Homeಮುಖಪುಟಕಸಗುಡಿಸುತ್ತಿದ್ದ ಕಚೇರಿಗೆ ಅಧ್ಯಕ್ಷೆಯಾಗಿ ಆಯ್ಕೆಯಾದ ಆನಂದವಳ್ಳಿ!

ಕಸಗುಡಿಸುತ್ತಿದ್ದ ಕಚೇರಿಗೆ ಅಧ್ಯಕ್ಷೆಯಾಗಿ ಆಯ್ಕೆಯಾದ ಆನಂದವಳ್ಳಿ!

- Advertisement -
- Advertisement -

ಬ್ಲಾಕ್ ಪಂಚಾಯತ್‌ ಕಚೇರಿಯಲ್ಲಿ ಅರೆಕಾಲಿಕ ಕಸಗುಡಿಸುವ ಕೆಲಸ ನಿರ್ವಹಿಸುತ್ತಿದ್ದ ಮಹಿಳೆಯೊಬ್ಬರು, ಅದೇ ಪಂಚಾಯತ್‌ಗೆ ಅಧ್ಯಕ್ಷೆಯಾಗಿ ಆಯ್ಕೆಯಾದ ಘಟನೆ ಕೇರಳದ ಪತ್ತನಾಪುರಂ ಬ್ಲಾಕ್ ಪಂಚಾಯತ್‌ನಲ್ಲಿ ನಡೆದಿದೆ. ಒಟ್ಟು 13 ಸ್ಥಾನಗಳಿರುವ ಪತ್ತನಾಪುರಂ ಬ್ಲಾಕ್ ಪಂಚಾಯತ್‌ನಲ್ಲಿ ಸಿಪಿಐಎಂ ನೇತೃತ್ವದ ಎಲ್‌ಡಿಎಫ್‌ 7 ಸ್ಥಾನಗಳನ್ನು ಗೆದ್ದರೆ, ಕಾಂಗ್ರೆಸ್ ನೇತೃತ್ವದ ಯುಡಿಎಫ್‌ 6 ಸ್ಥಾನಗಳನ್ನು ಗೆದ್ದಿತ್ತು.

ಇದನ್ನೂ ಓದಿ: ಕೇರಳ: ಪುರಸಭೆ ಕಚೇರಿಯಲ್ಲಿ ’ಜೈಶ್ರೀರಾಮ್’ ಬ್ಯಾನರ್‌ ವಿರುದ್ದ ರಾಷ್ಟ್ರಧ್ವಜ ಹಾರಿಸಿದ ಡಿವೈಎಫ್‌ಐ!

ಆನಂದವಳ್ಳಿ ಪಂಚಾಯತ್‌ನ ತಲವೂರ್‌ ಡಿವಿಷನ್‌ನಿಂದ ಸಿಪಿಐಎಂ ಅಭ್ಯರ್ಥಿಯಾಗಿ ಅವರು ಗೆದ್ದಿದ್ದಾರೆ. ಸುಮಾರು 10 ವರ್ಷದಿಂದ ಅದೇ ಬ್ಲಾಕ್ ಪಂಚಾಯತ್‌ ಕಚೇರಿಯಲ್ಲಿ ಅರೆಕಾಲಿಕ ಕಸಗುಡಿಸುವ ಕೆಲಸವನ್ನು ನಿರ್ವಹಿಸುತ್ತಿದ್ದ ಅವರು, ದಿನಕ್ಕೆ 200 ರೂ. ಗಳನ್ನು ಪಡೆಯುತ್ತಿದ್ದರು. ದಿನದ ಉಳಿದ ಸಮಯದಲ್ಲಿ ಅವರು ಕುಡುಂಬಸ್ರೀ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದರು.

ಪಕ್ಷವು ತನಗೆ ವಹಿಸಿದ ಹೊಸ ಜವಾಬ್ದಾರಿಯ ಬಗ್ಗೆ ಸಂತೋಷಗೊಂಡಿರುವ ಅವರು, ತಮ್ಮ ಪಕ್ಷದ ಸದಸ್ಯರು ಮತ್ತು ಆಡಳಿತ ಸಮಿತಿ ಸದಸ್ಯರ ಸಹಾಯದಿಂದ ಉತ್ತಮ ಆಡಳಿತವನ್ನು ಖಚಿತವಾಗಿ ನೀಡುತ್ತೇನೆ ಎಂದು ಹೇಳಿದ್ದಾರೆ.

ಆನಂದವಳ್ಳಿ ಅವರ ಪತಿ ಮೋಹನನ್ ಪೈಂಟಿಗ್‌ ಕೆಲಸಗಾರರಾಗಿದ್ದು, ಸಿಪಿಐಎಂನ ಸ್ಥಳೀಯ ಸಮಿತಿ ಸದಸ್ಯ ಕೂಡಾ ಆಗಿದ್ದಾರೆ. ಅವರ ಮಕ್ಕಳಾದ ಮಿಥುನ್ ಎಂಬವರು ಬಿಎಸ್ಸಿ ಮತ್ತು ಕಾರ್ತಿಕ್ ಪ್ಲಸ್ ಟು(2nd PUC)ನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.

ಇದನ್ನೂ ಓದಿ: ಕೇರಳದಲ್ಲಿ ಮತ್ತೊಮ್ಮೆ LDF ?- ಸ್ಥಳೀಯ ಸಂಸ್ಥೆ ಚುನಾವಣಾ ಫಲಿತಾಂಶಗಳ ಸೂಚನೆಯೇನು?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಣಿಪುರ ಹಿಂಸಾಚಾರಕ್ಕೆ ಬಲಿಯಾದವರ ಬಗ್ಗೆ ಮೋದಿ ಸರ್ಕಾರಕ್ಕೆ ಸ್ವಲ್ಪವೂ ಸಹಾನುಭೂತಿ ಇಲ್ಲ: ಮಲ್ಲಿಕಾರ್ಜುನ ಖರ್ಗೆ

0
ಮಣಿಪುರದ ಪರಿಸ್ಥಿತಿಯ ಬಗ್ಗೆ ಮೋದಿ ಸರಕಾರ ನಿರಾಸಕ್ತಿಯನ್ನು ಹೊಂದಿದ್ದು, ಪಶ್ಚಾತ್ತಾಪವಿಲ್ಲದಂತೆ ವರ್ತಿಸುತ್ತಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿಯನ್ನು ನಡೆಸಿದೆ. ಈ ಕುರಿತು ಎಕ್ಸ್‌ನಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ...