ಕೋಡಿಹಳ್ಳಿ ಚಂದ್ರಶೇಖರ್,Chandrashekar

ನಮ್ಮ ಕೃಷಿ ಮಂತ್ರಿಗೆ ನೆಟ್ಟಗೆ ಮಾತಾಡೋಕೆ ಬರಲ್ಲ. ಇಂಥವರನ್ನು ಯಡಿಯೂರಪ್ಪ ಕ್ಯಾಬಿನೆಟ್​ನಲ್ಲಿ ಇಟ್ಟುಕೊಂಡಿದ್ದಾರೆ. ರೈತರು ಹೋರಾಟ ಮಾಡಿದರೆ ಅಂಥವರ ವಿರುದ್ಧ ಹರಕಲು ಬಾಯಿ ಸಚಿವರನ್ನು ಮುಂದೆ ಬಿಡುತ್ತಾರೆ. ಯಡಿಯೂರಪ್ಪನವರೇ ಎಚ್ಚರಿಕೆ ಇರಲಿ, ನಿಮ್ಮ ಸಚಿವರು ಬೇಕಾ ಬಿಟ್ಟಿ ಮಾತನಾಡಿದರೆ ನಿಮ್ಮ ಮರ್ಯಾದೆ ನೀವೇ ಕಳೆದುಕೊಳ್ಳುತ್ತೀರಿ ಎಂದು ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್​ ಆಕ್ರೋಶ ವ್ಯಕ್ತಪಡಿಸಿದರು. ಅವರು ’ಸಂಯುಕ್ತ ಹೋರಾಟ ಕರ್ನಾಟಕ’ ವತಿಯಿಂದ ನಡೆದ ಟ್ರಾಕ್ಟರ್‌ ರ್‍ಯಾಲಿಯ ನಂತರ ನಡೆದ ಬಹಿರಂಗ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು.

“ಬಿಜೆಪಿ ನಾಯಕರು ರೈತರಿಗೆ ಪಾಕಿಸ್ತಾನ ಮತ್ತು ಖಾಲಿಸ್ತಾನಿಗಳ ಬೆಂಬಲ ಇದೆ ಎಂದು ಬೊಬ್ಬೆ ಇಡುತ್ತಿದ್ದಾರೆ. ರೈತರನ್ನೇ ದೇಶದ್ರೋಹಿಗಳು ಎಂದು ಕರೆಯುವ ಕಾಲ ಬಂದಿದೆ. ರೈತರಿಗೆ ಪಾಕಿಸ್ತಾನದ ನಂಟು ಎಂದು ಆರೋಪ ಹೊರಿಸುತ್ತಿದ್ದಾರೆ. ಇದು ಹೊಟ್ಟೆಗೆ ಅನ್ನ ತಿನ್ನುವ ಜನರು ಆಡುವ ಮಾತುಗಳೇ? ನಿಮಗೆ ಎಲ್ಲಿಲ್ಲದ ದುರಹಂಕಾರ ಬರಲು ಕಾರಣ ರೈತರೆ ಆಗಿದ್ದಾರೆ. ಉತ್ತು ಬಿತ್ತು ಅನ್ನ ಹಾಕಿದ್ದೀವಲ್ವಾ? ಅದಕ್ಕೆ ಹೀಗೆ ಮಾತನಾಡುತ್ತಿದ್ದೀರ” ಎಂದು ಕೃಷಿ ಸಚಿವ ಬಿ. ಸಿ. ಪಾಟಿಲ್ ಅವರ ವಿರುದ್ದ ಕೋಡಿಹಳ್ಳಿ ಚಂದ್ರಶೇಖರ್‌ ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ: ಬೆಂಗಳೂರು ಜನಗಣರಾಜ್ಯೋತ್ಸವ: ರೈತ ಹೋರಾಟದ ಚಿತ್ರ ಸುದ್ದಿಗಳು

