ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯ (ಏಮ್ಸ್) ನರ್ಸಿಂಗ್ ನೌಕರರು ತಮ್ಮ ದೀರ್ಘಕಾಲದ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ನಿನ್ನೆಯಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಕುರಿತು ಕೋರ್ಟ್ ಮೆಟ್ಟಿಲೇರಿದ ಆಸ್ಪತ್ರೆ, ಮುಷ್ಕರವನ್ನು ಕೊನೆಗೊಳಿಸುವಂತೆ ಮನವಿ ಸಲ್ಲಿಸಿತ್ತು.
ಇದಕ್ಕೆ ಸಂಬಂಧಿಸಿದಂತೆ ದೆಹಲಿಯ ಹೈಕೋರ್ಟ್, ‘ಮುಂದಿನ ಆದೇಶದವರೆಗೆ ಮುಷ್ಕರ ನಡೆಸುವುದನ್ನು ತಡೆಯಲಾಗುವುದು ಮತ್ತು ಆಸ್ಪತ್ರೆಯ ಮನವಿಗೆ ಸ್ಪಂದಿಸಿ’ ಎಂದು ಪ್ರತಿಭಟನಾಕಾರರಿಗೆ ನೋಟಿಸ್ ನೀಡಿದೆ.
ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಮುಷ್ಕರವನ್ನು ಕೊನೆಗೊಳಿಸಬೇಕು ಆಸ್ಪತ್ರೆ ಕೇಳಿಕೊಂಡಿತ್ತು. ಜೊತೆಗೆ ಇದನ್ನು ಕಾನೂನುಬಾಹಿರ ಎಂದು ಕರೆದು, ಕೈಗಾರಿಕಾ ವಿವಾದ ಕಾಯ್ದೆಯನ್ನು ಉಲ್ಲಂಘಿಸಿದೆ ಎಂದು ಹೇಳಿತ್ತು.
ಇದನ್ನೂ ಓದಿ: ರಜನಿಯ ಹೊಸ ರಾಜಕೀಯ ಪಕ್ಷದ ಹೆಸರು ಮಕ್ಕಳ್ ಸೇವೈ ಕಚ್ಚಿ? ಚಿಹ್ನೆ ಆಟೋ ರಿಕ್ಷಾ?
ಆಸ್ಪತ್ರೆಯ ವಿವಾದಗಳನ್ನು ಗಮನಿಸಿದ ನ್ಯಾಯಮೂರ್ತಿ ನವೀನ್ ಚಾವ್ಲಾ ಅವರ ಏಕ-ಸದಸ್ಯ ನ್ಯಾಯಪೀಠವು “ನರ್ಸಿಂಗ್ ನೌಕರರ ಬೇಡಿಕೆಗಳನ್ನು ಆಸ್ಪತ್ರೆಯು ಪರಿಗಣಿಸುತ್ತಿದೆ. ಆದರೆ ಸಧ್ಯಕ್ಕೆ, ಮುಂದಿನ ಆದೇಶದವರೆಗೆ ಮುಷ್ಕರವನ್ನು ಮುಂದುವರಿಸುವುದನ್ನು ತಡೆಯಲಾಗುತ್ತಿದೆ” ಎಂದು ಹೇಳಿದರು.
ಆಸ್ಪತ್ರೆ ಇಂದು ಸಂಜೆ ದಾದಿಯರನ್ನು ಮಾತುಕತೆಗೆ ಕರೆದಿದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.
ಏಮ್ಸ್‌ನ 5000 ನರ್ಸ್ ಸಿಬ್ಬಂದಿ, ವೇತನ ಹೆಚ್ಚಳ ಸೇರಿದಂತೆ ತಮ್ಮ ದೀರ್ಘಕಾಲದ 23 ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದ್ದಾರೆ. ಪ್ರಧಾನ ವೈದ್ಯಕೀಯ ಸಂಸ್ಥೆಯ ಉದ್ಯೋಗದ ನಿಯಮಗಳನ್ನು ಖಾಯಂ ಕೆಲಸದಿಂದ ಗುತ್ತಿಗೆ ಆಧಾರಕ್ಕೆ ಪರಿವರ್ತಿಸಿದೆ ಎಂದು ಹೋರಾಟಗಾರರು ಆರೋಪಿಸಿದ್ದಾರೆ.
ಇದನ್ನೂ ಓದಿ: ರಾಮ ಸಮಾಜವಾದಿ ಪಕ್ಷಕ್ಕೆ ಸೇರಿದವ, ನಾವು ರಾಮ ಭಕ್ತರು: ಅಖಿಲೇಶ್ ಯಾದವ್
“ಕೊರೊನಾ ಅವಧಿಯಲ್ಲಿ ಮಾಡಿದ ಅದ್ಭುತ ಸೇವೆಗಾಗಿ ಏಮ್ಸ್ ಕುಟುಂಬದ ಬಗ್ಗೆ ನನಗೆ ತುಂಬಾ ಹೆಮ್ಮೆ ಇದೆ. ರಾಷ್ಟ್ರವೂ ಹೆಮ್ಮೆಪಡುತ್ತದೆ. ದುರದೃಷ್ಟವಶಾತ್, ಈ ಸಾಂಕ್ರಾಮಿಕ ಸಮಯದಲ್ಲಿ, ನರ್ಸಿಂಗ್ ನೌಕರರ ಸಂಘವು ಮುಷ್ಕರ ನಡೆಸುತ್ತಿದೆ. ಒಕ್ಕೂಟವು ಮಂಡಿಸಿರುವ 23 ಬೇಡಿಕೆಗಳಲ್ಲಿ ಬಹುತೇಕ ಎಲ್ಲಾ ಬೇಡಿಕೆಗಳನ್ನು ಏಮ್ಸ್ ಆಡಳಿತ ಮತ್ತು ಸರ್ಕಾರ ಈಡೇರಿಸಿದೆ” ಎಂದು ಏಮ್ಸ್ ನಿರ್ದೇಶಕ ಪ್ರೊ.ರಂದೀಪ್ ಗುಲೇರಿಯಾ ಏಮ್ಸ್ ನರ್ಸಸ್ ಯೂನಿಯನ್‌ಗೆ ವೀಡಿಯೊ ಸಂದೇಶದಲ್ಲಿ ತಿಳಿಸಿದ್ದರು.
