ಕೃಷಿ ಕಾಯ್ದೆಗಳ ಜಾರಿಯನ್ನು ಮುಂದಿನ ಆದೇಶದವರೆಗೂ ತಾತ್ಕಾಲಿಕವಾಗಿ ಅಮಾನತು ಮಾಡಿರುವ ಸುಪ್ರೀಂ ಕೋರ್ಟ್ ರೈತರ ಆಕ್ಷೇಪಗಳನ್ನು ಆಲಿಸಲು ನಾಲ್ವರ ಸಮಿತಿ ರಚಿಸಿ ಆದೇಶ ಹೊರಡಿಸಿದೆ. ಆದರೆ ಸಮಿತಿಯಲ್ಲಿನ ನಾಲ್ವರು ಸದಸ್ಯರು ಕೂಡ ಕೇಂದ್ರದ ವಿವಾದಾತ್ಮಕ ಕೃಷಿ ಕಾಯ್ದೆಗಳ ಸಮರ್ಥಕರೆ ಆಗಿದ್ದಾರೆ. ಹಾಗಾಗಿ ಸಮಿತಿ ನಿಷ್ಪಕ್ಷಪಾತವಾಗಿ ಕೆಲಸ ನಿರ್ವಹಿಸಲು ಸಾಧ್ಯವಿಲ್ಲ ಎಂಬ ಆಕ್ರೋಶ ಕೇಳಿಬಂದಿದೆ.
ಸಮಿತಿಯಲ್ಲಿ ಭೂಪಿಂದರ್ ಸಿಂಗ್ ಮಾನ್, ಡಾ. ಪ್ರಮೋದ್ ಕುಮಾರ್ ಜೋಷಿ, ಅಶೋಕ್ ಗುಲಾಟಿ, ಮತ್ತು ಅನಿಲ್ ಘನ್ವತ್ ಇದ್ದು ಇವರೆಲ್ಲರೂ ಈಗಾಗಲೇ ಒಂದಲ್ಲ ಒಂದು ರೀತಿಯಲ್ಲಿ ಕಾಯ್ದೆಯ ಪರವಾಗಿರುವವರು ಎಂದು ಆರೋಪಿಸಲಾಗಿದೆ. ಇದಕ್ಕೆ ಆಧಾರವೆಂಬುವಂತೆ ಕೃಷಿ ಕಾಯ್ದೆಗಳನ್ನು ಸಮರ್ಥಿಸಿಕೊಂಡಿರುವ ಇವರ ಹೇಳಿಕೆಗಳು, ಲೇಖನಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಸಮಿತಿಯ ಒಬ್ಬೊಬ್ಬರು ಕೃಷಿ ಕಾಯ್ದೆಗಳ ಕುರಿತು ಏನೇನು ಹೇಳಿದ್ದಾರೆ ಎಂಬುದನ್ನು ನೋಡೋಣ.
ಅಶೋಕ್ ಗುಲಾಟಿ
ಈ ಶಾಸನಗಳ ಆರ್ಥಿಕ ತಾರ್ಕಿಕತೆಯೆಂದರೆ ರೈತರಿಗೆ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಮತ್ತು ಖರೀದಿದಾರರಿಗೆ ಖರೀದಿಸಲು ಮತ್ತು ಸಂಗ್ರಹಿಸಲು ಹೆಚ್ಚಿನ ಆಯ್ಕೆ ಮತ್ತು ಸ್ವಾತಂತ್ರ್ಯವನ್ನು ಒದಗಿಸುವುದು, ಇದರಿಂದಾಗಿ ಕೃಷಿ ವ್ಯಾಪಾರೋದ್ಯಮದಲ್ಲಿ ಸ್ಪರ್ಧೆಯನ್ನು ಸೃಷ್ಟಿಸುತ್ತದೆ. ಈ ಸ್ಪರ್ಧೆಯು ಮಾರ್ಕೆಟಿಂಗ್ ವೆಚ್ಚವನ್ನು