ್ರಾ ರೈತರ ಪ್ರತಿಭಟನೆಗೆ ಬೆಂಬಲ ನೀಡಿದ್ದು, ಟ್ವಿಟ್ಟರ್‌ನಲ್ಲಿ ಗಾಯಕ-ನಟ ದಿಲ್‌ಜಿತ್ ದೋಸಾಂಜ್ ಅವರ ಟ್ವೀಟ್ ಅನ್ನು ಅನುಮೋದಿಸಿ, ಕೇಂದ್ರದ ಹೊಸ ಕೃಷಿ ಕಾನೂನುಗಳ ಬಗ್ಗೆ ತಮ್ಮ ಕಳವಳವ ವ್ಯಕ್ತಪಡಿಸಿ ಸಮಸ್ಯೆಯನ್ನು ತುರ್ತಾಗಿ ಪರಿಹರಿಸಬೇಕೆಂದು ಕರೆ ನೀಡಿದರು.
ಕೇಂದ್ರದ ಬಿಜೆಪಿ ನೇತೃತ್ವದ ಸರ್ಕಾರವು ಜಾರಿಗೆ ತಂದಿರುವ ರೈತ ವಿರೋಧಿ ಕಾನೂನುಗಳ ವಿರುದ್ದ ರೈತರು ನಡೆಸುತ್ತಿರುವ ದೆಹಲಿ ಚಲೋ ಆಂದೋಲನ ಇಂದಿಗೆ 12 ನೇ ದಿನಕ್ಕೆ ಕಾಲಿಟ್ಟಿದ್ದು ವಿಶ್ವದಾದ್ಯಂತ ಭಾರಿ ಜನಬೆಂಬಲ ವ್ಯಕ್ತವಾಗಿದೆ. ರೈತರೊಂದಿಗೆ ಕೇಂದ್ರ ಸರ್ಕಾರವು ಇದುವರೆಗೂ ಐದು ಸುತ್ತಿನ ಮಾತುಕತೆ ನಡೆಸಿದೆಯಾದರೂ ಎಲ್ಲವು ವಿಫಲವಾಗಿದೆ. ತಮ್ಮ ಬೇಡಿಕೆಗಳನ್ನು ಈಡೇರಿಸದ ಕೇಂದ್ರದ ವಿರುದ್ದ ರೈತರು ಡಿಸೆಂಬರ್ 8 ರಂದು ಅಖಿಲ ಭಾರತ ಮುಷ್ಕರಕ್ಕೆ ಕರೆ ನೀಡಿದ್ದು ದೇಶದಾದ್ಯಂತ ಭಾರಿ ಜನಬೆಂಬಲ ಪಡೆದಿದೆ.
ಇದನ್ನೂ ಓದಿ: ಹೋರಾಟನಿರತ ರೈತರ ಸ್ಪೆಟರ್, ಹೊದಿಕೆಗಾಗಿ 1 ಕೋಟಿ ರೂ. ದೇಣಿಗೆ ನೀಡಿದ ಗಾಯಕ ದಿಲ್ಜಿತ್ ದೋಸಂಜ್
ರೈತ ಹೋರಾಟದ ಹಿನ್ನಲೆಯಲ್ಲಿ ಭಾರಿ ಸುದ್ದಿಯಲ್ಲಿರುವ ಪಂಜಾಬಿ ನಟ-ಗಾಯಕ ದಿಲ್‌ಜಿತ್ ದೊಸಾಂಜ್, ರೈತರ ಹೋರಾಟದ ಪರವಾಗಿ ಏಕತೆಯ ಬಗ್ಗೆ ಪಂಜಾಬಿ ಭಾಷೆಯಲ್ಲಿ ಟ್ವೀಟ್ ಮಾಡಿದ್ದರು. ಇದನ್ನು ರೀಟ್ವೀಟ್ ಮಾಡಿರುವ ನಟಿ ಪ್ರಿಯಾಂಕ ಚೋಪ್ರಾ, “ನಮ್ಮ ರೈತರು ಭಾರತದ ಆಹಾರ ಸೈನಿಕರು. ಅವರ ಆತಂಕಗಳನ್ನು ನಿವಾರಿಸಬೇಕಾಗಿದೆ. ಅವರ ಆಶಯಗಳನ್ನು ಈಡೇರಿಸಬೇಕಾಗಿದೆ. ಪ್ರವರ್ಧಮಾನಕ್ಕೆ ಬರುತ್ತಿರುವ ಪ್ರಜಾಪ್ರಭುತ್ವವಾಗಿ, ಈ ಬಿಕ್ಕಟ್ಟುಗಳು ಶೀಘ್ರದಲ್ಲೇ ಬಗೆಹರಿಯುವುದನ್ನು ನಾವು ಖಚಿತಪಡಿಸಿಕೊಳ್ಳಬೇಕು” ಎಂದು ಬರೆದಿದ್ದಾರೆ.
Our farmers are India’s Food Soldiers. Their fears need to be allayed. Their hopes need to be met. As a thriving democracy, we must ensure that this crises is resolved sooner than later. https://t.co/PDOD0AIeFv
— PRIYANKA (@priyankachopra) December 6, 2020
ಸರ್ಕಾರದ ಪರವಿರುವವರ ಹಾಗೂ ಕೋಮುವಾದಿಗಳ ಪ್ರತಿಕಾರಕ್ಕೆ ಒಳಗಾಗುತ್ತೇವೆ ಎಂಬ ಭಯಕ್ಕೆ ಸಾರ್ವಜನಿಕ ಜೀವನದಲ್ಲಿರುವ ಜನಪ್ರಿಯ ವ್ಯಕ್ತಿಗಳು ಸರ್ಕಾರದ ಬಗ್ಗೆ ಅಥವಾ ರಾಜಕೀಯದ ಬಗ್ಗೆ ಯಾವುದೇ ನಿಲುವು ವ್ಯಕ್ತಪಡಿಸದೆ ಇರುವ ಪ್ರವೃತ್ತಿಯನ್ನು ಹೆಚ್ಚಿಸಿದ್ದಾರೆ.
ಕಳೆದ ವಾರದದಿಂದ ದಿಲ್‌ಜಿಲ್ ದೋಸಾಂಜ್ ಮತ್ತು ನಟಿ ಕಂಗನಾ ರಾಣಾವತ್ ಅವರ ನಡುವೆ ಟ್ವಿಟ್ಟರ್‌ನಲ್ಲಿ ಭಾರಿ ವಾದ ಪ್ರತಿವಾದಗಳು ನಡೆಯುತ್ತಿದೆ. ನಟಿ ಕಂಗನಾ ರಾಣಾವತ್ ಆಡಳಿತಾರೂಡ ಬಿಜೆಪಿಯ ತೀವ್ರ ಬೆಂಬಲಿಗರಾಗಿದ್ದು ರೈತರ ವಿರುದ್ಧ ವಾಗ್ದಾಳಿ ನಡೆಸಿದ್ದರು. ಇದಕ್ಕೆ ದಿಲ್‌ಜಿತ್ ಪ್ರತ್ಯುತ್ತರ ನೀಡಿ ನೆಟ್ಟಿಗರ ಮನಗೆದ್ದಿದ್ದರು.
ಇದನ್ನೂ ಓದಿ: ರೈತರ ಬಗ್ಗೆ ಅವಹೇಳನಕಾರಿ ಟ್ವೀಟ್: ನಟಿ ಕಂಗನಾಗೆ ಮತ್ತೊಂದು ಲೀಗಲ್ ನೋಟಿಸ್


