ರೈತರ ಐತಿಹಾಸಿಕ ಟ್ರ್ಯಾಕ್ಟರ್ ಪರೇಡ್ ಆರಂಭವಾಗಿದೆ. ಈ ದಿಟ್ಟ ಹೋರಾಟವನ್ನು ಇಡೀ ವಿಶ್ವವೇ ಕೂತೂಹಲದಿಂದ ವೀಕ್ಷಿಸುತ್ತಿದೆ. ಕಳೆದ ಎರಡು ತಿಂಗಳುಗಳಿಂದ ದೆಹಲಿಯ ಗಡಿಗಳಲ್ಲಿಲಿ ಶಾಂತಿಯುತ ಹೋರಾಟ ನಡೆಸುತ್ತಿದ್ದ ರೈತರು ಇಂದು ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯಬೇಕೆಂದು ಒತ್ತಾಯಿಸಿ ದೆಹಲಿ ಪ್ರವೇಶಿಸಿ ಕಿಸಾನ್ ಟ್ರ್ಯಾಕ್ಟರ್ ಪರೇಡ್ ನಡೆಸುತ್ತಿವೆ. ಲೆಕ್ಕಕ್ಕೆ ಸಿಗದ ಲಕ್ಷಾಂತರ ಟ್ರ್ಯಾಕ್ಟರ್‌ಗಳು ಏಕಕಾಲದಲ್ಲಿ ದೆಹಲಿಗೆ ನುಗ್ಗಿ ಕೇಂದ್ರ ಸರ್ಕಾರಕ್ಕೆ ತಮ್ಮ ಶಕ್ತಿ ಪ್ರದರ್ಶಿಸಿವೆ.
ಮಧ್ಯಾಹ್ನ 12 ಗಂಟೆ ನಂತರ ದೆಹಲಿ ಪ್ರವೇಶಿಬೇಕೆಂದು ಪೊಲೀಸರು ಆದೇಶಿಸಿದ್ದರು. ಆದರೆ ಲಕ್ಷಾಂತರ ಟ್ರ್ಯಾಕ್ಟರ್ ಪರೇಡ್‌ಗೆ ಹೆಚ್ಚು ಸಮಯ ಬೇಕೆಂದು ರೈತರು ಬೆಳಿಗ್ಗೆಯೇ ಬ್ಯಾರಿಕೇಡ್ ಭೇದಿಸಿ ದೆಹಲಿ ಪ್ರವೇಶಿಸಿದ್ದಾರೆ. ಪೊಲೀಸರು ಅಡ್ಡಲಾಗಿ ನಿಲ್ಲಿಸಿದ್ದ ಟ್ರಕ್‌ಗಳನ್ನು, ಜಲಫಿರಂಗಿ ಟ್ಯಾಂಕರ್‌ಗಳನ್ನು ಬದಿಗೆ ಸರಿಸಿದ ರೈತರು ಪೊಲೀಸರ ಭದ್ರಕೋಟೆ ಛಿದ್ರಗೊಳಿಸಿದ್ದಾರೆ.
ರೈತರ ಆಕ್ರೋಶದ ಎದುರು ಮೂಕಪ್ರೇಕ್ಷಕರಾದ ಪೊಲೀಸರು ನಂತರ ಅಶ್ರುವಾಯು ಪ್ರಯೋಗಿಸಿದ್ದಾರೆ. ಆದರೆ ಅದಕ್ಕೆ ಜಗ್ಗದ ರೈತರು ಪೊಲೀಸರ ವಾಹನಗಳನ್ನೇ ವಶಕ್ಕೆ ಪಡೆದಿದ್ದಾರೆ. ದೊಡ್ಡ ದೊಡ್ಡ ಕಂಟೈನರ್‌ಗಳನ್ನು ಪಕ್ಕಕ್ಕೆ ತಳ್ಳಿ ಮುಂದೆ ಸಾಗಿದ್ದಾರೆ. ಅದರ ಅದ್ಭುತ ಫೋಟೊಗಳು ಇಲ್ಲಿವೆ.
ದೆಹಲಿ ರೈತರ ಹೋರಾಟದ ದಿಟ್ಟ ಫೋಟೊಗಳು ಇಲ್ಲಿವೆ.

ಇದನ್ನೂ ಓದಿ: ಜನ ಗಣರಾಜ್ಯೋತ್ಸವ ಪರೇಡ್: ಕೆಂಪುಕೋಟೆ ತಲುಪಿದ ಗಾಝಿಪುರ ಗಡಿಯ ರೈತರು


