Homeಮುಖಪುಟಕೇರಳ ಪುರಸಭೆ ಕಟ್ಟಡ ಮೇಲೆ ಜೈ ಶ್ರೀರಾಮ್ ಪೋಸ್ಟರ್‌: ಎಫ್‌ಐಆರ್‌ ದಾಖಲು

ಕೇರಳ ಪುರಸಭೆ ಕಟ್ಟಡ ಮೇಲೆ ಜೈ ಶ್ರೀರಾಮ್ ಪೋಸ್ಟರ್‌: ಎಫ್‌ಐಆರ್‌ ದಾಖಲು

ಪಾಲಕ್ಕಾಡ್ ಪುರಸಭೆಯ ಒಟ್ಟು 52 ಸ್ಥಾನಗಳಲ್ಲಿ 28 ಸ್ಥಾನಗಳನ್ನು ಪಡೆದು ತನ್ನ ಬಿಜೆಪಿ ಆಡಳಿತ ನಡೆಸುತ್ತಿದೆ. ಕೇರಳದಲ್ಲಿ ಬಿಜೆಪಿ ಆಡಳಿತದಲ್ಲಿರುವ ಏಕೈಕ ಪುರಸಭೆ ಪಾಲಕ್ಕಾಡ್ ಆಗಿದೆ.

- Advertisement -
- Advertisement -

ಕೇರಳದ ಸ್ಥಳೀಯ ಚುನಾವಣೆಯಲ್ಲಿ ಪಾಲಕ್ಕಾಡ್ ಪಟ್ಟಣದಲ್ಲಿ ಸತತ ಎರಡನೇ ಗೆಲುವು ಸಾಧಿಸಿರುವ ಬಿಜೆಪಿಯ ಸಂಭ್ರಮಾಚರಣೆಯಲ್ಲಿ ಪುರಸಭೆ ಕಟ್ಟಡದ ಮೇಲೆ ಜೈ ಶ್ರೀರಾಮ್ ಎಂಬ ಧಾರ್ಮಿಕ ಘೋಷಣೆಗಳೊಂದಿಗೆ ಭಾರಿ ಪೋಸ್ಟರ್‌ಗಳನ್ನು ಹಾಕಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಪಕ್ಷದ ಕಾರ್ಯಕರ್ತರ ವಿರುದ್ಧ ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದಾರೆ.

ಪಾಲಕ್ಕಾಡ್ ಮುನ್ಸಿಪಲ್ ಕಾರ್ಯದರ್ಶಿ ನೀಡಿದ ದೂರಿನ ಹಿನ್ನೆಲೆ ಪೊಲೀಸರು ಗುರುವಾರ ತಡರಾತ್ರಿ, ಘಟನೆಯಲ್ಲಿ ಭಾಗಿಯಾಗಿದ್ದ ಕೆಲವು ಬಿಜೆಪಿ ಕಾರ್ಯಕರ್ತರನ್ನು ಗುರುತಿಸಿ ಅವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಸದ್ಯಕ್ಕೆ ಪೋಸ್ಟರ್‌ಗಳನ್ನು ತೆರವುಗೊಳಿಸಲಾಗಿದೆ.

“ನಾವು ಸರ್ಕಾರಿ ಅಧಿಕಾರಿಯೂ ಆಗಿರುವ ಪುರಸಭೆ ಕಾರ್ಯದರ್ಶಿಯ ದೂರಿನ ಆಧಾರದ ಮೇಲೆ ಗಲಭೆಗೆ ಕಾರಣವಾಗುವ ಪ್ರಚೋದನೆ ಮೇಲೆ ಸೆಕ್ಷನ್ 153 ಅಡಿಯಲ್ಲಿ ಎಫ್ಐಆರ್ ದಾಖಲಿಸಿದ್ದೇವೆ” ಎಂದು ಪಾಲಕ್ಕಾಡ್ ಪೊಲೀಸ್ ಮುಖ್ಯಸ್ಥ ಸುಜಿದಾಸ್ ಎಸ್. ತಿಳಿಸಿದ್ದಾರೆ.

ಇದನ್ನೂ ಓದಿ: ಕೊರೊನಾ ಲಸಿಕೆ ಉಚಿತವೆಂದ ಕೇರಳ ಸಿಎಂ: ಚುನಾವಣಾ ಆಯೋಗದ ಮೆಟ್ಟಿಲೇರಿದ ವಿಪಕ್ಷಗಳು!

