Homeಮುಖಪುಟಪಿಕೆ ಟಾಕಿಸ್: ಯೊರ್ಗೊಸ್ ಲಾಂತಿಮೊಸ್‌ನ ವಿಲಕ್ಷಣ ಮತ್ತು ಕಠೋರ ಪ್ರಪಂಚ

ಪಿಕೆ ಟಾಕಿಸ್: ಯೊರ್ಗೊಸ್ ಲಾಂತಿಮೊಸ್‌ನ ವಿಲಕ್ಷಣ ಮತ್ತು ಕಠೋರ ಪ್ರಪಂಚ

- Advertisement -
- Advertisement -

[ಜಾಗತಿಕ ಸಿನೆಮಾಗಳ ಈ ಸರಣಿಯಲ್ಲಿ ಮೊದಲ ಹತ್ತು ವಾರಗಳವರೆಗೆ ಗ್ರೀಸ್ ದೇಶದ ಚಲನಚಿತ್ರಗಳು ಮತ್ತು ನಿರ್ದೇಶಕರ ಬಗ್ಗೆ ಬರಹಗಳು ಮೂಡಿ ಬರಲಿವೆ]

ಡಾಗ್‌ಟೂತ್(2009, ಗ್ರೀಕ್)

ಡಾಗ್‌ಟೂತ್ ಅಂದರೆ ಕೋರೆಹಲ್ಲು. ಒಂದು ಕುಟುಂಬ ಊರಿನಾಚೆ, ಹೊರಗಿನ ಪ್ರಪಂಚದ ಸಂಬಂಧ ಮತ್ತು ಸಂಪರ್ಕವೇ ಇಲ್ಲದೆ ಬದುಕುತ್ತಿರುತ್ತದೆ. ಕೇವಲ ತಂದೆ ಮಾತ್ರ ಮನೆಯಿಂದಾಚೆಗೆ ಹೋಗಿ ತನ್ನ ಕೆಲಸವನ್ನು ಮುಗಿಸಿಕೊಂಡು ಮನೆಯವರಿಗೆ ಬೇಕಾದದ್ದನ್ನು ತಂದು ಕೊಡುತ್ತಿರುತ್ತಾನೆ. ಮುಚ್ಚಿಟ್ಟ ಟೆಲಿಫೋನಿನ ಮೂಲಕ ತಾಯಿ ಅಗತ್ಯ ಬಿದ್ದಾಗ ಮಾತ್ರ ಮಕ್ಕಳಿಗೆ ತಿಳಿಯದಂತೆ ರಹಸ್ಯವಾಗಿ ತಂದೆಯನ್ನು ಸಂಪರ್ಕಿಸುತ್ತಾಳೆ. ಮನೆಯ ಪ್ರಪಂಚದಲ್ಲಿ ತಂದೆ ಹೇಳಿದನ್ನೇ ಮತ್ತು ತೋರಿಸದನ್ನೇ ಬೆಳೆದ ಮೂವರು ಮಕ್ಕಳು (ಒಂದು ಗಂಡು, ಎರಡು ಹೆಣ್ಣು) ನಂಬಿಕೊಂಡಿರುತ್ತಾರೆ.

ಮೊದಲ ದೃಶ್ಯದಲ್ಲಿ ಸರಾಸರಿ ಹತ್ತೊಂಬತ್ತು ವಯಸ್ಸಿನ ಈ ಮೂರೂ ಮಕ್ಕಳು, ಟೇಪ್ರಿಕಾರ್ಡರಿನ ಸಹಾಯದಿಂದ ಪದಗಳ ತಪ್ಪಾದ ಅರ್ಥಗಳನ್ನು ಗಂಭೀರವಾಗಿ ಕಲಿಯುತ್ತಿರುತ್ತಾರೆ. ಅವರ ಲೋಕದಲ್ಲಿ ಟೆಲಿಫೋನ್ ಎಂದರೆ ಉಪ್ಪಿನ ಡಬ್ಬಿಯಂತಲೂ ಮತ್ತು ಸಮುದ್ರ ಎಂದರೆ ಚರ್ಮದಿಂದ ಮಾಡಿದ ಕುರ್ಚಿ ಎಂದು ಕಲಿಯುವುದು ಅವರ ಮನೆಶಾಲೆಯ ಭಾಗವಾಗಿರುತ್ತದೆ. ಹೀಗೆ ವಿಲಕ್ಷಣ ರೀತಿಯಲ್ಲಿ ಮುಂದುವರೆಯುವ ಸಿನಿಮಾದಲ್ಲಿ, ಈ ಮನೆ ಸದಸ್ಯರು ಒಂದು ದೇಶದ ಪ್ರಜೆಗಳಿಗೆ ಸಾಂಕೇತಿಕವಾಗಿಯೂ ಮತ್ತು ತಂದೆ ಫ್ಯಾಸಿಸ್ಟ್ ನಾಯಕನ ಪ್ರತೀಕವಾಗಿಯೂ ಕಾಣತೊಡಗುತ್ತಾನೆ. ಸಿನಿಮಾದಲ್ಲಿ ಯಾವುದೇ ರೀತಿಯ ವಿವರಣೆಯಾಗಲೀ ಅಥವಾ ಪೂರ್ವದ ಕಥೆಗಳನ್ನಾಗಲೀ ನಿರ್ದೇಶಕ ಹೇಳದೆ ಅಥವಾ ತೋರಿಸದೆ, ಪ್ರೇಕ್ಷಕನ ಮನಸ್ಸಿನಲ್ಲಿ ವಿವಿಧ ಪ್ರಶ್ನೆಗಳು ಹುಟ್ಟುವಂತೆ ಮಾಡುತ್ತಾನೆ.