ಕಡಿಮೆ ಮಾಡುವುದರ ಮೂಲಕ, ಉತ್ತಮ ಬೆಲೆ ಆವಿಷ್ಕಾರವನ್ನು ಶಕ್ತಗೊಳಿಸುವ ಮೂಲಕ, ರೈತರಿಗೆ ಬೆಲೆ ಸಾಕ್ಷಾತ್ಕಾರವನ್ನು ಸುಧಾರಿಸುವ ಮೂಲಕ ಮತ್ತು ಅದೇ ಸಮಯದಲ್ಲಿ ಗ್ರಾಹಕರು ಪಾವತಿಸುವ ಬೆಲೆಯನ್ನು ಕಡಿಮೆ ಮಾಡುವ ಮೂಲಕ ಕೃಷಿಯಲ್ಲಿ ಹೆಚ್ಚು ಪರಿಣಾಮಕಾರಿ ಮೌಲ್ಯ ಸರಪಳಿಗಳನ್ನು ನಿರ್ಮಿಸಲು ಸಹಾಯ ಮಾಡುತ್ತದೆ ಎಂದು ನಿರೀಕ್ಷಿಸಲಾಗಿದೆ ಎಂದು ಅಶೋಕ್ ಗುಲಾಟಿಯವರು ದಿ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ಲೇಖನ ಬರೆದಿದ್ದಾರೆ. ಅದರಲ್ಲಿ ಅವರು ಪ್ರತಿಪಕ್ಷವು ದಾರಿ ತಪ್ಪಿದೆ ಆದರೆ ಸರ್ಕಾರವು ತನ್ನ ಕಾರ್ಯವನ್ನು ಒಟ್ಟುಗೂಡಿಸಬೇಕು ಎಂದು ಪ್ರತಿಪಾದಿಸಿದ್ದಾರೆ.
ಪ್ರಮೋದ್ ಕುಮಾರ್ ಜೋಷಿ
ನಿಜವಾದ ಬೇಡಿಕೆಗಳನ್ನು ಪರಿಗಣಿಸುವ ಬಗ್ಗೆ ಕೇಂದ್ರದ ಸಕಾರಾತ್ಮಕ ಪ್ರತಿಕ್ರಿಯೆಯ ಹೊರತಾಗಿಯೂ, ರೈತರ ಆಂದೋಲನವನ್ನು ಇನ್ನೂ ಬಗೆಹರಿಸಲಾಗಿಲ್ಲ ಎಂಬುದು ವಿಷಾದನೀಯ. ಪ್ರತಿ ಮಾತುಕತೆಗೆ ಮುಂಚಿತವಾಗಿ ರೈತರು ಗೋಲ್‌ಪೋಸ್ಟ್‌ಗಳನ್ನು ಬದಲಾಯಿಸುತ್ತಿರುವುದು ದುರದೃಷ್ಟಕರ. ಆರಂಭದಲ್ಲಿ, ರೈತರು ಮತ್ತು ರೈತ ಸಂಘಟನೆಗಳನ್ನು ಸಂಪರ್ಕಿಸದೆ ಕಾನೂನುಗಳನ್ನು ರೂಪಿಸಲಾಗಿದೆ ಎಂದು ಹೇಳಲಾಗಿತ್ತು; ಇದು ಅನ್ಯಾಯದ ಹಕ್ಕು. ಕೃಷಿ ಮಾರುಕಟ್ಟೆಗಳನ್ನು ಅನಿಯಂತ್ರಣಗೊಳಿಸುವ ವಿಷಯವು ಚರ್ಚೆಯಲ್ಲಿದೆ ಮತ್ತು ಕಳೆದ ಎರಡು ದಶಕಗಳಿಂದ ಚರ್ಚೆಯಾಗಿದೆ ಎಂದು ಪಿ.ಕೆ ಜೋಶಿಯವರು ಫೈನಾನ್ಷಿಯಲ್ ಎಕ್ಸ್‌ಪ್ರೆಸ್‌ಗೆ ಲೇಖನ ಬರೆದಿದ್ದಾರೆ.
