ರೈತ ಹೋರಾಟಹೋರಾಟಕ್ಕೂ ’ಮುಸ್ಲಿಂ ಆಂಗಲ್’ ನೀಡುವ ವಿಫಲ ಯತ್ನ ಮಾಡುತ್ತಿದ್ದಾರೆ.
ಪ್ರತಿಭಟನೆಗೆ ಬೆಂಬಲ ನೀಡಲು ಬಂದವರ ಫೋಟೊ ಹಾಕಿ, ’ಪಂಜಾಬಿ ಮಹಿಳೆಯರು ಅದ್ಯಾವಾಗ ಬುರ್ಕಾ ಹಾಕಲು ಆರಂಭಿಸಿದರು?’ ಎಂದೆಲ್ಲ ಟ್ವೀಟ್ ಮಾಡಲಾಗಿದೆ. ’ಟಿಂಕು’ ಎಂಬುವವರು ಟ್ವೀಟ್ ಮಾಡಿ, ಬುರ್ಕಾ ಧರಿಸಿದ ಮಹಿಳೆಯರನ್ನು ಉದ್ದೇಶಿಸಿ, ’ನೋಡಿ ತಮ್ಮ ದಾಖಲೆ ತೋರಿಸಲು ಒಲ್ಲದ ಜನ ಇವರು’ ಎಂದಿದ್ದಾರೆ.(ಇದರ ಆರ್ಕೈವ್ ಇಲ್ಲಿ ಕ್ಲಿಕ್ ಮಾಡಿ)
ये वहीं हैं…जो कागज नहीं दिखाएंगे#Khalistan #khalistani #FarmersProtestHijacked #Ghazipur #border #FarmersProtest #किसान_आंदोलन #Tikait pic.twitter.com/iqjRr8Nmyq
— Tinku (@Tinku59733052) January 15, 2021
ಇದನ್ನೂ ಓದಿ: ಗಂಗೂಲಿಯ ಹೃದಯಾಘಾತಕ್ಕೆ ಮರುಗುವ ಮೋದಿಗೆ 60 ಹುತಾತ್ಮ ರೈತರು ಕಾಣುತ್ತಿಲ್ಲ: ಯೋಗೇಂದ್ರ ಯಾದವ್ ಕಿಡಿ
’ಇಂಡಿಯಾ ವೈರಲ್’ ಎಂಬ ವೆಬ್‌ಸೈಟಿನಲ್ಲಿ ಈ ಕುರಿತೇ ಒಂದು ಬರಹ ಪ್ರಕಟಿಸಲಾಗಿದ್ದು, ರೈತ ಪ್ರತಿಭಟನೆ ’ಇಸ್ಲಾಮಿಸ್ಟ್‌ಗಳ’ ತೆಕ್ಕೆಗೆ ಹೋಯ್ತು ಎಂದು ಸುಳ್ಳು ಆರೋಪವನ್ನು ಮಾಡಲಾಗಿದೆ. ಬುರ್ಕಾ ಹಾಕಿದವರು ನಿಜವಾಗಿಯೂ ಮಹಿಳೆಯರೇ ಎಂದು ಪ್ರಶ್ನಿಸಿರುವ ಈ ಬರಹದಲ್ಲಿ, ಇಡೀ ಹೋರಾಟವನ್ನು ಅವಹೇಳನ ಮಾಡುವ ದುರುದ್ದೇಶವೇ ತುಂಬಿದೆ.
ಫ್ಯಾಕ್ಟ್‌ಚೆಕ್
ಚಿತ್ರದ ಮೂಲ ಪತ್ತೆ ಮಾಡಿದಾಗ, ಜನವರಿ 14 ರಂದು ’ಇಂಡಿಯಾ ಮುಸ್ಲಿಮ್ಸ್’ ಎನ್ನುವ ಫೇಸ್‌ಬುಕ್ ಪೋಸ್ಟ್‌ನಲ್ಲಿ ಇದು ಪ್ರಕಟವಾಗಿದ್ದು, ಟಿಕ್ರಿ ಗಡಿಯ ಪ್ರತಿಭಟನೆಯಲ್ಲಿ ಮುಸ್ಲಿಮರು ಭಾಗಿ ಎಂದು ಬರೆಯಲಾಗಿದೆ.
ಇದನ್ನೂ ಓದಿ: 2024 ರವರೆಗೂ ಪ್ರತಿಭಟನೆ ಮುಂದುವರಿಸಲು ಸಿದ್ಧರಿದ್ದೇವೆ: ರೈತ ನಾಯಕ ರಾಕೇಶ್ ಟಿಕಾಯತ್
ಭಾರತೀಯ ಕಿಸಾನ್ ಯುನಿಯನ್ (ಬಿಕೆಯು) ಫೇಸ್‌ಬುಕ್ ಪೇಜ್‌ನಲ್ಲೂ ಈ ವಿಷಯ ಪ್ರಸ್ತಾಪ ಮಾಡಲಾಗಿದ್ದು, ಪಂಜಾಬಿನ ಮಲೇರ್‌ಕೊಲ್ಟಾ ಪ್ರದೇಶದ ಮುಸ್ಲಿಂ ಮಹಿಳೆಯರು ಟಿಕ್ರಿ ಗಡಿಯಲ್ಲಿ ರೈತ ಪ್ರತಿಭಟನೆಗೆ ಬೆಂಬಲ ಸೂಚಿಸಿ ಭಾಗಿಯಾಗಿದ್ದರು’ ಎಂದು ತಿಳಿಸಿದೆ. ಅವತ್ತು ಸಭೆಯಲ್ಲೇ ಮುಸ್ಲಿಮರು ರೈತರಿಗಾಗಿ ಪ್ರಾರ್ಥನೆ ಮಾಡಿದರು ಮತ್ತು ಮಾತನಾಡಿದರು ಎಂದು ಬಿಕೆಯು ತಿಳಿಸಿದೆ.
