Homeಮುಖಪುಟಕೇರಳದಲ್ಲಿ ನವ ವಿವಾಹಿತನ ಕೊಲೆ: ಮರ್ಯಾದೆಹೀನ ಹತ್ಯೆ ಶಂಕೆಯಲ್ಲಿ ವಧುವಿನ ತಂದೆ, ಚಿಕ್ಕಪ್ಪನ ಬಂಧನ

ಕೇರಳದಲ್ಲಿ ನವ ವಿವಾಹಿತನ ಕೊಲೆ: ಮರ್ಯಾದೆಹೀನ ಹತ್ಯೆ ಶಂಕೆಯಲ್ಲಿ ವಧುವಿನ ತಂದೆ, ಚಿಕ್ಕಪ್ಪನ ಬಂಧನ

ವಿವಾಹವಾದ ನಂತರ ಪದೇ ಪದೇ ಅನೀಶ್ ಗೆ ಆರೋಪಿಗಳು ಕೊಲೆ ಬೆದರಿಕೆ ಹಾಕಿದ್ದರು ಎಂದು ಅನೀಶ್ ಸ್ನೇಹಿತರು ದೂರಿದ್ದಾರೆ. ಇದು ಮರ್ಯಾದೆಹೀನ ಹತ್ಯೆಯಾಗಿದೆ ಎಂದು ಆರೋಪಿಸಿದ್ದಾರೆ. 

- Advertisement -
- Advertisement -

ಹಿಂದುಳಿದ ವರ್ಗದ ಕೊಲ್ಲಂ ಜಾತಿಗೆ ಸೇರಿದ 27 ವರ್ಷದ ನವ ವಿವಾಹಿತನನ್ನು ವಧುವಿನ ಕಡೆಯವರು ರಾಡಿನಿಂದ ಹೊಡೆದು, ಚೂರಿಯಿಂದ ಇರಿದು ಹತ್ಯೆಗೈದಿರುವ ಅಮಾನವೀಯ ಘಟನೆ ಕೇರಳದ ಪಾಲಕ್ಕಾಡು ಜಿಲ್ಲೆಯ ತೆಂಕುರಿಸ್ಸಿ ಗ್ರಾಮದಲ್ಲಿ ನಡೆದಿದೆ. ಮರ್ಯಾದೆಹೀನ ಹತ್ಯೆ ಶಂಕೆಯ ಮೇರೆಗೆ ಪೊಲೀಸರು ವಧುವಿನ ತಂದೆ, ಚಿಕ್ಕಪ್ಪನನ್ನು ಬಂಧಿಸಿದ್ದಾರೆ.

ಪೇಂಟರ್ ಕೆಲಸ ಮಾಡುತ್ತಿದ್ದ ಅನೀಶ್ ಮೇಲ್ಜಾತಿಯ ಹರಿತಾಳನ್ನು ಕಳೆದ ಮೂರು ತಿಂಗಳ ಹಿಂದೆ ವಿವಾಹವಾಗಿದ್ದ. ಇದಕ್ಕೆ ಹುಡುಗಿಯ ಕಡೆಯವರು ವಿರೋಧ ವ್ಯಕ್ತಪಡಿಸಿದ್ದರು. ಹಿಂದುಳಿದ ವರ್ಗಕ್ಕೆ ಸೇರಿದ  ಅನೀಶ್ ನನ್ನು ಡಿಸೆಂಬರ್ 25ರ ಸಂಜೆ ಹತ್ಯೆ ಮಾಡಲಾಗಿತ್ತು.

ಅನೀಶ್ ಬೈಕ್ ನಲ್ಲಿ ತೆರಳುತ್ತಿದ್ದ ವೇಳೆ ಹುಡುಗಿಯ ತಂದೆ ಕುಜಲ್ಮನ್ನಂ ಗ್ರಾಮದ ಪ್ರಭುಕುಮಾರ್ ಮತ್ತು ಚಿಕ್ಕಪ್ಪ ಸುರೇಶ್ ರಾಡಿನಿಂದ ದಾಳಿ ಮಾಡಿದ್ದಾರೆ. ಅನೀಶ್ ಕೆಳಕ್ಕೆ ಬೀಳುತ್ತಿದ್ದಂತೆಯೇ ಚಾಕುವಿನಿಂದ ಇರಿದು ಹತ್ಯೆ ಮಾಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಐಪಿಸಿ 302ರಡಿ ಎಫ್ಐಆರ್ ದಾಖಲಿಸಿರುವ ಪೊಲೀಸರು ಪ್ರಭುಕುಮಾರ್ ಮತ್ತು ಸುರೇಶ್ ಅವರನ್ನು ವಶಕ್ಕೆ ಪಡೆದಿದ್ದಾರೆ. ಹರಿತಳನ್ನು ವಿವಾಹವಾದ ನಂತರ ಪದೇ ಪದೇ ಅನೀಶ್ ಗೆ ಆರೋಪಿಗಳು ಕೊಲೆ ಬೆದರಿಕೆ ಹಾಕಿದ್ದರು ಎಂದು ಅನೀಶ್ ಸ್ನೇಹಿತರು ದೂರಿದ್ದಾರೆ. ಇದು ಮರ್ಯಾದೆಹೀನ ಹತ್ಯೆಯಾಗಿದೆ ಎಂದು ಆರೋಪಿಸಿದ್ದಾರೆ.

ಅನೀಶ್ ನನ್ನು ಹತ್ಯೆ ಮಾಡಿದ್ದ ಪ್ರಭುಕುಮಾರ್ ಮತ್ತು ಸುರೇಶ್ ತಲೆ ಮರೆಸಿಕೊಂಡಿದ್ದರು. ಕೊಯಂಬತ್ತೂರಿನ ಮನೆಯಲ್ಲಿ ಅಡಗಿಕೊಂಡಿದ್ದಾಗ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

ಅನೀಶ್ ಸೋದರ ಅರುಣ್ ಹೇಳಿಕೆಯ ಮೇಲೆ ದುಷ್ಕರ್ಮಿಗಳನ್ನು ಬಂದಿಸಲಾಗಿದೆ. “ಪ್ರಭುಕುಮಾರ್ ಮತ್ತು ಸುರೇಶ್ ಅನೀಶ್ ನನ್ನು ಕೊಲೆ ಮಾಡಿದ್ದಾರೆ. ನಂತರ ಬೈಕ್ ನಲ್ಲಿ ಪರಾರಿಯಾಗಿದ್ದಾರೆ ಎಂದು ಪೊಲೀಸರಿಗೆ ನೀಡಿದ ಹೇಳಿಕೆಯನ್ನು ಉಲ್ಲೇಖಿಸಿ ದಿನ್ಯೂಸ್ ಮಿನಿಟ್.ಕಾಂ ವರದಿ ಮಾಡಿದೆ.


ಇದನ್ನೂ ಓದಿ: ಕೊರೆಯುವ ಚಳಿಯಲ್ಲಿ ತಿಂಗಳು ಪೂರೈಸಿದ ರೈತರ ಹೋರಾಟ: ಕರಗದ ಮೋದಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...