Homeಮುಖಪುಟ’ತಲೆಗಳನ್ನು ಕತ್ತರಿಸುವ ಸಮಯ’ - ಹಿಂಸಾಚಾರಕ್ಕೆ ಕರೆ ನೀಡಿದ ನಟಿ ಕಂಗನಾ

’ತಲೆಗಳನ್ನು ಕತ್ತರಿಸುವ ಸಮಯ’ – ಹಿಂಸಾಚಾರಕ್ಕೆ ಕರೆ ನೀಡಿದ ನಟಿ ಕಂಗನಾ

- Advertisement -
- Advertisement -

ಅಮೇಜಾನ್ ಪ್ರೈಮ್‌‌ನಲ್ಲಿ ಬಿಡುಗಡೆಯಾದ ’ತಾಂಡವ್’ ವೆಬ್‌‌ ಸೀರಿಸ್‌‌‌ನ ಬಗ್ಗೆ ಟ್ವಿಟ್ಟರ್‌ನಲ್ಲಿ ಪ್ರತಿಕ್ರಿಯಿಸಿರುವ ವಿವಾದಾತ್ಮಕ ನಟಿ ಕಂಗನಾ ರಾಣಾವತ್‌, “ಅವರ ತಲೆಗಳನ್ನು ಕತ್ತರಿಸುವ ಸಮಯ” ಎಂದು ಹಿಂಸಾಚಾರಕ್ಕೆ ಕರೆ ನೀಡಿದ್ದಾರೆ. ಕಂಗನಾ ಈ ಟ್ವೀಟನ್ನು ನಂತರ ಡಿಲೀಟ್ ಮಾಡಿದ್ದಾರೆಯಾದರೂ, ಅಷ್ಟರಲ್ಲೇ ಅದರ ಸ್ಕ್ರೀನ್ ಶಾರ್ಟ್‌ಗಳು ಸಾಮಾಜಿಕ ಜಾಲತಾಣದಲ್ಲಿ ಹರಡಿದ್ದು ‌ಭಾರಿ ಆಕ್ರೋಶಕ್ಕೆ ಕಾರಣವಾಗಿದೆ.

ಟ್ವೀಟ್ಟರ್‌ನಲ್ಲಿ ತಾಂಡವ್‌ ವೆಬ್ ಸಿರೀಸ್ ಬಗ್ಗೆ ಟ್ವೀಟ್ ಮಾಡಿದ್ದ ದಿ ಅತುಲ್ ಮಿಶ್ರಾ( @TheAtulMishra) ಎಂಬವರಿಗೆ ಪ್ರತಿಕ್ರಿಯಿಸಿದ ಕಂಗನಾ, “ಭಗವಾನ್‌ ಕೃಷ್ಣ ಶಿಶುಪಾಲ ಮಾಡಿದ್ದ 99 ಪಾಪಗಳನ್ನು ಕ್ಷಮಿಸಿದ್ದರೂ ಕೂಡಾ..ಮೊದಲು ಶಾಂತಿ ನಂತರ ಕ್ರಾಂತಿಯಾಗಬೇಕು. ಅವರ ತಲೆಗಳನ್ನು ಕತ್ತರಿಸುವ ಸಮಯವಾಗಿದೆ, ಜೈ ಶ್ರೀ ಕೃಷ್ಣ” ಎಂದು ಹಿಂಸೆಗೆ ಕರೆ ನೀಡಿದ್ದಾರೆ. ಅವರು ಅತುಲ್ ಮಿಶ್ರ ಅವರ ಟ್ವೀಟ್‌ಗೆ ಪ್ರತಿಕ್ರಿಯೆ ಮಾತ್ರವಲ್ಲದೆ, ಅದನ್ನು ರೀಟ್ವೀಟ್ ಕೂಡಾ ಮಾಡಿದ್ದಾರೆ.

ಇದನ್ನೂ ಓದಿ: ಬಂಧನಕ್ಕೆ ಸಿದ್ಧರಾಗಿ: ‘ತಾಂಡವ್’ ಚಿತ್ರ ತಂಡಕ್ಕೆ ಯುಪಿ ಸಿಎಂ ಮಾಧ್ಯಮ ಸಲಹೆಗಾರನ ಬೆದರಿಕೆ

