ಭಾರಿ ಭದ್ರತಾ ಪಡೆ, ಪೊಲೀಸರ ಜಮಾವಣೆಯ ನಂತರವೂ ರೈತರು ಹಿಂದಕ್ಕೆ ಹೋಗಲು ನಿರಾಕರಿಸಿದ ಪರಿಣಾಮ, ನಿನ್ನೆ ಹೆಚ್ಚುವರಿಯಾಗಿ ನಿಯೋಜನೆಗೊಂಡಿದ್ದ ಪೊಲೀಸರು ಶುಕ್ರವಾರ ಮುಂಜಾನೆ ಸ್ಥಳ ಖಾಲಿ ಮಾಡಿದರು ಎಂದು ದಿ ವೈರ್ ಪ್ರತ್ಯಕ್ಷದರ್ಶಿ ವರದಿ ತಿಳಿಸಿದೆ.
ಇದರಿಂದಾಗಿ, ಗುರುವಾರ ರಾತ್ರಿಯೊಳಗೆ ಗಾಜಿಪುರ ಗಡಿಯಿಂದ ಪ್ರತಿಭಟನಾಕಾರರು ಜಾಗ ಖಾಲಿ ಮಾಡಲು ಉತ್ತರಪ್ರದೇಶ ಸರ್ಕಾರ ನೀಡಿದ್ದ ಮೌಖಿಕ ಗಡುವು ವಿಫಲಗೊಂಡಿದೆ. ಲಿಖಿತ ಆದೇಶ ಹೊರಡಿಸಲು ಸುಪ್ರೀಂಕೋರ್ಟ್ ಭಯ ಕಾರಣವಿರಬಹುದು, ಹೀಗಾಗಿ ಭಾರಿ ಸಂಖ್ಯೆಯಲ್ಲಿ ಪೊಲೀಸರನ್ನು ಜಮಾವಣೆ ಮಾಡಿ ರೈತರನ್ನು ಬೆದರಿಸುವ ತಂತ್ರ ಹೂಡಲಾಗಿತ್ತು ಎನಿಸುತ್ತದೆ.
Delhi: Farmers continue their protest against #farmlaws at Tikri border. pic.twitter.com/s8kuYFXggj
— ANI (@ANI) January 29, 2021
ಯಾವುದೇ ಲಿಖಿತ ಆದೇಶವಿಲ್ಲದಿದ್ದರೂ ಗಾಜಿಪುರ ಜಿಲ್ಲಾಧಿಕಾರಿ ನಿನ್ನೆ ಸಾಯಂಕಾಲ ಮೌಖಿಕ ಆದೇಶ ಹೊರಡಿಸಿ, ಗುರುವಾರ ರಾತ್ರಿಯೊಳಗೆ ಜಾಗ ಖಾಲಿ ಮಾಡಲು ರೈತರಿಗೆ ಗಡುವು ನಿಡಿದ್ದರು, ಭಾರಿ ಸಂಖ್ಯೆಯಲ್ಲಿ ಪೊಲೀಸರು ಮತ್ತು ಅರೆಸೇನಾ ಪಡೆಗಳನ್ನು ನಿಯೋಜಿಸಿ, 144 ಸೆಕ್ಷನ್ ವಿಧಿಸಿದ್ದರು. ಆದರೆ ರೈತ ಮುಖಂಡ ರಾಕೇಶ್ ಟಿಕಾಯತ್ ಮಾಡಿದ ಭಾವನಾತ್ಮಕ ಭಾಷಣ ಮತ್ತು ಅವರ ಕಣ್ಣೀರು ಹೆಚ್ಚಿನ ಸಂಖ್ಯೆಯಲ್ಲಿ ರೈತರು ಗಡಿಗಳತ್ತ ತೆರಳಲು ಪ್ರೇರಣೆಯಾಗಿದೆ.
