ಬೆಂಗಳೂರಿನ ಕುಂಬಳಗೋಡಿನಲ್ಲಿ ಕಾರ್ಯಚರಿಸುತ್ತಿರುವ ಜರ್ಮನ್ ಮೂಲದ ಸೂಜಿ ತಯಾರಿಕ ಕಂಪೆನಿ ”ಸ್ಮಿಟ್ಝ್” ವಿರುದ್ದ ಅಲ್ಲಿನ ಕಾರ್ಮಿಕರು ಎಂಟು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಕಳೆದ ಮಂಗಳವಾರ ಕಂಪೆನಿಯು ನಷ್ಟದಲ್ಲಿರುವುದರಿಂದ ಲಾಕೌಟ್ ಮಾಡಿರುವುದಾಗಿ ಹೇಳಿದ್ದ ಆಡಳಿತ ಮಂಡಳಿ ಇದೀಗ ಕಾರ್ಮಿರನ್ನು ವಜಾ ಮಾಡಿರುವುದಾಗಿ ಹೇಳುತ್ತಿದೆ ಎಂದು ಕಾಮಿರ್ಕರು ಆರೋಪಿಸುತ್ತಿದ್ದಾರೆ.
ಮಂಗಳವಾರ ಬೆಳಿಗ್ಗೆ ಪ್ರತಿಭಟನೆ ನಡೆಸುತ್ತಿದ್ದ ಕಾರ್ಮಿಕರೊಂದಿಗೆ ಮಾತುಕತೆಗೆ ಬಂದಿದ್ದ ಕಂಪೆನಿಯ ಜನರಲ್ ಮ್ಯಾನೇಜರ್ ರವಿಶಂಕರ್ ಮಹಿಳೆಯರೊಂದಿಗೆ ವಾಗ್ವಾದ ನಡೆಸಿದ್ದರು. ಈ ಸಂದರ್ಭ ಅವರ ಮಾತುಕತೆಯನ್ನು ವಿಡಿಯೋ ಮಾಡುತ್ತಿದ್ದ ಕಾರ್ಮಿಕರೊಬ್ಬರ ಮೇಲೆ ಹಲ್ಲೆ ನಡೆಸಲು ಪ್ರಯತ್ನ ಮಾಡಿದ್ದಾರೆ. ಇದು ವಿಡಿಯೋದಲ್ಲಿ ದಾಖಲಾಗಿದೆ.
ಇದನ್ನೂ ಓದಿ: ಸೂಜಿ ತಯಾರಿಕಾ ಕಂಪೆನಿ ’ಸ್ಮಿಟ್ಝ್’ ಲಾಕೌಟ್: ನೂರಾರು ಕಾರ್ಮಿಕರು ಬೀದಿಗೆ
ಈ ನಡುವೆ ಕಂಪೆನಿ ಮತ್ತು ಕಾರ್ಮಿಕರ ನಡುವಿನ ಬಿಕ್ಕಟ್ಟಿನ ಬಗ್ಗೆ ಚರ್ಚಿಸಲು ಕಾರ್ಮಿಕ ಇಲಾಖೆಯು ಎರಡೂ ಕಡೆಯವರನ್ನು ಜನವರಿ 15 ರಂದು ಮಾತುಕತೆಗೆ ಕರೆದಿದೆ.
“ಕಂಪೆನಿಯು ಏಕಾಏಕಿ ನಮ್ಮನ್ನು ವಜಾಗೊಳಿಸಿ, ನಿಮಗಿನ್ನು ಇಲ್ಲಿ ಕೆಲಸ ಇಲ್ಲ ಎಂದು ಹೇಳುತ್ತಿದೆ. ಹತ್ತದಿನೈದು ವರ್ಷದಿಂದ ಕಂಪೆನಿಯನ್ನು ಕಟ್ಟಿ ಬೆಳೆಸಿದ್ದೇವೆ. ಈಗ ನಮ್ಮನ್ನು ಕಿತ್ತು ಹಾಕಿ, ನಿಮಗೆ ಕೆಲಸವಿಲ್ಲ ಎನ್ನುತ್ತಿದ್ದಾರೆ. ಕೆಲಸದಿಂದ ಕಿತ್ತು ಹಾಕಿದ್ದಕ್ಕೆ ಕಾರಣ ನೀಡುತ್ತಿಲ್ಲ, ನಮ್ಮ ಜೀವನಾಂಶವನ್ನೂ ಕೊಟ್ಟಿಲ್ಲ. ನಾವಿಲ್ಲಿ ನಮ್ಮ ಹಕ್ಕುಗಳನ್ನು ಕೇಳುತ್ತಿದ್ದೇವೆ, ಆದರೆ ಪ್ರತಿಭಟನೆ ಮಾಡದಂತೆ ಇಲ್ಲಿನ ಅಧಿಕಾರಿಗಳು ನಮ್ಮನ್ನ ಬಂದು ಬೆದರಿಸುತ್ತಿದ್ದಾರೆ” ಎಂದು ಪ್ರತಿಭಟನಾ ನಿರತ ಕಾರ್ಮಿಕರಾದ ಗುರು ನಾನಾಗೌರಿ.ಕಾಮ್‌ನೊಂದಿಗೆ ಹೇಳಿದ್ದಾರೆ.
ಇದನ್ನೂ ಓದಿ: ಕಾರ್ಮಿಕರ ಹೋರಾಟವನ್ನು ಹತ್ತಿಕ್ಕಿದ ಶ್ರೀರಂಗಪಟ್ಟಣದ ಗಾರ್ಮೆಂಟ್ಸ್: ಅಧ್ಯಯನ ವರದಿ

New India