ಇದನ್ನು ಆಲ್ಟ್‌ನ್ಯೂಸ್ ಸಂಸ್ಥಾಪಕ ಝುಬೈರ್‌ ಹಂಚಿಕೊಂಡಿದ್ದು, 3 ಮಿಲಿಯನ್‌ಗಿಂತಲೂ ಹೆಚ್ಚು ಫಾಲೋವರ್‌ಗಳನ್ನು ಹೊಂದಿರುವ ಜನಪ್ರಿಯ ವ್ಯಕ್ತಿಯೊಬ್ಬರು ಸಾರ್ವಜನಿಕವಾಗಿಯೆ ಹಿಂಸೆಗೆ ಕರೆ ನೀಡುತ್ತಿದ್ದಾರೆ. ಅಷ್ಟೇ ಅಲ್ಲದೆ ಅದನ್ನು ಮತ್ತೇ ರೀಟ್ವೀಟ್ ಮಾಡಿ ಇನ್ನಷ್ಟು ಜನರಿಗೆ ತಲುಪುವಂತೆ ಮಾಡುತ್ತಿದ್ದಾರೆ. ಇವರ ವಿರುದ್ದ ಕ್ರಮ ಕೈಗೊಳ್ಳುವಿರೇ ಎಂದು ಟ್ವೀಟ್ಟರ್‌ ನಿಯಂತ್ರಕರಿಗೆ ಪ್ರಶ್ನಿಸಿದ್ದಾರೆ.

ಆನ್‌ಲೈನ್ ನಿಂದನೆ, ಟ್ರೋಲಿಂಗ್ ಮತ್ತು ಕಿರುಕುಳವನ್ನು ತಡೆಗಟ್ಟಲು ಕೆಲಸ ಮಾಡುವ ಟೀಮ್ ಸಾಥ್ ಎಂಬ ಸಂಘಟನೆಯು ಕಂಗನಾ ಅವರ ಮಾತುಗಳನ್ನು ಖಂಡಿಸಿದೆ.

ಅಮೇಜಾನ್ ಪ್ರೈಮ್‌ನಲ್ಲಿ ಬಿಡುಗಡೆಯಾಗಿರುವ ಸೈಫ್ ಅಲಿಖಾನ್ ಮತ್ತು ಡಿಂಪಲ್ ಕಪಾಡಿಯ ನಟಿಸಿರುವ ಹೊಸ ವೆಬ್ ಸೀರೀಸ್ ಆದ‌ ‘ತಾಂಡವ್‌’ನಲ್ಲಿ ಹಿಂದೂ ದೇವತೆಗಳನ್ನು ಅವಮಾನಿಸಲಾಗಿದೆ ಎಂಬ ಆರೋಪವೆದ್ದಿದೆ. ಮಹಾರಾಷ್ಟ್ರ ಬಿಜೆಪಿ ಶಾಸಕ ರಾಮ್ ಕದಮ್, ಇದರ ನಿರ್ಮಾಪಕರು, ನಿರ್ದೇಶಕರು ಮತ್ತು ನಟರ ವಿರುದ್ಧ ದೂರು ದಾಖಲಿಸಿದ್ದರು. ಅಲ್ಲದೆ ಉತ್ತರ ಪ್ರದೇಶದಲ್ಲಿಯೂ ಪ್ರಕರಣ ದಾಖಲಾಗಿದ್ದು, ಬಂಧನದ ಎಚ್ಚರಿಕೆ ನೀಡಲಾಗಿದೆ.

ಇದನ್ನೂ ಓದಿ: ಹಿಂದೂ ದೇವತೆಗಳಿಗೆ ಅವಮಾನ ಮಾಡಿದ ಆರೋಪ: ‘ತಾಂಡವ್’ ವೆಬ್‌ ಸೀರೀಸ್ ವಿರುದ್ಧ ದೂರು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಯ ಅಧಿಕೃತ ‘ಎಕ್ಸ್’ ಖಾತೆ ವಿರುದ್ಧ ಎಫ್‌ಐಆರ್‌ ದಾಖಲಿಸಿದ ಚುನಾವಣಾ ಆಯೋಗ

0
ವಿವಿಧ ಗುಂಪುಗಳು ಮತ್ತು ವರ್ಗಗಳ ನಡುವೆ ದ್ವೇಷ ಹರಡಲು ಮತ್ತು ಉತ್ತೇಜಿಸಲು ಯತ್ನಿಸುತ್ತಿರುವ ಆರೋಪದ ಮೇಲೆ ಬಿಜೆಪಿಯ ಅಧಿಕೃತ ಎಕ್ಸ್ ಖಾತೆ ವಿರುದ್ಧ ಚುನಾವಣಾ ಆಯೋಗ ಎಫ್‌ಐಆರ್‌ನ್ನು ದಾಖಲಿಸಿದೆ. ಈ ಕುರಿತು ಚುನಾವಣಾ ಆಯೋಗ...