ಭೂಪಿಂದರ್ ಸಿಂಗ್ ಮಾನ್
AIKCC ಎಂಬ ಒಕ್ಕೂಟದ ಅಧ್ಯಕ್ಷರಾದ ಇವರು 2020ರ ಡಿಸೆಂಬರ್ 14 ರಂದು ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರನ್ನು ಭೇಟಿ ಮಾಡಿ, ವಿರೋಧಗಳಿಗೆ ತಲೆಬಾಗಬೇಡಿ, ಕಾನೂನುಗಳನ್ನು ಜಾರಿಗೆ ತನ್ನಿ ಎಂದು ಮನವಿ ಪತ್ರ ನೀಡಿದ್ದರು. ಅದರ ಸುದ್ದಿ ವರದಿ ಇಲ್ಲಿದೆ.
ಅನಿಲ್ ಘನ್ವತ್
ಮಹಾರಾಷ್ಟ್ರದ ಶೇತ್ಕಾರಿ ಸಂಘಟನ್‌ನ ಅಧ್ಯಕ್ಷರಾದ ಇವರು “ಸರ್ಕಾರವು ಕಾನೂನುಗಳ ಅನುಷ್ಠಾನವನ್ನು ನಿಲ್ಲಿಸಿ, ರೈತರೊಂದಿಗೆ ಚರ್ಚಿಸಿದ ನಂತರ ಅವುಗಳನ್ನು ತಿದ್ದುಪಡಿ ಮಾಡಬಹುದು. ಆದರೆ ರೈತರಿಗೆ ಅವಕಾಶಗಳನ್ನು ತೆರೆದಿರುವ ಈ ಕಾನೂನುಗಳನ್ನು ಹಿಂತೆಗೆದುಕೊಳ್ಳುವ ಅಗತ್ಯವಿಲ್ಲ” ಎಂದು ಪ್ರತಿಪಾದಿಸಿದವರು. ಅದ ವರದಿ ಇಲ್ಲಿದೆ.
ಸುಪ್ರೀಂ ಕೋರ್ಟ್ ಪ್ರಸ್ತಾಪಿಸಿದ ನಾಲ್ಕು ಸದಸ್ಯರ ಸಮಿಯಲ್ಲಿರುವ ಪ್ರಮೋದ್ ಜೋಶಿಯವರ ಈ ಕೃಷಿ ಮಸೂದೆ ಪರವಾದ ನಿಲುವುಗಳ ಈ ಲೇಖನ ನೋಡಿ. ಇನ್ನು ಅಶೋಕ್ ಗುಲಾಟಿ ಮಸೂದೆಗಳ ಪರ ಪುಂಖಾನಪುಂಖವಾಗಿ ಲೇಖನಗಳನ್ನು ಬರೆದಿದ್ದಾರೆ. ಇದು ಮೋದಿ ಸರಕಾರ ನೇಮಿಸಿದ ಸಮಿತಿ ಎಂದು ಬಿ.ಶ್ರೀಪಾದ್ ಭಟ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸುಪ್ರೀಂ ಕೋರ್ಟ್ ಸ್ಥಾಪಿಸಿರುವ ಕಮಿಟಿಯ ಸದಸ್ಯರನ್ನು ನೋಡಿ. ಭೂಪಿಂದರ್ ಸಿಂಗ್ ಮಾನ್ ತಿದ್ದುಪಡಿಗಳೊಂದಿಗೆ ಈ ಕಾಯಿದೆ ಒಪ್ಪಿಕೊಳ್ಳಲು ಸಿದ್ಧ ಅಂದಿದ್ದರು. ಅಶೋಕ್ ಗುಲಾಟಿ ನೋಟು ರದ್ಧತಿ ಮಹಾನ್ ಕ್ರಾಂತಿಕಾರಿ ಹೆಜ್ಜೆ ಎಂದು ಹಾಡಿ ಹೊಗಳಿದ್ದ ಆಸಾಮಿ. ಅನಿಲ್ ಘನ್ವತ್ ಈ ಕಾಯಿದೆಗಳನ್ನು ಬೆಂಬಲಿಸಿದ್ದರು. ಪಿಕೆ ಜೋಷಿ ವಿಶ್ವ ಬ್ಯಾಂಕಿನ ಅರ್ಥ ಶಾಸ್ತ್ರಜ್ಞ. ಅರ್ಥಾತ್ ಈ ಅಡುಗೆ ಚೌಕಿದಾರನೇ ಸಿದ್ಧಮಾಡಿ ಬೊಬ್ಡೆ ಮೂಲಕ ಸರ್ವ್ ಮಾಡಿರೋದು ಎಂಬುದರ ಬಗ್ಗೆ ಸಂಶಯ ಬೇಡ ಎಂದು