ಕೇಂದ್ರದ ಕೃಷಿ ಕಾನೂನಗಳನ್ನು ವಿರೊಧಿಸಿ ಸಿಂಘು ಗಡಿಯಲ್ಲಿ ಪ್ರತಿಭಟನೆ ಮಾಡುತ್ತಿರುವ ರೈತರಿಗೆ ಬೆಂಬಲ ಸೂಚಿಸಿ ಬ್ಯಾಸ್ಕೆಟ್ ಬಾಲ್ ಆಟಗಾರ ಸತ್ನಂ ಸಿಂಗ್ ಹೋರಾಟಕ್ಕೆ ಸೇರಿಕೊಂಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಎಎನ್‌ಐ, “ಸಿಂಘು ಗಡಿಯಲ್ಲಿ ರೈತರ ಪ್ರತಿಭಟನೆಗೆ ಬಾಸ್ಕೆಟ್‌ಬಾಲ್ ಆಟಗಾರ ಸತ್ನಂ ಸಿಂಗ್ ಸೇರಿಕೊಂಡಿದ್ದಾರೆ. ‘ನಾವು ರೈತರೊಂದಿಗೆ ನಿಲ್ಲುತ್ತೇವೆ. ಅವರಿಗೆ ಸೇವೆ ಸಲ್ಲಿಸಲು ಬಂದಿದ್ದೇವೆ. ಆದ್ದರಿಂದ ಅವರಿಗೆ ಯಾವುದೇ ಸಮಸ್ಯೆಗಳು ಎದುರಾಗುವುದಿಲ್ಲ’ ಎಂದು ಸತ್ನಂ ಸಿಂಗ್ ಹೇಳಿದ್ದಾರೆ ಎಂಬುದಾಗಿ ವರದಿ ಮಾಡಿದೆ.
ಇದನ್ನೂ ಓದಿ: ಜಗತ್ ಪ್ರಸಿದ್ಧ ಪ್ರತಿರೋಧದ ಹಾಡು! – ರೈತರ ಹೋರಾಟದಲ್ಲೂ ಪ್ರತಿಧ್ವನಿಸಿದ ‘ಬೆಲ್ಲಾ ಚಾವ್’
Delhi: Basketball player Satnam Singh joins farmers' protest at Singhu border. "We stand with farmers. We have come to offer our services so they don't face any problems," he says. (ANI)#FarmersProtest https://t.co/IZ0FhKhoO6 pic.twitter.com/03yQB0uVIU
— Janta Ka Reporter (@JantaKaReporter) December 24, 2020
ಇದನ್ನೂ ಓದಿ: ಐತಿಹಾಸಿಕ ರೈತ ಹೋರಾಟದೊಂದಿಗೆ ಕೈಜೋಡಿಸಿದ ದೊಡ್ಡ ಸಂಖ್ಯೆಯ ಕೃಷಿ ಕಾರ್ಮಿಕರು!
ರೈತ ಹೋರಾಟವನ್ನು ಬೆಂಬಲಿಸಿ ಈ ಹಿಂದೆ ಅಕಾಲಿ ದಳದ ಹರ್ಸಿಮೃತ್ ಕೌರ್ ಎನ್‌ಡಿಎ ಮೈತ್ರಿಕೂಟಕ್ಕೆ ಮತ್ತು ಕೇಂದ್ರ ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಿದ್ದರು. ಪಂಜಾಬಿನ ಹತ್ತಾರು ನಟರು, ಹಾಡುಗಾರರು, ಚಿತ್ರ ನಿರ್ಮಾಪಕರು, ಕ್ರೀಡಾ ಪಟುಗಳು, ಸೈನಿಕರು, ಕಾರ್ಮಿಕರು ಸೇರಿದಂತೆ ಸಾವಿರಾರು ಜನರು ಬೆಂಬಲ ಸೂಚಿಸಿದ್ದಾರೆ.
ದೆಹಲಿ ಮತ್ತು ಹರಿಯಾಣ ಗಡಿಯಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆ 29 ನೇ ದಿನಕ್ಕೆ ಕಾಲಿಟ್ಟಿದ್ದು, ಕೇಂದ್ರ ಸರ್ಕಾರದ ಕೃಷಿ ಕಾನೂನುಗಳ ತಮ್ಮ ವಿರೋಧವನ್ನು ಇನ್ನಷ್ಟು ತೀವ್ರಗೊಳಿಸುವ ಉದ್ದೇಶದಿಂದ ಇತ್ತೀಚೆಗೆ ದೇಶದಾದ್ಯಂತ ಉಪವಾಸಕ್ಕೆ ಕರೆ ನೀಡಿದ್ದರು.
ಇದನ್ನೂ ಓದಿ: ಕಂಪೆನಿ ಹಠಮಾರಿ ದೋರಣೆ ಕೈಬಿಡದಿದ್ದರೆ ನಾನೇ ಹೋರಾಟಕ್ಕಿಳಿಯುತ್ತೇನೆ: ಟೊಯೊಟಾ ಕಾರ್ಮಿಕರ ಬೆಂಬಲಕ್ಕೆ ಡಿಕೆ. ಸುರೇಶ್
ಕೃಷಿ ಕಾನೂನುಗಳಿಗೆ ಸಂಬಂಧಿಸಿದಂತೆ ರೈತರು ಮತ್ತು ಕೇಂದ್ರ ಸರ್ಕಾರದ ನಡುವೆ ಹಲವು ಸುತ್ತಿನ ಮಾತುಕತೆಗಳು ನಡೆದಿದ್ದರೂ ಅವುಗಳೆಲ್ಲಾ ವಿಫಲವಾಗಿವೆ. ಇತ್ತೀಚೆಗೆ ಈ ವಿಷಯವನ್ನು ಕೈಗೆತ್ತಿಕೊಂಡು ಸುಪ್ರೀಂಕೋರ್ಟ್, ಈ ಕುರಿತು ಶೋಧನೆ ಮಾಡಲು ಒಂದು ಸ್ವತಂತ್ರ ಸಮಿತಿಯನ್ನು ರಚಿಸುವಂತೆ ಕೇಂದ್ರಕ್ಕೆ ಸಲಹೆ ನೀಡಿತ್ತು.
ಜೊತೆಗೆ ರೈತರು ತಮ್ಮ ಹೋರಾಟವನ್ನು ಹಿಂತೆಗೆದುಕೊಳ್ಳಬೇಕಾಗಿಲ್ಲ. ಹೋರಾಟ ಮಾಡುವುದು ಅವರ ಹಕ್ಕು ಎಂದು ಸುಪ್ರೀಂ ಹೇಳಿತ್ತು. ಆದರೆ ಸಾರ್ವಜನಿಕ ಜೀವನಕ್ಕೆ ತೊಂದರೆಯಾಗದಂತೆ, ಶಾಂತಿಯುತವಾಗಿ ಪ್ರತಿಭಟಿಸುವಂತೆ ಹೇಳಿತ್ತು.
ಇದನ್ನೂ ಓದಿ: ಪ್ರಧಾನಿ ವಿರುದ್ಧ ದನಿಯೆತ್ತಿದರೆ ಮೋಹನ್ ಭಾಗವತ್ ಕೂಡಾ ಭಯೋತ್ಪಾದಕರೇ! – ರಾಹುಲ್ ಗಾಂಧಿ


