Homeಚಳವಳಿರಕ್ತ ಕೊಟ್ಟೇವು-ಸ್ವಾಭಿಮಾನ ಬಿಡೆವು: 50 ನೇ ದಿನಕ್ಕೆ ಕಾಲಿಟ್ಟ ಟೊಯೋಟಾ ಕಾರ್ಮಿಕರ ಹೋರಾಟ!

ರಕ್ತ ಕೊಟ್ಟೇವು-ಸ್ವಾಭಿಮಾನ ಬಿಡೆವು: 50 ನೇ ದಿನಕ್ಕೆ ಕಾಲಿಟ್ಟ ಟೊಯೋಟಾ ಕಾರ್ಮಿಕರ ಹೋರಾಟ!

ಅಪಘಾತದಲ್ಲಿ ಅಕಾಲಿಕ ಮರಣ ಹೊಂದಿದ ನಮ್ಮ7 ಜನ ಸಹೋದ್ಯೋಗಿಗಳ ನೆನಪಿನಾರ್ಥವಾಗಿ, ಪ್ರತಿವರ್ಷದಂತೆ ಈ ವರ್ಷವೂ ಡಿಸಂಬರ್ 28 ರಂದು "ಬೃಹತ್ ರಕ್ತದಾನ ಚಳುವಳಿ" ಯ ಮೂಲಕ ಹೋರಾಟ ಮುಂದುವರೆಸಲಿದ್ದೇವೆ- ಕಾರ್ಮಿಕರು

- Advertisement -
- Advertisement -

ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ಕಂಪನಿಯ ಕಾರ್ಮಿಕರು, ಆಡಳಿತ ಮಂಡಳಿಯ ಅವೈಜ್ಞಾನಿಕ ಕೆಲಸದ ಒತ್ತಡ ಹಾಗೂ ಅಮಾನವೀಯ ನಡೆಯ ವಿರುದ್ಧ ಕಳೆದ 50 ದಿನಗಳಿಂದ ಹೋರಾಟ ನಡೆಸುತ್ತಿದ್ದು, ಕಂಪನಿಯ ಆಡಳಿತವಾಗಲೀ, ಸರ್ಕಾರವಾಗಲೀ ಇದುವರೆಗೂ ಯಾವುದೇ ದಿಟ್ಟ ಕ್ರಮ ಕೈಗೊಂಡಿಲ್ಲ.

ಈ ಶಾಂತಿಯುತ, ನ್ಯಾಯಸಮ್ಮತ ಹೋರಾಟದ 50ನೇ ದಿನದ ಮುಂದುವರಿದ ಭಾಗವಾಗಿ, “2016 ರಲ್ಲಿ ಜನವರಿ 9 ರಂದು ನಡೆದ ಅಪಘಾತದಲ್ಲಿ ಅಕಾಲಿಕ ಮರಣ ಹೊಂದಿದ ನಮ್ಮ7 ಜನ ಕಾರ್ಮಿಕರ ನೆನಪಿನಾರ್ಥವಾಗಿ ರಕ್ತದಾನ ಚಳುವಳಿ” ಮಾಡುವ ಮೂಲಕ ತಮ್ಮ ಪ್ರತಿಭಟನೆಯನ್ನು ದಾಖಲಿಸಲಿದ್ದಾರೆ. “ರಕ್ತ ಕೊಟ್ಟೇವು ಸ್ವಾಭಿಮಾನ ಬಿಡೆವು” ಎನ್ನುವುದು ಪ್ರತಿಭಟನಾ ನಿರತ ಕಾರ್ಮಿಕರ ಒಕ್ಕೊರಲ ದನಿಯಾಗಿದೆ.

ಕಂಪನಿಯ ಕಾರ್ಮಿಕ ಸಂಘವು ವಿಧಾನಸೌಧ ಚಲೋ, ರಾಜಭವನ ಚಲೋ, ಛತ್ರಿ ಚಳುವಳಿ, ಜಿಲ್ಲಾಧಿಕಾರಿ ಕಛೇರಿ ಮುತ್ತಿಗೆ ಹಾಗೂ ಬೆಂಗಳೂರು – ಮೈಸೂರು ರಸ್ತೆಯಲ್ಲಿ ಬೃಹತ್ ಮಾನವ ಸರಪಳಿ ಸೇರಿದಂತೆ ಅನೇಕ ವಿಭಿನ್ನ ಹೋರಾಟಗಳನ್ನು ಮಾಡಿಕೊಂಡು ಬಂದಿದೆ.

ಇದನ್ನೂ ಓದಿ: ಕಂಪೆನಿ ಹಠಮಾರಿ ದೋರಣೆ ಕೈಬಿಡದಿದ್ದರೆ ನಾನೇ ಹೋರಾಟಕ್ಕಿಳಿಯುತ್ತೇನೆ: ಟೊಯೊಟಾ ಕಾರ್ಮಿಕರ ಬೆಂಬಲಕ್ಕೆ ಡಿಕೆ. ಸುರೇಶ್

ಈಗ ತಮ್ಮ ಹೋರಾಟದ 50ನೇ ದಿನದ ಭಾಗವಾಗಿ, ಅಪಘಾತದಲ್ಲಿ ಅಕಾಲಿಕ ಮರಣ ಹೊಂದಿದ ನಮ್ಮ7 ಜನ ಸಹೋದ್ಯೋಗಿಗಳ ನೆನಪಿನಾರ್ಥವಾಗಿ, ಪ್ರತಿವರ್ಷದಂತೆ ಈ ವರ್ಷವು ಡಿಸಂಬರ್ 28 ರಂದು “ಬೃಹತ್ ರಕ್ತದಾನ ಚಳುವಳಿ”ಯ ಮೂಲಕ ಹೋರಾಟ ಮುಂದುವರೆಸಲು ನಿರ್ಧರಿಸಿದ್ದಾರೆ.

