Homeಅಂಕಣಗಳುಹಂಪನಾ ಅವರ ಪ್ರತಿರೋಧ ಮತ್ತು ವಿಸ್ತಾರವಾದ ವ್ಯಾಪ್ತಿ ಪಡೆಯಬೇಕಿರುವ ಕನ್ನಡದ ಕೆಲಸ

ಹಂಪನಾ ಅವರ ಪ್ರತಿರೋಧ ಮತ್ತು ವಿಸ್ತಾರವಾದ ವ್ಯಾಪ್ತಿ ಪಡೆಯಬೇಕಿರುವ ಕನ್ನಡದ ಕೆಲಸ

86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಆಯ್ಕೆ ಆಗಿರುವ ಕವಿ ದೊಡ್ಡರಂಗೇಗೌಡರು, ಮೇಲಿನ ಈ ವಿದ್ಯಮಾನದ ಬಗ್ಗೆ ತುಟಿಕ್‌ಪಿಟಿಕ್ ಎಂದಿಲ್ಲ. ಪ್ರಧಾನಿ ಮೋದಿಯವರ ಬಗ್ಗೆ ಪತ್ರಿಕೆಯೊಂದರಲ್ಲಿ ದೀರ್ಘ ಪದ್ಯವನ್ನು ಬರೆದಿದ್ದ ದೊಡ್ಡರಂಗೇಗೌಡರಿಂದ ದೊಡ್ಡ ಮಟ್ಟದ ನಿರೀಕ್ಷೆಗಳೇನೂ ಇರದಿದ್ದರೂ, ’ಹಿಂದಿ ಹೇರಿಕೆ’ಯಂತಹ ಪ್ರಾಥಮಿಕ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳದೆ, ಹಿಂದಿ ರಾಷ್ಟ್ರಭಾಷೆ ಎಂಬ ತಪ್ಪು ಕಲ್ಪನೆಗಳನ್ನು ಮತ್ತೆ ಪಸರಿಸುತ್ತಿರುವುದು ಆತಂಕಕಾರಿ ವಿಷಯವಂತೂ ಹೌದು

- Advertisement -
- Advertisement -

ಕೇಂದ್ರ ಸರ್ಕಾರ ಜಾರಿ ಮಾಡಿರುವ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಪ್ರತಿಭಟಿಸುತ್ತಿರುವ ರೈತರ ಮಾತನ್ನು ಆಲಿಸದ ಪ್ರಧಾನಿ ನರೇಂದ್ರ ಮೋದಿಯವರನ್ನು ಹಿರಿಯ ಸಾಹಿತಿ-ಸಂಶೋಧಕ ಹಂ.ಪ.ನಾಗರಾಜಯ್ಯ ಅವರು ಬಹಳ ಸಂಯಮದಿಂದ ಮತ್ತು ಜವಾಬ್ದಾರಿಯುತ ಮಾತುಗಳಿಂದಲೇ ಟೀಕೆ ಮಾಡಿದ್ದರು. ಆದರೂ ಯಾರೋ ಒಬ್ಬ ವ್ಯಕ್ತಿ ಕುತ್ಸಿತ ಉದ್ದೇಶದಿಂದ ನೀಡಿದ ದೂರಿನ ಹಿನ್ನಲೆಯಲ್ಲಿ ಮಂಡ್ಯದ ಪೊಲೀಸರು, ದೂರಿನ ಅರ್ಹತೆಯ ಬಗ್ಗೆ ಯಾವುದೇ ಪ್ರಾಥಮಿಕ ತನಿಖೆ ನಡೆಸದೆ ಅಥವಾ ಬೇಕಂತಲೇ, ಹಂಪನಾರವರನ್ನು ಕರೆಸಿ ವಿಚಾರಣೆ ಮಾಡಿದ್ದು ನಾವು ಬದುಕುತ್ತಿರುವ ಇವತ್ತಿನ ಭಯಾನಕ ದಿನಗಳ ಬಗ್ಗೆ ಮತ್ತೊಂದು ಎಚ್ಚರಿಕೆಯನ್ನು ನೀಡುತ್ತಿರುವಂತೆ ಭಾಸವಾಗುತ್ತದೆ.