ಫಾಸಿವಾದದ ದುರಾಡಳಿತದಲ್ಲಾಗುವ ವಿವಿಧ ಲಕ್ಷಣಗಳನ್ನು ನಿರ್ದೇಶಕ ಅದ್ಭುತವಾಗಿ ಕಟ್ಟಿಕೊಡುತ್ತಾನೆ. ಉದಾಹರಣೆಗೆ ತಪ್ಪು ಮಾಹಿತಿ/ಸಮಾಚಾರ, ಸಂಪೂರ್ಣವಾಗಿ ಸುದ್ದಿ ಮಾಧ್ಯಮಗಳ ಮೇಲಿನ ಹಿಡಿತ, ಅದನ್ನು ದಾಟಲು ಪ್ರಯತ್ನಿಸಿದವರನ್ನು ಕ್ರೂರವಾಗಿ ಶಿಕ್ಷಿಸುವುದು, ಇಡೀ ದೇಶವನ್ನು ಒಬ್ಬನೇ ಒಬ್ಬ ನಾಯಕ ಮಾತ್ರ ಮುನ್ನಡೆಸಲು ಸರ್ವಶಕ್ತ-ಮಿಕ್ಕವರೆಲ್ಲ ಅಸಮರ್ಥರು ಎಂಬ ತಪ್ಪು ಕಲ್ಪನೆ, ದೇಶಕ್ಕೆ ಅಪಾಯಕಾರಿ ವೈರಿಗಳಿಂದ ತೀವ್ರ ದಾಳಿಗಳಾಗಬಹುದೆಂಬ ಭ್ರಾಂತಿ ಮತ್ತು ಈ ಒಬ್ಬ ನಾಯಕನಿರುವುದರಿಂದಲೇ ಸುರಕ್ಷಿತರಾಗಿದ್ದೇವೆ ಎಂಬ ಪ್ರಪೊಗಾಂಡ, ಈ ನಾಯಕ ದೇಶಕ್ಕಾಗಿ ತನ್ನ ಜೀವನವನ್ನೇ ಮುಡಿಪಾಗಿಟ್ಟಿದ್ದಾನೆಂಬ ಭ್ರಮೆಗಳನ್ನು ಪ್ರಜೆಗಳ ಮನಸ್ಸಿನಲ್ಲಿ ತುಂಬಿಸಿ, ಪ್ರಶ್ನಾತೀತ ನಾಯಕನನ್ನಾಗಿಸಿ ವ್ಯಕ್ತಿಪೂಜೆ ಮಾಡುವಂತಹ ಸಂಗತಿಗಳನ್ನು ಈ ಸಿನಿಮಾದಲ್ಲಿ ರೂಪಕವಾಗಿ ಕಾಣಬಹುದು.

PC : Amargi Istanbul -WordPress.com (ಡಾಗ್‌ಟೂತ್)

ಡಾಗ್‌ಟೂತ್ ಸಿನಿಮಾದಲ್ಲಿ ಚಿತ್ರಿತವಾಗುವ ಈ ಕುಟುಂಬದಲ್ಲಿ, ಮನೆಯಿಂದ ಹೊರಗೆ ಹೋದರೆ ಅತಿ ಅಪಾಯ, ಬದುಕುಳಿಯುವುದು ಅಸಾಧ್ಯ ಎಂಬ ಭ್ರಮೆಯನ್ನು ಬೆಳೆದು ನಿಂತ, ಆದರೂ ಚಿಕ್ಕ ಮಕ್ಕಳಂತೆ ವರ್ತಿಸುವ ತರುಣ ವಯಸ್ಸಿನವರಲ್ಲಿ ತಲೆಯಲ್ಲಿ ಗಾಢಾವಾಗಿ ತುಂಬಲಾಗಿರುತ್ತದೆ. ಆಕಾಶದಲ್ಲಿ ಹಾರುವ ವಿಮಾನಗಳು ಅವರ ಅಂಗಳದಲ್ಲಿ ಆಟಿಕೆಯಾಗಿ ಬೀಳುವುದು ನಿಜವೆಂದುಕೊಂಡು ಬೆಳೆದಿರುತ್ತಾರೆ ಅವರು. ಆ ವಿಮಾನದ ಆಟಿಕೆಗಾಗಿ ಸಣ್ಣ ಮಕ್ಕಳಂತೆ ಹೊಡೆದಾಡುವ ಮತ್ತು ಒಮ್ಮೆ ಅಣ್ಣತಂಗಿಯರು ಸೇರಿ ಒಂದು ಹೊಸ ಆಟದ ಕುರಿತು ಮಾತನಾಡುವಾಗ, ಈ ಆಟದ ಹೆಸರೇನು ಚರ್ಚಿಸುವಾಗ, ಅರ್ಥವಾಗದೆ ಖಾಲಿಯಾಗಿ ನಿಂತು ಬಿಡುವ ದೃಶ್ಯಗಳಲ್ಲಿ, ಅವರು ಯೋಚಿಸುವ ಸಾಮರ್ಥ್ಯವನ್ನೇ ಕಳೆದುಕೊಂಡ ಜೈವಿಕ ಗೊಂಬೆಗಳಂತೆ ಕಾಣುತ್ತಾರೆ.