ರಾತ್ರಿಯಿಡಿ ನೀರು ಮತ್ತು ವಿದ್ಯುತ್ ಸಂಪರ್ಕ ಕಡಿತ ಮಾಡಲಾಗಿತ್ತು. ವಿದ್ಯುತ್, ನೀರು ಏನಾದರೂ ಕಟ್ ಮಾಡಲಿ, ನಾವು ನಮ್ಮ ಹೋರಾಟವನ್ನು ನಿಲ್ಲಿಸುವುದಿಲ್ಲ. ಮೂರು ಕಾಯ್ದೆಗಳು ರದ್ದು ಮಾಡುವವರೆಗೂ ನಾವಿಲ್ಲಿಂದ ಕದಲುವುದಿಲ್ಲ ಎಂದು ರೈತ ಪ್ರತಿಭಟನಾಕಾರರು ತಮ್ಮ ಬಿಗಿ ಪಟ್ಟನ್ನು ಸಡಿಲಿಸದ ಪರಿಣಾಮ ಹೆಚ್ಚುವರಿಯಾಗಿ ನಿಯೋಜಿತಗೊಂಡಿದ್ದ ಭದ್ರತಾ ಪಡೆಗಳು, ಪೊಲೀಸರು ಇವತ್ತು ಮುಂಜಾನೆ ಸ್ಥಳ ಖಾಲಿ ಮಾಡಲು ಶುರು ಮಾಡಿದ್ದಾರೆ ಎಂದು ದಿ ವೈರ್ ವರದಿ ಮಾಡಿದೆ.

ನನ್ನತ್ರ ಯಾವುದು ಜಮೀನ್ ಇಲ್ಲ. ಆದರೆ ನನ್ನ ಆತ್ಮಾಭಿಮಾನಕ್ಕಾಗಿ ನಾನಿಲ್ಲಿರುವೆ. ಹೋರಾಟದ ಕೊನೆಯವರೆಗೂ ನಾನು ಇಲ್ಲೇ ಇರುವೆ ಎಂದು ಮಹೇಂದರ್ ಸಿಂಗ್, (ಗೊರ್ನೆಕುರ್ದ್, ಪಂಜಾಬ್) ತಿಳಿಸಿದ್ದಾರೆ.
ಇಂದು ಮುಂಜಾನೆ ಮತ್ತೆ ನೀರು, ವಿದ್ಯುತ್ ಸಂಪರ್ಕವನ್ನು ಒದಗಿಸಲಾಗಿದೆ. ರೈತರು ಎಂದಿನಂತೆ ತಮ್ಮ ನಿತ್ಯ ಕರ್ಮಗಳಲ್ಲಿ ತೊಡಗಿಕೊಂಡಿದ್ದಾರೆ. ಅಡುಗೆ ಮಾಡುವುದು, ಸಣ್ಣ ಸಣ್ಣ ಪ್ರತಿಭಟನಾ ಮೆರವಣಿಗೆ ನಡೆಸುತ್ತಿರುವುದು ಕಂಡುಬಂದಿದೆ.
ಈ ಕುರಿತು ನಾನುಗೌರಿ.ಕಾಂನೊಂದಿಗೆ ಮಾತನಾಡಿದ ರೈತರು “ಗೋದಿ ಮೀಡಿಯಾಗಳು ಮೋದಿ ಹೇಳಿದಂತೆ ಕೇಳಿ ಸುಳ್ಳು ವರದಿ ಮಾಡುತ್ತಿದ್ದಾರೆ. ಆದರೆ ನಾವು ಇಲ್ಲಿಂದ ಕದಲುವುದಿಲ್ಲ. ನಮ್ಮ ಹಕ್ಕುಗಳನ್ನು ಪಡೆದೇ ಇಲ್ಲಿಂದ ತೆರಳುತ್ತೇವೆ” ಎಂದು ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ: ‘#ಮೋದಿ ಒಬ್ಬ ಹೇಡಿ’ – ಮಧ್ಯರಾತ್ರಿಯಿಂದಲೇ ಟ್ವಿಟರ್‌ನಲ್ಲಿ ಟ್ರೆಂಡ್ ಆದ ಹ್ಯಾಶ್‌ಟ್ಯಾಗ್


