ಗೋವಾದ ಜಿಲ್ಲಾ ಪಂಚಾಯಿತಿಯ 49 ಸ್ಥಾನಗಳ ಚುನಾವಣಾ ಫಲಿತಾಂಶ ನಿನ್ನೆ ಹೊರಬಿದ್ದಿದ್ದು ಆಮ್ ಆದ್ಮಿ ಪಕ್ಷ ಖಾತೆ ತೆರಯುವಲ್ಲಿ ಯಶಸ್ವಿಯಾಗಿದೆ. ಇದು ಮುಂದಿನ ವರ್ಷ ನಡೆಯಲಿರುವ ರಾಜ್ಯದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ಯಶಸ್ಸಿನ ಹಸಿರು ನಿಶಾನೆ ಎಂದು ಆಪ್ ಘೋಷಿಸಿದೆ.
ಗೋವಾ ಜಿಲ್ಲಾ ಪಂಚಾಯಿತಿಯ 49 ಸ್ಥಾನಗಳಲ್ಲಿ ಬಿಜೆಪಿಯು 32 ಸ್ಥಾನಗಳನ್ನು ಗೆಲ್ಲುವ ಮೂಲಕ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಕಾಂಗ್ರೆಸ್ ಕೇವಲ ನಾಲ್ಕು ಸ್ಥಾನಗಳಿಗೆ ತೃಪ್ತಿಪಟ್ಟುಕೊಂಡಿದೆ. ಮಹಾರಾಷ್ಟ್ರವಾದಿ ಗೋಮಾಂತಕ್ ಪಕ್ಷವು 3 ಸ್ಥಾನಗಳಲ್ಲಿ ಗೆದ್ದರೆ ಎನ್‌ಸಿಪಿ, ಆಪ್ ತಲಾ ಒಂದು ಸ್ಥಾನ ಪಡೆದಿವೆ. 7 ಸ್ಥಾನಗಳಲ್ಲಿ ಪಕ್ಷೇತರ ಅಭ್ಯರ್ಥಿಗಳು ಜಯಗಳಿಸಿದ್ದಾರೆ.

ದಕ್ಷಿಣ ಗೋವಾದ ಬೆನೌಲಿಮ್ ಸ್ಥಾನವನ್ನು ಆಪ್‌ನ ಹ್ಯಾನ್ಜೆಲ್ ಫರ್ನಾಂಡಿಸ್ ಗೆಲ್ಲುವ ಮೂಲಕ ರಾಜ್ಯದಲ್ಲಿ ಆಪ್ ಖಾತೆ ತೆರೆಯಲು ನೆರವಾಗಿದ್ದಾರೆ.
Victory Celebration in Goa as @AAPGoa wins its first seat in ZP election.
Congratulations to Hanzel Fernandes and @AAPGoa. This is just the beginning. pic.twitter.com/o24AfAN43i
— AAP (@AamAadmiParty) December 14, 2020
“ಗೋವಾದಲ್ಲಿ ಬೆನೌಲಿಮ್ ಜಿಲ್ಲಾ ಪಂಚಾಯತ್ ಸ್ಥಾನವನ್ನು ಗೆದ್ದ ಎಎಪಿಯ ಹ್ಯಾನ್ಜೆಲ್ ಫರ್ನಾಂಡಿಸ್ ಅವರಿಗೆ ಅಭಿನಂದನೆಗಳು. ಇತರ ಅನೇಕ ಎಎಪಿ ಅಭ್ಯರ್ಥಿಗಳು ಕಳೆದ ಬಾರಿಗಿಂತ ಹೆಚ್ಚಿನ ಮತಗಳನ್ನು ಪಡೆದಿದ್ದಾರೆ. ಇದು ಕೇವಲ ಪ್ರಾರಂಭ. ಎಎಪಿ ಗೋವಾನ್ನರ ನಂಬಿಕೆ ಮತ್ತು ನಿರೀಕ್ಷೆಗಳಿಗೆ ತಕ್ಕಂತೆ ಕೆಲಸ ಮಾಡಲಿದೆ ಎಂದು ನನಗೆ ಖಾತ್ರಿಯಿದೆ ”ಎಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ.
Congratulations to AAP's Hanzel Fernandes on winning the Benaulim ZP seat in Goa. Many other AAP candidates have secured much higher vote share than last time.
This is just the beginning. I am sure AAP will live up to the trust and expectations of Goans. https://t.co/LIsEwrEGTq
— Arvind Kejriwal (@ArvindKejriwal) December 14, 2020
“ಆಪ್ ನಾಯಕತ್ವ ಮತ್ತು ಸ್ವಯಂಸೇವಕರು ಹೆಚ್ಚು ಶ್ರಮವಹಿಸಿ ಮತದಾರರ ನಿರೀಕ್ಷೆಗಳನ್ನು ಈಡೇರಿಸಲು ಮತ್ತು ಅವರ ಹೃದಯವನ್ನು ಗೆಲ್ಲಲು ಪ್ರಯತ್ನಿಸಿದ್ದಾರೆ. ಗೋವಾದಲ್ಲಿ ಎಎಪಿಗೆ ತಮ್ಮ ಮೊದಲ ಜಯವನ್ನು ನೀಡಿದಕ್ಕಾಗಿ ಬೆನೌಲಿಮ್ ಜನರಿಗೆ, ಧನ್ಯವಾದಗಳು. ಎಎಪಿ ಗೋವಾ ಮತ್ತು ಗೋವಾನ್ನರಿಗಾಗಿ ಕೆಲಸ ಮಾಡುತ್ತದೆ ”ಎಂದು ಎಎಪಿಯ ಗೋವಾ ಸಂಚಾಲಕ ರಾಹುಲ್ ಮಾಂಬ್ರೆ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: ಬಾಯ್ಕಾಟ್ ಜಿಯೋ ಅಭಿಯಾನ: ಏರ್‌ಟೆಲ್, ವೊಡಾಫೋನ್ ವಿರುದ್ಧ ದೂರು ನೀಡಿದ ಜಿಯೋ!