ಇಲ್ಲಿ ಯಾವ ಪಾತ್ರಗಳಿಗೂ ಹೆಸರುಗಳಿಲ್ಲ. ತಂದೆ ತನ್ನ ಕಾರ್ಖಾನೆಯಲ್ಲಿ ಸೆಕ್ಯುರಿಟಿ ಗಾರ್ಡ್‌ಆಗಿ ಕೆಲಸ ಮಾಡುವ ಹೆಣ್ಣನ್ನು ಕಣ್ಣಿಗೆ ಬಟ್ಟೆ ಕಟ್ಟಿ ಮನೆಗೆ ಕರೆತರುತ್ತಾನೆ. ಹೊರಗಿನ ಲೋಕದ ಬೇರೆ ವ್ಯಕ್ತಿಯನ್ನು ನೋಡಿದ ಮಕ್ಕಳು(ಬೆಳೆದ) ಖುಷಿಯಿಂದ ಅವಳ ಜೊತೆಯಲ್ಲಿ ಕುಳಿತುಕೊಳ್ಳುತ್ತಾರೆ. ತಂದೆ ಅವರನ್ನೆಲ್ಲ ಕೂರಿಸಿ ಸಂತೋಷಕ್ಕಾಗಿ ವಿಡಿಯೋ ಮಾಡುತ್ತಾನೆ. ಅವಳನ್ನು ಮನೆಗೆ ತಂದ ಉದ್ದೇಶವೆಂದರೆ ಬೆಳೆದ ಮಗನ ಲೈಂಗಿಕ ಕ್ರಿಯೆಗಾಗಿ ಮಾತ್ರ. ಮಕ್ಕಳ ಮುಗ್ಧತೆಯನ್ನು ಗಮನಿಸುವ ಗಾರ್ಡ್ ಒಬ್ಬ ಹುಡುಗಿಯನ್ನು ತನ್ನ ಲೈಂಗಿಕಾಸಕ್ತಿಗೆ ಬಳಸಿಕೊಳ್ಳುತ್ತಾಳೆ ಮತ್ತು ಅದಕ್ಕೆ ಬದಲಾಗಿ ಸಿನಿಮಾದ ಕ್ಯಾಸೆಟೊಂದನ್ನು ಕೊಡುತ್ತಾಳೆ. ಆ ಸಿನಿಮಾ ಕ್ಯಾಸೆಟ್‌ಅನ್ನು ಕದ್ದು ನೋಡುತ್ತಿರುವಾಗ ತಂದೆಯ ಕೈಗೆ ಸಿಕ್ಕಿಬಿದ್ದು ಕ್ರೂರವಾದ ಶಿಕ್ಷೆಗೆ ಒಳಪಡುತ್ತಾಳೆ.

ಮನೆಯಿಂದ ಯಾವಾಗ ಹೊರಹೋಗಬೇಕೆಂಬ ಪ್ರಶ್ನೆಯನ್ನು ಮಕ್ಕಳು ಕೇಳಿದಾಗ, ಅವರ ಕೋರೆಹಲ್ಲು ಬಿದ್ದ ಹೋದ ನಂತರ ಎನ್ನುವ ಉತ್ತರ ಸಿಗುತ್ತದೆ. ಕದ್ದು ಸಿನಿಮಾ ನೋಡಿದ ಹುಡುಗಿ ಕಬ್ಬಿಣದ ರಾಡಿನಿಂದ ತನ್ನ ಕೋರೆಹಲ್ಲನ್ನು ಹೊಡೆದು ಕಿತ್ತು, ಮನೆಯಿಂದ ಹೊರಹೋಗಲು ಪ್ರಯತ್ನಿಸುವುದೇ ಸಿನಿಮಾದ ಅಂತ್ಯ.

ದಿ ಲಾಬ್ಸ್‌ಟರ್(2015, ಇಂಗ್ಲಿಷ್)

ಮಧ್ಯವಯಸ್ಸಿನ ವ್ಯಕ್ತಿಯೊಬ್ಬ ನಾಯಿಯಾಗಿರುವ ತನ್ನ ಅಣ್ಣನನ್ನು ಹಿಡಿದುಕೊಂಡು ಹೋಟಲಿಗೆ ಬರುತ್ತಾನೆ. ಅಲ್ಲಿದ್ದ ಸಿಬ್ಬಂದಿ, ನಲವತ್ತೈದು ದಿನಗಳಲ್ಲಿ ನಿಮ್ಮ ಬಾಳ ಸಂಗಾತಿಯನ್ನು ಹುಡುಕಿ ಸೇರದೆಹೋದರೆ ನೀವು ಯಾವ ಪ್ರಾಣಿಯಾಗಲು ಇಚ್ಛಿಸುತ್ತೀರಾ? ಎಂದು ಕೇಳಿದಾಗ, ಅದಕ್ಕೆ ಅವನು ಲಾಬ್ಸ್‌ಟರ್ ಎನ್ನುತ್ತಾನೆ.

ಈ ಸಿನಿಮಾ ನಮ್ಮ ಬದುಕಿನಲ್ಲಿ ಬಾಳ ಸಂಗಾತಿಯನ್ನು ಪಡೆಯುವ ಪ್ರಕ್ರಿಯೆ ಮತ್ತು ಇದರಲ್ಲಿ ಸೋತವರ ಬಗೆಗಿನ ಸಮಾಜದ ಕಠೋರತೆ, ಒಂಟಿಯಾಗಿ ಬದುಕುತ್ತಿರುವವರನ್ನು ಪ್ರಾಣಿಯಂತೆ ನೋಡುವ ದೃಷ್ಟಿಕೋನ, ನಿಗದಿತ ಅವಧಿಯಲ್ಲಿ ಮದುವೆಯಾಗದೇ ಹೋದರೆ ಬದುಕೆ ವ್ಯರ್ಥ ಎನ್ನುವ ಸಮಾಜದ ವಾದವನ್ನು ತನ್ನದೇ ಶೈಲಿಯಲ್ಲಿ ನಿರ್ದೇಶಕ ಚಿತ್ರಿಸಿದ್ದಾನೆ.

