Homeಮುಖಪುಟಕೆಂಪು ಕೋಟೆಯಲ್ಲಿ ಧ್ವಜ ಹಾರಾಟ - ಸುಳ್ಳು ಸುದ್ದಿ ಹರಡುತ್ತಿರುವ ಬಿಜೆಪಿ ಮತ್ತು ಮಾಧ್ಯಮಗಳು: ಭಾರಿ...

ಕೆಂಪು ಕೋಟೆಯಲ್ಲಿ ಧ್ವಜ ಹಾರಾಟ – ಸುಳ್ಳು ಸುದ್ದಿ ಹರಡುತ್ತಿರುವ ಬಿಜೆಪಿ ಮತ್ತು ಮಾಧ್ಯಮಗಳು: ಭಾರಿ ಆಕ್ರೋಶ

ಸುವರ್ಣ ಚಾನಲ್‌ನ ಅಜಿತ್ ಹಣಮಕ್ಕನವರ್ ಕೆಂಪು ಕೋಟೆಯ ಮೇಲೆ ಹಾರುತ್ತಿರುವ ರಾಷ್ಟ್ರದ್ವಜ ಮರೆಮಾಚಿದ ದೃಶ್ಯವನ್ನು ತೋರಿಸುತ್ತ ಕೂಗಾಡುತ್ತಿದ್ದಾರೆ ಎಂದು ಅಸಮಧಾನ ವ್ಯಕ್ತವಾಗಿದೆ.

- Advertisement -
- Advertisement -

ಕಳೆದ ಎರಡು ತಿಂಗಳಿನಿಂದ ಕೇಂದ್ರ ಸರ್ಕಾರದ ವಿರುದ್ದ ದೆಹಲಿಯ ಗಡಿಗಳಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರು, ಮಂಗಳವಾರ ಗಣರಾಜ್ಯೋತ್ಸವದಂದು ಟ್ರಾಕ್ಟರ್‌ ಪರೇಡ್ ನಡೆಸಿದ್ದಾರೆ. ಈ ಪರೇಡ್ ದೇಶದಾದ್ಯಂತ ಯಶಸ್ವಿಯಾಗಿ ಮತ್ತು ಶಾಂತಿಯುತವಾಗಿ ನಡೆದಿತ್ತಾದರೂ, ದೆಹಲಿಯಲ್ಲಿ ಉದ್ದೇಶಿತ ರ್‍ಯಾಲಿಯ ಮಾರ್ಗವನ್ನು ಬಿಟ್ಟು ಬೇರೆಯೆ ಮಾರ್ಗದಲ್ಲಿ ಹೊರಟ ರೈತರ ಗುಂಪೊಂದು ಕೆಂಪು ಕೋಟೆಯ ಬಳಿ ತೆರಳಿತ್ತು. ಅಲ್ಲಿ ನೆರೆದ ರೈತರ ಗುಂಪು ಸಿಖ್ಖರ ನಿಶಾನೆ ಸಾಹಿಬ್ ಮತ್ತು ರೈತ ಧ್ವಜವನ್ನು ಹಾರಿಸಿದ್ದರು. ಆದರೆ ಈ ಧ್ವಜಗಳನ್ನು ಹಾರಿಸುವ ಹೊತ್ತಿಗೆ ರಾಷ್ಟ್ರ ಧ್ವಜ ಕೆಂಪು ಕೋಟೆಯ ಮುಖ್ಯಸ್ಥಳದಲ್ಲಿ ಎತ್ತರದಲ್ಲಿ ಹಾರಾಡತ್ತಿತ್ತು. ಅದನ್ನು ಯಾರೂ ಕೂಡಾ ಇಳಿಸಿರಲಿಲ್ಲ.