ಜನವರಿ 13 ರ ಟೈಮ್ಸ್ ಆಫ್ ಇಂಡಿಯಾ, ಡಾ. ನಾಸೀರ್ ಅಖ್ತರ್ ಎನ್ನುವವರ ಹೇಳಿಕೆಯನ್ನು ಉಲ್ಲೇಖಿಸಿದ್ದು, ಅಖ್ತರ್ ನೇತೃತ್ವದಲ್ಲಿ ಮಲೇರ್‌ಕೊಲ್ಟಾದ 30 ಮುಸ್ಲಿಂ ಮಹಿಳೆಯರು ರೈತ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು ಎಂದು ವರದಿ ಮಾಡಿದೆ.
ಡಾ. ಅಖ್ತರ್ ಸಿಂಘು ಗಡಿಯಲ್ಲಿ ಒಂದು ಉಚಿತ ಊಟದ ಮನೆ (ಲಂಗರ್) ನಡೆಸುತ್ತಿದ್ದಾರೆ. ಅಖ್ತರ್ ಮತ್ತು ಅವರ ಸಹೋದ್ಯೋಗಿಗಳು ರೈತರಿಗಾಗಿ ನೂರಾರು ವಾಟರ್‌ಪ್ರೂಫ್ ಟೆಂಟುಗಳನ್ನು ನಿರ್ಮಿಸಿದ್ದಾರೆ, ನೂರಕ್ಕೂ ಹೆಚ್ಚು ಹಾಸಿಗೆಗಳ ವ್ಯವಸ್ಥೆ ಮಾಡಿದ್ದಾರೆ.
ಇದನ್ನೂ ಓದಿ: ‘ರೈತ ಮಹಿಳಾ ದಿನ’: ಕೇಂದ್ರಕ್ಕೆ ಬಿಸಿಮುಟ್ಟಿಸಲು ರೈತ ಪುತ್ರಿಯರು ಸಜ್ಜು
ಶಹೀದ್ ತಾಂತ್ರೆ, ಸಾಹಿಲ್ ಎನ್ನುವವರು ಕೂಡ ಈ ಫೋಟೊ, ವಿಡಿಯೋ ಬಳಸಿ ಸಂದೇಶ ಹಾಕಿದ್ದು, ಇದು ಹಿಂದೂ-ಮುಸ್ಲಿಂ-ಸಿಖ್ಖರ ಏಕತೆ ಎಂದು ಬರೆದಿದ್ದಾರೆ.
Indian Punjabi Muslims from Maler Kotla offering evening prayers, expressing their solidarity with farmers protesting against farm laws at Tikri border. The farmers have blocked the highway for the last 50 days to express their discontent with the Modi regime.#farmersrprotest pic.twitter.com/y5U5Q45HlB
— Shahid Tantray- شاہد تانترے (@shahidtantray) January 15, 2021
ಒಟ್ಟಿನಲ್ಲಿ, ಟಿಕ್ರಿ ಗಡಿಯಲ್ಲಿ ಮುಸ್ಲಿಂ ಮಹಿಳೆಯರು ಪ್ರತಿಭಟನೆಯನ್ನು ಬೆಂಬಲಿಸಿ ಭಾಗವಹಿಸಿದ್ದು ಸತ್ಯ. ಆದರೆ ಈ ಫೋಟೊ ಬಳಸಿ ಇಲ್ಲಸಲ್ಲದ ಸುಳ್ಳು ಮಾಹಿತಿ ಹರಡುವ ಯತ್ನ ಮಾಡಲಾಗಿದೆ. ಮೊದಲಿಂದಲೂ ಪ್ರತಿಭಟನೆಯನ್ನು ಮುಸ್ಲಿಮರು ಹೈಜಾಕ್ ಮಾಡಿದ್ದಾರೆ ಎನ್ನುವ ಇತರ ಹಲವು ಸಂದೇಶಗಳು ಆಗಾಗ ಕಂಡುಬಂದಿವೆ.
ಇದನ್ನೂ ಓದಿ: ಕೃಷಿ ನೀತಿ ವಿರೋಧಿ ಹೋರಾಟ: ಪೆರು ದೇಶದ ರೈತರ ಹೋರಾಟಕ್ಕೆ ಜಯ



Aliya Alla,.. magala Ganda…