“ಇನ್ನೂ ನಮ್ಮ ಕೃಷಿ ಮಂತ್ರಿಗೆ ನೆಟ್ಟಗೆ ಮಾತನಾಲು ತಿಳಿದಿಲ್ಲ. ಇಂಥವರನ್ನು ಯಡಿಯೂರಪ್ಪ ಕ್ಯಾಬಿನೆಟ್​ನಲ್ಲಿ ಇಟ್ಟುಕೊಂಡಿದ್ದಾರೆ. ರೈತರು ಹೋರಾಟ ಮಾಡಿದರೆ ಅಂಥವರ ವಿರುದ್ಧ ಹರಕಲು ಬಾಯಿಯ ಸಚಿವರನ್ನು ಮುಂದೆ ಬಿಡುತ್ತಾರೆ. ಯಡಿಯೂರಪ್ಪನವರೇ ಎಚ್ಚರಿಕೆ ಇರಲಿ, ನಿಮ್ಮ ಸಚಿವರು ಬೇಕಾ ಬಿಟ್ಟಿ ಮಾತನಾಡಿದರೆ ನಿಮ್ಮ ಮರ್ಯಾದೆಯನ್ನು ನೀವೇ ಕಳೆದುಕೊಳ್ಳುತ್ತೀರಿ” ಎಂದು ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್​ ಬಿಜೆಪಿ ನಾಯಕರ ವಿರುದ್ಧ ಕಿಡಿಕಾರಿದರು.

ಇಂದು ದೇಶದಾದ್ಯಂತ ನಡೆದ ರೈತ ಹೋರಾಟದ ಬಗ್ಗೆ ಕೊಪ್ಪಳದಲ್ಲಿ ಹೇಳಿಕೆ ನೀಡಿದ್ದ ಸಚಿವ ಬಿ.ಸಿ. ಪಾಟೀಲ್, “ಇದು ರೈತರ ಪ್ರತಿಭಟನೆಯಲ್ಲ ಬದಲಿಗೆ ಭಯೋತ್ಪಾದಕರ ಕೃತ್ಯ. ಇದರ ಹಿಂದೆ ಖಾಲಿಸ್ತಾನಿಗಳು ಮತ್ತು ಕಾಂಗ್ರೆಸ್​ ಕೈವಾಡವಿದೆ” ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು.

ಕೃಷಿ ಸಚಿವ ಬಿ.ಸಿ ಪಾಟಿಲ್ ಅವರ ವಿವಾದಾತ್ಮಕ ಹೇಳಿಕೆಯ ವಿಡಿಯೋ ನೋಡಿ

ಸಚಿವರ ಈ ಹೇಳಿಕೆಗೆ ರಾಜ್ಯದ ವಿವಿಧ ರೈತ ಸಂಘಟನೆಗಳು ಇಂದು ಒಂದಾಗಿ ಸಂಯುಕ್ತ ಹೋರಾಟ ಕರ್ನಾಟಕ ಹೆಸರಿನಲ್ಲಿ ಬೆಂಗಳೂರಿನ ಫ್ರೀಡಂ ಪಾರ್ಕ್​ನಲ್ಲಿ ಆಯೋಜಿಸಲಾಗಿದ್ದ ಬಹಿರಂಗ ಸಮಾವೇಶದಲ್ಲಿ ಕಿಡಿಕಾರಿರುವ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್​, “ರೈತ ಹೋರಾಟಗಾರರು ಸ್ವಾಭಿಮಾನಿಗಳು. ಆದರೆ, ಕೆಲ ಬಿಜೆಪಿ ನಾಯಕರು ರೈತರನ್ನು ಭಯೋತ್ಪಾದಕರಿಗೆ ಹೋಲಿಸುತ್ತಿದ್ದಾರೆ. ರೈತ ಹೋರಾಟಗಾರರಿಗೆ ಖಾಲಿಸ್ತಾನಿಗಳ ಮತ್ತು ಪಾಕಿಸ್ತಾನಿಗಳ ಸಹಾಯವಿದೆ ಎಂದು ಆಧಾರವಿಲ್ಲದೆ ಬೊಬ್ಬೆ ಹೊಡೆಯುತ್ತಿದ್ದಾರೆ” ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ದೆಹಲಿಯಲ್ಲಿ ರೈತರ ದಿಟ್ಟ ಹೋರಾಟ: ಕ್ಯಾಮರಗೆ ಸೆರೆಸಿಕ್ಕ ಅದ್ಭುತ ಚಿತ್ರಗಳು!

