ಜನವರಿ 20 ರಂದು, ಗಣರಾಜ್ಯೋತ್ಸವಕ್ಕೆ ಒಂದು ವಾರ ಮೊದಲು, ದೆಹಲಿ ಪೊಲೀಸರು ಮತ್ತು ಕೃಷಿ ಸಂಘಗಳು ಟ್ರ‍್ಯಾಕ್ಟರ್ ಪೆರೇಡ್‌ನ ಭದ್ರತಾ ನಿಯಮಗಳ ಕುರಿತು ಮಾತುಕತೆ ನಡೆಸುತ್ತಿದ್ದ ಸಂದರ್ಭ. ಆಗ ದೀಪ್ ಸಿಧು, ಫೇಸ್‌ಬುಕ್‌ನಲ್ಲಿ ಲೈವ್‌ಸ್ಟ್ರೀಮ್‌ಗೆ ಹೋಗಿ, ದೆಹಲಿಯತ್ತ ಹೊರಟಿದ್ದ ಪಂಜಾಬ್ ರೈತರನ್ನು ಉದ್ದೇಶಿಸಿ ಹೇಳಿದ್ದ: “ಪಿಕ್ಷರ್ ತೋ ಅಭಿ ಬಾಕಿ ಹೈ ದೋಸ್ತ್” ಎಂದು.
ಜನವರಿ 23 ರಂದು, ಪಂಜಾಬಿ ಭಾಷೆಯಲ್ಲಿದ್ದ ವೆಬ್ ಚಾನೆಲ್ ಸಂದರ್ಶನವನ್ನು ಹಂಚಿಕೊಂಡ. ಅದರಲ್ಲಿ “ಜನವರಿ 26 ರಂದು ಏನಾಗಬಹುದು ಎಂಬುದನ್ನು ನಾವು ಯೋಜಿಸಲು ಸಾಧ್ಯವಿಲ್ಲ. ಇದು ನಮ್ಮ ಲೆಕ್ಕಾಚಾರವನ್ನು ಮೀರಿದ್ದು. ಇದು ಅನಿರೀಕ್ಷಿತವಾದುದು. ಇದು ಸರ್ವಶಕ್ತನಿಗೆ ಬಿಟ್ಟಿದ್ದು. ಜನವರಿ 26 ರಂದು ಏನಾಗುತ್ತದೆ ಎಂದು ನಾವು ಮನುಷ್ಯರು ಏನನ್ನೂ ಹೇಳಲಾರೆವು” ಎಂದಿದ್ದ.
ಪ್ರತಿಭಟನೆಯೊಳಕ್ಕೆ ನುಸುಳಿದಾಗಿನಿಂದ ಈತ ಇಂತಹ ಪ್ರಚೋದನಾಕಾರಿ ಕೆಲಸಗಳನ್ನೇ ಮಾಡುತ್ತ ಬಂದಿದ್ದಾನೆ. ಇದೀಗ ಆತನ ಹಳೆಯ ಪೋಸ್ಟ್‌ಗಳು, ಸಂದಶಗಳಲ್ಲಿ ಗೊತ್ತಾಗುತ್ತಿದೆ, ಈತ ಸದಾ ಯುವಕರ ಗುಂಪುಗಳನ್ನು ಪ್ರಚೊದಿಸುತ್ತ ಬಂದಿದ್ದಾನೆ ಎಂದು.
ಜನವರಿ 19 ರಂದು, ಸಿಧು ಬಿಕೆಯು (ಹರಿಯಾಣ) ಅಧ್ಯಕ್ಷ ಗುರ್ನಮ್ ಸಿಂಗ್ ಚದುನಿ ಮತ್ತು ತನ್ನನ್ನು ಸಮರ್ಥಿಸಿಕೊಂಡಿದ್ದ. ಎಸ್‌ಕೆಎಂ ಸದಸ್ಯರಾದ ಬಿಕೆಯುನ ಚದುನಿ ಅವರು ರಾಜಕೀಯ ಪಕ್ಷಗಳೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ ಎಂದು ರೈತ ಸಂಘಗಳು ಆರೋಪಿಸಿದ್ದವು. ಆಗ ಚದುನಿ ಪರ ಮಾತನಾಡಿದ್ದ ದೀಪ್ ಸಿಧು, ರಾಜಕೀಯ ಪಕ್ಷಗಳ ಜೊತೆ ಮಾತಾಡಿದರೇನು ತಪ್ಪು ಎಂದು ಸಮರ್ಥೀಸಿಕೊಂಡು ಸಂದೇಶಗಳನ್ನು ಹಾಕಿದ್ದ.
ಜ.25ರಂದು ಕಿಸಾನ್ ಮಜ್ದೂರ್ ಸಂಘರ್ಷ ಸಮಿತಿಯನ್ನು ಬೆಂಬಲಿಸಿ, ನಿಗದಿಯಾಗದ ಬೇರೆ ಮಾರ್ಗದಲ್ಲಿ ರ‍್ಯಾಲಿ ಮಾಡಲು ಬಯಸುವವರು, ಕಿಸಾನ್ ಮಜ್ದೂರ್ ಸಮಿತಿಯ ರ‍್ಯಾಲಿಯ ಜೊತೆ ಬನ್ನಿ ಎಂದು ರೈತರನ್ನು ನೇರವಾಗಿ ಪ್ರಚೋದಿಸುತ್ತಿದ್ದ.
ಹಲವು ಸಲ ಹಲವಾರು ರೈತ ನಾಯಕರು ಮತ್ತು ಸಾಮಾನ್ಯ ರೈತರು ಈತನ ಪ್ರಚೋದನಕಾರಿ ಮಾತುಗಳಿಗೆ ಆಕ್ಷೇಪ ಎತ್ತಿದ್ದರು. ಹಾಗಾಗಿ ಆತನನ್ನು ಹೋರಾಟದಿಂದ ಊರ ಇಟ್ಟಿದ್ದರು. ಪಂಜಾಬ್‌ನಲ್ಲಿ ಬ್ಯಾರಿಕೇಡ್ ಮುರಿದು ಮುನ್ನುಗ್ಗಿದಾಗ ಆತನಿಗೆ ಚೀಮಾರಿ ಹಾಕಿದ್ದರು. ಆತ ಸಿಂಘುವಿನಿಂದ ಸ್ವಲ್ಪ ದೂರದಲ್ಲಿ ಹೋರಾಟ ಹಮ್ಮಿಕೊಂಡಿದ್ದ.
ಇದನ್ನೂ ಓದಿ; ಯಾವುದೇ ಆತಂಕವಿಲ್ಲ, ಶಾಂತಿಯುತ ದಿಟ್ಟ ಹೋರಾಟ ಮುಂದುವರೆದಿದೆ: ರೈತ ಮುಖಂಡರ ಸ್ಪಷ್ಟನೆ