ಆದರೆ ಸಾಮಾಜಿಕ ಜಾಲತಾಣ ಮತ್ತು ಮಾಧ್ಯಮಗಳಲ್ಲಿ ಈ ಘಟನೆಯ ಬಗ್ಗೆ ಸುಳ್ಳು ಸುದ್ದಿ ಹರಡಿ ಅಪಪ್ರಚಾರ ಪ್ರಾರಂಭವಾಗುತ್ತಿದ್ದಂತೆ ಹಲವಾರು ಫ್ಯಾಕ್ಟ್‌ಚೆಕ್ ವೆಬ್‌ಸೈಟ್‌ಗಳು ಇದರ ಬಗ್ಗೆ ಫ್ಯಾಕ್ಟ್‌‌ಚೆಕ್ ಮಾಡಿದೆ. ಅದರ ಹೊರತಾಗಿಯು ಬಿಜೆಪಿಯ ಶಾಸಕರು, ಸಚಿವರು, ಪ್ರತಿನಿಧಿಗಳು ಹಾಗೂ ಪರವಾಗಿರುವ ಹಲವು ಮಾಧ್ಯಮಗಳು ಸುಳ್ಳು ಹರಡುತ್ತಿದೆ. ಆದರೆ ಇದೀಗ ಅವರ ವಿರುದ್ದ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶಗಳೆದ್ದಿವೆ. ಹಲವಾರು ಜನರು ಅವರಿಗೆ ಧ್ವಜ ಸಂಹಿತೆಯ ಪಾಠ ಮಾಡಿದ್ದಾರೆ.

ಇದನ್ನೂ ಓದಿ: ಆಘಾತಕಾರಿ ಸುದ್ದಿ: ಕೆಂಪುಕೋಟೆಯ ಮುತ್ತಿಗೆ, ಸಿಖ್ ಧ್ವಜಾರೋಹಣಕ್ಕೆ ಕಾರಣ ಬಿಜೆಪಿ ಕಾರ್ಯಕರ್ತ ದೀಪ್ ಸಿಧು

ಪತ್ರಕರ್ತ ಟಿ.ಕೆ. ದಯಾನಂದ್, “The Flag Code of India 2002 ಕಾಯ್ದೆಯ part 2 / ಸೆಕ್ಷನ್ 2.2/ ಕಲಂ 8ರ ಕೆಳಗೆ ಖಾಸಗಿ ಸಂಘ-ಸಂಸ್ಥೆಗಳ, ಧಾರ್ಮಿಕ, ಇನ್ನಿತರೆ ನಿಷೇಧಿತವಲ್ಲದ ಬಾವುಟಗಳನ್ನು ರಾಷ್ಟ್ರಧ್ವಜದೊಡನೆ ಹಾರಿಸಬಹುದು. ಆ ಬಾವುಟಗಳು ರಾಷ್ಟ್ರಧ್ವಜಕ್ಕೆ ಸಮವಾಗಿರದೆ ರಾಷ್ಟ್ರಧ್ವಜಕ್ಕಿಂತ ಕೆಳಗಿನ ಮಟ್ಟದಲ್ಲಿರಬೇಕು ಎಂದು ಕೇಂದ್ರ ಸರ್ಕಾರದ 2002 ರ ಶಾಸನವೇ ಸ್ಪಷ್ಟಪಡಿಸುತ್ತದೆ” ಎಂದು ಹೇಳಿದ್ದಾರೆ.

“ಇದರ ಪ್ರಕಾರ ಸಿಖ್ಖರದ್ದಷ್ಟೇ ಯಾಕೆ, ನಿಷೇಧಿತವಲ್ಲದ ಯಾವ ಬಾವುಟವನ್ನಾದರೂ ರಾಷ್ಟ್ರಧ್ವಜದೆದುರು ಅದಕ್ಕಿಂತ ಕೆಳಗಿನ ಮಟ್ಟದಲ್ಲಿ ಹಾರಿಸಬಹುದು. ಇದರಿಂದ ಯಾವ ಕಾನೂನುಭಂಗವೂ ಉಂಟಾಗುವುದಿಲ್ಲ. ರೈತರಿಂದ ರಾಷ್ಟ್ರಧ್ವಜಕ್ಕೆ ಯಾವ ಅಪಮಾನವೂ ನಡೆದಿಲ್ಲ. ವರದಿ ಮಾಡುವ ಮೊದಲು ಅದಕ್ಕೆ ಸಂಬಂಧಿಸಿದ ಕಾಯ್ದೆ ಶಾಸನಗಳನ್ನು ಓದಿಕೊಂಡು ವರದಿ ಮಾಡುವುದು ಸೆನ್ಸಿಬಲ್ ಜರ್ನಲಿಸಂ” ಎಂದು ಹೇಳಿದ್ದಾರೆ.