“ನಮ್ಮದೇ ಅನ್ನ ತಿಂದು ನಮ್ಮನ್ನೇ ಭಯೋತ್ಪಾದಕರು ಎಂದು ಹೀಯಾಳಿಸುತ್ತೀರಾ? ಮಾಜಿ ಪ್ರಧಾನಿ ದಿವಂಗತ ಇಂದಿರ ಗಾಂಧಿಯೂ ರೈತರಿಗೆ ಅನ್ಯಾಯ ಮಾಡಿದ್ದಾರೆ. ಈಗ ಅದನ್ನೇ ನರೇಂದ್ರ ಮೋದಿಯೂ ಮಾಡ್ತುದ್ದಾರೆ. ರೈತರ ಕತ್ತು ಹಿಡಿದು ಹೊರಗೆ ತಳ್ಳೋ ದೃಶ್ಯಗಳನ್ನು ನಾವಿಂದು ನೋಡುತ್ತಿದ್ದೇವೆ. ಮೋದಿಯವರ ಮಂಕಿಬಾತ್ ನಲ್ಲಿ‌ ಒಂದು ಮಾತಾದಾರೂ ರೈತರ ಬಗ್ಗೆ ಮಾತಾಡಿದ್ದಾರಾ..?” ಎಂದು ಕೋಡಿಹಳ್ಳಿ ಚಂದ್ರಶೇಕರ್​ ಕಿಡಿಕಾರಿದರು.

“ಈ ಸರ್ವಾಧಿಕಾರಿಯ ಧೋರಣೆ ಇನ್ನು ಮುಂದೆ ನಡೆಯುವುದಿಲ್ಲ ಮೋದಿಯವರೇ. ಸ್ವಲ್ಪ ಹದ್ದುಬಸ್ತಿನಲ್ಲಿ ಇರೋದು ನಿಮಗೆ ಒಳ್ಳೆಯದು. ಈಸ್ಟ್ ಇಂಡಿಯಾ ಕಂಪೆನಿಯಿಂದ ದೇಶದವನ್ನು ವಾಪಾಸ್ ಪಡೆಯಲು ಬಹಳ ಹೋರಾಟ ನಡೆದಿದೆ. ಈಗ ನೀವು ತಿರುಗಿ ಕಾರ್ಪೋರೇಟ್ ಕಂಪೆನಿಗಳಿಗೆ ವಾಪಾಸ್ ಕೊಡಲು ಹೊರಟಿದ್ದೀರಾ..? ಮೋದಿಯವರೇ ಈ ದೇಶ ನಿಮ್ಮ ಅಪ್ಪನದ್ದಲ್ಲ… ನಮ್ಮ ಅಪ್ಪಂದಿರು ದುಡಿದು ಬೆವರು ಹರಿಸಿದ ದೇಶ ಇದು. ಹೀಗಾಗಿ ನಿಮ್ಮ ಹಿಟ್ಲರ್ ಆಡಳಿತವನ್ನು ನಿಲ್ಲಿಸಿ. ಇಲ್ಲದಿದ್ದರೆ, ಅನುಭವಿಸುತ್ತೀರಿ” ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ: ರೈತ ಹೋರಾಟ: ಬೆಂಗಳೂರಿನಲ್ಲಿ 10,000 ರೈತರಿಗೆ ಊಟದ ವ್ಯವಸ್ಥೆ ಕಲ್ಪಿಸಿದ ಟ್ರಾನ್ಸ್ ಜೆಂಡರ್ ಸಮುದಾಯ!

ಗೋಹತ್ಯೆ ಕಾಯ್ದೆ ವಿರುದ್ಧವೂ ಆಕ್ರೋಶ ಹೊರಹಾಕಿರುವ ಕೋಡಿಹಳ್ಳಿ ಚಂದ್ರಶೇಖರ್, “ಜಾನುವಾರು ಹತ್ಯೆ ಕಾಯ್ದೆಗಳನ್ನು ತಂದಿದ್ದಾರೆ. ನಾವು ಹಸು ಹತ್ತುಗಳನ್ನು ಪೂಜೆ ಮಾಡುವವರೇ. ಆದರೆ, ಅದನ್ನು ಹತ್ಯೆ ಮಾಡಬೇಡಿ ಅಂದ್ರೆ ನಮ್ಮ ಜೀವನ ಏನಾಗಬೇಡ..? ಹಸುಗಳ ಪೋಷಣೆ ಮಾಡ್ತೀವಿ, ಅದಕ್ಕೆ ಮುಲಾಮು ಹಚ್ಚ್ತೀವಿ, ಅದನ್ನೆ ನೋಡಿಕೊಳ್ತೀವಿ. ಹಾಗಾಗಿ ನಿಮ್ಮ ಗೋ ಹತ್ಯೆ ನಿಷೇಧ ಅನ್ನೋದೆಲ್ಲಾ ಬೇಡ. ವಿಧಾನಸೌದದಲ್ಲಿ ಕೂತು ಕಾನೂನು ಪಾಸ್ ಮಾಡಿದರೆ ಅದನ್ನು ನಾವು ಒಪ್ಪಿಕೊಳ್ಳುವುದಿಲ್ಲ” ಎಂದು ತಿಳಿಸಿದರು.

“ದೆಹಲಿಯಲ್ಲಿ ರೈತರು ಜಗತ್ತಿನ ಇತಿಹಾಸದಲ್ಲಿ ಮರೆಯಾಗದೆ ಉಳಿಯುವಂತಹ ದಾಖಲೆ ಮಾಡಿದ್ದಾರೆ. ಲಕ್ಷಾಂತರ ಟ್ರಾಕ್ಟರ್‌‌ಗಳನ್ನು ತಂದು ಚಳುವಳಿ ಮಾಡಿದ್ದಾರೆ. ಇದು ರೈತರ ಇತಿಹಾಸದಲ್ಲೇ ಅತಿ ದೊಡ್ಡ ಹೋರಾಟ. ದೆಹಲಿಯಲ್ಲಿ ಅಹಿತಕರ ಘಟನೆ ನಡೆದಿದೆ. ದೆಹಲಿಯಲ್ಲಿ ರೈತರು ಅಕ್ಷಮ್ಯ ಅಪರಾಧ ಮಾಡಿದ್ದಾರೆ ಅಂತ ಸುದ್ದಿ ಹಬ್ಬಿದೆ. ಆದರೆ, ತಾಳ್ಮೆಗೆ ಇತಿಮಿತಿ ಅನ್ನೋದು ಇರುತ್ತದೆ.

ಆದರೆ ತಾಳ್ಮೆಯ ಕಟ್ಟೆ ಹೊಡೆದರೆ ಏನಾಗುತ್ತೆ ಅನ್ನೋದಕ್ಕೆ ದೆಹಲಿಯ ರೈತರ ಹೋರಾಟ ಉದಾಹರಣೆ. ರೈತರ ವಿರೋಧಿ ಕಾಯ್ದೆಗಳನ್ನು ವಾಪಾಸ್ ಪಡೆಯಿರಿ. ಕಾನೂನುಗಳನ್ನು ಅಮಾನಾತು ಮಾಡಿದ್ದೇವೆ ಅಂತ ಹೇಳಿ. ಆಗ ಎಲ್ಲವೂ ತಣ್ಣಗಾಗಲಿದೆ, ಇಲ್ಲದಿದ್ದರೆ ಈ ರೈತ ಹೋರಾಟ ನಿಲ್ಲುವುದಿಲ್ಲ” ಎಂದು ಕೇಂದ್ರ ಸರ್ಕಾರದ ವಿರುದ್ದ ಹರಿಹಾಯ್ದಿದ್ದಾರೆ.

ಇದನ್ನೂ ಓದಿ: ದೆಹಲಿಯಲ್ಲಿ ಪರಸ್ಪರ ಗುಲಾಬಿ ವಿನಿಮಯ, ಒಟ್ಟಿಗೆ ಊಟ ಮಾಡಿದ ರೈತರು ಮತ್ತು ಪೊಲೀಸರು!

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
Avatar
ನಾನು ಗೌರಿ ಡೆಸ್ಕ್
+ posts

2 COMMENTS

  1. ಇದನ್ನೇ ಬಿಜೆಪಿ ಯವರು ಮಾಡಿದ್ದರೆ ಈ ಮಾತುಗಳನ್ನು ಹೇಳಲು ಇವನಿಗೆ ಸಾದ್ಯವಿತ್ತಾ?
    ಇವನು ರಾಜಕೀಯ ಪ್ರವೇಶಿಸಿದ್ದೇ ಕಾಂಗ್ರೆಸ್ ಮೂಲಕ ಅಲ್ವಾ?
    ಆವತ್ತು ಹೇಳಿಲ್ಲ ಕಾಂಗ್ರೆಸ್ ಬಯೋತ್ಪಾದಕರಿಗೆ ಸಪೋರ್ಟ್ ಮಾಡುತ್ತದೆ ಎಂದು.
    ಇಂತಹವರ ಹೇಳಿಕೆಗಳೇ ರೈತರು ರೊಚ್ಚಿಗೆಳಲು ಕಾರಣ.
    ಇಂತವರನ್ನು ಮೊದಲು ಬಂಧಿಸುವ ಕಾರ್ಯ ಪೋಲೀಸರು ಮಾಡಬೇಕು.

LEAVE A REPLY

Please enter your comment!
Please enter your name here