ಕೇರಳದಾದ್ಯಂತ ಈ ಡಿಸೆಂಬರ್‌ನಲ್ಲಿ ಹಂತ ಹಂತವಾಗಿ ನಡೆದ ರಾಜ್ಯ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ,    ಪಾಲಕ್ಕಾಡ್ ಮುನ್ಸಿಪಲ್‌ನಲ್ಲಿ ಬಿಜೆಪಿ ಎರಡನೇ ಬಾರಿಯೂ ಜಯಗಳಿಸಿತು. ಪುರಸಭೆಯ ಒಟ್ಟು 52 ಸ್ಥಾನಗಳಲ್ಲಿ 28 ಸ್ಥಾನಗಳನ್ನು ಪಡೆದು ಬಿಜೆಪಿ ತನ್ನ ಸ್ಥಾನ ಉಳಿಸಿಕೊಂಡಿದೆ. ಕೇರಳದಲ್ಲಿ ಬಿಜೆಪಿ ಆಡಳಿತದಲ್ಲಿರುವ ಏಕೈಕ ಪುರಸಭೆ ಪಾಲಕ್ಕಾಡ್ ಆಗಿದೆ.

ಡಿಸೆಂಬರ್ 16 ರಂದು ಫಲಿತಾಂಶ ಪ್ರಕಟವಾಗುತ್ತಿದ್ದಂತೆ ಬಿಜೆಪಿ ಬೆಂಬಲಿಗರ ಗುಂಪೊಂದು ಪಾಲಕ್ಕಾಡ್ ಪುರಸಭೆಯ ಕಟ್ಟಡದ ಮೇಲಕ್ಕೆ ಏರಿ, ದೊಡ್ಡ ದೊಡ್ಡ ಪೋಸ್ಟರ್‌ಗಳನ್ನು ಅನಾವರಣಗೊಳಿಸಿತು. ಈ ಪೋಸ್ಟರ್‌ಗಳಲ್ಲಿ ಒಂದರಲ್ಲಿ “ಜೈ ಶ್ರೀ ರಾಮ್” ಘೋಷಣೆಯೊಂದಿಗೆ ಮರಾಠ ರಾಜ ಶಿವಾಜಿಯ ಚಿತ್ರವಿತ್ತು. ಮತ್ತೊಂದು ಪೋಸ್ಟರ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಇದ್ದರು.

ಈ ಘಟನೆಯ ವಿಡಿಯೋ ಸ್ಥಳೀಯ ಸಾಮಾಜಿಕ ಮಾಧ್ಯಮ ವಲಯಗಳಲ್ಲಿ ವೈರಲ್ ಆಗಿದ್ದು, ವಿವಾದಕ್ಕೆ ನಾಂದಿ ಹಾಡಿದೆ. ಇದಕ್ಕೆ ತುಪ್ಪ ಸುರಿದಂತೆ ಬಿಜೆಪಿ ವಕ್ತಾರ ಸಂದೀಪ್ ವಾರಿಯರ್ ಅವರ ಸಂಭ್ರಮಾಚರಣೆಯ ಫೇಸ್‌ಬುಕ್ ಪೋಸ್ಟ್ ಈ ವಿವಾದವನ್ನು ಮತ್ತಷ್ಟು ಉಲ್ಬಣಗೊಳಿಸಿತು. ತಮ್ಮ ಫೇಸ್‌ಬುಕ್ ಪೋಸ್ಟ್‌ನಲ್ಲಿ “ಪಾಲಕ್ಕಾಡ್ ಪಟ್ಟಣ ಕೇರಳದ ಗುಜರಾತ್” ಎಂದು ಹೇಳಿದ್ದರು.


ಇದನ್ನೂ ಓದಿ: ಕೇರಳದಲ್ಲಿ ರಾಜಕೀಯ ಹಿಂದುತ್ವದ ಬೆಳವಣಿಗೆಯನ್ನು ಅರ್ಥೈಸಿಕೊಳ್ಳುವುದು ಹೇಗೆ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಅಧಿಕಾರಕ್ಕೆ ಬಂದರೆ ‘ಪಿತ್ರಾರ್ಜಿತ ಆಸ್ತಿ ತೆರಿಗೆ’ ಜಾರಿಗೊಳಿಸುವುದಾಗಿ ಕಾಂಗ್ರೆಸ್ ಹೇಳಿಲ್ಲ

0
ಕಳೆದ ಎರಡು ದಿನಗಳಿಂದ ದೇಶದಲ್ಲಿ 'ಪಿತ್ರಾರ್ಜಿತ ಆಸ್ತಿ ತೆರಿಗೆ' (Inheritance Tax) ಕುರಿತು ದೊಡ್ಡ ಮಟ್ಟದ ಚರ್ಚೆಗಳು ನಡೆಯುತ್ತಿವೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದೇಶದಲ್ಲಿ 'ಪಿತ್ರಾರ್ಜಿತ ಆಸ್ತಿ ತೆರಿಗೆ' ಜಾರಿಗೆ ತರಲಿದೆ. ಈ...