Homeಮುಖಪುಟಟಿಕ್‌ಟಾಕ್‌ ಅಪ್ಲಿಕೇಷನ್‌ ಮೇಲಿನ ನಿಷೇಧ ಮುಂದುವರಿಕೆ; ಶಾಶ್ವತ ನಿಷೇಧಕ್ಕೆ ಚಿಂತನೆ?

ಟಿಕ್‌ಟಾಕ್‌ ಅಪ್ಲಿಕೇಷನ್‌ ಮೇಲಿನ ನಿಷೇಧ ಮುಂದುವರಿಕೆ; ಶಾಶ್ವತ ನಿಷೇಧಕ್ಕೆ ಚಿಂತನೆ?

- Advertisement -
- Advertisement -

ಟಿಕ್‌ಟಾಕ್ ಸೇರಿದಂತೆ 59 ಚೀನಾ ಮೂಲದ ಅಪ್ಲಿಕೇಷನ್‌ಗಳ ಮೇಲಿನ ನಿರ್ಬಂಧ ಮುಂದುವರೆದಿದ್ದು, ಕೇಂದ್ರ ಸರ್ಕಾರ ಅವುಗಳನ್ನು ಶಾಶ್ವತವಾಗಿ ನಿಷೇಧ ಮಾಡುವ ಚಿಂತನೆ ನಡೆಸಿದೆ ಎನ್ನಲಾಗಿದೆ.‌‌‌

ಕಳೆದ ಜೂನ್‌ನಲ್ಲಿ ಕೇಂದ್ರ ಸರ್ಕಾರವು ಚೀನಾ ಮೂಲದ 59 ಆಪ್‌ಗಳನ್ನು ನಿಷೇಧಿಸಿತ್ತು. ಜೊತೆಗೆ ಈ ನಿಷೇಧಿತ ಆಪ್‌ಗಳಿಗೆ ಜುಲೈನಲ್ಲಿ 77 ಪ್ರಶ್ನಾವಳಿಗಳನ್ನು ಕಳುಹಿಸಿ ಕೊಟ್ಟು ಅದಕ್ಕೆ ಉತ್ತರಿಸುವಂತೆ ಸೂಚಿಸಿತ್ತು.

ಆಪ್‌ಗಳನ್ನು ಬಳಸುತ್ತಿರುವ ಜನರ ಮೇಲೆ ಪ್ರಭಾವ ಬೀರುವುದು ಸೇರಿದಂತೆ, ಜನರ ಮಾಹಿತಿಗಳನ್ನು ವಿದೇಶಿ ಸರ್ಕಾರದೊಡನೆ ಹಂಚಿಕೊಳ್ಳುವ ಆರೋಪ ಕೂಡಾ ಈ ಚೀನಾ ಮೂಲದ ಆಪ್‌ಗಳ ಮೇಲೆ ಇದೆ.

ಇದನ್ನೂ ಓದಿ: ಆಘಾತಕಾರಿ ಸುದ್ದಿ: ಕೆಂಪುಕೋಟೆಯ ಮುತ್ತಿಗೆ, ಸಿಖ್ ಧ್ವಜಾರೋಹಣಕ್ಕೆ ಕಾರಣ ಬಿಜೆಪಿ ಕಾರ್ಯಕರ್ತ ದೀಪ್ ಸಿಧು 

ಆಪ್‌ಗಳನ್ನು ನಿಷೇಧ ಮಾಡಿದ ನಂತರ ಕೇಂದ್ರ ಸರ್ಕಾರ ಕಳುಹಿಸಿಕೊಟ್ಟ ಪ್ರಶ್ನಾವಳಿಗಳಿಗೆ ಅದು ಉತ್ತರಿಸಿತ್ತಾದರೂ, ಈ ಉತ್ತರದ ಬಗ್ಗೆ ಕೇಂದ್ರ ಸರ್ಕಾರ ಉತ್ತಮ ಅಭಿಪ್ರಾಯ ಹೊಂದಿಲ್ಲ, ಹೀಗಾಗಿ ಆಪ್‌ಗಳ ಮೇಲೆ ಸರ್ಕಾರ ಮತ್ತೆ ನೋಟಿಸ್ ಜಾರಿ ಮಾಡಿದೆ ಎನ್ನಲಾಗಿದೆ.

ಈ ಮಧ್ಯೆ ಚೀನಾ ಮೂಲದ ಆಪ್‌ಗಳನ್ನು ಶಾಶ್ವತವಾಗಿ ನಿಷೇಧಿಸಲು ಚಿಂತನೆ ನಡೆಸಲಾಗಿದೆ ಎನ್ನಲಾಗಿದೆಯಾದರೂ, ಈ ಆದೇಶ ಯಾವಾಗ ಹೊರಬೀಳಲಿದೆ ಎಂದು ತಿಳಿದು ಬಂದಿಲ್ಲ. ಕಳೆದ ಜೂನ್‌ನಲ್ಲಿ ಟಿಕ್‌‌ಟಾಕ್ ಸೇರಿದಂತೆ 59 ಆಪ್‌ಗಳನ್ನು ನಿಷೇಧಿಸಿದ್ದ ಸರ್ಕಾರ, ಸೆಪ್ಟೆಂಬರ್‌‌ನಲ್ಲಿ ಪಬ್‌ಜಿ ಸೇರಿದಂತೆ 118 ಆಪ್‌ಗಳನ್ನು ನಿಷೇಧಿಸಿತ್ತು.

ಇದನ್ನೂ ಓದಿ: ಸುಳ್ಳು ಸುದ್ದಿ ಹರಡಿದ ಮಾಧ್ಯಮಗಳು: ಕೆಂಪುಕೋಟೆಯಲ್ಲಿ ಭಾರತದ ತ್ರಿವರ್ಣ ಧ್ವಜವನ್ನು ಕೆಳಗಿಳಿಸಲಾಗಿಲ್ಲ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ.ಬಂಗಾಳ: ತನ್ನ ವಿರುದ್ಧದ ತನಿಖೆಗೆ ಸಹಕರಿಸದಂತೆ ರಾಜಭವನದ ಸಿಬ್ಬಂದಿಗಳಿಗೆ ಸೂಚಿಸಿದ ಗವರ್ನರ್‌

0
ಪ.ಬಂಗಾಳದ ರಾಜ್ಯಪಾಲ ಸಿವಿ ಆನಂದ ಬೋಸ್ ವಿರುದ್ಧ ರಾಜಭವನದ ಮಹಿಳಾ ಉದ್ಯೋಗಿಯೋರ್ವರು ಲೈಂಗಿಕ ದೌರ್ಜನ್ಯದ ಆರೋಪದಲ್ಲಿ ಪ್ರಕರಣ ದಾಖಲಿಸಿದ್ದರು. ಈ ಕುರಿತು ತನಿಖೆ ನಡೆಸಲು ಕೋಲ್ಕತ್ತಾ ಪೊಲೀಸರು ತಂಡವನ್ನು ರಚಿಸಿದ್ದಾರೆ. ಇದರ ಬೆನ್ನಲ್ಲಿ...