ಉತ್ತರ ಪ್ರದೇಶದ ಲೋನಿ ಪ್ರದೇಶದಲ್ಲಿ ಸೋಮವಾರ ಬೆಳಿಗ್ಗೆ 23 ವರ್ಷದ ಯುವಕನನ್ನು ಇಬ್ಬರು ವ್ಯಕ್ತಿಗಳು ನಡುರಸ್ತೆಯಲ್ಲಿ ಥಳಿಸಿ ಕೊಂದ ಘಟನೆ ನಡೆದಿದೆ. ದಾರಿಹೋಕರು ಈ ಘಟನೆಯನ್ನು ವಿಡಿಯೋ ಮಾಡಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮೃತ ಯುವಕನನ್ನು ’ಅಜಯ್’ ಎಂದು ಗುರುತಿಸಲಾಗಿದ್ದು ಹೂವಿನ ವ್ಯಾಪಾರಿಯಾಗಿದ್ದರು.
ಘಟನೆ ನಡೆದ ಸಂಜೆಯೆ ಗೋಮಿಂದ್ ಶರ್ಮಾ(21) ಮತ್ತು ಆತನ ಸ್ನೇಹಿತ ಅಮಿತ್ ಕುಮಾರ್(22) ಎಂದು ಗುರುತಿಸಲಾದ ಆರೋಪಿಗಳಿಬ್ಬರನ್ನು ಬಂಧಿಸಲಾಗಿದೆ. ಕೊಲೆಗೀಡಾದ ಯುವಕ ಹೂವಿನ ವ್ಯಾಪಾರಿಯಾಗಿದ್ದು, ಲೋನಿಯ ದೇವಾಲಯವೊಂದರ ಹೊರಗೆ ವ್ಯಾಪಾರ ಮಾಡುತ್ತಿದ್ದರು. ಘಟನೆಗೆ ವ್ಯಾಪಾರದ ವಿಚಾರದಲ್ಲಿ ಇದ್ದ ವೈಷಮ್ಯವೇ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ ಎಂದು ಹಿಂದೂಸ್ಥಾನ್ ಟೈಮ್ಸ್ ವರದಿ ಮಾಡಿದೆ.
ಇದನ್ನೂ ಓದಿ: ಉತ್ತರ ಪ್ರದೇಶ: ಭೂಗತ ಪಾತಕಿ ಚೋಟಾ ರಾಜನ್ ಅಂಚೆ ಚೀಟಿ ಬಿಡುಗಡೆ!
“ಆರೋಪಿಗಳು ಸುಮಾರು 3-4 ನಿಮಿಷಗಳ ಕಾಲ ಅವನನ್ನು ಹೊಡೆಯುತ್ತಲೇ ಇದ್ದರು. ದಾರಿಹೋಕರು ಘಟನೆಯ ವಿಡಿಯೋಗಳನ್ನು ರೆಕಾರ್ಡ್ ಮಾಡಿದ್ದರಾದರೂ ಅವನಿಗೆ ಸಹಾಯ ಮಾಡಲಿಲ್ಲ. ಮಾಹಿತಿ ದೊರೆತ ಕೂಡಲೇ ಪೊಲೀಸರು ಸ್ಥಳಕ್ಕೆ ಧಾವಿಸಿ ಬಲಿಪಶುವನ್ನು ಆಸ್ಪತ್ರೆಗೆ ಕರೆದೊಯ್ದರು” ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.
#BREAKING | Man beaten to death on a busy street in Ghaziabad, Uttar Pradesh; no one helps. Listen in! pic.twitter.com/q7xZSh1FiE
— Mirror Now (@MirrorNow) December 29, 2020
ಆರೋಪಿ ಗೋವಿಂದ್ ಶರ್ಮಾ ದೇವಾಲಯದ ಬಳಿ ಹಲವು ವರ್ಷಗಳಿಂದ ಹೂ ಮಾರಾಟದ ಅಂಗಡಿ ಹೊಂದಿದ್ದ. ಲಾಕ್‌ಡೌನ್‌ಗೂ ಮುಂಚೆ ಆತನ ಅಂಗಡಿಯ ಎದುರಿಗೆ ಅಜಯ್ ತನ್ನ ಹೂವಿನ ಅಂಗಡಿ ತೆರೆದಿದ್ದೇ ಈ ವೈಷಮ್ಯಕ್ಕೆ ಕಾರಣ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ದೆಹಲಿ V/s ಉತ್ತರ ಪ್ರದೇಶ: ಮಾದರಿ ಶಾಲೆ ಚರ್ಚೆಗೆ ಬಾರದ ಉತ್ತರ ಪ್ರದೇಶ ಸಚಿವ!


