ಅಮೆರಿಕಾದ ನೂತನ ಅಧ್ಯಕ್ಷರಾಗಿ ಚುನಾಯಿತರಾಗಿರುವ ಜೋ ಬೈಡೆನ್, “ರಾಷ್ಟ್ರವು ನಾಲ್ಕು ಐತಿಹಾಸಿಕ ಬಿಕ್ಕಟ್ಟುಗಳನ್ನು ಎದುರಿಸುತ್ತಿದೆ” ಎಂದು ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಜೋ ಬೈಡೆನ್, “ಕೊರೊನಾ, ಆರ್ಥಿಕ ಹಿಂಜರಿತ, ಹವಾಮಾನ ವೈಪರೀತ್ಯ ಮತ್ತು ಜನಾಂಗೀಯ ತಾರತಮ್ಯ- ಈ ನಾಲ್ಕು ಐತಿಹಾಸಿಕ ಬಿಕ್ಕಟ್ಟುಗಳನ್ನು ನಮ್ಮ ರಾಷ್ಟ್ರವು ಏಕಕಾಲದಲ್ಲಿ ಎದುರಿಸುತ್ತಿದೆ. ನಾನು ಮತ್ತು ನನ್ನ ತಂಡ ಈ ಬಿಕ್ಕಟ್ಟುಗಳ ಶಮನಕ್ಕೆ ಮೊದಲ ದಿನದಿಂದಲೇ ಕಾರ್ಯಪ್ರವೃತ್ತರಾಗುತ್ತೇವೆ” ಎಂದು ಹೇಳಿದ್ದಾರೆ.
ಇದನ್ನೂ ಓದಿ: ಟೋಲ್‌ಪ್ಲಾಝಾಗಳನ್ನು ಅನಿರ್ದಿಷ್ಟಾವಧಿಗೆ ವಶಕ್ಕೆ ಪಡೆದ ರೈತ ಹೋರಾಟಗಾರರು!
From COVID-19 and the economy to climate change and racial justice — our nation is facing four historic crises at once. And come January, there will be no time to waste. That’s why my team and I are hard at work preparing to take action on day one.
— Joe Biden (@JoeBiden) December 27, 2020
ಇದನ್ನೂ ಓದಿ: ‘ಗೋ ಕೊರೊನಾ ಗೋ’ ಖ್ಯಾತಿಯ ಕೇಂದ್ರ ಸಚಿವರ ಹೊಸ ಘೋಷಣೆ – ‘ನೋ ಕೊರೊನಾ…
“ಈ ನಾಲ್ಕೂ ಬಿಕ್ಕಟ್ಟುಗಳನ್ನು ಬಗೆಹರಿಸಲು ಜನವರಿಯ ನಂತರ ತ್ವರಿತ ಕ್ರಮ ಕೈಗೊಳ್ಳುತ್ತೇವೆ. ಸಮಯವನ್ನು ವ್ಯರ್ಥ ಮಾಡುವುದಿಲ್ಲ” ಎಂದೂ ಹೇಳಿದ್ದಾರೆ.
ಅಮೆರಿಕ ಅಧ್ಯಕ್ಷರಾಗಿ ಚುನಾಯಿತರಾಗಿರುವ ಜೋ ಬೈಡೆನ್ ಅವರು 2021ರ ಜನವರಿಯಲ್ಲಿ ಅಧಿಕಾರ ಸ್ವೀಕರಿಸಲಿದ್ದಾರೆ.
ಅಮೆರಿಕದಾದ್ಯಂತ ವ್ಯಾಪಕವಾಗಿರುವ ಕೊರೊನಾ ಸಾಂಕ್ರಾಮಿಕವು ಅಲ್ಲಿನ ಆರ್ಥಿಕತೆಯ ಹಿಂಜರಿತಕ್ಕೆ ಕಾರಣವಾಗಿದೆ. ಕಪ್ಪು ವರ್ಣೀಯರ ಮೇಲೆ ಅಮೆರಿಕದಲ್ಲಿ ನಡೆದ ದೌರ್ಜನ್ಯಗಳ ವಿರುದ್ಧ ಪ್ರತಿಭಟನೆಗಳು ತೀವ್ರಗೊಂಡಿದ್ದವು. ಅಮೆರಿಕಾದಾದ್ಯಂತ ‘ಬ್ಲಾಕ್ ಲೈವ್ಸ್ ಮ್ಯಾಟರ್’ ಪ್ರತಿಭಟನೆಗಳು ತೀವ್ರಗೊಂಡಿದ್ದವು. ಡೊನಾಲ್ಡ್ ಟ್ರಂಪ್ ನೇತೃತ್ವದ ಸರ್ಕಾರ ಪ್ಯಾರಿಸ್ ಹವಾಮಾನ ಬದಲಾವಣೆ ಒಪ್ಪಂದದಿಂದ ಹೊರಬಂದಿತ್ತು.
ಇದನ್ನೂ ಓದಿ: ಖರ್ಗೆ ಮುಖ್ಯಮಂತ್ರಿ ಆಗುವುದನ್ನು ತಡೆದವರ ಹೆಸರು ಹೇಳಲಿ: ದೇವೇಗೌಡರಿಗೆ ಸಿದ್ದು ತಿರುಗೇಟು