 

ಹೋಟಲಿನ ನಲವತ್ತೈದು ದಿನಗಳ ವಾಸದಲ್ಲಿ ಅಲ್ಲಿ ನೆಲೆಸಿದವರು ಜೋಡಿಯಾಗಿ ಬದುಕುವ ಅನುಕೂಲಗಳು ಮತ್ತು ಒಂಟಿಯಾಗಿರುವವರ ತೊಂದರೆಗಳನ್ನು ಚಿತ್ರಿಸಲಾಗಿದೆ. ದೈಹಿಕ ಊನಗಳನ್ನು ಹೊಂದಿರುವವರು ಬಾಳಸಂಗಾತಿಯನ್ನು ಹುಡುಕಿದರೆ ಮಾತ್ರ ಅದು ಒಳ್ಳೆಯ ಜೋಡಿ ಎನ್ನುವ ವಾದವನ್ನು ಕೆಲವರು ಮಂಡಿಸುತ್ತಾರೆ. ನೆಲೆಸಿರುವ ಸಮಯ ಹತ್ತಿರವಾದಂತೆ ಹೆಣ್ಣು, ಗಂಡುಗಳು ಜೋಡಿಯನ್ನು ಪಡೆಯುವ ಸಲುವಾಗಿ ಮಾಡುವ ಸುಳ್ಳು, ಮೋಸಗಳು, ಇವು ಫಲಿಸದೆ ಹೋದಾಗ, ಆತ್ಮಹತ್ಯೆ ಮಾಡಿಕೊಳ್ಳುವ ಕೆಲವರು, ಹೋಟಲಿನಿಂದ ಹೊರಗೆ ಹೋಗಿ, ಕಾಡಿನಲ್ಲಿ ಒಂಟಿಯಾಗಿ ಬದುಕುವವರ ಗುಂಪಿಗೆ ಸೇರಿಕೊಳ್ಳುವ ಮತ್ತಷ್ಟು ಜನ, ಹೀಗೆ ಸಿನಿಮಾ ಮುಂದುವರೆಯುತ್ತದೆ.

ಈ ಕಥೆಯ ಮುಖ್ಯಪಾತ್ರಧಾರಿಯೂ ಕಾಡಿನ ಗುಂಪಿನೊಳಗೆ ಸೇರಿಕೊಳ್ಳುತ್ತಾನೆ. ಆದರೆ ಈ ಗುಂಪಿನ ನಿಯಮಗಳು ತದ್ವಿರುದ್ಧವಾಗಿರುತ್ತವೆ. ಒಂಟಿಯಾಗಿಯೇ ಇರಬೇಕು, ಯಾವುದೇ ಕಾರಣಕ್ಕೂ ಪ್ರೇಮ ಸ್ನೇಹ ಸಂಬಂಧಗಳನ್ನು ಇಟ್ಟುಕೊಳ್ಳಬಾರದು. ಆದರೆ ಮುಖ್ಯಪಾತ್ರಧಾರಿ ತನ್ನಂತೆಯೇ ದೃಷ್ಟಿದೋಷವಿರುವ ಹೆಣ್ಣನ್ನು ಇಷ್ಟಪಡುತ್ತಾನೆ. ಪರಸ್ಪರ ರಹಸ್ಯವಾಗಿ ಮೋಹಿಸುತ್ತಾರೆ. ಈ ವಿಷಯವನ್ನು ಗುಟ್ಟಾಗಿಡಲು ಪ್ರಯತ್ನಿಸಿದರೂ, ಅವರ ರಹಸ್ಯ ಮುರಿದಾಗ ಈ ಜೋಡಿಯಲ್ಲಿ ಆಗುವ ಬದಲಾವಣೆಗಳೇ ಸಿನಿಮಾದ ಕೊನೆ.

PC : Medium, (ದಿ ಲಾಬ್ಸ್‌ಟರ್)

ಒಂದು ಕಡೆ ಹೋಟಲಿನವರು ಮತ್ತೊಂದು ಕಡೆ ಕಾಡಿನವರನ್ನು ಬಿಟ್ಟು ಮೂರನೇ ಸಮೂಹವಿರುತ್ತದೆ. ಅಲ್ಲಿ ಸಾಮಾವಾಗಿ ಮಾಲ್‌ಗಳು, ಅಂಗಡಿಗಳು, ಮನೆಗಳು ಇರುತ್ತವೆ. ಅಲ್ಲಿ ಮದುವೆಯಾಗಿ/ಜೋಡಿಯಾಗಿ ಬದುಕುತ್ತಿರುವ ಸಮೂಹ ಇರುತ್ತದೆ. ಅದೇ ಮುಖ್ಯವಾಹಿನಿ. ಒಮ್ಮೆ ಮುಖ್ಯಪಾತ್ರಧಾರಿ ಒಂಟಿಯಾಗಿ ನಿಂತಿರುವಾಗ ಒಬ್ಬ ಪೊಲೀಸ್ ಅಧಿಕಾರಿ ಬಂದು, ನಿನ್ನ ಬಾಳಸಂಗಾತಿ ಎಲ್ಲಿ? ಮತ್ತು ನಿನ್ನ ಮದುವೆಯ ಪುರಾವೆಗಳನ್ನು ತೋರಿಸು ಎನ್ನುವಾಗ ಈ ನಮ್ಮ ನಾಗರಿಕ ಸಮಾಜ ಮದುವೆ/ಬಾಳಸಂಗಾತಿ ವಿಷಯದಲ್ಲಿ ನಿಯಮಗಳು, ನಿಬಂಧನೆಗಳನ್ನು ಮಾಡಿ, ವೈಯಕ್ತಿಕ ಬದುಕಿನ ಮೇಲೆ ಹೇರುವ ಒತ್ತಡಗಳು ಕಾಣತೊಡಗುತ್ತವೆ.