ಆಡಳಿತ ಮಂಡಳಿಯ ದೌರ್ಜನ್ಯದ ಬಗ್ಗೆ ಪ್ರಶ್ನಿಸಿದ್ದಕ್ಕೆ ಹಲವು ಕಾರ್ಮಿರನ್ನು ವಜಾ ಮಾಡಿದ್ದ ಕಂಪೆನಿಯ ವಿರುದ್ಧ 3500 ಕಾರ್ಮಿಕರು ಪ್ರಾರಂಭಿಸಿದ್ದ ಹೋರಾಟ 50 ನೇ ದಿನಕ್ಕೆ ಕಾಲಿಟ್ಟಿದೆ. ರಾಮನಗರ ಜಿಲ್ಲೆಯ ಬಿಡದಿ ಕೈಗಾರಿಕಾ ಪ್ರದೇಶದಲ್ಲಿನ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ಕಂಪನಿಯ ಲಾಕೌಟ್‌ ನಿಷೇಧಿಸಿ ರಾಜ್ಯ ಸರ್ಕಾರ ನವೆಂಬರ್‌ 18 ರಂದು ಆದೇಶ ನೀಡಿದ್ದರೂ ಕಂಪೆನಿ ಮಾತ್ರ ಕಾರ್ಮಿಕರನ್ನು ಕಾರ್ಖಾನೆ ಒಳಗಡೆ ಹೋಗಲು ಅನುಮತಿ ನೀಡುತ್ತಿಲ್ಲ ಎಂದು ಕಾರ್ಮಿಕರು ಆರೋಪಿಸಿದ್ದಾರೆ.

ಇದನ್ನೂ ಓದಿ: ಟೊಯೊಟಾ ಕಿರ್ಲೋಸ್ಕರ್‌ ದರ್ಪ ಮುಂದುವರಿಕೆ: ’ಛತ್ರಿ ಚಳುವಳಿ’ ಆರಂಭಿಸಿದ ಕಾರ್ಮಿಕರು!

ತಮ್ಮ ಮೆಲಿನ ದೌರ್ಜನ್ಯವನ್ನು ಕೊನೆಗೊಳಿಸುವಂತೆ ಮತ್ತು ದಿಢೀರ್ ಎಂದು ಘೋಷಿಸಿರುವ ಲಾಕೌಟ್ ಕ್ರಮವನ್ನು ಹಿಂಪಡೆಯಬೇಕೆಂದು ಟೊಯೊಟಾ ಮೋಟಾರ್ಸ್‌ ಕಾರ್ ಕಂಪನಿಯ ಕಾರ್ಮಿಕರು ಕಂಪನಿಯ ಮುಂದೆ ಪ್ರತಿಭಟನೆ ನಡೆಸುತ್ತಿದ್ದು, ಇದುವರೆಗೆ ಆಡಳಿತ ಮಂಡಳಿಯು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಹೋರಾಟನಿರತ ಕಾರ್ಮಿಕರು ಹೇಳುತ್ತಾರೆ.

ಜಪಾನ್ ಮೂಲದ ಕಂಪನಿಯು 1999 ರಿಂದಲೂ ಬಿಡದಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಇದರಲ್ಲಿ ಸಾವಿರಾರು ಕಾರ್ಮಿಕರು ಕಳೆದ 20 ವರ್ಷದಿಂದಲೂ ಕೆಲಸ ಮಾಡಿಕೊಂಡು ಬಂದಿದ್ದಾರೆ. ಅವೈಜ್ಞಾನಿಕ ಕೆಲಸದ ಸಮಯ ಮತ್ತು ಕೆಲಸದ ಶಿಫ್ಟ್‌, ಪ್ರಶ್ನೆ ಮಾಡುವ ಕಾರ್ಮಿಕರು ಮತ್ತು ಕಾರ್ಮಿಕ ಮುಖಂಡರ ಅಮಾನತು, ಬಂಡವಾಳಶಾಹಿಗಳ ದರ್ಪ, ದಿಢೀರ್ ಲಾಕೌಟ್ ಸೇರಿದಂತೆ ಹತ್ತಾರು ಸಮಸ್ಯೆಗಳನ್ನಿಟ್ಟುಕೊಂಡು ಕಂಪನಿಯ ಸುಮಾರು 3500 ಕಾರ್ಮಿಕರು ಬೀದಿಗಿಳಿದು ಪ್ರತಿಭಟನೆ ಮಾಡುತ್ತಿದ್ದಾರೆ.


ಇದನ್ನೂ ಓದಿ: ವಿಸ್ಟ್ರಾನ್ ಬಿಕ್ಕಟ್ಟು – ಕಾರ್ಮಿಕರ ಬಳಿ ಕ್ಷಮೆಯಾಚಿಸಿದ ಕಂಪೆನಿ; ಉಪಾಧ್ಯಕ್ಷನ ವಜಾ!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read