ಕೊರೊನಾ ಲಸಿಕೆ ಹಾಕಿಸಿಕೊಂಡ ಒಂದು ದಿನದ ನಂತರ ಹೈದರಾಬಾದ್‌ನಲ್ಲಿ 42 ವರ್ಷದ ಆರೋಗ್ಯ ಕಾರ್ಯಕರ್ತ ಬುಧವಾರ ನಿಧನರಾಗಿದ್ದಾರೆ. “ಮೃತರ ಮರಣೋತ್ತರ ಪರೀಕ್ಷೆ ಇನ್ನೂ ನಡೆದಿಲ್ಲ, ಆದರೆ ಇದು ಲಸಿಕೆ ಪರಿಣಾಮದಿಂದಾಗಿ ಸಂಭವಿಸಿದ ಸಾವಲ್ಲ” ಎಂದು ತೆಲಂಗಾಣ ಸರ್ಕಾರ ಹೇಳಿದೆ.
ಜನವರಿ 19 ರಂದು ಹೈದರಾಬಾದ್‌ನ ನಿರ್ಮಲ್ ಜಿಲ್ಲೆಯ ಕುಂತಲಾ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆರೋಗ್ಯ ಕಾರ್ಯಕರ್ತರೊಬ್ಬರಿಗೆ ಲಸಿಕೆ ಹಾಕಲಾಯಿತು. ಇದಾಗಿ ಒಂದು ದಿನದ ನಂತರ, ಅವರಿಗೆ ಎದೆ ನೋವು ಕಾಣಿಸಿಕೊಂಡಿದ್ದು ಬೆಳಿಗ್ಗೆ 5:30 ರ ಸುಮಾರಿಗೆ ನಿರ್ಮಲ್‌ನ ಜಿಲ್ಲಾ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
“ಪ್ರಾಥಮಿಕ ಸಂಶೋಧನೆಗಳ ಪ್ರಕಾರ ಅವರ ಸಾವು ವ್ಯಾಕ್ಸಿನೇಷನ್‌ನಿಂದಾಗಿ ಸಂಭವಿಸಿಲ್ಲ ಎಂದು ತೋರುತ್ತಿದೆ. ಮಾರ್ಗಸೂಚಿಯ ಪ್ರಕಾರ, ವೈದ್ಯರ ತಂಡದಿಂದ ಮರಣೋತ್ತರ ಪರೀಕ್ಷೆ ನಡೆಸಲಾಗುವುದು” ಎಂದು ಸಾರ್ವಜನಿಕ ಆರೋಗ್ಯ ಮತ್ತು ಕಲ್ಯಾಣ ನಿರ್ದೇಶಕರು ಹೇಳಿದ್ದಾರೆ.
ಇದನ್ನೂ ಓದಿ: ಕೋವಿಡ್ 19 ಲಸಿಕೆ ಕುರಿತ ಪ್ರಶ್ನೆಗಳು ಮತ್ತು ಕಳವಳಗಳು: ಜನ ಆರೋಗ್ಯ ಚಳವಳಿ

ಇದನ್ನೂ ಓದಿ: ಲಸಿಕೆ ಪಡೆದುಕೊಳ್ಳಲು ಹಿಂಜರಿಯುತ್ತಿರುವ ರಾಜ್ಯದ ವೈದ್ಯ ಸಮೂಹ! – ಕಾರಣ ಏನು?
ಲಸಿಕೆ ಪಡೆದ ನಂತರ, ಈ ಘಟನೆಯೂ ಸೇರಿದಂತೆ ಒಟ್ಟು 3 ಸಾವುಗಳ ವರದಿಯಾಗಿವೆ. ಆದರೆ ಇದಕ್ಕೆ ಲಸಿಕೆ ಕಾರಣವಲ್ಲ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
ಮೊದಲ ಎರಡು ಪ್ರಕರಣಗಳಲ್ಲಿ, ಮೊರಾದಾಬಾದ್‌ನ ಸರ್ಕಾರಿ ಆಸ್ಪತ್ರೆಯಲ್ಲಿ ವಾರ್ಡ್‌ಬಾಯ್ ಆಗಿ ಕೆಲಸ ಮಾಡುತ್ತಿದ್ದ 52 ವರ್ಷದ ಮಹಿಪಾಲ್ ಸಿಂಗ್ ಅವರು ಲಸಿಕೆ ಹಾಕಿಸಿಕೊಂಡ ಒಂದು ದಿನದ ನಂತರ ನಿಧನರಾದರು. ಎರಡನೇ ಪ್ರಕರಣದಲ್ಲಿ, ಬಳ್ಳಾರಿಯಲ್ಲಿರುವ ರಾಜ್ಯ ಆರೋಗ್ಯ ವಿಭಾಗದ ಉದ್ಯೋಗಿ 43 ವರ್ಷದ ನಾಗರಾಜು ಲಸಿಕೆ ಹಾಕಿಸಿಕೊಂಡ 2 ದಿನದ ನಂತರ ಸಾವನ್ನಪ್ಪಿದ್ದರು.
ಲಸಿಕೆಯು ಅಡ್ಡಪರಿಣಾಮಗಳನ್ನು ಬೀರುತ್ತದೆ ಎಂದು ಹಲವರು ಆರೋಪಿಸಿದ್ದಾರೆ. ಆದರೆ ಸರ್ಕಾರ ಇದನ್ನು ನಿರಾಕರಿಸುತ್ತಲೆ ಬಂದಿದೆ.
ಇದನ್ನೂ ಓದಿ: ಕೊರೊನಾ ಲಸಿಕೆ ಪಡೆದಿದ್ದ ವ್ಯಕ್ತಿ ಸಾವು: ಸಾವಿಗೆ ಲಸಿಕೆ ಕಾರಣವಲ್ಲ ಎಂದ ಸಚಿವ ಸುಧಾಕರ್