ಜನವರಿ 25ರಂದು ಕನ್ನಡ ರಕ್ಷಣಾ ವೇದಿಕೆ (ಕರವೇ) ಈ ವಿದ್ಯಮಾನವನ್ನು ಖಂಡಿಸಲು, ಈ ನಾಡಿನ ಹಲವು ಪ್ರಾಜ್ಞರನ್ನು ಆಹ್ವಾನಿಸಿ ಆಯೋಜಿಸಿದ್ದ ಸಭೆ ಹಲವು ಕಾರಣಗಳಿಗೆ ಮುಖ್ಯವಾಗಿತ್ತು. ನೆಲ, ಜಲ, ಭಾಷೆಯ ಕುರಿತು ಹಲವು ವರ್ಷಗಳಿಂದ ಹಲವಾರು ಹೋರಾಟಗಳನ್ನು ರೂಪಿಸಿಕೊಂಡು ಬಂದಿರುವ ಕರವೇ, ಈಗ ವಿಶಾಲವಾದ ಅರ್ಥದಲ್ಲಿ ಇವೆಲ್ಲ ಸಮಸ್ಯೆಗಳಿಗೂ ಕಾರಣವಾಗುವ ದಮನಕಾರಿ ಪ್ರಭುತ್ವವನ್ನು ಮತ್ತು ಅದರ ನಡೆಗಳನ್ನು ಇಂತಹ ಕಾರ್ಯಕ್ರಮಗಳ ಮೂಲಕ ಪ್ರಶ್ನಿಸಲು ಮುಂದಾಗಿರುವುದು ಬಹಳ ಆಶಾದಾಯಕ ಮತ್ತು ಸ್ಫೂರ್ತಿದಾಯಕ ಸಂಗತಿ. ಸಾಹಿತಿ ಕಲ್ಬುರ್ಗಿಯವರ ಹತ್ಯೆಯ ನಂತರವೂ ಕರವೇ ಇಂತಹ ಕಾರ್ಯಕ್ರಮ ಹಮ್ಮಿಕೊಂಡಿತ್ತು. ರಾಜ್ಯಾದ್ಯಂತ ವಿಶಾಲವಾಗಿ ಹರಡಿರುವ ಸಂಘಟನೆಯಾಗಿರುವ ಕರವೇ, ಜಾತಿ, ಧರ್ಮಗಳ ಮತ್ತು ಕೋಮುರಾಜಕಾರಣದ ಸಲುವಾಗಿ ರಾಜ್ಯದಲ್ಲಿ ದುರ್ಬಲ ಸಮುದಾಯಗಳ ಮೇಲೆ ಆಗುವ ಯಾವುದೇ ರೀತಿಯ ದೌರ್ಜನ್ಯದ ವಿರುದ್ಧ ಕೂಡ ದೊಡ್ಡ ಮಟ್ಟದಲ್ಲಿ ಹೋರಾಟ ರೂಪಿಸಬೇಕು ಎಂಬುದು ಹಲವರ ಅಪೇಕ್ಷೆ. ಆ ನಿಟ್ಟಿನಲ್ಲಿ ಈ ಕಾರ್ಯಕ್ರಮ ನಡೆದ ಸಂದರ್ಭ ಮತ್ತು ಅದರಲ್ಲಿ ಭಾಗಿಯಾದವರಲ್ಲಿದ್ದ ವೈವಿಧ್ಯತೆಯ ಪ್ರಾತಿನಿಧ್ಯದ ದೃಷ್ಟಿಯಿಂದಲೂ ಇದು ಪ್ರಮುಖವಾಗಿತ್ತು.