ನಾವು ಕೇಳುವ ಪ್ರತಿ ಕಥೆಯಲ್ಲೂ ನಾಯಕ ತನ್ನ ಬಾಳಸಂಗಾತಿಯನ್ನು ಗೆಲ್ಲಲೇಬೇಕು, ಅವಳನ್ನು ತೊಂದರೆಗಳಿಂದ ಕಾಪಾಡಲೇಬೇಕು, ಅದೇ ಕಥೆಯ ಸುಖಾಂತ್ಯ ಮತ್ತು ಸಮಾಜದ ಪದ್ಧತಿ ಎಂಬುದಾಗಿ ನಂಬಿಸಲಾಗಿಬಿಟ್ಟಿದೆ. ಈಗಲೂ ಒಬ್ಬ ವ್ಯಕ್ತಿ ಒಂಟಿಯಾಗಿ ಬದುಕುತ್ತಿದ್ದರೆ ಸಾಕು, ಅವನಲ್ಲಿ ದೋಷವಿರಬಹುದೆಂದು ಸಮಾಜವೇ ಊಹಿಸಿಕೊಳ್ಳುತ್ತದೆ. ಸಮಾಜದ ಯಾವುದೇ ಹಂತಗಳಲ್ಲಿಯಾದರೂ ಸರಿ, ಮದುವೆಯಾಗಿರುವವರ ಕುರಿತು ಮೃದು ಧೋರಣೆ, ಒಂಟಿಯಾಗಿರುವವರನ್ನು ಅಪರಾಧಿಗಳೆಂದು ನೋಡುವ ಸಮಾಜದ ಕಠೋರ ನಂಬಿಕೆಗಳನ್ನು ಈ ಸಿನಿಮಾ ನೈಜವಾಗಿ ತೋರಿಸುತ್ತದೆ.

ಯೊರ್ಗೊಸ್ ಲಾಂತಿಮೊಸ್

ಸಾಮಾನ್ಯವಾಗಿ ಸಿನಿಮಾಗಳಲ್ಲಿ ಪಾತ್ರಗಳು ಮತ್ತು ಅವುಗಳ ನಡುವಿನ ಸಂಘರ್ಷಗಳಿಂದ ಉಂಟಾಗುವ ಸನ್ನಿವೇಶಗಳನ್ನು ಕಥೆಯಾಗಿ ಚಿತ್ರಿಸಿ ಸಿನಿಮಾ ಮಾಡುತ್ತಾರೆ. ಆದರೆ ಗ್ರೀಸ್‌ನ ಯೊರ್ಗೊಸ್ ಲಾಂತಿಮೊಸ್ ಸೃಷ್ಟಿಸುವ ಪಾತ್ರಗಳು ಬದುಕುವ ಪ್ರಪಂಚ ಮತ್ತು ಅವರ ಬದುಕಿನ ನಿಯಮಗಳನ್ನು ಹೆಚ್ಚು ವಿಲಕ್ಷಣವಾಗಿರುತ್ತವೆ. ಇಲ್ಲಿ ಕಾಣುವ ಪ್ರಪಂಚ ನಾವು ಬದುಕುತ್ತಿರುವ ಸಮಾಜದ ನಂಬಿಕೆ ಮತ್ತು ಲೋಪಗಳನ್ನು ಪ್ರತಿಬಿಂಬಿಸುತ್ತಿದ್ದರೂ, ಅಲ್ಲಿ ಒಂದು ರೀತಿಯ ನಿರ್ಭಾವುಕತೆ ಇರುತ್ತದೆ ಮತ್ತು ಇವರು ಸಿನೆಮಾ ಕಟ್ಟಿಕೊಡುವ ಶೈಲಿ ನಿರ್ದಯಿಯಾಗಿರುತ್ತದೆ.

ಲಾಂತಿಮೊಸ್ ತಮ್ಮ ಸಿನಿಮಾ ಪ್ರಯಾಣವನ್ನು ಗ್ರೀಕ್ ಭಾಷೆಯ ಕೆನಿಟ್ಟಾ(2005), ಡಾಗ್‌ಟೂತ್(2009) ಮತ್ತು ಆಲ್ಪ್ಸ್(2011)ಗಳನ್ನು ಬರೆದು ನಿರ್ದೇಶನ ಮಾಡುವುದರ ಮೂಲಕ ಪ್ರಾರಂಭಿಸಿದರೂ, ಡಾಗ್‌ಟೂತ್ ಸಿನಿಮಾದ ಖ್ಯಾತಿಯಿಂದ ಇಂಗ್ಲಿಷ್ ಭಾಷೆಯಲ್ಲಿ ಸಿನಿಮಾ ಮಾಡುವ ಅವಕಾಶಗಳು ಅವರಿಗೆ ತೆರೆದುಕೊಳ್ಳುತ್ತವೆ. ದಿ ಲ್ಯಾಬ್‌ಸ್ಟರ್(2015), ದಿ ಕಿಲ್ಲಿಂಗ್ ಅಫ್ ಎ ಸೇಕ್ರೆಡ್ ಡೀರ್(2017) ಮತ್ತು ದಿ ಫೇವರೆಟ್(2018) ಸಿನಿಮಾಗಳನ್ನು ಇಂಗ್ಲಿಷ್ ಭಾಷೆಯಲ್ಲಿ ಬರೆದು ನಿರ್ದೇಶಿಸುತ್ತಾರೆ. ಇವರ ಎಲ್ಲ ಸಿನಿಮಾಗಳು ಅಂತಾರಾಷ್ಟ್ರೀಯ ಸಿನಿಮೋತ್ಸವಗಳಲ್ಲಿ ಹಲವು ಪ್ರಶಸ್ತಿಗಳನ್ನು ಗಳಿಸಿವೆ.

ಇವರ ಮೊದಲ ಸಿನಿಮಾಗಳ ಶೈಲಿಯನ್ನು ಗಮನಿಸಿದರೆ, ಕೇವಲ ದೃಶ್ಯಗಳು ಮತ್ತು ಶಬ್ದಗಳಿಂದಲೇ ಸಿನಿಮಾ ಕಟ್ಟುವುದು, ಹಿನ್ನೆಲೆ ಸಂಗೀತವನ್ನು ಸಂಪೂರ್ಣವಾಗಿ ತಿರಸ್ಕರಿಸುವ ಶೈಲಿ ಇದೆ. ಕಥೆ ಕೇವಲ ನೆಪಾ ಮಾತ್ರ. ದೃಶ್ಯ ಮತ್ತು ಶಬ್ದಗಳಿಂದಲೇ ಪ್ರೇಕ್ಷಕನ ಮನಸ್ಸಿನಲ್ಲಿ ಭಾವನೆಗಳು ಅಥವಾ ಪ್ರಶ್ನೆಗಳನ್ನು ಮೂಡಿಸುವುದರಲ್ಲಿ ಅವರು ಯಶಸ್ವಿಯಾಗಿದ್ದಾರೆ. ಡಾಗ್‌ಟೂತ್ ಸಿನಿಮಾದಲ್ಲಿ ಮೂವರು ಬೆಳೆದ ಮಕ್ಕಳನ್ನು, ಫ್ರೇಮ್‌ನಲ್ಲಿ ತಲೆಗಳಿಲ್ಲದೇ ಬರೀ ದೇಹ, ಕೈಗಳು ಮತ್ತು ಕಾಲುಗಳನ್ನು ಮಾತ್ರ ತೋರಿಸುವುದರಿಂದ, ಅವರು ತಲೆಯಿಲ್ಲದ ಅಂದರೆ ಯೋಚಿಸಲಾಗದ ಗೊಂಬೆಗಳು ಎನ್ನುವುದನ್ನು ಮಾರ್ಮಿಕವಾಗಿ ಕಟ್ಟಿಕೊಡುತ್ತಾರೆ.