“ಆದರೆ, ಏಮ್ಸ್ ನರ್ಸ್‌ಗಳು ಈ ಬೇಡಿಕೆಗಳನ್ನು ಬಹಳ ಸಮಯದಿಂದ ಮುಂದಿಡುತ್ತಿದ್ದಾರೆ ಎಂದು ಯೂನಿಯನ್‌ನ ವಕ್ತಾರರು ತಿಳಿಸಿದ್ದಾರೆ. ಕಳೆದ ವರ್ಷ, ಸರ್ಕಾರವು ಅವರನ್ನು ಸಭೆಗೆ ಕರೆದು ಅವರ ಸಮಸ್ಯೆಗಳಿಗೆ ಪರಿಹಾರವನ್ನು ನೀಡುವ ಭರವಸೆ ನೀಡಿದ್ದರು” ಎಂದಿದ್ದಾರೆ.
ಇದನ್ನೂ ಓದಿ: ಹೋರಾಟನಿರತ ರೈತರನ್ನು ವಿರೋಧ ಪಕ್ಷಗಳು ದಾರಿ ತಪ್ಪಿಸುತ್ತಿವೆ: ನರೇಂದ್ರ ಮೋದಿ
“ಪ್ರೊಫೆಸರ್ ರಂದೀಪ್ ಗುಲೇರಿಯಾ ಅವರ ಬಗ್ಗೆ ನಮಗೆ ಅತ್ಯಂತ ಗೌರವವಿದೆ. ಆದರೆ ನಮ್ಮ ಎಲ್ಲ ಬೇಡಿಕೆಗಳನ್ನು ಈಗಾಗಲೇ ಈಡೇರಿಸಲಾಗಿದೆ ಎಂದು ಅವರು ಹೇಳಿದ್ದಾರೆ. ಹಾಗಾದರೆ ಈಗೀನ ಈ ಎಲ್ಲಾ ಭರವಸೆಗಳು ಯಾವುವು..?” ಎಂದು ಪ್ರಶ್ನೆ ಮಾಡಿದ್ದಾರೆ.
ಇದನ್ನೂ ಓದಿ: ಕಸ್ತೂರ್‌ಬಾ vs ಗಾಂಧಿ ಪುಸ್ತಕದ ಆಯ್ದ ಅಧ್ಯಾಯ: ಕಷ್ಟವಾದರೂ ಇಷ್ಟಪಟ್ಟು ಬದುಕಿದ ಕಸ್ತೂರ್‌ಬಾ ಗಾಂಧಿ…
“6 ನೇ ವೇತನ ಆಯೋಗದ ಶಿಫಾರಸುಗಳ ಬಗ್ಗೆ ನರ್ಸ್‌ಗಳಲ್ಲಿ ತಪ್ಪು ಭಾವನೆ ಇದೆ. ಇದರ ಬಗ್ಗೆ ಒಕ್ಕೂಟದೊಂದಿಗೆ ಅನೇಕ ಸಭೆಗಳನ್ನು ನಡೆಸಿ, ವಿವರಿಸಲಾಗಿದೆ. ಅದೇನೇ ಇದ್ದರೂ, ಅವರ ಬೇಡಿಕೆಗಳನ್ನು ಸಹಾನುಭೂತಿಯಿಂದ ಮತ್ತೆ ಹೊಸದಾಗಿ ಪರಿಗಣಿಸಲು ಸರ್ಕಾರ ಸಿದ್ಧವಿದೆ ಎಂದು ಗುಲೇರಿಯಾ ಹೇಳಿದ್ದಾರೆ.
“ಆದಾಗ್ಯೂ, ಒಂದು ದೇಶವು ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡುತ್ತಿರುವಾಗ, ನರ್ಸ್ ಯೂನಿಯನ್ ಮುಷ್ಕರ ನಡೆಸಲು ನಿರ್ಧರಿಸಿದೆ ಎಂಬುದು ಸೂಕ್ತವಲ್ಲವೆಂದು ತೋರುತ್ತದೆ. ನಿಮ್ಮೆಲ್ಲರಿಗೂ ಕೆಲಸಕ್ಕೆ ಮರಳಲು ಮತ್ತು ನಮಗೆ ಸಹಾಯ ಮಾಡಿ ಎಂದು ನಾನು ಮನವಿ ಮಾಡುತ್ತೇನೆ” ಎಂದು ಪ್ರೊಫೆಸರ್ ಗುಲೇರಿಯಾ ಮನವಿ ಮಾಡಿದ್ದಾರೆ.
ಇದನ್ನೂ ಓದಿ: ರಿಪಬ್ಲಿಕ್ ಟಿವಿ ಸಿಇಒ ವಿಕಾಸ್ ಖಂಚಂದಾನಿಗೆ 14 ದಿನಗಳ ನ್ಯಾಯಾಂಗ ಬಂಧನ


