ಕೇಂದ್ರ ಸರ್ಕಾರದ ಕೃಷಿ ಕಾನೂನುಗಳನ್ನು ಹಿಂಪಡೆಯುವಂತೆ ಒತ್ತಾಯಿಸಿ ಕಳೆದ ಒಂದು ತಿಂಗಳಿನಿಂದ ರೈತರು ಪ್ರತಿಭಟನೆ ಮಾಡುತ್ತಿದ್ದು, ಪ್ರತಿಭಟನಾ ನಿರತ ರೈತರು ಈಗ ಕೇಂದ್ರದೊಟ್ಟಿಗೆ ಮಾತುಕತೆಗೆ ಮುಂದಾಗಿದ್ದಾರೆ. ಜೊತೆಗೆ ಈ ಮಾತುಕತೆಯಲ್ಲಿ ರೈತರು ಚರ್ಚಿಸ ಬಯಸುವ ವಿಷಯಗಳನ್ನು ವ್ಯಕ್ತಪಡಿಸಿದ್ದಾರೆ.
ಈ ಕುರಿತು ಸ್ವರಾಜ್ ಇಂಡಿಯಾ ಪಕ್ಷದ ಮುಖ್ಯಸ್ಥ ಯೋಗೇಂದ್ರ ಯಾದವ್ ಅವರ ಹೇಳಿಕೆಯನ್ನು ಎಎನ್‌ಐ ಟ್ವೀಟ್ ಮಾಡಿದ್ದು, “ಡಿಸಂಬರ್ 29 ರಂದು ಬೆಳಿಗ್ಗೆ 11 ಗಂಟೆಗೆ ಕೇಂದ್ರದೊಟ್ಟಿಗೆ ಮತ್ತೊಂದು ಸುತ್ತಿನ ಮಾತುಕತೆಗೆ ಮುಂದಾಗಿದ್ದೇವೆ. ಈ ಮಾತುಕತೆಯಲ್ಲಿ ನಮ್ಮ ಎರಡು ಉದ್ದೇಶಗಳ ಬಗ್ಗೆ ಚರ್ಚಿಸಲಿದ್ದೇವೆ. ಒಂದು, ಈ ಕೃಷಿ ಕಾನೂನುಗಳನ್ನು ಹಿಂಪಡೆಯುವ ವಿಧಾನಗಳ ಕುರಿತು, ಮತ್ತೊಂದು, ಕನಿಷ್ಟ ಬೆಂಬಲ ಬೆಲೆ (ಎಂಎಸ್‌ಪಿ)ಯನ್ನು ಜಾರಿಗೊಳಿಸುವ ಪ್ರಕ್ರಿಯೆಗಳ ಕುರಿತು ಚರ್ಚಿಸುತ್ತೇವೆ” ಎಂದು ವರದಿ ಮಾಡಿದೆ.
ಇದನ್ನೂ ಓದಿ: ತೀವ್ರಗೊಂಡ ಹೋರಾಟ: ಟೋಲ್ ಪ್ಲಾಜಾಗಳನ್ನು ವಶಕ್ಕೆ ಪಡೆದ ರೈತರು
The first two points in our agenda for talks are- modalities to repeal the three farm laws, and mechanism & procedure to bring law for providing a legal guarantee on MSP (Minimum Support Price): Yogendra Yadav, Swaraj India https://t.co/vUBan9x4y5
— ANI (@ANI) December 26, 2020
ಇದನ್ನೂ ಓದಿ: ರೈತ ಹೋರಾಟದಲ್ಲಿ ಖಲೀಸ್ತಾನಿ ಕರಪತ್ರ ಹಂಚಿಕೆ: RSS ಕಾರ್ಯಕರ್ತ ಬಂಧನ!
ಈ ಮೂಲಕ ರೈತರು ತಮ್ಮ ದೃಢ ನಿಲುವನ್ನು ಸ್ಪಷ್ಟಪಡಿಸಿದ್ದು, ಈ ಕರಾಳ ಕೃಷಿ ಕಾನೂನುಗಳನ್ನು ಹಿಂಪಡೆಯಬೇಕು ಎನ್ನುವ ಬೇಡಿಕೆಯಿಂದ ಹಿಂದೆ ಸರಿಯುವುದಿಲ್ಲ ಎನ್ನುವುದನ್ನು ಮತ್ತೊಮ್ಮೆ ಪುನರುಚ್ಚರಿಸಿದ್ದಾರೆ.
ಈ ಹಿಂದೆಯೂ ಕೇಂದ್ರದೊಟ್ಟಿಗೆ ಹಲವು ಸುತ್ತಿನ ಮಾತುಕತೆಗಳು, ಸಂಧಾನ ಸಭೆಗಳು ನಡೆದಿದ್ದವು. ಆದರೆ ಇವುಗಳೆಲ್ಲಾ ವಿಫಲವಾಗಿದ್ದವು. ಈಗ ನಡೆಯುವ ಈ ಮಾತುಕತೆ ನಿರ್ಣಾಯಕ ಎಂಬುದು ರೈತರು ಮತ್ತು ಸರ್ಕಾರದ ಅಭಿಪ್ರಾಯವಾಗಿದೆ.
ಇದನ್ನೂ ಓದಿ: ರೈತ ಹೋರಾಟ: ಭಾರತದೊಂದಿಗೆ ಮಾತನಾಡುವಂತೆ ಒತ್ತಾಯ – ಅಮೆರಿಕದ ಸಂಸದರ ಪತ್ರ


