“ಪೆಟ್ರೋಲ್ ಬೆಲೆ ಏರಿಕೆಯ ಬಗ್ಗೆ ಸಾರ್ವಜನಿಕರಿಗೆ ಕಾಳಜಿಯಿಲ್ಲ, ಇದು ರಾಜ್ಯದ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ” ಎಂದು ಬಿಜೆಪಿಯ ಕೇರಳ ಘಟಕದ ಅಧ್ಯಕ್ಷ ಕೆ ಸುರೇಂದ್ರನ್ ಮಂಗಳವಾರ ಹೇಳಿದ್ದಾರೆ.
ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಸೋಮವಾರ ಸತತ ಆರನೇ ದಿನವೂ ಏರಿಕೆಯಾಗಿದ್ದು, ಪ್ರತಿ ಲೀಟರ್‌ಗೆ 26-30 ಪೈಸೆ ಏರಿಕೆಯಾಗಿದೆ.
ದೆಹಲಿಯಲ್ಲಿ ಪೆಟ್ರೋಲ್ ದರ ಲೀಟರ್‌ಗೆ 83.41 ರೂ.ಗಳಿಂದ, 83.71 ರೂ.ಗೆ ಏರಿಕೆಯಾಗಿದೆ. ಡೀಸೆಲ್ ಪ್ರತಿ ಲೀಟರ್‌ಗೆ 73.61 ರಿಂದ ರೂ. 73.87 ರೂಪಾಯಿಗೆ ಏರಿಕೆಯಾಗಿದೆ.
ಇದನ್ನೂ ಓದಿ: ಪಿಸ್ತೂಲ್-ಪೆಟ್ರೋಲ್-ಫಾರ್ಮಾ-ಡ್ರಗ್-ಡಾಲರ್ ಪ್ರಪಂಚವನ್ನು ನಿಯಂತ್ರಿಸುತ್ತಿರುವ ಪಂಚ ಅಸ್ತ್ರಗಳು!
ಕಾಂಗ್ರೆಸ್ ಪಕ್ಷವೇ ಬೆಲೆ ನಿಯಂತ್ರಣ ಪ್ರಾಧಿಕಾರವನ್ನು ತೈಲ ಕಂಪನಿಗಳಿಗೆ ಹಸ್ತಾಂತರಿಸಿದೆ ಎಂದು ಸುರೇಂದ್ರನ್ ಆರೋಪಿಸಿದ್ದಾರೆ.
“ದೇಶದಲ್ಲಿ ಇಂಧನ ದರ ಏರಿಕೆಯು ಸಾರ್ವಜನಿಕರ ಮೇಲೆ ಪರಿಣಾಮ ಬೀರುವುದಿಲ್ಲ ಮತ್ತು ಇದು ಚುನಾವಣೆಯಲ್ಲಿ ಪರಿಗಣಿಸಬಹುದಾದ ಒಂದು ಅಂಶವಲ್ಲ. ತೈಲ ಕಂಪನಿಗಳಿಗೆ ದರ ನಿರ್ಧರಿಸುವ ಅಧಿಕಾರವನ್ನು ಕಾಂಗ್ರೆಸ್ ಪಕ್ಷವೇ ನೀಡಿದ್ದು” ಎಂದು ಸುರೇಂದ್ರನ್ ಸುದ್ದಿಗಾರರಿಗೆ ತಿಳಿಸಿದರು.
ಮೂರು ಹಂತದ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಮೊದಲ ಹಂತದ ಚುನಾವಣೆ ಇಂದು ನಡೆಯುತ್ತಿದೆ. ಈ ಸಂದರ್ಭದಲ್ಲಿ ಅವರ ಅಭಿಪ್ರಾಯ ವ್ಯಕ್ತವಾಗಿದೆ.