PC : IMDb, (ಯೊರ್ಗೊಸ್ ಲಾಂತಿಮೊಸ್)

ದಿ ಲಾಬ್ಸ್‌ಟರ್ ಸಿನಿಮಾದಲ್ಲಿ ಬಳಸುವ ಬಣ್ಣಗಳು ಅತ್ಯಂತ ಖಿನ್ನತೆ ಮತ್ತು ಕೊರಗನ್ನು ಸಂಕೇತಿಸುತ್ತವೆ. ಯಾವುದೇ ಪಾತ್ರಗಳು ಭಾವೋದ್ವೇಗವನ್ನು ಪ್ರದರ್ಶಿಸದೆ, ಎಲ್ಲ ಭಾವನೆಗಳನ್ನು ಅಮುಕಿ ಹಿಡಿದಾಗ ಮೂಡುವ ನಿರ್ಭಾವುಕತೆಯನ್ನು ವೀಕ್ಷಕ ಅನುಭವಿಸುವಂತೆ ಮಾಡುವುದೇ ವಿಚಿತ್ರ. ಸಾಮಾನ್ಯವಾಗಿ ನಿರ್ದೇಶಕರು ಸಿನಿಮಾ ನೋಡುತ್ತಿದ್ದೇವೆಂಬ ಪ್ರಜ್ಞೆಯನ್ನು ಮರೆಸುವಂತೆ ಕಥೆಯೊಳಗೆ ಕರೆದುಕೊಂಡು ಹೋಗುವುದು ವಾಡಿಕೆ, ಆದರೆ ಲಾಂತಿಮೊಸ್ ಮಾತ್ರ ವೀಕ್ಷಕನಿಗೆ ಇದು ಸಿನಿಮಾ ಎಂಬುದನ್ನು ತನ್ನ ಫ್ರೇಮ್ ಸಂಯೋಜನೆಯಲ್ಲಿ ಮತ್ತು ಕ್ಯಾಮರಾದ ಚಲನೆಯಲ್ಲಿ ಸದಾ ನೆನಪಿಸುತ್ತಾನೆ.

ದಿ ಫೇವರಿಟ್ ಸಿನಿಮಾದಲ್ಲಿ ಇಂಗ್ಲೆಂಡಿನ ರಾಣಿಯ ಅರಮನೆಯಲ್ಲಿ ರಾಣಿಯ ಫೇವರಿಟ್ ಆಗಲು ನಡೆಯುವ ಇಬ್ಬರು ಹೆಂಗಸರ ಪ್ರಯತ್ನಗಳೇ ಕಥೆ. ಈ ಸಿನಿಮಾದಲ್ಲಿ ಬರುವ ಗಂಡಸರೆಲ್ಲ ಅತಿ ಹೆಚ್ಚಾಗಿ ಮೇಕಪ್ ಹಾಕಿ, ವಿಧೇಯಕವಾಗಿರುತ್ತಾರೆ ಆದರೆ ಹೆಂಗಸರು ಸಹಜವಾಗಿ ಯಾವುದೇ ಮೇಕಪ್ ಇಲ್ಲದೆ, ಬಲಿಷ್ಠರಾಗಿ ಅಧಿಕಾರವನ್ನು ಮುನ್ನೆಡೆಸುತ್ತಾರೆ.

ದಿ ಕಿಲ್ಲಿಂಗ್ ಅಫ್ ಎ ಸೇಕ್ರೆಡ್ ಡೀರ್ ಸಿನಿಮಾ ಸಹಜವಾಗಿ ಶುರುವಾದರೂ ಕೊನೆಗೆ ಮ್ಯಾಜಿಕ್ ರಿಯಲಿಸಂನತ್ತ ಸಾಗಿ, ಪಾತ್ರಗಳು ತಮ್ಮ ನಿಯಂತ್ರಣ ಕಳೆದುಕೊಂಡು ತರ್ಕಕ್ಕೆ ನಿಲುಕದಂತಾಗುತ್ತವೆ.

ಹೀಗೆ ಲಾಂತಿಮೊಸ್‌ನ ಪ್ರತಿ ಸಿನಿಮಾವೂ ವೀಕ್ಷಕನ ಮನಸ್ಸಿನಲ್ಲಿರುವ ಪ್ರಶ್ನೆಗಳಿಗೆ ಉತ್ತರಗಳಾಗದೆ, ಪ್ರೇಕ್ಷಕನ ಬುದ್ಧಿಮತ್ತೆಯನ್ನು ಮೇಲೆಕ್ಕೇರಿಸುವ ಮತ್ತು ಪ್ರಶ್ನೆಗಳನ್ನು ಹೆಚ್ಚಿಸುವ ಸಿನಿಮಾಗಳಾಗಿವೆ.