“ಪತ್ರಿಕಾ ವರದಿಗಾರಿಕೆಯಲ್ಲಿ ರಾಷ್ಟ್ರಗೌರವ ಮತ್ತು ಕೋಮುಸೂಕ್ಷ್ಮ ವಿಷಯಗಳನ್ನು ವರದಿ ಮಾಡುವಾಗ ಅಮೂಲಾಗ್ರ ತಪಾಸಣೆ, ಸಾಕ್ಷಾಧಾರಗಳ ಸಮೇತ ವರದಿ ಮಾಡಬೇಕೆಂದು ನಾವು ಜರ್ನಲಿಸಂ ಕಾಲೇಜಿನಲ್ಲಿ ಕಲಿತಿದ್ದೆವು. ಈ ಎಚ್ಚರ ಮರೆತರೆ ಈ ಅಸಡ್ಡೆಯಿಂದ ಸಮಾಜದ ಮೇಲೆ ಘನಘೋರ ಪರಿಣಾಮಗಳಾಗುತ್ತವೆ” ಎಂದು ದಯಾನಂದ್ ಎಚ್ಚರಿಸಿದ್ದಾರೆ.

ಇದನ್ನೂ ಓದಿ: ಹಿಟ್ಲರ್ ಆಡಳಿತವನ್ನು ನಿಲ್ಲಿಸಿ, ಇಲ್ಲದಿದ್ದರೆ ಅನುಭವಿಸುತ್ತೀರಿ: ಕೋಡಿಹಳ್ಳಿ ಚಂದ್ರಶೇಖರ್‌ ಎಚ್ಚರಿಕೆ

ಹಿರಿಯ ಪತ್ರಕರ್ತ ದಿನೇಶ್‌ ಅಮಿನ್ ಮಟ್ಟು, “ದೇಶಕ್ಕೆ ಸ್ವಾತಂತ್ರ್ಯ ಬಂದು 52 ವರ್ಷಗಳ ನಂತರ ಆರ್‌ಎಸ್‌ಎಸ್, ನಾಗಪುರದ ಕೇಂದ್ರ ಕಚೇರಿಯಲ್ಲಿ ಮೊದಲ ಬಾರಿ ರಾಷ್ಟ್ರಧ್ವಜ ಆರೋಹಣ ಮಾಡಿರುವುದನ್ನು ಯಾರಾದರೂ ನೆನಪು ಮಾಡಿಕೊಡ್ರಪ್ಪಾ. ತುರ್ತು ಪರಿಸ್ಥಿತಿ ವಿರುದ್ಧದ ಹೋರಾಟದಲ್ಲಿ ಪೊಲೀಸರಿಗೆ ದಂಗೆ ಏಳಲು ಕರೆ ನೀಡಿದವರು, ಬಾಂಬು ಇಟ್ಟು ರೈಲ್ವೆ ಸ್ಟೇಷನ್ ಸ್ಪೋಟಿಸಲು ಕುಮ್ಮಕ್ಕು ನೀಡಿದವರು ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದ್ದಾರೆ ಎಂದು ಗೋಳಾಡುತ್ತಿರುವುದು ತಮಾಷೆಯಾಗಿದೆ” ಎಂದು ಹೇಳಿದ್ದಾರೆ.

