LDF
PC: cpim.org

ಇತ್ತೀಚೆಗೆ ಕೇರಳದಲ್ಲಿ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಆಡಳಿತಾರೂಢ ಸಿಪಿಐ(ಎಂ)‌ ನೇತೃತ್ವದ LDF ಅತೀ ಹೆಚ್ಚು ಸ್ಥಾನಗಳನ್ನು ಗಳಿಸಿದೆ. ಕಾಂಗ್ರೆಸ್‌ ನೇತೃತ್ವದ UDF ಎರಡನೇ ಸ್ಥಾನ ಪಡೆದುಕೊಂಡಿದೆ. ಸ್ಥಳೀಯ ಸಂಸ್ಥೆ ಚುನಾವಣೆಗಳು ಅಸೆಂಬ್ಲಿ ಚುನಾವಣೆಗೆ ಮುಂಚಿತಾಗಿ ನಡೆಯುವ ಸೆಮಿಫೈನಲ್‌ ಎಂದು ಪರಿಗಣಿಸಲಾಗುತ್ತದೆ. ಪ್ರಸ್ತುತ ಈ ಚುನಾವಣೆಯು 2021 ರ ಕೇರಳ ವಿಧಾನಸಭಾ ಚುನಾವಣೆಯ ದಿಕ್ಸೂಚಿ ಎಂದು ಹೇಳಲಾಗಿದೆ.

ಈ ಹಿನ್ನೆಲೆಯಲ್ಲಿ ಮುಂದಿನ ಕೇರಳ ಚುನಾವಣೆಯು LDF‌ ಮತ್ತು UDF ‌ಗಳ ನಡುವೆ ಭಾರೀ ಸ್ಪರ್ಧೆಯನ್ನು ಏರ್ಪಡಿಸಲಿದ್ದು, ಬಿಜೆಪಿ ಹೆಚ್ಚುವರಿ ಆಟಗಾರನಂತೆ ಕಣಕ್ಕಿಯಲಿದೆ ಎಂದು ರಾಜಕೀಯ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಕೇರಳ ರಾಜಕೀಯದ ಸಂಪ್ರದಾಯದಂತೆ ಒಂದು ಬಾರಿ LDF ಬಂದರೆ ಇನ್ನೊಂದು ಬಾರಿ UDF ಅಧಿಕಾರ ಹಿಡಿಯುತ್ತಿತ್ತು. ಒಂದು ವೇಳೆ ಮುಂದಿನ ಬಾರಿ LDF ಅಧಿಕಾರ ಹಿಡಿದರೆ ಕೇರಳ ರಾಜಕೀಯದ ಎಲ್ಲಾ ದಾಖಲೆಗಳನ್ನು ಮುರಿದಂತಾಗುತ್ತದೆ.

ಸಿಪಿಐ(ಎಂ) ನೇತೃತ್ವದ ಎಲ್‌ಡಿಎಫ್ ಮೈತ್ರಿಕೂಟವು ಒಟ್ಟು 941 ರಲ್ಲಿ 514 ಮತ್ತು ಯುಡಿಎಫ್‌ 375 ಗ್ರಾಮ ಪಂಚಾಯಿತಿಗಳನ್ನು ಗೆದ್ದಿದ್ದು, ಇದು ಭಾರೀ ಸ್ಪರ್ಧೆಯಾಗಿದೆ. ಬಿಜೆಪಿ ನೇತೃತ್ವದ ಎನ್‌ಡಿಎ ಕೂಟ ಕೇವಲ 23 ಗ್ರಾಮ ಪಂಚಾಯಿತಿಗಳನ್ನು ಮಾತ್ರ ಗೆಲ್ಲುವಲ್ಲಿ ಸಫಲವಾಗಿದೆ. ವಿರೋಧ ಪಕ್ಷಗಳ ನಿರಂತರ ಆರೋಪಗಳ ಮಧ್ಯೆಯೂ ಸಿಎಂ ಪಿಣರಾಯಿ ವಿಜಯನ್‌ ನೇತೃತ್ವದ ಎಲ್‌ಡಿಎಫ್‌ ಸರ್ಕಾರ ಜನಮನ್ನಣೆ ಪಡೆಯಲು ಯಶಸ್ವಿಯಾಗಿದೆ.