ಹಂಪನಾ

ಈ ಕಾರ್ಯಕ್ರಮದಲ್ಲಿ ಕವಿ-ಸಾಮಾಜಿಕ ಕಾರ್ಯಕರ್ತ ಹುಲಿಕುಂಟೆ ಮೂರ್ತಿ ಅವರು ಆಡಿದ ಮಾತುಗಳನ್ನು ನೆನೆಯುವುದು ಇಲ್ಲಿ ಮುಖ್ಯ. ಹಂಪನಾ ಅವರಿಗೆ ಬೆಂಬಲ ನೀಡುತ್ತಿರುವುದರ ವಿರುದ್ಧ ಏಳುತ್ತಿರುವ ಹಲವು ರೀತಿಯ ತರಹೇವಾರಿ ಪ್ರಶ್ನೆಗಳಿಗೆ ಅದು ಸಮರ್ಪಕ ಉತ್ತರವಾಗಿತ್ತು. ಹಂಪನಾ ಅವರು ಈ ಹಿಂದೆ ಪ್ರಭುತ್ವದ ಯಾವುದೇ ದೌರ್ಜನ್ಯಗಳಿಗೆ ಸ್ಪಂದಿಸದೆ ಇರುವವರು. ಅವರಿಗೆ ಈ ಮಟ್ಟದ ಬೆಂಬಲ ಬೇಕೆ ಎಂಬ ಪ್ರಶ್ನೆಗೆ ಉತ್ತರಿಸಿದ ಮೂರ್ತಿ, ನಾನು ಓದಲು ಇಷ್ಟ ಪಡದ, ಅವರ ಸಾಹಿತ್ಯವನ್ನು ಮೆಚ್ಚದ ಎಸ್ ಎಲ್ ಭೈರಪ್ಪನವರ ಮೇಲೆ ಪ್ರಭುತ್ವ ಈ ರೀತಿಯ ದಾಳಿ ನಡೆಸಿದರೆ, ಅದರ ವಿರುದ್ಧ ಕೂಡ ಧ್ವನಿ ಎತ್ತುತ್ತೇನೆ ಎಂದರು. ಇಷ್ಟು ದಿನ ತಮಗೆ ಅಪಾಯಕಾರಿ ಎಂದು ಎಂದಿಗೂ ಅನಿಸದ ಹಂಪನಾ ಅವರು, ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳ ವಿರುದ್ಧ ನೀಡಿದ ಒಂದೇ ಒಂದು ಹೇಳಿಕೆಗಾಗಿ ಖಳನಾಯಕರಾಗಿ ಹೋದರು. ಇವತ್ತು ಮೋದಿ ಮತ್ತು ಅವರ ಆಡಳಿತದ ಬಗ್ಗೆ ಭಜನೆ ಮಾಡುತ್ತಿರುವ ಭೈರಪ್ಪ ಕೂಡ ಮುಂದೊಂದು ದಿನ ಇದೇ ಅಥವಾ ಇದಕ್ಕೂ ಘೋರವಾದ (ಉತ್ತರಪ್ರದೇಶ ನೆನಪಿಸಿಕೊಳ್ಳಿ) ಪ್ರಭುತ್ವಕ್ಕೆ ಮತ್ತು ಅವರ ಬೆಂಬಲಿಗರಿಗೆ ಎದುರಾಳಿಯಾಗಬಹುದು. ಆಗ, ಅವರು ದೈವತ್ವದಿಂದ ಮಾನವತ್ವಕ್ಕೆ ಇಳಿಸಿ ಬರೆದಿರುವ ಮಹಾಭಾರತದ ಕಥೆಯ ’ಪರ್ವ ಕಾದಂಬರಿಯೇ ಅಪಾಯಕಾರಿ ಪಠ್ಯವಾಗಿ ಕಾಣಿಸಬಹದು. ಧಾರ್ಮಿಕ ಅಮಲಿನಲ್ಲಿ ಕಟ್ಟುವ ರಾಷ್ಟ್ರೀಯತೆ ಯಾರ ಯಾರ ಬಾಗಿಲಿಗೆ ಬಂದು, ಯಾವ ಕಾರಣಕ್ಕೆ ಯಾರನ್ನೆಲ್ಲ ಅಮರಿಕೊಳ್ಳುತ್ತದೋ ಬಲ್ಲವರು ಯಾರು?

PC : IUCAA page, (ಜಯಂತ್ ನಾರ್ಲೀಕರ್)

ಅದೇನೇ ಇರಲಿ, 84 ವರ್ಷಗಳ ವಯೋವೃದ್ಧರಾದ ಸಾಹಿತಿ ಹಂಪನಾ ಅವರಿಗೂ ಪ್ರಸಕ್ತ ಕೇಂದ್ರ ಸರ್ಕಾರದ ಕೆಲವಾದರೂ ನೀತಿಗಳು ಆಕ್ರೋಶ ತಂದಿವೆ ಮತ್ತು ಅವರು ಈ ವಯಸ್ಸಿನಲ್ಲಿಯೂ ಪ್ರತಿರೋಧಿಸಬೇಕು ಎಂದು ಮನಗಂಡು ಗಟ್ಟಿ ಧ್ವನಿಯಲ್ಲಿ ಮಾತನಾಡುತ್ತಿರುವುದು, ಬದಲಾಗುತ್ತಿರುವ ಒಂದು ದೊಡ್ಡ ವರ್ಗದ ಪ್ರತಿನಿಧಿಯಂತೆ ಅವರು ಕಾಣುವುದಂತೂ ನಿಜ. ಜಾರ್ಜ್ ಆರ್ವೆಲ್ ತನ್ನ ’1984’ ಕಾದಂಬರಿಯಲ್ಲಿ ನಿರೂಪಿಸಿದಂತಹ ನಿರಂಕುಶ ಮತ್ತು ಸರ್ವಾಧಿಕಾರಿ ವ್ಯವಸ್ಥೆಗೆ ಈ ದೇಶ ಜಾರುವುದಕ್ಕೆ ಇನ್ನೂ ಹಲವು ಅಡೆತಡೆಗಳಿವೆ ಎಂಬುದನ್ನೂ ಇದು ನೆನಪಿಸುತ್ತದ್ದಲ್ಲದೆ, ಸಕ್ರಿಯವಾದ ನಾಗರಿಕ ಸಮಾಜ ಅಪಾಯಗಳನ್ನು ಮೆಟ್ಟಿ ನಿಲ್ಲಬಹುದು ಎಂಬುದನ್ನೂ ತೋರಿಸುತ್ತದೆ. ಹಂಪನಾ ಅವರನ್ನು ಕರೆಸಿ ವಿಚಾರಣೆ ನಡೆಸಿರುವುದಕ್ಕೆ ಮಂಡ್ಯ ಪೊಲೀಸ್ ವರಿಷ್ಠಾಧಿಕಾರಿ ಕೋರಿದ ಕ್ಷಮೆಯೂ ಇದಕ್ಕೆ ಸಾಕ್ಷಿಯಾಗಿದೆ.

ಪ್ರಜಾಸತ್ತಾತ್ಮಕ ಮತ್ತು ಜವಾಬ್ದಾರಿಯುತ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳುವ ಸಲುವಾಗಿ ಎಲ್ಲ ರಂಗದ ಪ್ರಾಜ್ಞರೂ ಇಂದು ದೊಡ್ಡ ಮಟ್ಟದಲ್ಲಿ ಪ್ರತಿರೋಧ ದಾಖಲಿಸಬೇಕಿದೆ. ಇದರಲ್ಲಿ ಕನ್ನಡದ ಸಾಹಿತ್ಯ-ಸಿನಿಮಾ-ರಂಗಭೂಮಿ ಲೋಕದವರ ಪಾತ್ರ ದೊಡ್ಡದಾಗಿರಬೇಕಿತ್ತು. ಆದರೆ ಅವರೆಲ್ಲರ ಅಭಾವ ದೊಡ್ಡದಾಗಿದೆ. ಇದೇ ಸಮಯದಲ್ಲಿ ಫೆಬ್ರವರಿ ಕೊನೆಯ ಭಾಗದಲ್ಲಿ ನಡೆಯಲು ನಿಯೋಜಿಸಲಾಗಿರುವ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಆಯ್ಕೆ ಆಗಿರುವ ಕವಿ ದೊಡ್ಡರಂಗೇಗೌಡರು, ಮೇಲಿನ ಈ ವಿದ್ಯಮಾನದ ಬಗ್ಗೆ ತುಟಿಕ್‌ಪಿಟಿಕ್ ಎಂದಿಲ್ಲ. ಪ್ರಧಾನಿ ಮೋದಿಯವರ ಬಗ್ಗೆ ಪತ್ರಿಕೆಯೊಂದರಲ್ಲಿ ದೀರ್ಘ ಪದ್ಯವನ್ನು ಬರೆದಿದ್ದ ದೊಡ್ಡರಂಗೇಗೌಡರಿಂದ ದೊಡ್ಡ ಮಟ್ಟದ ನಿರೀಕ್ಷೆಗಳೇನೂ ಇರದಿದ್ದರೂ, ’ಹಿಂದಿ ಹೇರಿಕೆ’ಯಂತಹ ಪ್ರಾಥಮಿಕ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳದೆ, ಹಿಂದಿ ರಾಷ್ಟ್ರಭಾಷೆ ಎಂಬ ತಪ್ಪು ಕಲ್ಪನೆಗಳನ್ನು ಮತ್ತೆ ಪಸರಿಸುತ್ತಿರುವುದು ಆತಂಕಕಾರಿ ವಿಷಯವಂತೂ ಹೌದು. ಕನ್ನಡ ನಾಡಿನ ಪ್ರಮುಖ ಸಾಹಿತ್ಯ ಸಂಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್ತು ದಿಕ್ಕು ತಪ್ಪುತ್ತಿರುವುದನ್ನು ಇದು ಎತ್ತಿ ತೋರಿಸುತ್ತದೆ ಕೂಡ.

ಇದರ ನಡುವೆ ಮಹಾರಾಷ್ಟ್ರದಲ್ಲಿ ಮಾರ್ಚ್ ಕೊನೆಯ ಭಾಗದಲ್ಲಿ ನಡೆಯಲಿರುವ 94ನೇ ಮರಾಠಿ ಸಾಹಿತ್ಯ ಸಮ್ಮೇಳನಕ್ಕೆ ’ಜಯಂತ್ ನಾರ್ಲೀಕರ್ ಅವರನ್ನು ಅಧ್ಯಕ್ಷರನ್ನಾಗಿ ನಿಯೋಜಿಸಲಾಗಿದೆ. ಕನ್ನಡ ಸಾಹಿತ್ಯ ಸಮ್ಮೇಳನದಂತೆಯೇ ಬಹಳ ಪ್ರತಿಷ್ಠಿತ ಸಾಹಿತ್ಯ ಕೂಟ ಇದು. ಈ ಬಾರಿಯ ವಿಶೇಷ ಎಂದರೆ ಸಮ್ಮೇಳನದ ಅಧ್ಯಕ್ಷರಾಗಲಿರುವ ಪದ್ಮ ವಿಭೂಷಣ ಜಯಂತ್ ನಾರ್ಲೀಕರ್ ಅವರು ವಿಜ್ಞಾನಿಗಳು. ಅಂತಾರಾಷ್ಟ್ರೀಯ ಖ್ಯಾತಿಯ ಆಸ್ಟ್ರೋಫಿಸಿಸಿಸ್ಟ್. ಇಂಗ್ಲಿಷ್‌ನಲ್ಲಿ ಜನಪ್ರಿಯ ವಿಜ್ಞಾನಕ್ಕೆ ಸಂಬಂಧಿಸಿದಂತೆ ಹತ್ತಾರು ಕೃತಿಗಳನ್ನು ಜಯಂತ್ ಅವರು ರಚಿಸಿದ್ದಾರಲ್ಲದೆ, ಮರಾಠಿಯಲ್ಲಿಯೂ ವಿಜ್ಞಾನದ ಪುಸ್ತಕಗಳನ್ನು, ಹಾಗು ವಿಜ್ಞಾನಕ್ಕೆ ಸಂಬಂಧಿಸಿದ ಕಥೆ-ಕಾದಂಬರಿಗಳನ್ನು ಬರೆದಿದ್ದಾರೆ. ಇಂಗ್ಲಿಷ್‌ನಲ್ಲಿ ಸೈ-ಫೈ ಎಂದು ಕರೆಯಲ್ಪಡುವ ಈ ಜನಪ್ರಿಯ ಸಾಹಿತ್ಯ ಪ್ರಕಾರ ವಿಶ್ವದಾದ್ಯಂತ ಮಕ್ಕಳು ಮತ್ತು ಯುವಜನರಿಗೆ ಭಾರಿ ಆಕರ್ಷಣೆ. ಕನ್ನಡದಲ್ಲಿ ಮನು, ರಾಜಶೇಖರ ಭೂಸನೂರಮಠ ಅವರನ್ನು ಒಳಗೊಂಡಂತೆ ಕೆಲವೇ ಕೆಲವು ಸಾಹಿತಿಗಳು ಈ ಪ್ರಕಾರದಲ್ಲಿ ಬರೆದಿದ್ದಾರೆ. ಕನ್ನಡದಲ್ಲಿ ಈ ಪ್ರಕಾರ ಏಕೆ ಹೆಚ್ಚು ಜನಪ್ರಿಯವಾಗಲಿಲ್ಲ ಎಂಬುದು ಒಳ್ಳೆಯ ಅಧ್ಯಯನವಾದೀತು. ಇಂತಹ ಸಾಹಿತ್ಯ ಬೆಳೆದು, ವಿಜ್ಞಾನಿಯೊಬ್ಬರು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗುವ ಸುಸಂದರ್ಭ ಮುಂದೊಂದು ದಿನ ಒದಗಿ ಬರಲಿ. ವೈಜ್ಞಾನಿಕ ಭಾವನೆ ಜನರಲ್ಲಿ ಹೆಚ್ಚಾಗಲಿ. ವೈಚಾರಿಕತೆಯ ಉಳಿವಿಗೆ ಜನ ತಮ್ಮನ್ನು ಅರ್ಪಿಸಿಕೊಳ್ಳಲಿ.


ಇದನ್ನೂ ಓದಿ:

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...