ಅಲ್ಲದೆ ಸಚಿವ ಸುರೇಶ್ ಕುಮಾರ್‌ ಅವರು, “ದೆಹಲಿ ಪ್ರತಿಭಟನೆ ರೈತರದಲ್ಲ,
ಕೇವಲ ಆ ಕಾಯ್ದೆಗಳ ವಿರುದ್ಧವಲ್ಲ ಎಂದು ಇಂದು ಬಯಲಾಯಿತು” ಎಂದು ಬರೆದ್ದಕ್ಕೆ ಪ್ರತಿಕ್ರಿಯೆ ನೀಡಿರುವ ಅಮಿನ್ ಮಟ್ಟು, “ಪ್ರತಿಭಟನೆ ಕೇವಲ ಕಾಯ್ದೆ ವಿರುದ್ಧ ಮತ್ತು ರೈತರದ್ದು ಮಾತ್ರ ಎಂದು ಯಾರು ಹೇಳಿದ್ದು? ಇದು ಬಿಜೆಪಿ ಸರ್ಕಾರದ ವಿರುದ್ಧ ಬಂಡೆದ್ದ ಸರ್ವಜನರ ಪ್ರತಿಭಟನೆ ಅನುಮಾನವೇ ಬೇಡ” ಎಂದು ಹೇಳಿದ್ದಾರೆ.

ಹಿರಿಯ ಲೇಖಕ ಪುರುಷೋತ್ತಮ ಬಿಳಿಮಲೆಯವರು, “ಜೆಎನ್‌ಯುವಿಗೆ ನುಗ್ಗಿ ಮಕ್ಕಳ ಮೇಲೆ ಹಲ್ಲೆ ಮಾಡುವಾಗ, ‘ಗೋಲಿ ಮಾರೋ ಸಾಲೋಂಕೋ ‘ಎಂದು ಘೋಷಣೆ ಕೂಗಿದಾಗ, ಬಾಬ್ರಿ ಮಸೀದಿ ಉರುಳಿಸಿದಾಗ, ಮೌನವಾಗಿದ್ದವರು ಈಗ ರೈತರು ಗೂಂಡಾಗಿರಿ ಮಾಡುತ್ತಿದ್ದಾರೆ ಎಂದು ಊಳಿಡುವುದು ಕರುಣಾಜನಕವಾಗಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ರೈತರನ್ನು ಭಯೋತ್ಪಾದಕರು ಎಂದ ಕೃಷಿ ಸಚಿವ ಬಿ. ಸಿ. ಪಾಟಿಲ್

ಕನ್ನಡ ಪರ ಹೋರಾಟಗಾರ ದಿನೇಶ್ ಕುಮಾರ್‌ ದಿನ್ನೂ ಅವರು, “ಭಕ್ತರ ಅಚ್ಚುಮೆಚ್ಚಿನ ಕೆನಡಿಯನ್ ನಟ ಅಕ್ಷಯ್ ಕುಮಾರ್ ಅಭಿನಯದ ‘ಕೇಸರಿ’ ಎಂಬ ಸಿನಿಮಾವೊಂದು ಬಂದಿದ್ದು ನೆನಪಿದೆಯಾ? ಈ ಸಿನಿಮಾದ ‘ತೇರೀ‌‌ ಮಿಟ್ಟೀ ಮೇ ಮಿಲ್ ಜಾವಾ’ ಎಂಬ ಜನಪ್ರಿಯ ಪಂಜಾಬಿ ಗೀತೆಯೊಂದನ್ನು ನೀವು ಕೇಳಿರಬಹುದು. ಇತ್ತೀಚಿನ ಅತಿ ಜನಪ್ರಿಯ ದೇಶಭಕ್ತ ಗೀತೆಯೆಂದು ಹೆಸರಾದ ಹಾಡು ಇದು. ಯೂ ಟ್ಯೂಬ್ ನಲ್ಲಿ ತೇರಿ ಮಿಟ್ಟೀ ಎಂದು ಸರ್ಚ್ ಮಾಡಿದರೆ ಈ ಹಾಡಿನ ಸಾವಿರಾರು ಕವರ್ ವರ್ಷನ್ ಗಳು ನಿಮಗೆ ಕಾಣಿಸುತ್ತವೆ. ಅಂದಹಾಗೆ ಸಿಖ್ ವೀರಸಾಹಸಿಯೊಬ್ಬನ‌ ಕಥೆಯ ಸಿನಿಮಾ ಇದು. ಅಕ್ಷಯ್ ಕುಮಾರ್ ಕೈಯಲ್ಲಿರುವುದು ನಿಶಾನ್ ಸಾಹಿಬ್ ಬಾವುಟವೇ! ಸಿನಿಮಾದಲ್ಲಿ ದೇಶಭಕ್ತಿಯನ್ನು ಬಡಿದೆಬ್ಬಿಸಿದ ಬಾವುಟ ಇದ್ದಕ್ಕಿದ್ದಂತೆ ದೇಶದ್ರೋಹಿ ಬಾವುಟವಾಗಿಹೋಯಿತು! ಹಿಪಾಕ್ರಸಿಗೆ ಒಂದು ಮಿತಿ ಬೇಡವೇ?” ಎಂದು ಕೇಳಿದ್ದಾರೆ.

ಸಾಮಾಜಿಕ ಕಾರ್ಯಕರ್ತ ವಲೀ ರಹ್ಮಾನ್, “ಗೋದಿ ಮೀಡಿಯಾಗಳು ಎಂದಿನಂತೆ ಸುಳ್ಳು ಹೇಳುತ್ತಿದೆ. ರೈತರು ಖಾಲಿಯಾಗಿದ್ದ ಕಂಬಕ್ಕೆ ಧ್ವಜಗಳನ್ನು ಏರಿಸಿದ್ದಾರೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ರೈತ ಹೋರಾಟ ಹತ್ತಿಕ್ಕಲು ಕೇಂದ್ರ ಸರ್ಕಾರ ಷಡ್ಯಂತ್ರ ನಡೆಸುತ್ತಿದೆ: ಹೆಚ್​.ಎಸ್​. ದೊರೆಸ್ವಾಮಿ

ಸಿದ್ದಯ್ಯ ಚಿಕ್ಕಮಾದೆಗೌಡ ಅವರು, “ಸುವರ್ಣ ಚಾನಲ್ ನ ಅಜಿತ್ ಹಣಮಕ್ಕನವರ್ ಕೆಂಪು ಕೋಟೆಯ ಮೇಲೆ ಹಾರುತ್ತಿರುವ ರಾಷ್ಟ್ರದ್ವಜ ಮರೆಮಾಚಿದ ದೃಶ್ಯ ತೋರಿಸುತ್ತ ಕೂಗಾಡುವುದ ಕಂಡು ಇವ ಬಾರೀ ವಂಚಕ ಎನಿಸಿತು” ಎಂದು ಹೇಳಿದ್ದಾರೆ.

ಸಾಮಾಜಿಕ ಕಾರ್ಯಕರ್ತ ಖಲೀಫಾ ಬೆಳ್ತಂಗಡಿ ಅವರು , “ಈ ಬಾವುಟವನ್ನು ತಾನೆ ಈಗ ದೇಶ ದ್ರೋಹಿ ಬಾವುಟ ಎನ್ನುತ್ತಿರುವುದು. ಸರಿ, ಹಾಗಾದರೆ ಇದನ್ನು ಕಟ್ಟಿಕೊಂಡವರು ಯಾರು?” ಎಂದು ಪ್ರದಾನಿ ಮೋದಿ ತನ್ನ ತಲೆಗೆ ಸುತ್ತಿರುವ ನಿಶಾನ್ ಸಾಹಿಬ್ ಧ್ವಜದ ಫೋಟೋವನ್ನು ಫೇಸ್‌ಬುಕ್‌ನಲ್ಲಿ ಹಾಕಿದ್ದಾರೆ.

ಇದನ್ನೂ ಓದಿ: ಕಂಗನಾ ಭೇಟಿಗೆ ರಾಜ್ಯಪಾಲರಿಗೆ ಸಮಯವಿದೆ, ರೈತರ ಭೇಟಿಗಿಲ್ಲ: ಶರದ್ ಪವಾರ್ ಟೀಕೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

2 COMMENTS

  1. ಉತ್ತಮವಾದ ವರದಿ ಮಾಡುತ್ತಿದ್ದೀರಿ. ಧನ್ಯವಾದಗಳು…

    65 ದಿನ ನಮ್ಮ ರೈತರು ಶಾಂತಿಯುತವಾಗಿ ನಡೆಸಿದ ಹೋರಾಟ ಇಂದು ಯಾಕೆ ಹೀಗಯ್ತು ಅನ್ನೊದನ್ನು ಬಿ.ಜೆ.ಪಿ ಅವಲೋಕನ ಮಾಡಿಕೊಳ್ಳಲಿ ದೇಶಕ್ಕೆ ಅವಮಾನ ಆಯ್ತು ಎಂದು ಕಿರುಚಾಡುತ್ತಿರುವ ಭಕ್ತರೆ ನೂರಾರು ಜನ ರೈತರು ಸತ್ತರು ಹೋರಾಟದ ಸ್ಥಳಕ್ಕೆ ಹೋಗದಿರುವ ಮೋದಿಗೆ ಕೇಳಿ ಪ್ರಜಾಪ್ರಭುತ್ವ ದೇಶಕ್ಕೆ ಅವಮಾನ ಮಾಡ್ತಿಯ ನೀನು ಅಂತಾ………

  2. Hanumakkanavar, please see the truth, know the truth, and spread the truth. Be a good guy. Try to create heaven on earth or else you will also be part of hell.

LEAVE A REPLY

Please enter your comment!
Please enter your name here

- Advertisment -

ಗ್ರಾಮೀಣ ಭಾಗದ ಶಾಲಾ ಮಕ್ಕಳಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ 7.5% ಮೀಸಲಾತಿ: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್

ಗ್ರಾಮೀಣ ಹಾಗೂ ಬಡ ವಿದ್ಯಾರ್ಥಿಗಳ ಉನ್ನತ ಶಿಕ್ಷಣದ ಕನಸಿಗೆ ಬಲ ತುಂಬುವ ನಿಟ್ಟಿನಲ್ಲಿ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಶಿಕ್ಷಣ ಹಾಗೂ ಉದ್ಯೋಗದಲ್ಲಿ ಶೇಕಡಾ 7.5 ರಷ್ಟು ಮೀಸಲಾತಿ ಕಲ್ಪಿಸುವುದಾಗಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್...

ಪಶ್ಚಿಮ ಬಂಗಾಳದ ಪ್ರವಾಸೋದ್ಯಮ ಜಾಹೀರಾತಿನಲ್ಲಿ ಐಫೆಲ್ ಟವರ್, ಈಜಿಪ್ಟ್ ಪಿರಮಿಡ್: ಆದರೆ ಬಂಗಾಳವೇ ನಾಪತ್ತೆ!

ಪಶ್ಚಿಮ ಬಂಗಾಳವನ್ನು ಜಾಗತಿಕ ಪ್ರವಾಸೋದ್ಯಮ ಭೂಪಟದಲ್ಲಿ ಮುನ್ನೆಲೆಗೆ ತರುವ ಉದ್ದೇಶದಿಂದ ಬಿಡುಗಡೆ ಮಾಡಲಾದ ರಾಜ್ಯದ ಹೊಸ ಪ್ರವಾಸೋದ್ಯಮ ಜಾಹೀರಾತು ಈಗ ತೀವ್ರ ಟೀಕೆ ಹಾಗೂ ಅಪಹಾಸ್ಯಕ್ಕೆ ಈಡಾಗಿದೆ. ಈ ಜಾಹೀರಾತನ್ನು ಒಮ್ಮೆ ಗಮನಿಸಿದರೆ...

ಅಮೆರಿಕದಲ್ಲಿ ಮೋಹನ್‌ ಭಾಗವತ್ ಸೌಹಾರ್ದತೆ ಮಾತು; ಮಹಾರಾಷ್ಟ್ರದ ಗಾರ್ಬಾ-ದಾಂಡಿಯಾ ಕಾರ್ಯಕ್ರಮಗಳಲ್ಲಿ ಮುಸ್ಲಿಮರಿಗೆ ನಿಷೇಧ ಹೇರಿದ ವಿಎಚ್‌ಪಿ

ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಅವರು ನ್ಯೂಯಾರ್ಕ್‌ನಲ್ಲಿ ಮಾಡಿದ ಭಾಷಣದಲ್ಲಿ ಧಾರ್ಮಿಕ ಸೌಹಾರ್ದತೆ, ಪರಸ್ಪರ ಗೌರವ ಮತ್ತು ಪ್ರತಿಯೊಂದು ಸಮುದಾಯದ ಗುರುತಿನ ರಕ್ಷಣೆ ಕುರಿತು ಮಾತನಾಡಿದ ಕೆಲವೇ ದಿನಗಳ...

ಸೈಬರ್ ವಂಚನೆಗೊಳಗಾದ ಸಂತ್ರಸ್ತರಿಗೆ ನೆರವು: ಕರ್ನಾಟಕದಲ್ಲಿ ಶೀಘ್ರವೇ ‘ಇ-ಶೂನ್ಯ ಎಫ್‌ಐಆರ್’ ಜಾರಿ

ಸೈಬರ್ ವಂಚನೆಗೊಳಗಾದ ಸಂತ್ರಸ್ತರು ಇನ್ನು ಮುಂದೆ ದೂರು ದಾಖಲಿಸಲು ಪೊಲೀಸ್ ಠಾಣೆಗಳಿಗೆ ಅಲೆಯಬೇಕಿಲ್ಲ. ಸೈಬರ್ ಅಪರಾಧ ಪ್ರಕರಣಗಳ ಎಫ್‌ಐಆರ್ ದಾಖಲಾತಿಯನ್ನು ಚುರುಕುಗೊಳಿಸುವ ಹಾಗೂ ಜನಸ್ನೇಹಿಯಾಗಿಸುವ ಉದ್ದೇಶದಿಂದ ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರ...

ತಲೆ ಮರೆಸಿಕೊಂಡಿದ್ದ ಸ್ವತಂತ್ರ ಭಾರದ್ವಾಜ್‌ ಅರೆಸ್ಟ್ : ಪೋಕ್ಸೋ ಅಡಿ ಮತ್ತೊಂದು ಪ್ರಕರಣ ದಾಖಲು

ದೆಹಲಿಯ ಜಂತರ್ ಮಂತರ್‌ನಲ್ಲಿ ಜುಲೈನಲ್ಲಿ ನಡೆದ ಸಿಜೆಪಿ ಪ್ರತಿಭಟನೆ ವೇಳೆ ವಿದ್ಯಾರ್ಥಿ ಹೋರಾಟಗಾರ್ತಿ ನಿಶು ಆಝಾದ್ ಅವರ ತಂದೆಯ ಮೇಲೆ ಹಲ್ಲೆ ನಡೆಸಿದ ಆರೋಪ ಹೊತ್ತಿರುವ ಹಿಂದುತ್ವ ಸೋಶಿಯಲ್ ಮೀಡಿಯಾ 'ಇನ್‌ಫ್ಲುಯೆನ್ಸರ್' ಸ್ವತಂತ್ರ...

ಆರ್‌ಎಸ್ಎಸ್ ಬೆಂಬಲಿತ ಗುಂಪುಗಳಿಂದ ದೇಣಿಗೆ ಸ್ವೀಕರಿಸದಿರಲು ಅಮೆರಿಕದ ರಾಜಕಾರಣಿಗಳಿಂದ ಪ್ರತಿಜ್ಞೆ

ಅಮೆರಿಕದ ಸುಮಾರು 90 ಜನಪ್ರತಿನಿಧಿಗಳು ಮತ್ತು ರಾಜಕೀಯ ಅಭ್ಯರ್ಥಿಗಳು ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ (RSS) ಬೆಂಬಲಿತ ಗುಂಪುಗಳಿಂದ ರಾಜಕೀಯ ದೇಣಿಗೆಗಳನ್ನು ಸ್ವೀಕರಿಸುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ್ದಾರೆ. ಹಿಂದುತ್ವ ಸಂಘಟನೆಯ ಮುಖ್ಯಸ್ಥ ಮೋಹನ್ ಭಾಗವತ್...