ಇದನ್ನೂ ಓದಿ: ಕೇರಳದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಅರಳದ ಕಮಲ, ಭಾರಿ ಗೆಲುವು ಕಂಡ ಎಡಪಕ್ಷಗಳು

ಕೇರಳದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಅರಳದ ಕಮಲ
PC: Peoples Democracy

ಎಲ್ಲರಿಗೂ ಸುರಕ್ಷಿತ ವಸತಿ ಒದಗಿಸುವ ಗುರಿಯನ್ನು ಹೊಂದಿರುವ ವಸತಿ ಯೋಜನೆ, ಲೈಫ್ ಮಿಷನ್ ಸೇರಿದಂತೆ ರಾಜ್ಯ ಸರ್ಕಾರದ ಹಲವಾರು ಅಭಿವೃದ್ಧಿ ಯೋಜನೆಗಳನ್ನು ಹಳಿ ತಪ್ಪಿಸಲು ಯುಡಿಎಫ್ ಮತ್ತು ಎನ್‌ಡಿಎ ಪ್ರಯತ್ನಿಸಿದ್ದವು. ಆದಾಗ್ಯೂ, ಎಲ್‌ಡಿಎಫ್‌ ಅಭಿವೃದ್ಧಿ ಚಟುವಟಿಕೆಗಳತ್ತ ಗಮನ ಹರಿಸಿ, ಯಶಸ್ವಿ ಕಂಡಿದೆ.

ಬಿಜೆಪಿ ನೀಡಬಲ್ಲುದೆ ಪೈಪೋಟಿ?

ಮೇಲ್ನೋಟಕ್ಕೆ ಎಲ್‌ಡಿಎಫ್‌ ಮತ್ತು ಬಿಜೆಪಿ ನಡುವೆ ಹೋರಾಟ ನಡೆಯುತ್ತಿದೆ ಎಂದು ಹೇಳಲಾಗುತ್ತಿದ್ದರೂ, ಕೇರಳದಲ್ಲಿ ಬಿಜೆಪಿ ಅಂತಹ ಪ್ರದರ್ಶನ ನೀಡಲು ಸಾಧ್ಯವಾಗಿಲ್ಲ. ಸ್ಥಳೀಯ ಚುನಾವಣೆಯಲ್ಲಿ ಎಲ್‌ಡಿಎಫ್‌ನಿಂದ ಅಧಿಕಾರ ಕಿತ್ತುಕೊಳ್ಳಲು ಮುಂದಾಗಿದ್ದ ಬಿಜೆಪಿ ಉನ್ನತ ನಾಯಕರನ್ನೇ ಕಣಕ್ಕಿಳಿಸಿತ್ತು. ಅದರೂ, 2015 ಕ್ಕಿಂತ ಸ್ವಲ್ಪ ಪ್ರಾಮಾಣದಲ್ಲಿ ಹೆಚ್ಚು ಸ್ಥಾನಗಳನ್ನು ಪಡೆದರೂ, ಪೈಪೋಟಿ ನೀಡಲು ಸಾಧ್ಯವಾಗಿಲ್ಲ. ಕೇವಲ 23 ಗ್ರಾಮ ಪಂಚಾಯತಿಗಳನ್ನು ಗೆದ್ದರೂ, ಯಾವುದೇ ಬ್ಲಾಕ್ ಪಂಚಾಯತ್, ಜಿಲ್ಲಾ ಪಂಚಾಯತಿಗಳನ್ನು ಗೆಲ್ಲಲು ಸಾಧ್ಯವಾಗಲಿಲ್ಲ.

ಕೇವಲ ಒಂದು ಪುರಸಭೆ (ಪಾಲಕ್ಕಾಡ್)ಯನ್ನು ಗೆದ್ದಿರುವ ಎನ್‌ಡಿಎ, ಪಂದಲಂನಲ್ಲಿ ಹೆಚ್ಚು ಸ್ಥಾನಗಳನ್ನು ಪಡೆದುಕೊಂಡಿದೆ. ಇನ್ನೆಲ್ಲಿಯೂ ತೀವ್ರ ಪೈಪೋಟಿಯನ್ನು ನೀಡಿಲ್ಲ. ಶಬರಿಮಲೆ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶದ ವಿರುದ್ಧ ಜನರನ್ನು ಸಂಘಟಿಸುತ್ತಿದ್ದ ಬಿಜೆಪಿ/ಆರ್‌ಎಸ್‌ಎಸ್‌ ಸಂಘಟನೆಗಳು 2018 ರಲ್ಲಿ ಸುಪ್ರೀಂ ಕೋರ್ಟ್‌ ತೀರ್ಪು ನೀಡಿದ ನಂತರ ಪಥನಂತಿಟ್ಟ ಜಿಲ್ಲೆಯ ಪಂದಲಂನಲ್ಲಿಯೂ ತಮ್ಮ ನೆಲೆಯನ್ನು ಕಳೆದುಕೊಂಡಿದೆ.

ಕೇರಳ

ಎಲ್‌ಡಿಎಫ್‌ನಿಂದ ಅಧಿಕಾರ ಕಿತ್ತುಕೊಳ್ಳಲು ಬಿಜೆಪಿ ತನ್ನ ರಾಜ್ಯ ನಾಯಕರನ್ನೇ ಅಭ್ಯರ್ಥಿಗಳನ್ನಾಗಿ ಕಣಕ್ಕಿಳಿಸಿದ್ದ ತಿರುವನಂತಪುರಂ ಕಾರ್ಪೊರೇಶನ್‌ನಲ್ಲಿ, ಈ ಹಿಂದೆ ಪಡೆದಿದ್ದಷ್ಟೂ ಸ್ಥಾನಗಳನ್ನೂ ಕೂಡ ಉಳಿಸಿಕೊಳ್ಳಲಷ್ಟೇ ಸೀಮಿತವಾಗಿದೆ. ತಿರುವನಂತಪುರಂ ಪಾಲಿಕೆಯ 100 ಸ್ಥಾನಗಳಲ್ಲಿ ಎಲ್‌ಡಿಎಫ್‌ 51 ಸ್ಥಾನಗಳನ್ನು ಪಡೆದರೆ, ಎನ್‌ಡಿಎ 34, ಯುಡಿಎಫ್ 10 ಮತ್ತು ಇತರರು 5 ಸ್ಥಾನಗಳನ್ನು ಗೆದ್ದಿದ್ದಾರೆ. 2015 ರಲ್ಲಿ ಎಲ್‌ಡಿಎಫ್ 42 ವಾರ್ಡ್‌ಗಳನ್ನು ಗೆದ್ದಿತ್ತು ಮತ್ತು ಆಗ ಬಿಜೆಪಿ ಮೈತ್ರಿಕೂಟವು ಅದೇ 34 ಸ್ಥಾನಗಳನ್ನು ಹೊಂದಿತ್ತು.

ಚುನಾವಣಾ ಸಂದರ್ಭದಲ್ಲಿ ಬಿಜೆಪಿ ಮತ್ತು ಯುಡಿಎಫ್‌ ಎರಡೂ ಮೈತ್ರಿಕೂಟಗಳು ಎಲ್‌ಡಿಎಫ್‌ ವಿರುದ್ಧ ಪ್ರಚಾರ ಮಾಡಿದರೂ, ಅವುಗಳು ಎಲ್‌ಡಿಎಫ್‌ನ ಸ್ಥಾನಗಳನ್ನ ಕಸಿದುಕೊಳ್ಳಲು ಅಂತಹ ಸಫಲತೆ ಕಂಡಿಲ್ಲ. ಬದಲಾಗಿದೆ, ಈ ಎರಡು ಮೈತ್ರಿಕೂಟಗಳ ಸ್ಥಾನಗಳೇ ಚದುರಿ ಹೋಗಿದೆ.

ಇದನ್ನೂ ಓದಿ: ಕೇರಳ ಪುರಸಭೆ ಕಟ್ಟಡ ಮೇಲೆ ಜೈ ಶ್ರೀರಾಮ್ ಪೋಸ್ಟರ್‌: ಎಫ್‌ಐಆರ್‌ ದಾಖಲು

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
Avatar
ಸೋಮಶೇಖರ್‌ ಚಲ್ಯ
+ posts

LEAVE A REPLY

Please enter your comment!
Please enter your name here