ಇದನ್ನೂ ಓದಿ: ಮುಳುಗುತ್ತಿರುವ ಭಾರತ ಮತ್ತು ಅದರೊಳಗಿರುವ ನಾವು: ದೇವನೂರು ಮಹಾದೇವ
ಯುಪಿಎ ಆಳ್ವಿಕೆಯಲ್ಲಿ ಇಂಧನ ಬೆಲೆ ಏರಿಕೆಯ ವಿರುದ್ಧ ಸುರೇಂದ್ರನ್ ತನ್ನ ಸ್ಕೂಟರ್ ಅನ್ನು ತಳ್ಳಿಕೊಂಡು ಹೋಗಿ ಪ್ರತಿಭಟನೆ ಮಾಡಿದ್ದರ ಬಗ್ಗೆ ಕೇಳಿದಾಗ, “ಇಂದು ಇದನ್ನು ಮಾಡಲು ಪ್ರತಿಪಕ್ಷಗಳಲ್ಲಿ ಜನರಿದ್ದಾರೆ” ಎಂದು ಹೇಳಿದರು.
“ನಾನು ಪ್ರತಿಪಕ್ಷದಲ್ಲಿದ್ದಾಗ ಇಂಧನ ಬೆಲೆ ಏರಿಕೆಯ ಬಗ್ಗೆ ಪ್ರತಿಭಟನೆ ನಡೆಸಿದೆ. ಇದು ದೊಡ್ಡ ವಿಷಯವಲ್ಲ. ನಾವು ಪ್ರತಿಪಕ್ಷದಲ್ಲಿದ್ದಾಗ ಪ್ರತಿಭಟಿಸುತ್ತೇವೆ. ಇಂಧನ ಬೆಲೆಗಳ ಬಗ್ಗೆ ಸಾರ್ವಜನಿಕರು ತಲೆಕೆಡಿಸಿಕೊಳ್ಳುವುದಿಲ್ಲ. ನಾವು ಉಚಿತ ಅಕ್ಕಿ, ಅಡುಗೆ ಅನಿಲವನ್ನು ನೀಡುತ್ತಿದ್ದೇವೆ. ಅಗ್ಗದ ದರದಲ್ಲಿ ಔಷಧಿ, ಕಿಸಾನ್ ಸಮ್ಮಾನ್ ನಿಧಿ ಮತ್ತು ಸಾರ್ವಜನಿಕರಿಗೆ ಇತರ ಪ್ರಯೋಜನಗಳನ್ನು ಒದಗಿಸುತ್ತಿದ್ದೇವೆ. ಅದಕ್ಕಾಗಿಯೇ ನಾವು ದೇಶಾದ್ಯಂತ ಎಲ್ಲಾ ಚುನಾವಣೆಗಳನ್ನು ಗೆಲ್ಲುತ್ತಿದ್ದೇವೆ “ಎಂದು ಸುರೇಂದ್ರನ್ ಹೇಳಿದರು.
ಇದನ್ನೂ ಓದಿ: ಅತೀ ದೊಡ್ಡ ಮತ್ತು ವಿಶ್ವಾಸಾರ್ಹ ಸರ್ವೆ ಹೇಳುತ್ತಿದೆ: ಕೇಂದ್ರ ಸರ್ಕಾರದ ಸಾಧನೆ ಸಾಲದು
ಯುಪಿಎ ಆಳ್ವಿಕೆಯಲ್ಲಿ ದೇಶದಲ್ಲಿ ಪೆಟ್ರೋಲ್ ಬೆಲೆ 87 ರೂ. ಮತ್ತು ಈಗ ಅದು ಸುಮಾರು 83 ರೂ. ಇದೆ ಎಂದು ಸುರೇಂದ್ರನ್ ಹೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ಪತ್ರಕರ್ತರು, ಸರಿಯಾದ ಬೆಲೆ ಸುಮಾರು 67 ರೂ ಎಂದು ಹೇಳಿದಾಗ, ಸುರೇಂದ್ರನ್ ಅದನ್ನು ತಳ್ಳಿಹಾಕಿದರು. ಇದು ಕಾಂಗ್ರೆಸ್ ಮತ್ತು ಸಿಪಿಐ (ಎಂ) ನೀಡಿದ ಸಮರ್ಥನೆಯ ಭಾಗವಾಗಿದೆ ಎಂದು ಹೇಳಿದರು.
ಇದನ್ನೂ ಓದಿ: ಮದುವೆಯಲ್ಲಿ ಗಿಫ್ಟ್ ಬದಲು ಹೋರಾಟ ನಿರತ ರೈತರಿಗಾಗಿ ದೇಣಿಗೆ ಸಂಗ್ರಹಿಸಿದ ಕುಟುಂಬ!