ಇದನ್ನೂ ಓದಿ: ತಾರಾ ದಂಪತಿಯ ಖಾಸಗಿ ಸಂಗತಿಗಳನ್ನೆ ಬಂಡವಾಳವಾಗಿರಿಸಿಕೊಂಡಿರುವ ಪತ್ರಿಕೋದ್ಯಮದ ನಡುವೆ…

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಆರು ಮಕ್ಕಳಿದ್ದರೆ ನೀವು ಮತದಾನದ ಹಕ್ಕನ್ನು ಕಳೆದುಕೊಳ್ಳಬಹುದು: ಮತದಾರರ ಪಟ್ಟಿ ‘ಕ್ಲೀನ್’ ಮಾಡಲು ECI ಹೊಸ ಪ್ಲಾನ್!

ಭಾರತದಲ್ಲಿ 'ಆರು ಅಥವಾ ಅದಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿದ್ದಾರೆ' ಎಂಬ ಕಾರಣಕ್ಕೆ ಯಾರಾದರೂ ಮತದಾನದ ಹಕ್ಕನ್ನು ಕಳೆದುಕೊಳ್ಳಲು ಸಾಧ್ಯವೇ? ಮೇಲ್ನೋಟಕ್ಕೆ ಹೌದು ಎನ್ನುವಂತಿದೆ ಉತ್ತರ ಪ್ರದೇಶದ ವಾರಾಣಸಿಯ ಕ್ಯಾಂಟೋನ್ಮೆಂಟ್ ಕ್ಷೇತ್ರದ ಮತದಾರ ಸೋನು...

ಕದನ ವಿರಾಮವೆಂಬ ಕಳ್ಳಾಟ : ಗಾಝಾದಿಂದ ಸಿರಿಯಾವರೆಗೆ ಮುಂದುವರಿದ ಇಸ್ರೇಲ್ ನರಮೇಧ

ಬರೋಬ್ಬರಿ ಎಪ್ಪತ್ತು ಸಾವಿರದಷ್ಟು (ವರದಿಗಳ ಪ್ರಕಾರ 67, 900) ಜನರನ್ನು ಹತ್ಯೆಗೈದು, ಶೇಕಡ 90ರಷ್ಟು ಜನರನ್ನು ನಿರಾಶ್ರಿತರನ್ನಾಗಿ ಮಾಡಿದ ಬಳಿಕ, ಅಕ್ಟೋಬರ್ 10, 2025ರಂದು ಗಾಝಾ ಮೇಲಿನ ಆಕ್ರಮಣಕ್ಕೆ ಸಂಬಂಧಿಸಿದಂತೆ ಇಸ್ರೇಲ್ ಕದನ...

ಚುನಾವಣಾ ಆಯೋಗಕ್ಕೆ ಪೌರತ್ವ ನಿರ್ಧಾರ ಮಾಡುವ ಹಕ್ಕಿದೆಯೇ? SIR ತೀರ್ಪಿನ ಬಗ್ಗೆ ಸುಪ್ರೀಂ ಕೋರ್ಟ್ ಹೇಳಿದ್ದೇನು?

ಮೇ 27 ರಂದು 'ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ಮತ್ತು ಭಾರತೀಯ ಚುನಾವಣಾ ಆಯೋಗ (ECI)' ನಡುವಿನ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಚುನಾವಣಾ ಪಟ್ಟಿಗಳ 'ವಿಶೇಷ ತೀವ್ರ ಪರಿಷ್ಕರಣೆ'...

ಮಹಾರಾಷ್ಟ್ರ: 80 ಲಕ್ಷ ಮಹಿಳೆಯರು ‘ಲಡ್ಕಿ ಬಹಿನ್’ ಯೋಜನೆಗೆ ಅನರ್ಹ: ಆರ್ಥಿಕ ಬಿಕ್ಕಟ್ಟಿಗೆ ಸಾಕ್ಷಿ ಎಂದು ವಿಪಕ್ಷಗಳ ಆರೋಪ

ಮುಂಬೈ: ಮಹಾರಾಷ್ಟ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದ 'ಮುಖ್ಯಮಂತ್ರಿ ಮಾಝಿ ಲಡ್ಕಿ ಬಹಿನ್' ಇ-ಕೆವೈಸಿ (e-KYC) ಪ್ರಕ್ರಿಯೆ ಪೂರ್ಣಗೊಳಿಸಲು ನೀಡಿದ್ದ ಗಡುವು ಮುಗಿದಿದ್ದು, ಸುಮಾರು 80 ಲಕ್ಷ ಮಹಿಳೆಯರು ಯೋಜನೆಯಿಂದ ಅನರ್ಹರಾಗಿದ್ದಾರೆ. ರಾಜ್ಯ ಸರ್ಕಾರವು...

ರಾಜ್ಯಸಭಾ ಚುನಾವಣೆ: ಕರ್ನಾಟದಿಂದ ಆಯ್ಕೆಯಾದ ಪ್ರತಿನಿಧಿಗಳಿಂದ ರಾಜ್ಯಕ್ಕೆ ಲಾಭವಾಗಿದೆಯೇ?

ರಾಜ್ಯಸಭೆಗೆ ಪ್ರತಿಬಾರಿ ಚುನಾವಣೆ ನಡೆಯುವಾಗಲೂ ಈ ಚರ್ಚೆಗಳು ಸಾಮಾನ್ಯ. ಕನ್ನಡೇತರರು ಇಲ್ಲಿಂದ ಆಯ್ಕೆಯಾಗಿ ಇಲ್ಲಿಯ ಸಮಸ್ಯೆಗಳ ಬಗ್ಗೆ ಮಾತನಾಡುವುದಿಲ್ಲ ಎಂಬ ವಾಸ್ತವದ ಜೊತೆಜೊತೆಗೆ, ರಾಜ್ಯಸಭೆಗೆ ಆಯ್ಕೆಯಾಗುವ ಕನ್ನಡವರಾದರೂ ಮಾತನಾಡುತ್ತಾರಾ? ಎಂದರೆ ಅದಕ್ಕೂ ನಮ್ಮಲ್ಲಿ...

ಬಂಗಾಳದಲ್ಲಿ ಬಿಜೆಪಿ ಬೆಂಬಲಿಗರ ಕ್ರೌರ್ಯ: ಅಭಿಷೇಕ್ ಬಳಿಕ ಕಲ್ಯಾಣ್‌ ಬ್ಯಾನರ್ಜಿ ಮೇಲೆ ಮಾರಣಾಂತಿಕ ದಾಳಿ

ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು ಭಾನುವಾರ (ಮೇ 31), ಹೂಗ್ಲಿ ಜಿಲ್ಲೆಯಲ್ಲಿ ನಡೆದಿದ್ದ ಚುನಾವಣೋತ್ತರ ಹಿಂಸಾಚಾರದಲ್ಲಿ ಕಾರ್ಯಕರ್ತರ ಬಂಧನದ ವಿರುದ್ಧ ಮನವಿ ಪತ್ರ ಸಲ್ಲಿಸಲು ಭೇಟಿ...

ಬಸ್ತಾರ್‌: ಬುಡಕಟ್ಟು ಕ್ರಿಶ್ಚಿಯನ್ ಕುಟುಂಬಗಳಿಗೆ ಬೆದರಿಕೆ, ಥಳಿತ, ಹಿಂದೂ ಧರ್ಮ ಸ್ವೀಕರಿಸಲು ಬಲವಂತ: ಘನತೆಯ ಬದುಕಿಗಾಗಿ ಆದಿವಾಸಿಗಳ ಹೋರಾಟ

ಛತ್ತೀಸ್‌ಗಢದ ದಟ್ಟ ಅರಣ್ಯಗಳು ಮತ್ತು ಕಡಿದಾದ ಬೆಟ್ಟಗಳಿಂದ ಆವೃತವಾಗಿರುವ ಬಸ್ತಾರ್ ಕಣಿವೆಯು ತನ್ನ ವಿಶಿಷ್ಟ ಬುಡಕಟ್ಟು ಸಂಸ್ಕೃತಿ ಮತ್ತು ಪ್ರಾಕೃತಿಕ ಸಂಪತ್ತಿಗೆ ಹೆಸರುವಾಸಿ. ಆದರೆ ಇತ್ತೀಚಿನ ವರ್ಷಗಳಲ್ಲಿ, ಈ ಪ್ರಶಾಂತ ಭೂಭಾಗವು ತೀವ್ರಗಾಮಿ...

ಗಾಝಾದಲ್ಲಿ ರಕ್ತಸಿಕ್ತ ಈದ್: ಇಸ್ರೇಲ್ ಭೀಕರ ದಾಳಿಗೆ 26 ಪ್ಯಾಲೆಸ್ಟೀನಿಯನ್ನರು ಬಲಿ, ವಿಶ್ವಸಂಸ್ಥೆ ತೀವ್ರ ಆತಂಕ

ಗಾಝಾ: ಇಸ್ಲಾಂ ಧರ್ಮದ ಅತ್ಯಂತ ಪವಿತ್ರ ದಿನಗಳಲ್ಲಿ ಒಂದಾದ ‘ಈದ್ ಅಲ್-ಅಧಾ’ ಹಬ್ಬದ ಸಂದರ್ಭದಲ್ಲೂ ಗಾಝಾ ಪಟ್ಟಿಯಲ್ಲಿ ರಕ್ತಪಾತ ಮುಂದುವರಿದಿದ್ದು, ಹಬ್ಬದ ಮುನ್ನಾದಿನದಿಂದ ಆರಂಭಿಸಿ ಇಸ್ರೇಲ್ ಪಡೆಗಳು ನಡೆಸಿದ ಸರಣಿ ದಾಳಿಗಳಲ್ಲಿ ಕನಿಷ್ಠ...

ಜನರಿಗೆ ಇಂಧನ ಉಳಿಸುವ ಪಾಠ, ಪ್ರಧಾನಿಗೆ ರೋಡ್‌ಶೋಗಳ ಆಟ

ಮೇ 10 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಾರ್ವಜನಿಕರಲ್ಲಿ ಮಿತವ್ಯಯದ ಅಪೀಲು ಮಾಡಿದ್ದು, ಇಂಧನ ಬಳಕೆಯನ್ನು ಕನಿಷ್ಠ ಮಟ್ಟಕ್ಕೆ ಇಳಿಸುವಂತೆ ಕೋರಿದ್ದರು. ಜನರು ಖಾಸಗಿ ವಾಹನಗಳ ಬಳಕೆಯನ್ನು ಬಿಟ್ಟು ಸಾರ್ವಜನಿಕ ಸಾರಿಗೆಯನ್ನು...

ಏಷ್ಯನ್ ಗೇಮ್ಸ್‌ ಟ್ರಯಲ್ಸ್‌ನಲ್ಲಿ ಸ್ಪರ್ಧಿಸಲು ವಿನೇಶ್ ಫೋಗಟ್‌ಗೆ ಅನುಮತಿಸಿದ ಭಾರತೀಯ ಕುಸ್ತಿ ಒಕ್ಕೂಟ

ಮಾಜಿ ವಿಶ್ವ ಚಾಂಪಿಯನ್‌ಶಿಪ್ ಪದಕ ವಿಜೇತೆ ವಿನೇಶ್ ಫೋಗಟ್ ಅವರು (ಮೇ 30) ಏಷ್ಯನ್ ಗೇಮ್ಸ್ ಆಯ್ಕೆ ಟ್ರಯಲ್ಸ್‌ನಲ್ಲಿ ಮಹಿಳೆಯರ 53 ಕೆಜಿ ವಿಭಾಗದಲ್ಲಿ ಸ್ಪರ್ಧಿಸಲು ಅವಕಾಶ ಪಡೆದಿದ್ದಾರೆ. ಭಾರತೀಯ ಕುಸ್ತಿ ಒಕ್ಕೂಟ...