ಸುರೇಶ್ ಕಂಜರ್ಪಣೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಖ್ಯಾತ ಯೂಟ್ಯೂಬರ್ ಧೃವ್ ರಾಠೀ ಟ್ವೀಟ್ ಮಾಡಿ “ಬಹಿರಂಗವಾಗಿ ಕೃಷಿ ಕಾಯ್ದೆಗಳನ್ನು ಬೆಂಬಲಿಸಿ ನಾಲ್ಕು ವ್ಯಕ್ತಿಗಳನ್ನು ಸಮಿತಿಗೆ ಸುಪ್ರೀಂ ಕೋರ್ಟ್ ನೇಮಿಸಿದೆ. ಇದು ಹೇಗಿದೆಯೆಂದರೆ ವಿಶ್ವದ ಅತ್ಯುತ್ತಮ ಪ್ರಧಾನಿ ಯಾರೆಂದು ನಿರ್ಧರಿಸಲು ಸಂಬಿತ್ ಪಾತ್ರ, ಕಂಗನಾ ರಾಣಾವತ್, ಅರ್ನಾಬ್ ಗೋಸ್ವಾಮಿ ಮತ್ತು ರಜತ್ ಶರ್ಮಾರನ್ನು ನೇಮಿಸಿದಂತಿದೆ” ಎಂದು ವ್ಯಂಗ್ಯವಾಡಿದ್ದಾರೆ.
All 4 members of Supreme Court appointed committee have already supported the Farm Bills publicly.
It's like making a committee of –
– Sambit Patra
– Kangana Ranaut
– Arnab Goswami
– Rajat SharmaTo decide who is the best PM in the world ?
— Dhruv Rathee ?? (@dhruv_rathee) January 12, 2021
ಈ ಎಲ್ಲಾ ಕಾರಣಗಳಿಗಾಗಿಯೇ ಹೋರಾಟನಿರತ ರೈತ ಮುಖಂಡರು ಸಮಿತಿ ರಚನೆಯನ್ನು ವಿರೋಧಿಸಿದ್ದರು. “ಗೌರವಾನ್ವಿತ ಸುಪ್ರೀಂ ಕೋರ್ಟ್ ಕೃಷಿ ಕಾಯ್ದೆಗಳ ಜಾರಿಯನ್ನು ತಡೆಯುವ ಸುಪ್ರೀಂ ಕೋರ್ಟ್ ಸಲಹೆಯನ್ನು ಎಲ್ಲ ಸಂಘಟನೆಗಳು ಸ್ವಾಗತ್ತಿಸುತ್ತವೆ. ಆದರೆ ರೈತ ಸಂಘಟನೆಗಳು ಸಾಮೂಹಿಕವಾಗಿ ಹಾಗೂ ವ್ಯಕ್ತಿಗತವಾಗಿ ಸುಪ್ರೀಂ ಕೋರ್ಟ್ ನೇಮಿಸಲಿರುವ ಸಮಿತಿಯ ಸಭೆಗಳಲ್ಲಿ ಭಾಗವಹಿಸುವುದಿಲ್ಲ” ಎಂದು ನಿನ್ನೆಯೇ ಸ್ಪಷ್ಟಪಡಿಸಿದ್ದರು.
ಇದನ್ನೂ ಓದಿ: ಸುಪ್ರೀಂ ಕೋರ್ಟ್ ನೇಮಿಸುವ ಸಮಿತಿಯಲ್ಲಿ ಭಾಗವಹಿಸುವುದಿಲ್ಲ: ರೈತ ಮುಖಂಡರ ನಿರ್ಣಯ



ರೈತರ ಬಗ್ಗೆ ತಿಳಿದಿರುವವರ ಬಗ್ಗೆ – ಪುಸ್ತಕದ, ಬಾಟಲಿಯ ಬದನೆಕಾಯಿ ಮಂದಿ ಇಷ್ಟು ಬರೀತಾರಲ್ಲ !!? ನಿಮ್ಮ ಯೋಗ್ಯತೆಗೆ ಇಷ್ಟು ಬೆಂಕಿ