KPSC ಪರೀಕ್ಷಾ ಅಕ್ರಮ: ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ, ರಾಜಕೀಯ ಪಕ್ಷ ನೋಡದೆ ನಿರ್ದಾಕ್ಷಿಣ್ಯ ಕ್ರಮ – ಸಚಿವ ಪ್ರಿಯಾಂಕ್ ಖರ್ಗೆ

ಕೆಪಿಎಸ್‌ಸಿ (KPSC) ಪರೀಕ್ಷಾ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಅತ್ಯಂತ ಗಂಭೀರವಾಗಿದ್ದು, ಇದರಲ್ಲಿ ಭಾಗಿಯಾಗಿರುವ ಯಾರನ್ನೇ ಆಗಲಿ ರಕ್ಷಿಸುವ ಪ್ರಶ್ನೆಯೇ ಇಲ್ಲ. ಆರೋಪಿಗಳು ಎಷ್ಟೇ ಪ್ರಭಾವಶಾಲಿಗಳಾಗಿದ್ದರೂ ಅಥವಾ ಯಾವುದೇ ರಾಜಕೀಯ ಪಕ್ಷಕ್ಕೆ...

ಉತ್ತರ ಪ್ರದೇಶ: ಸಹಾರನ್‌ಪುರ ಕಲೆಕ್ಟರೇಟ್ ಮಸೀದಿ ಧ್ವಂಸ, ‘ಬುಲ್ಡೋಜರ್ ರಾಜಕಾರಣ’ಕ್ಕೆ ವಿಪಕ್ಷಗಳಿಂದ ಖಂಡನೆ!

ಸಹಾರನ್‌ಪುರ (ಉತ್ತರ ಪ್ರದೇಶ): ಉತ್ತರ ಪ್ರದೇಶದ ಸಹಾರನ್‌ಪುರ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿದ್ದ ಮಸೀದಿಯನ್ನು ಶನಿವಾರ (ಸೆಪ್ಟೆಂಬರ್ 5) ಮುಂಜಾನೆ ಭಾರಿ ಪೊಲೀಸ್ ಭದ್ರತೆಯೊಂದಿಗೆ ಬುಲ್ಡೋಜರ್ ಬಳಸಿ ಧ್ವಂಸಗೊಳಿಸಲಾಗಿದೆ. ಈ ಕಾರ್ಯಾಚರಣೆಗೆ ವ್ಯಾಪಕ ಆಕ್ರೋಶ...

ಗೌರಿ ಹತ್ಯೆಯಾಗಿ 9 ವರ್ಷ : ಹೋರಾಟಗಾರರು-ಒಡನಾಡಿಗಳಿಂದ ಗೌರವ ನಮನ

ದಿಟ್ಟ ಪತ್ರಕರ್ತೆ, ಹೋರಾಟಗಾರ್ತಿ ಗೌರಿ ಲಂಕೇಶ್‌ ಅವರ 9ನೇ ವರ್ಷದ ಹುತಾತ್ಮ ದಿನದ ಅಂಗವಾಗಿ ಇಂದು (ಸೆ.5) ಬೆಳಿಗ್ಗೆ ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಅವರ ಸಮಾಧಿ ಬಳಿ ‘ಗೌರಿ ನಮನ ಕಾರ್ಯಕ್ರಮ‘ ನಡೆಯಿತು. ಗೌರಿ ಅವರ...

ರಾಯಚೂರಿನಲ್ಲಿ ದಲಿತರ ಸರಣಿ ಕೊಲೆ: ಸಂತ್ರಸ್ತರ ಮನೆಗೆ ಸಚಿವ ಕೆ.ಎಚ್. ಮುನಿಯಪ್ಪ ಭೇಟಿ

ರಾಯಚೂರು ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದ ದಲಿತರ ಮೇಲಿನ ಸರಣಿ ದೌರ್ಜನ್ಯ ಮತ್ತು ಕೊಲೆ ಪ್ರಕರಣಗಳು ಜನಾಕ್ರೋಶಕ್ಕೆ ಕಾರಣವಾಗಿವೆ. ಈ ಹಿನ್ನೆಲೆಯಲ್ಲಿ ಸಮಾಜ ಕಲ್ಯಾಣ ಸಚಿವ ಕೆ.ಎಚ್. ಮುನಿಯಪ್ಪ ಅವರು ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ...