ದೆಹಲಿಯಲ್ಲಿ ಅನ್ನದಾತ ರೈತರು ನಡೆಸುತ್ತಿರುವ ಧಿರೋಧಾತ್ತ ಹೋರಾಟ ಸತತ 12 ನೇ ದಿನಕ್ಕೆ ಕಾಲಿಟ್ಟಿದೆ. ವಿವಾದಾತ್ಮಕ ಕೃಷಿ ಕಾಯ್ದೆಗಳು ರೈತರನ್ನು ಬೀದಿಗೆ ತಳ್ಳಲ್ಲಿದ್ದು ಅವುಗಳನ್ನು ಸರ್ಕಾರ ಹಿಂಪಡೆಯದಿದ್ದರೆ ಹೋರಾಟ ನಿಲ್ಲಿಸುವ ಪ್ರಶ್ನೆಯೇ ಇಲ್ಲ ಎಂದು ರೈತರು ಪಣ ತೊಟ್ಟಿದ್ದಾರೆ. ಇನ್ನೊಂದೆಡೆ ಸರ್ಕಾರ ಕಾಯ್ದೆಗಳಲ್ಲಿ ಬದಲಾವಣೆ ತರುತ್ತೇವೆಯೇ ಹೊರತು ಹಿಂಪಡೆಯುವುದಿಲ್ಲ ಎಂದು ಹಠ ಹಿಡಿದಿದೆ ಮಾತ್ರವಲ್ಲ ರೈತರ ಮೇಲೆ ತೀವ್ರ ಹಲ್ಲೆ ನಡೆಸಿ ಹೋರಾಟ ದಮನಗೊಳಿಸಲು ಮುಂದಾಗಿದೆ.
ರೈತರು ನಡೆಸುತ್ತಿರುವ ಹೋರಾಟಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ದೆಹಲಿಯಲ್ಲಿ ಹೋರಾಟನಿರತ ರೈತರನ್ನು ಬೆಂಬಲಿಸಿ ದೇಶ ವಿದೇಶಗಳಲ್ಲಿ ಸಾವಿರಾರು ಪ್ರತಿಭಟನೆಗಳು ದಾಖಲಾಗಿವೆ. ಸಾಮಾಜಿಕ ಜಾಲತಾಣದಲ್ಲಿ ನಿತ್ಯ ನಿರಂತರ ಬೆಂಬಲ ಹರಿದು ಬರುತ್ತಿದೆ. ಎಲೆಕ್ಟ್ರಾನಿಕ್ ಮಾಧ್ಯಮಗಳು ಸರ್ಕಾರದ ಪರ ಇದ್ದಾವೆ ಎಂಬ ಆರೋಪ ದಟ್ಟವಾಗಿ ಕೇಳಿಬಂದಿದೆ. ಆದರೆ ಮುದ್ರಣ ಮಾಧ್ಯಮಗಳು ರೈತರ ಹೋರಾಟವನ್ನು ಜನರಿಗೆ ಮುಟ್ಟಿಸಿವೆ. ಕಾರ್ಟೂನಿಸ್ಟ್‌ಗಳ ರೈತರ ಸಂಕಷ್ಟಗಳನ್ನು ಚಿತ್ರರೂಪದಲ್ಲಿ ವ್ಯಕ್ತಪಡಿಸಿದ್ದಾರೆ. ಕೆಲವು ಫೋಟೊ ಜರ್ನಲಿಸ್ಟ್‌ಗಳು ಹೋರಾಟದ ಕಿಚ್ಚಿನ ಫೋಟೊಗಳನ್ನು ಸೆರೆಹಿಡಿದಿದ್ದಾರೆ. ವೈರಲ್ ಆದ ಚಿತ್ರಗಳು, ಟ್ವೀಟ್‌ಗಳು ಇಲ್ಲಿವೆ ನೋಡಿ.

ಗಂಧಾಮದನ್ ಎಂಬುವವರು ಬಿಡಿಸಿರುವ ಚಿತ್ರ ಹೇಗೆ ಮೋದಿ ಸರ್ಕಾರ ರೈತರನ್ನು ಒದೆಯುತ್ತಿದೆ ಮತ್ತು ಆ ಮೂಲಕ ತಾನೂ ಪ್ರಪಾತಕ್ಕೆ ಬೀಳಲಿದೆ ಎಂಬುದನ್ನು ಪರಿಣಾಮಕಾರಿಯಾಗಿ ತಿಳಿಸುತ್ತದೆ. ಇದು ನಿನ್ನೆ ಮತ್ತು ಇಂದು ಲಕ್ಷಾಂತರ ಸಂಖ್ಯೆಯಲ್ಲಿ ಷೇರ್ ಆಗಿದೆ.

ಮಿರ್ ಸುಹೈಲ್ ಎಂಬುವವರು ಹೇಗೆ ಭಾರತೀಯ ಮಾಧ್ಯಮಗಳು ಹೋರಾಟನಿರತ ರೈತರನ್ನು ಭಯೋತ್ಪಾದಕರಂತೆ ಬಿಂಬಿಸುತ್ತಿವೆ ಎಂದು ಈ ಚಿತ್ರದ ಮೂಲಕ ತಿಳಿಸಿಕೊಟ್ಟಿದ್ದಾರೆ. ಕೆಲ ಬಿಜೆಪಿ ನಾಯಕರು ರೈತರನ್ನು ಖಲಿಸ್ತಾನಿಗಳು, ಭಯೋತ್ಪಾದಕರು ಎಂದು ಕರೆದಿದ್ದನ್ನೇ ಈ ಮಾಧ್ಯಮಗಳು ಹೇಗೆ ದಿನವಿಡೀ ತೋರಿಸಿ ರೈತರಿಗೆ ದ್ರೋಹ ಬಗೆದರು ಎಂಬುದಕ್ಕೆ ಈ ಚಿತ್ರಕ್ಕಿಂತ ಮತ್ತೊಂದು ಉದಾಹರಣೆ ಬೇಕಿಲ್ಲ. ವಾಸ್ತವದಲ್ಲಿ ಹೆಗಲ ಮೇಲೆ ನೇಗಿಲ ಹೊತ್ತ ರೈತರನ್ನು ಮಾಧ್ಯಮಗಳು ಹೆಗಲಮೇಲೆ ಬಂದೂಕು ಹೊತ್ತಿರುವಂತೆ ಚಿತ್ರಿಸುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಲಾಗಿದೆ.
India cares for farmers! #FarmersProtest pic.twitter.com/boFL0hTHU2
— Satish Acharya (@satishacharya) December 5, 2020
ದೇಶ-ವಿದೇಶಗಳಲ್ಲಿ ಹೆಸರು ಗಳಿಸಿರುವ ಕರ್ನಾಟಕದ ಖ್ಯಾತ ವ್ಯಂಗ್ಯಚಿತ್ರಕಾರ ಸತೀಶ್ ಆಚಾರ್ಯ ಮನ ಮಿಡಿಯುವ ಹತ್ತಾರು ಕಾರ್ಟೂನ್‌ಗಳನ್ನು ರಚಿಸಿದ್ದಾರೆ. ಅದರಲ್ಲಿ ಚಳಿಯಲ್ಲಿ ನಡುಗುತ್ತಾ ಹೋರಾಟದಲ್ಲಿ ತೊಡಗಿರುವ ರೈತರ ಬಗೆ ಇಡೀ ಭಾರತ ಹೇಗೆ ಕಾಳಜಿವಹಿಸುತ್ತದೆ ಎಂದು ಬಿಂಬಿಸುವ ಚಿತ್ರವನ್ನು ಸಾವಿರಾರು ಜನ ಹಂಚಿಕೊಂಡಿದ್ದಾರೆ.
This cartoon received some abuses, some hate but loads of LOVE. I strongly believe that eventually love will defeat hatred. #NewProfilePic pic.twitter.com/8ya404REuu
— Satish Acharya (@satishacharya) December 2, 2020
ಹೋರಾಟನಿರತ ರೈತರ ಮೇಲೆ ಪೊಲೀಸರು ಕ್ರೂರವಾಗಿ ಥಳಿಸಿ, ಜಲಫಿರಂಗಿ, ಅಶ್ರವಾಯು ಸಿಡಿಸಿದರೂ ರೈತರ ಹೃದಯ ಮಾತ್ರ ವಿಶಾಲವಾದುದು. ರೈತರು ಪೊಲೀಸರಿಗೂ ಅನ್ನ-ನೀರು ನೀಡಿ ಮಾನವೀಯತೆ ಮೆರದಿದ್ದಾರೆ ಎಂದು ತಿಳಿಸುವ ಸತೀಶ್ ಆಚಾರ್ಯರವರ ಚಿತ್ರ ಇದು.

ಕನ್ನಡದ ಪ್ರತಿಭಾವಂತ ವ್ಯಂಗ್ಯಚಿತ್ರಕಾರ ಪಿ ಮಹಮ್ಮದ್‌ರವರು ರೈತರ ಮೇಲೆ ದಾಳಿ ನಡೆಯುತ್ತಿದ್ದಾಗ ಮೋದಿ ಏನು ಮಾಡುತ್ತಿದ್ದರು ಎಂದು ಚಿತ್ರಿಸಿದ್ದಾರೆ.
Visuals from #FarmersProtest
❤️❤️❤️ pic.twitter.com/j00zKdvDuj— Md Asif Khan (@imMAK02) December 6, 2020
ಮುಸ್ಲಿಂ ರೈತರು ನಮಾಜ್ ಮಾಡುವಾಗ ಸಿಖ್ ಯುವಕರು ಗೋಡೆಯಾಗಿ ಅವರಿಗೆ ರಕ್ಷಣೆ ನೀಡಿದ್ದು.
#कल_भारत_बंद_रहेगा
India support farmers protest..?✌️??? pic.twitter.com/6VszUHAFc4— Happy Kaushal (@HappyKa07567769) December 7, 2020
ಗಾಯಗೊಂಡ ಸಿಂಹದ ರೀತಿ ರೈತರನ್ನು ಚಿತ್ರಸಿರುವುದು..
The many moods of Delhi #FarmersProtest pic.twitter.com/WcqVeCOrTp
— Govardhan Reddy ?️?️ (@Gvr203) December 7, 2020
— out of context aditi mittal (@awryaditi) November 28, 2020
Farmers cross all barriers imposed by @narendramodi
Super cartoon by Karnataka's P Mahamud @cartoonist_PM #DilliChalo #FarmersDilliChalo pic.twitter.com/5qigzZa6g3
— vinaysreenivasa ವಿನಯ (@vinaysreeni) November 27, 2020

ದಿ ಹಿಂದೂ ಪತ್ರಿಕೆಗಾಗಿ ಸುರೇಂದ್ರರವರು ರಚಿಸಿದ ಈ ಚಿತ್ರ ಸರ್ಕಾರದ ಕಾರ್ಯವೈಖರಿಯನ್ನು ಸಮಗ್ರವಾಗಿ ವಿಶ್ಲೇಷಿಸುತ್ತದೆ.
ಈ ರೀತಿಯ ಪರಿಣಾಮಕಾರಿ ರೈತ ಹೋರಾಟದ ಚಿತ್ರಗಳು ನಿಮ್ಮ ಗಮನಕ್ಕೆ ಬಂದಿದ್ದರೆ ಅದನ್ನು ಕಮೆಂಟ್ ಮಾಡಿ.
ಇದನ್ನೂ ಓದಿ; ರೈತರ ಹೋರಾಟವನ್ನು ಬೆಂಬಲಿಸಿದ ನಟಿ ಪ್ರಿಯಾಂಕಾ ಚೋಪ್ರಾ


